ತುಮಕೂರು:

      ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ನಂ.32ರ ವ್ಯಾಪ್ತಿಯಲ್ಲಿನ ಸಂಕ್ರಾಂತಿ ಸ್ಟೋರ್ಸ್ ಹತ್ತಿರವಿರುವ ಮಧುವನ ಪಾರ್ಕ್‍ನಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ ಅಭಿವೃದ್ಧಿ ಕಾಮಗಾರಿಗೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಭೂಮಿ ಪೂಜೆ ನೆರವೇರಿಸಿದರು.

      ಈ ಸಂಧರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಈ ಭಾಗದವರು ಸದರಿ ಪಾರ್ಕ್‍ನಲ್ಲಿ ಸರ್ಕಾರದ ಯಾವುದೇ ಹಣ ನಿರೀಕ್ಷಣೆ ಮಾಡದೇ, ಸ್ವತಃ ತಾವುಗಳೇ ಬೆಂಚು ಹಾಕುವುದು, ಮರಗಿಡಗಳನ್ನು ಬೆಳಸುವುದು ಹಾಗೂ ಇತರೆ ಅಭಿವೃದ್ಧಿ ಕೆಲಸಗಳನ್ನು ಸ್ಥಳೀಯ ನಾಗರೀಕ ಬಂಧುಗಳೇ ಮಾಡಿರುವುದು ಸಂತಸದ ವಿಷಯ. ಈ ಪಾರ್ಕ್‍ನ ಅಭಿವೃದ್ಧಿ ಕಾಮಗಾರಿಯೂ ರೂ.44.47 ಲಕ್ಷದ ವೆಚ್ಚದಲ್ಲಿ ಚೈನ್‍ಲಿಂಕ್ ಫೆನ್ಸಿಂಗ್ ಹಾಗೂ ಪಾರ್ಕ್ ಅಭಿವರದ್ಧಿಗೆ ಉಪಯೋಗವಾಗುವಂತೆ ಬೋರ್‍ವೆಲ್ ವ್ಯವಸ್ಥೆಯನ್ನು ಸಹ ಮಾಡಲಾಗುವುದು ಮತ್ತು ಪಾರ್ಕ್ ಒಳಗೆ ಪಾಥ್‍ವೇ, ಬೆಂಚುಗಳು, ಹೊಸದಾಗಿ ಎಲೆಕ್ಟ್ರಿಕಲ್ ಗಾರ್ಡನ್ ಲೈಟಿಂಗ್ ಹಾಗೂ ಪ್ಲಾಂಟೇಷನ್ ಮಾಡಲಾಗುವುದು, ಈ ಒಂದು ಭಾಗದಲ್ಲಿ ಅತ್ಯುತ್ತಮವಾದಂತಹ ಪಾರ್ಕ್‍ನ್ನ ಸನ್ಮಾನ್ಯ ನರೇಂದ್ರ ಮೋದೀಜಿ ರವರ ನೇತೃತ್ವದ ಕನಸಿನ ಕೂಸು ಸ್ಮಾರ್ಟ್‍ಸಿಟಿ ವತಿಯಿಂದ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು ಎಂದು ತಿಳಿಸಿದರು.

      ಈ ಸಂಧರ್ಭದಲ್ಲಿ ಮಹಾನಗರಪಾಲಿಕೆಯ ಮಹಾಪೌರರಾದ ಫರೀದಾ ಬೇಗಂ, ಉಪ ಮಹಾಪೌರರಾದ ಶಶಕಲ ಗಂಗಹನುಮಯ್ಯ, ನೂತನ ಆಯುಕ್ತರಾದ ರೇಣುಕಾ, ಸ್ಮಾರ್ಟ್‍ಸಿಟಿ ನಿರ್ದೇಶಕರಾದ ರಂಗಸ್ವಾಮಿ, ಸದಸ್ಯರಾದ ಬಿ.ಜಿ.ಕೃಷ್ಣಪ್ಪ, ಸಿ.ಎನ್.ರಮೇಶ್, ದೀಪಶ್ರೀ ಮಹೇಶ್ ಬಾಬು, ಹಾಗೂ ಇತರೆ ಮುಖಂಡರು ಹಾಜರಿದ್ದರು.

(Visited 5 times, 1 visits today)