ಚಿಕ್ಕನಾಯಕನಹಳ್ಳಿ:

      ಸೀಲ್‍ಡೌನ್‍ಗೆ ಪ್ರತಿರೋಧ ಒಡ್ಡಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕೋವಿಡ್ ನಿಯಂತ್ರಣದ ಹೋರಾಟಕ್ಕೆ ಸಹಕರಿಸಿದ್ದವರ ಮೇಲೆ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

      ತಾಲ್ಲೂಕಿನ ಗೋಡೆಕೆರೆಹಟ್ಟಿಯಲ್ಲಿ ಈವರೆಗೆ 15 ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಸೋಂಕಿತರನ್ನು ಕ್ವಾರಂಟೈನ್‍ಗೆ ಒಳಪಡಿಸಲು ಮುಂದಾದ ತಾಲ್ಲೂಕು ಆಡಳಿತಕ್ಕೆ ಸ್ಥಳೀಯರು ಪ್ರತಿರೋಧ ಒಡ್ಡಿ ತಹಸೀಲ್ದಾರ್ ರರನ್ನು ಸೇರಿದಂತೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಅವಾಚ್ಯಶಬ್ದಗಳಿಂದ ನಿಂದಿಸಿದ್ದರು ಹಾಗೂ ಸೀಲ್‍ಡೌನ್ ಮಾಡಲಾಗಿದ್ದ ವ್ಯವಸ್ಥೆಯನ್ನು ಕಿತ್ತುಹಾಕಿದ್ದರು.

      ಈಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಗೋಡೆಕೆರೆಹಟ್ಟಿಗೆ ಭೇಟಿ ನೀಡಿ ಸ್ಥಳೀಯರಿಗೆ ಪರಿಸ್ಥಿತಿಯ ಮನವರಿಕೆ ಮಾಡಿದರು.

      ಹಾಗೂ ಕೊರೊನಾ ಹೋರಾಟದಲ್ಲಿ ಶ್ರಮಿಸುತ್ತಿರುವ ಸರ್ಕಾರಿ ಇಲಾಖೆಗಲ ಸಿಬ್ಬಂದಿಯ ರಕ್ಷಣೆ ನನ್ನ ಹೊಣೆಗಾರಿಕೆಯಾಗಿದ್ದು, ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೆ ನಿಧ್ರ್ಯಾಕ್ಷಣ್ಯಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು. ಕೋರೊನಾ ಸೋಂಕಿತ ನಿಯಂತ್ರಣದ ಹೋರಾಟದಲ್ಲಿ ಎಲ್ಲರೂ ಶಾಂತಿಯಿಂದ ಸಹಕರಿಸಬೇಕೆಂದು ತಿಳಿಸಿದರು.

      ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ನಂದಿನಿ, ತಹಸೀಲ್ದಾರ್ ಬಿ. ತೇಜಸ್ವಿನಿ ಹಾಗೂ ಡಿವೈಎಸ್‍ಪಿ, ಪಿಎಸ್‍ಐ ಮುಂತಾದವರಿದ್ದರು.

(Visited 10 times, 1 visits today)