ಮಧುಗಿರಿ:

      ಕರೋನದ ವೈರಸ್ ಹರಡದಂತೆ ಸರ್ಕಾರ ಲಾಕ್ ಡೌನ್, ಸೀಲ್ ಡೌನ್ ಮತ್ತಿತರರ ಕ್ರಮ ಕೈಗೊಳ್ಳುತ್ತಿದ್ದರೂ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ನಿಯಂತ್ರಿಸುವ ಅಂದರೆ ಚೈನ್ ಬ್ರೇಕ್ ಮಾಡಲು ನಾನಾ ಪ್ರಯತ್ನಗಳು ನಡೆಯುತ್ತಲೇ ಇದೆ.

     ಮಧುಗಿರಿ ಪಟ್ಟಣದ ವಿಆರ್ ಎಸ್ ಟಿ ರಸ್ತೆಯಲ್ಲಿನ ಅಮೃತ ಟ್ರೇಡರ್ಸ್ ನ ಪಶು ಆಹಾರ ಮಳಿಗೆಯವರು ಮಾತ್ರ ಮಾರ್ಚ್ ಇಪ್ಪತ್ತನಾಲ್ಕು ರಿಂದ ಇಲ್ಲಿಯವರೆಗೂ ಸಾಮಾಜಿಕ ಅಂತರ ,ಮಾಸ್ಕ್ ಧರಿಸಿದವರಿಗೆ ಮಾತ್ರ ಪಶು ಆಹಾರದ ವಸ್ತುಗಳನ್ನು ನೀಡುತ್ತಿರುವುದು ಕಾಣಬಹುದು.ಇವರ ವ್ಯಾಪಾರ ಶೈಲಿ ವ್ಯಾಪಾರಸ್ಥರಿಗೆ ಮಾದರಿಯಾಗಿದೆ.

      ಕೊರೋನಾದಿಂದ ದೂರ ಉಳಿಯಲು ಇವರು ಅಂಗಡಿ ಸುತ್ತಲೂ ಸೀಲ್ಡ್ ಮಾದರಿಯಲ್ಲಿ ಅಡ್ಡ ಪಟ್ಟಿಗಳನ್ನು ಕಟ್ಟಿಕೊಂಡು ರೈತರೇ ಗ್ರಾಹಕರಾಗಿರುವುದರಿಂದ ರೈತರ ಕ್ಷೇಮಕ್ಕಾಗಿ ಸ್ಯಾನಿಟೈಸರ್ ಮಾಡಿ ನಂತರ ವ್ಯಾಪಾರ ಮಾಡುತ್ತಾರೆ. ಇವರಲ್ಲಿ ನಾಲ್ವರು ಕೆಲಸ ಮಾಡುತ್ತಿದ್ದು, ಅವರ ಆರೋಗ್ಯದ ದೃಷ್ಟಿಯನ್ನು ಕೇಂದ್ರೀಕರಿಸಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ನಗದು ರೂಪದಲ್ಲಿ ಹಣ ಪಡೆಯಲು ಪ್ರತ್ಯೇಕವಾಗಿ ಮಹಿಳೆಯೊಬ್ಬರನ್ನು ನೇಮಿಸಿದ್ದು ,ಇವರು ಹಣ ಪಡೆಯುವುದಕ್ಕಷ್ಟೇ ಸೀಮಿತವಾಗಿದ್ದಾರೆ .ಇತರೆ ಕೆಲಸಗಳನ್ನು ಅಂಗಡಿಯ ಮಾಲೀಕ ಮಾಡುತ್ತಾರೆ. ಪಶು ಆಹಾರವನ್ನು ನೀಡುವಾಗಲೂ ಸಹ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

     ಅಂಗಡಿ ಮಾಲೀಕನಾದ ಕೆ. ಮಧು ಪ್ರಕಾರ ಈ ಕರೋನಾ ವೈರಾಣು ರೋಗವಲ್ಲ, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅದನ್ನು ತಡೆಯುವ ಸಲುವಾಗಿ ಮುಖಕ್ಕೆ ಫೇಸ್ ಶೀಲ್ಡ್ ,ಹ್ಯಾಂಡ್ ಗ್ಲೌಸ್, ಸಾಮಾಜಿಕ ಅಂತರವನ್ನು ಕಾಪಾಡಿದ್ದೇವೆ. ಇದರಿಂದ ನಾವು ಕ್ಷೇಮ ಗ್ರಾಹಕರು ಕ್ಷೇಮವಾಗಿರುತ್ತಾರೆ.

      ಕಳೆದ ಮೂರು ದಿನಗಳಿಂದ ಮಧುಗಿರಿಯಲ್ಲಿ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಜೀರೊ ಅಗಿದ್ದು ಭಾನುವಾರ ಮತ್ತು ಸೋಮವಾರ ತಲಾ ಮೂರು ಪ್ರಕರಣಗಳು ಬಯಲಿಗೆ ಬಂದಿವೆ. ಅದು ರಸಗೊಬ್ಬರ ಮಾರಾಟ ಮಾಡುವವರಿಗೆ ಬಂದಿರುವುದು ಈ ವೈರಸ್ ಇವರಿಗೆ ಯಾವ ರೀತಿ ಹರಡಿದೆ ಎಂಬುದು ಪತ್ತೆ ಹಚ್ಚಲು ಕಷ್ಟವಾಗುತ್ತಿದೆ.ಬಿತ್ತನೆ ಕಾಲವಾಗಿದ್ದರಿಂದ ತಾಲ್ಲೂಕಿನ ರೈತರು ಮುಗಿಬಿದ್ದು ಗೊಬ್ಬರವನ್ನು ಖರೀದಿಸಿದ್ದರು. ಯಾರಿಂದ ರೋಗ ಹರಡಿದೆ ಎಂದು ದೃಢೀಕರಿಸಲು ತಾಲೂಕಾಡಳಿತಕ್ಕೆ ಕಷ್ಟಕರವಾಗುತ್ತಿದೆ. ಇನ್ನೂ ಸೀಮಾಂಧ್ರದಿಂದ ಬರುವ ರಸಗೊಬ್ಬರ ತುಂಬಿದ ಲಾರಿಗಳಲ್ಲಿ ಲೋಡ್ ಮಾಡಿಕೊಂಡು ಬಂದು ಅಂಗಡಿ ಯಲ್ಲಿ ಇಳಿಸಿದಾಗ ಹಬ್ಬಿದೆ ಎಂಬ ಸಂದೇಹಗಳು ಕಾಡುತ್ತಿದೆ.

      ಇತ್ತೀಚೆಗೆ ಮಧುಗಿರಿ ಪಟ್ಟಣದಲ್ಲಿ ಸೀಮಾಂಧ್ರದ ನೋಂದಾವಣೆ ಗೊಂಡ ವಾಹನಗಳು ಹೆಚ್ಚು ಓಡಾಡುತ್ತಿದ್ದು ,ಉಪ ನೋಂದಣಿ ಕಚೇರಿಗೆ ನೋಂದಾವಣಿಗೆ ಮಾಡಿಕೊಳ್ಳಲು ಸೀಮಾಂಧ್ರ ವಾಹನಗಳು ಹೆಚ್ಚು ಹೆಚ್ಚು ಕಾಣಿಸಿವೆ ,ಗಡಿಭಾಗ ಹಿಂದೂಪುರ ಮತ್ತು ಮಡಕಶಿರಾ ಹಾಗ ಅನಂತಪುರ ಜಿಲ್ಲೆಯ ವಾಹನಗಳು ಬರುತ್ತಿರುವುದರಿಂದ ಕರೋನಾ ವೈರಸ್ ಹರಡುತ್ತಿದೆ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

(Visited 5 times, 1 visits today)