ಮಧುಗಿರಿ:

      ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಪ್ರೇಮಿಗಳು ಜೋಡಿಯೊಂದು ಮೌಡ್ಯತೆ ತೊರೆದು ಭೀಮನ ಅಮಾವಾಸ್ಯೆಯಂದೇ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ವಾಲ್ಮೀಕಿ ಭಾವಚಿತ್ರದ ಎದುರು ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ಮಧುಗಿರಿಯಲ್ಲಿ ನಡೆದಿದೆ.

      ಕೊರಟಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿ ಗ್ರಾಮದ ಯುವತಿ ಚಂದನಾ (18) ಹಾಗೂ ಅದೇ ಗ್ರಾಮದ 25 ವರ್ಷದ ಯುವಕ ಶ್ರೀಧರ್ ಕಳೆದ 6 ತಿಂಗಳಿನಿಂದ ಪರಸ್ಪರ ಪ್ರಿತಿಸುತ್ತಿದ್ದರು. ಇವರ ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಯಲ್ಲಿ ಮನೆ ಬಿಟ್ಟು ಓಡಿ ಹೋಗಿದ್ದ ಪ್ರೇಮಿಗಳು ರಕ್ಷಣೆ ಕೊಡುವಂತೆ ವೀಡಿಯೋ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದರು. ಬಳಿಕ ಜು20 ರ ಸೋಮವಾರ ಭೀಮನ ಅಮಾವಾಸ್ಯೆಯಂದು ಮೌಡ್ಯತೆ ತೊರೆದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಾಲ್ಮಿಕಿ ಭಾವ ಚಿತ್ರದ ಎದುರೇ ಸಂವಿಧಾನ ಪೀಠಿಕೆಯನ್ನೇ ಮಾಂಗಲ್ಯ ಧಾರಣೆಯ ಮಂತ್ರವಾಗಿ ಓದಿ ತಾಳಿಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

      ಬಳಿಕ ಇವರಿಬ್ಬರ ಪ್ರೇಮ ವಿವಾಹ ಮಧುಗಿರಿ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು, ಠಾಣೆಯಲ್ಲಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಪಿಎಸೈ ಕಾಂತರಾಜು ಪೋಷಕರಿಗೆ ಬುದ್ಧಿ ಹೇಳಿ ರಾಜಿ ಸಂಧಾನ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ.

 

(Visited 9 times, 1 visits today)