ಕೊರಟಗೆರೆ:
ಗುಡುಗು-ಮಿಂಚಿನ ನಡುವೆ ಬಿರುಗಾಳಿಯ ಮಳೆ ಬೀಳು ತ್ತಿರುವ ನಡುವೆಯೇ ಸೋಮವಾರ ಮಧ್ಯರಾತ್ರಿ ಕಳ್ಳರ ತಂಡ ಬೈರೇನಹಳ್ಳಿ ಮಧ್ಯದ ಅಂಗಡಿಯ ಬೀಗ ಮುರಿದು ಸುಮಾರು 2ಲಕ್ಷ 32ಸಾವಿರ ಮೌಲ್ಯದ 498 ಲೀಟರ್ ಮಧ್ಯ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ತುಮಕೂರು ನಗರ ವಾಸಿಯಾದ ಸೀನಪ್ಪ ಮಾಲೀಕತ್ವದ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿಯ ಸಪ್ತಗಿರಿ ವೈನ್ಸ್‍ನಲ್ಲಿ ಕಳೆದ ವರ್ಷ ನಡೆದಿದ್ದ ಕಳ್ಳತನ ಮಾಸುವ ಮುನ್ನವೇ ಈಗ ಅದೇ ವೈನ್ಸ್‍ನಲ್ಲಿ ಮತ್ತೊಂದು ಸಲ ಕಳ್ಳತನ ನಡೆದು ಸಿಸಿಟಿವಿ ಸಮೇತ ಪರಾರಿ ಆಗಿದ್ದಾರೆ.
ಬೈರೇನಹಳ್ಳಿ ಗ್ರಾಮದ ಹೊರವಲಯದ ಸಪ್ತಗಿರಿ ವೈನ್ಸ್‍ನ ಮಾಲೀಕ ಮತ್ತು ವ್ಯವಸ್ಥಾಪಕನ ದಿವ್ಯನಿರ್ಲಕ್ಷ್ಯದಿಂದ ಕಳ್ಳತನ ನಡೆದಿದೆ. ಮೊದಲ ಸಲ ಕಳ್ಳತನ ನಡೆದಾಗ ಪೊಲೀಸ್ ಇಲಾಖೆ ಸಿಸಿಟಿವಿ ಮತ್ತು ಭದ್ರತೆಗಾಗಿ ಸೆಕ್ಯುರಿಟಿ ನೇಮಿಸುವಂತೆ ಸೂಚನೆ ನೀಡಿದ್ದಾರೆ. ವೈನ್ಸ್ ಮಾಲೀಕ ನಿರ್ಲಕ್ಷ್ಯ ಮಾಡಿರುವ ಪರಿಣಾಮ ಕಳ್ಳರ ತಂಡ ಮಧ್ಯರಾತ್ರಿ ಕಳ್ಳತನ ಮಾಡಿದ್ದಾರೆ.
ಸಪ್ತಗಿರಿ ವೈನ್ಸ್‍ನಲ್ಲಿದ್ದ 5655ಮೌಲ್ಯದ 8ಪಿಎಂ, 10017ರೂ ಮೌಲ್ಯದ 8ಪಿಎಂ, 70905ರೂ ಮೌಲ್ಯದ ಓಟಿ ವಿಸ್ಕಿ, 20140ರೂ ಮೌಲ್ಯದ ಓಟಿ ವಿಸ್ಕಿ, 11663ರೂ ಮೌಲ್ಯದ ಬಿಪಿ ವಿಸ್ಕಿ, 12489ರೂ ಮೌಲ್ಯದ ಬಿಪಿ ವಿಸ್ಕಿ, 10872ರೂ ಮೌಲ್ಯದ ರಾಜವಿಸ್ಕಿ, 62028ರೂ ಮೌಲ್ಯದ ಹೈವಾಡ್ರ್ಸ, 28368ರೂ ಮೌಲ್ಯದ ಓಸಿ ಸಿಟ್ರಾ ಪ್ಯಾಕೇಟ್‍ನ ಬಾಕ್ಸ್‍ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ವೈನ್ಸ್‍ನಲ್ಲಿದ್ದ ಒಟ್ಟು 2ಲಕ್ಷದ 32ಸಾವಿರದ 137ರೂ ಮೌಲ್ಯದ 498.96ಲೀಟರ್ ಮಧ್ಯ ಕಳ್ಳತನವಾಗಿದೆ. ದುಬಾರಿ ಮೌಲ್ಯದ ಮಧ್ಯದ ಬಾಟೀಲು ಮತ್ತು ಚಿಲ್ಲರ ಹಣವನ್ನು ಮುಟ್ಟದೆ ಹಾಗೆ ಬಿಟ್ಟಿದ್ದು ಸಣ್ಣ ಮೌಲ್ಯದ ಮಧ್ಯ ಕಳ್ಳತನ ಮಾಡಿದ್ದಾರೆ. ವೈನ್ಸ್‍ನ ಮುಂಭಾಗದ ಎರಡು ಕಡೆಯ ಸಿಸಿಟಿವಿಗೆ ಕೆಸರು ಎರಚಿದ ನಂತರ ಕಳ್ಳತನದ ಸುಳಿವು ಸಿಗದಂತೆ ಕಂಪ್ಯೂಟರ್ ಒಳಗಿದ್ದ ಹಾರ್ಡ್‍ಡಿಕ್ಸ್‍ನ್ನು ಬಿಡದೇ ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದಾರೆ.
ಬೈರೇನಹಳ್ಳಿಗೆ ತುಮಕೂರಿನಿಂದ ಬೆರಳಚ್ಚು ತಜ್ಞರ ತಂಡ ಮತ್ತು ಶ್ವಾನದಳ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಪ್ರವೀಣ್, ಕೊರಟಗೆರೆ ಅಬಕಾರಿ ಇನ್ಸ್‍ಪೇಕ್ಟರ್ ರಾಮಮೂರ್ತಿ, ಸಿಪಿಐ ನದಾಫ್, ಪಿಎಸೈ ಮುತ್ತುರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳರ ತಂಡವನ್ನು ಹಿಡಿಯಲು ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದಾರೆ.