ಕೊರಟಗೆರೆ:

      ಕರುನಾಡಿನ ಮುಖ್ಯಮಂತ್ರಿ ಕ್ವಾರೈಂಟೆನ್‍ಗೆ ಹೋಗಿದ್ದಾರೆ. ಆರೋಗ್ಯ ಸಚಿವರು ದೇವರೇ ಗತಿ ಅಂತಾ ಹೇಳ್ತಿದ್ದಾರೇ.. ಕೊರೊನಾ ವಿಚಾರವಾಗಿ ಒಬ್ಬೊಬ್ಬ ಸಚಿವ ಒಂದೊಂದು ರೀತಿಯ ವಿಭಿನ್ನ ಹೇಳಿಕೆ ನೀಡ್ತಿದ್ದಾರೇ.. ಕರ್ನಾಟಕದ ಜನರ ಆರೋಗ್ಯ ಪರಿಸ್ಥಿತಿ ಅರಿಯಲು ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಡಾ.ಜಿ.ಪರಮೇಶ್ವರ್ ಆರೋಪ ಮಾಡಿದರು.

      ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಯ ಸಭಾಂಗಣದಲ್ಲಿ ಇತ್ತೀಚಿಗೆ ಏರ್ಪಡಿಸಲಾಗಿದ್ದ ಕೊರೊನಾ ಹರಡುವಿಕೆ ತಡೆಯುವ ತುರ್ತುಸಭೆಯಲ್ಲಿ ಅಧಿಕಾರಿಗಳ ಚರ್ಚಿಸಿ ನಂತರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

      ಕೊರೊನಾ ಹರಡುವಿಕೆ ತಡೆಯಲು ಕರ್ನಾಟಕ ಸರಕಾರದ ಸಮರ್ಪಕ ಮಾರ್ಗದರ್ಶನ ಇಲ್ಲದೇ ತುಮಕೂರು ಜಿಲ್ಲಾಡಳಿತ ಮತ್ತು ಕೊರಟಗೆರೆ ಕೊರೊನಾ ಆಡಳಿತ ಯಂತ್ರ ನಿಷ್ಕ್ರೀಯವಾಗಿದೆ. ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಸಚಿವರ ವಿಭಿನ್ನ ರೀತಿಯ ಹೇಳಿಕೆಯಿಂದ ಕೊರೊನಾ ಸಿಲ್‍ಡೌನ್, ಲಾಕ್‍ಡೌನ್ ಮತ್ತು ಕ್ವಾರೈಂಟೆನ್‍ಗೆ ಬೆಲೆಯೇ ಇಲ್ಲದಾಗಿದೆ ಎಂದು ಆರೋಪ ಮಾಡಿದರು.

      ತುಮಕೂರು ಜಿಲ್ಲಾಡಳಿತ ಕೊರೊನಾ ಪರೀಕ್ಷೆ ಮಾಡಿರುವ ವ್ಯಕ್ತಿಗಳ ಅಂಕಿಅಂಶ ನೀಡ್ತಾರೇ. ಪಾಸಿಟಿವ್ ಮತ್ತು ಮೃತ ಕೊರೊನಾ ರೋಗಿಗಳ ಮಾಹಿತಿ ನೀಡ್ತಾರೇ ಅಂದ ಮೇಲೆ ಕೊರೊನಾ ಪರೀಕ್ಷೆ ಮಾಡಬೇಕಾದ ಲ್ಯಾಬ್ ಅಂಕಿಅಂಶದ ತಾಲೂಕುವಾರು ಮಾಹಿತಿ ನೀಡದಿರಲು ಕಾರಣವೇನು. ಗಂಟಲು ದ್ರವ ಪರೀಕ್ಷೆ ಮಾಡಿ 10 ದಿನಕ್ಕೆ ವರದಿ ನೀಡಿದರೇ ಕೊರೊನಾ ಹರಡುವಿಕೆ ತಡೆಯಲು ಸಾಧ್ಯವೇ ಎಂಬುದೇ ಯಕ್ಷಪ್ರಶ್ನೆ ಆಗಿದೆ ಎಂದು ಕಿಡಿಕಾರಿದರು.

     ಸಮ್ಮೀಶ್ರ ಸರಕಾರದ ಅವಧಿಯಲ್ಲಿ ಕೊರಟಗೆರೆ ಕ್ಷೇತ್ರಕ್ಕೆ ಮಂಜೂರು ಆಗಿದ್ದ ಕೋಟ್ಯಾಂತರ ರೂ ಅಭಿವೃದ್ಧಿ ಅನುದಾನ ಬಿಜೆಪಿ ನೇತೃತ್ವದ ಸರಕಾರ ಹಿಂದಕ್ಕೆ ಪಡೆದಿದೆ. ನಾನೇ ಖುದ್ಧಾಗಿ ಮುಖ್ಯಮಂತ್ರಿಗೆ ಮನವಿ ಮಾಡಿದರೂ ಪ್ರಯೋಜನಾ ಆಗಿಲ್ಲ. ನಮ್ಮ ಕ್ಷೇತ್ರದ 55ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಮುಖ್ಯಮಂತ್ರಿ ತುರ್ತಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದರು.

      ತುರ್ತುಸಭೆಯಲ್ಲಿ ಮಧುಗಿರಿ ಎಸಿ ಡಾ.ಕೆ.ನಂದಿನಿದೇವಿ, ತಾಪಂ ಇಓ ಶಿವಪ್ರಕಾಶ್, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್, ಅರಣ್ಯ ಇಲಾಖೆ ಸತೀಶಚಂದ್ರ, ಸಿಡಿಪಿಓ ಅಂಬಿಕಾ, ಕೃಷಿ ಇಲಾಖೆಯ ನಾಗರಾಜು, ಬಿಇಓ ಗಂಗಾಧರ್, ಟಿಎಚ್‍ಓ ವಿಜಯಕುಮಾರ್, ಎಇಇ ಗಂಗಾಧರ್, ಅಕ್ಷರ ದಾಸೋಹ ರಘು ಸೇರಿದಂತೆ ಇತರರು ಇದ್ದರು.

      ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ:

      ಕೊವೀಡ್ ತುರ್ತುಸಭೆಗೆ ಸಮರ್ಪಕ ಅಂಕಿಅಂಶದ ಮಾಹಿತಿ ನೀಡದ ಕೊರಟಗೆರೆ ತಹಶೀಲ್ದಾರ್, ತಾಪಂ ಇಓ ಮತ್ತು ಟಿಎಚ್‍ಓ ತೀರ್ವ ತರಾಟೆಗೆ ತೆಗೆದುಕೊಂಡು ನಿಮಗೆ ಇನ್ನೂ ಬುದ್ಧಿ ಬಂದಿಲ್ವಾ ಎಂದು ಗರಂ ಆದ ಘಟನೆಯು ನಡೆದಿದೆ. ಸರಕಾರದಿಂದ ಕೊರೊನಾ ನಿರ್ವಹಣೆಗೆ ಎಷ್ಟು ಹಣ ಬಂದಿದೆ. ಯಾವುದಕ್ಕೆ ಎಷ್ಟು ಖರ್ಚಾ ಮಾಡಲಾಗಿದೆ. ಉಳಿಕೆ ಹಣ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ನೀಡದ ಮಧುಗಿರಿ ಎಸಿ ವಿರುದ್ದವು ಮಾಜಿ ಡಿಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.

10 ಸಾವಿರ ಮಾಸ್ಕ್ ಖರೀದಿಯ ಲೆಕ್ಕಾ ಎಲ್ಲಿ? :

      ಕೊವೀಡ್ ನಿರ್ವಹಣೆಗೆ ರಾಜ್ಯ ಸರಕಾರ 20ಲಕ್ಷ ಅನುದಾನ ಬಿಡುಗಡೆ ಮಾಡಿದೆ. 10 ಸಾವಿರ ಮಾಸ್ಕ್ ಖರೀದಿ ಮತ್ತು ಆರೋಗ್ಯ ನಿರ್ವಹಣೆಗೆ ಈಗಾಗಲೇ 14.5ಲಕ್ಷ ಖರ್ಚು ಮಾಡಲಾಗಿದೆ. ಪೊಲೀಸರು, ಗ್ರಾಪಂ ಅಧಿಕಾರಿವರ್ಗ, ಪೌರಕಾರ್ಮಿಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಗೆ ನೀಡಿಲ್ಲ ಹಾಗಾದರೇ ಮಾಸ್ಕ್ ಖರೀದಿಸಿ ಯಾರಿಗೇ ನೀಡಿದ್ದಿರಾ. ಕೊರೊನಾ ಸೈನಿಕರಿಗೆ ನಾನು ನೀಡಿದ 10ಸಾವಿರ ಮಾಸ್ಕ್ ಮತ್ತು ಸ್ಯಾನಿಟೈಸರ್ ಯಾರಿಗೆ ನೀಡಿದ್ದೀರಾ ಎಂದು ಮಾಜಿ ಡಿಸಿಎಂ ತಹಶೀಲ್ದಾರ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

(Visited 29 times, 1 visits today)