ಕುಣಿಗಲ್:

      ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ತಾಪಂ ಮುಂಭಾಗ ಪ್ರತಿಭಟನೆ ನಡೆಸಿದರು .

      ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರು ತಾಪಂ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷ ನಾಗೇಶ್ ಮತ್ತು ಶ್ರೀನಿವಾಸ್ ನೇತೃತ್ವದಲ್ಲಿ ಜಮಾವಣೆಗೊಂಡ ಗ್ರಾಪಂ ನೌಕರರು ಸುಮಾರು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಅನ್ಯಾಯವಾಗಿದೆ ಸರ್ಕಾರದ ಆದೇಶದಂತೆ ಸಂಬಳ, ನಿವೃತ್ತಿ ಮರಣೋತ್ತರ ಉಪಧನ, ಹಾಗೂ ಬಿಲ್ ಕಲೆಕ್ಟರ್, ಮತ್ತು ಡಾಟಾ ಎಂಟ್ರಿ ಆಪರೇಟರ್ಗಳ ಜೇಷ್ಠತಾ ಪಟ್ಟಿಯನ್ನು ಜಿಪಂಗೆ ರವಾನಿಸಬೇಕು,ಬಾಕಿ ಉಳಿದುಕೊಂಡಿರುವ ವೇತನವನ್ನು ನೀಡಲು ಪಿಡಿಒಗಳಿಗೆ ಆದೇಶ ನೀಡಬೇಕು, ಖಾಲಿ ಇರುವ ಬಿಲ್ ಕಲೆಕ್ಟರ್ ಹುದ್ದೆಗೆ ನೌಕರರನ್ನು ಕೂಡಲೇ ಭರ್ತಿ ಮಾಡಬೇಕು ,ಸರ್ಕಾರದ ಆದೇಶದಂತೆ ನೌಕರರ ವಿವರಗಳನ್ನು ಪಂಚತಂತ್ರದಲ್ಲಿ ಅಳವಡಿಸಲು ಪಿಡಿಒ ಹಾಗೂ ಇಒ ರವರು ಕ್ರಮ ವಹಿಸಬೇಕು,ಇನ್ನು ಹತ್ತು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಸರ್ಕಾರ ನೌಕರರಿಗೆ ಅನ್ಯಾಯ ಮಾಡದೇ ಕ್ರಮ ವಹಿಸಬೇಕೆಂದು ತಹಸೀಲ್ದಾರ್ ಎಸ್ ನಾಗರಾಜ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ತಾಲೂಕಿನ ಎಲ್ಲ ಗ್ರಾಪಂ ನೌಕರರು ತುಮಕೂರು ರಸ್ತೆಯ ಪಾರ್ಕ್ ಬಳಿಯಲ್ಲಿ ಜಮಾವಣೆಗೊಂಡು ಮೆರವಣಿಗೆ ನಡೆಸಿದರು .

      ಈ ಸಂದರ್ಭದಲ್ಲಿ ಕಾರ್ಯದರ್ಶಿ ಗೋವಿಂದಯ್ಯ, ಖಜಾಂಚಿ ನಿಂಗಯ್ಯ, ಶಿವಕುಮಾರ್, ರಾಜ್ ಕುಮಾರ್, ಕೊಪ್ಪ ಕಿರಣ್ ಕುಮಾರ್, ಶಂಕರ್, ನಂಜಪ್ಪ, ಉಷಾರಾಣಿ, ಒಳಗೊಂಡಂತೆ ಸಿಐಟಿಯು ತಾಲ್ಲೂಕು ಅಧ್ಯಕ್ಷ ಮುನಾಫ್ ಮತ್ತಿತರರು ಪಾಲ್ಗೊಂಡಿದ್ದರು.

(Visited 18 times, 1 visits today)