ಚಿಕ್ಕನಾಯಕನಹಳ್ಳಿ:

      ಸೀಲ್‍ಡೌನ್ ಪ್ರದೇಶದಲ್ಲಿನ ನಿವಾಸಿಗಳಿಗೆ ಜೀವನೋಪಾಯದ ಅಗತ್ಯವಸ್ತು ಪೂರೈಸದೆ ನಿಲ್ರ್ಯಕ್ಷಿಸಲಾಗುತ್ತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

      ಪಟ್ಟಣದ 10ನೇವಾರ್ಡ್‍ನ ಬ್ರಾಹ್ಮಣರಬೀದಿಯ ಪೂರ್ವದಿಕ್ಕಿನ ರಸ್ತೆಯನ್ನು ಕಳೆದೆರಡುದಿನದ ಹಿಂದೆ ಕೊರೊನಾ ಸೋಂಕು ಪತ್ತೆಯಾದ ಕಾರಣಕ್ಕೆ ಸೀಲ್‍ಡೌನ್ ಮಾಡಲಾಗಿತ್ತು.

      ಆದರೆ ಸೀಲ್‍ಡೌನ್ ಆದ ನಂತರ ಅಲ್ಲಿರುವ ನಿವಾಸಿಗಳಿಗೆ ಜೀವನೋಪಾಯದ ಅಗತ್ಯವಸ್ತುಗಳನ್ನು ಸರಬರಾಜು ಮಾಡುವಲ್ಲಿ ಸ್ಥಳೀಯ ಪುರಸಭೆ ನಿಲ್ರ್ಯಕ್ಷವಹಿಸಿದ ಕಾರಣ ಕೆಲವರು ಸೀಲ್‍ಡೌನ್ ಪ್ರದೇಶದಿಂದ ಹೊರಕ್ಕೆ ತೆರಳಿ ತಮಗೆಬೇಕಾದ ದಿನಸಿ, ತರಕಾರಿ, ಔಷಧಿ, ಹಾಲು ಇತ್ಯಾದಿಗಳನ್ನು ತರಲಾರಂಭಿಸಿದರು.

     ಈ ಓಡಾಟವನ್ನು ಗಮನಿಸಿದ ಕೆಲವರಿಂದ ದೂರುಹೋದ ಹಿನ್ನಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ಹಾಜರಾಗಿ ಸೀಲ್ಡೌನ್ ಪ್ರದೇಶದಲ್ಲಿರುವ ಜನರನ್ನುದ್ದೇಶಿಸಿ ಮಾತನಾಡಿ ನೀವು ಯಾವುದೇ ಕಾರಣಕ್ಕೆ ಹೊರಗೆಹೋಗುವ ಹಾಗಿಲ್ಲ, ನಿಮಗೇ ಏನಾದರೂ ಬೇಕಿದ್ದರೆ ಕಾವಲಿರುವ ಸಿಬ್ಬಂದಿಗಳಿಂದ ವಸ್ತುಗಳನ್ನು ತರಿಸಿಕೊಳ್ಳಬಹುದೆಂದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯರು ಇಲ್ಲಿ ಒಬ್ಬರೇ ಸಿಬ್ಬಂದಿ ಇದ್ದಾರೆ, ಅವರೂಸಹ ಸರಿಯಾಗಿ ಇರುವುದಿಲ್ಲ, ಇಲ್ಲಿ ವೃದ್ದರೇ ಏಳೆಂಟು ಮಂದಿಯಿದ್ದಾರೆ, ಹಲವರು ಅನಾರೋಗ್ಯದಿಂದ ನರಳುತ್ತಿದ್ದಾರೆ ಹಾಗೂ ಬುದ್ದಿ ಮಂಕಾದವರು ವಾಸಿಸುತ್ತಿದ್ದಾರೆ, ಅವರ ಬೇಕು ಬೇಡಗಳಾದ ಆಹಾರ, ಔಷಧಿಗಳನ್ನು ಒದಗಿಸುವಲ್ಲಿ ಯಾರೂ ಸಹಕರಿಸುತ್ತಿಲ್ಲ, ಇಲ್ಲಿ ನಮ್ಮನ್ನು ಕೇಳುವವರೆ ಇಲ್ಲ, ಕುಡಿಯುವ ಶುದ್ದನೀರು ತರಸಿಕೊಳ್ಳಲೂಸಹ ಆಗಿಲ್ಲ, ಇಲ್ಲಿ ಕುಳಿತಿರುವ ಒಬ್ಬರೇ ಸಿಬ್ಬಂದಿ ನಮಗೆ ಸಹಕರಿಸುತ್ತಿಲ್ಲ ಅವರೂಸಹ ಸಕಾಲದಲ್ಲಿ ಸಿಗುತ್ತಿಲ್ಲ ಈ ಕಾರಣದಿಂದ ನಮಗೆ ಪದಾರ್ಥಗಳನ್ನು ಪಡೆಯಲು ಹೊರಗೇ ಹೋಗಬೇಕಾದ ಅನಿವಾರ್ಯತೆ ಬಂದಿದೆ ಎಂದು ದೂರಿದರು.
ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್ ಬಿ. ತೇಜಸ್ವಿನಿ ತಕ್ಷಣ ಪುರಸಭಾ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ಇಲ್ಲಿ ನಿಯೋಜಿಸಿದ್ದ ಸಿಬ್ಬಂದಿಯನ್ನು ಕರೆಸಿ ವಿಚಾರಿಸಲಾಗಿ, ಆತನು ಇಲ್ಲಿ ನನಗೊಬ್ಬನಿಗೆ ಮಾತ್ರ ಡ್ಯೂಟಿ ಹಾಕಿದ್ದಾರೆ, ಇಲ್ಲಿನ ನಿವಾಸಿಗಳಿಗೆ ಅಗತ್ಯ ಸಾಮಾನು ತಂದು ಕೊಡಲು ನಾನೇ ಹೋಗಬೇಕಿರುವುದರಿಂದ ಮತ್ತೊಬ್ಬರನ್ನು ಇಲ್ಲಿಗೆ ನಿಯೋಜಿಸಿದರೆ ಸರಿಯಾಗಲಿದೆ ಎಂದು ಉತ್ತರಿಸಿದನು.

      ಇಲ್ಲಿರುವ ವಯಸ್ಸಾದವರು ಹಾಗೂ ಇನ್ನಿತರ ಅಶಕ್ತರನ್ನು ಗುರುತಿಸಿ ಅವರಿಗೆ ಬೇಕಾದ ಊಟ, ತಿಂಡಿ, ತರಕಾರಿ, ಹಾಗೂ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತಂದುಕೊಡುವಂತಹ ಸಿಬ್ಬಂದಿಯನ್ನು ನಿಯೋಜಿಸಿರೆಂದು ಮುಖ್ಯಾಧಿಕಾರಿ ಸೂಚಿಸಿ, ಯಾವುದೇ ದೂರು ಬರದಂತೆ ನೋಡಿಕೊಳ್ಳಿರೆಂದರು.

(Visited 22 times, 1 visits today)