ತುಮಕೂರು:

     ತುಮಕೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಉಲ್ಬಣವಾಗುತ್ತಿದ್ದು, ನಿರೀಕ್ಷೆಗೂ ಮೀರಿದ ಸೋಂಕಿತರ ಸಂಖ್ಯೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಆತಂಕದಿಂದ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ.

      ತುಮಕೂರು ನಗರವೊಂದರಲ್ಲೇ 69 ಪ್ರಕರಣಗಳು, ಶಿರಾ ತಾಲೂಕಿನಲ್ಲಿ 17 ಪ್ರಕರಣಗಳು, ಪಾವಗಡ -4 ಪ್ರಕರಣ, ಕೊರಟಗೆರೆ-3, ಮಧುಗಿರಿ 2 ಪ್ರಕರಣಗಳು ಸೇರಿದಂತೆ ಒಟ್ಟು 95 ಪ್ರಕರಣಗಳು ಒಂದೇ ದಿನ ವರದಿಯಾಗಿದೆ.
ತುಮಕೂರು ನಗರದಲ್ಲಿ ಬಂದಿರುವ 69 ಪಾಸಿಟೀವ್ ಪ್ರಕರಣಗಳ ಪೈಕಿ 29 ಪ್ರಕರಣಗಳು ಪೊಲೀಸ್ ಇಲಾಖೆಯವೇ ಎಂದು ವರದಿಯಾಗಿರುವುದು ಮತ್ತೊಂದು ವಿಶೇಷ.

      29 ಜನ ಪೊಲೀಸ್ ಇಲಾಖೆಯವರ ಪೈಕಿ ಕೆಎಸ್‍ಆರ್‍ಪಿಯ 12ನೇ ಬೆಟಾಲಿಯನ್‍ನ -14 ಮಂದಿ,
ಕುಣಿಗಲ್, ತಿಪಟೂರು, ತುಮಕೂರು ಟೌನ್ ತಲಾ ಒಂದೊಂದು ಪ್ರಕರಣ, ಕಳ್ಳಂಬೆಳ್ಳ-2ದಲ್ಲಿ ಕೊರೊನಾ ಸೋಂಕು ವರದಿ ದೃಢವಾಗಿದೆ.

      ಪೊಲೀಸ್ ಇಲಾಖೆಯನ್ನು ಬೆಂಬಿಡದೆ ಕಾಡುತ್ತಿರುವ ಕೊರೊನಾ ಪ್ರಕರಣವನ್ನು ಗಮನಿಸಿದರೇ ಸಾಮಾನ್ಯರ ಗತಿ ಏನು ಎಂಬಂತಾಗಿದೆ.

(Visited 26 times, 1 visits today)