ತುರುವೇಕೆರೆ:

      ನನಗೂ ಹಾಗೂ ನಮ್ಮ ಗ್ರಾಮದ ಉಮರ್ ಎಂಬುವವರಿಗೂ ನಡೆದ ಜಮೀನು ವಿವಾದದ ಪ್ರಕರಣದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಜೆಡಿಎಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಿಂದೂ ಮುಸಲ್ಮಾನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ನಾಗಲಾಪುರದ ಮಂಜುನಾಥ್ ಆರೋಪಿಸಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಗ್ರಾಮದಲ್ಲಿ ನಮ್ಮ ತಾತನವರ ಕಾಲದಿಂದಲೂ ಉಳಿಮೆ ಮಾಡುತ್ತಿದ್ದ ಜಮೀನನ್ನು ಅಕ್ರಮವಾಗಿ ಮುಸಲ್ಮಾನ್ ಜನಾಂಗದ ಉಮರ್ ಎಂಬುವವರು ಉಳಿಮೆ ಮಾಡಲು ಮುಂದಾದಾ, ತಡೆಯಲು ಹೋದ ನನ್ನ ಮೇಲೆ ಟ್ರಾಕ್ಟರ್ ಹರಿಸಲು ಪ್ರಯತ್ನಿಸಿದರು ತಕ್ಷಣ ನಾನು ಪಕ್ಕಕ್ಕೆ ಬಿದ್ದೆ ಆದರೂ ಟ್ರಾಕ್ಟರ್‍ನ ನೇಗಿಲು ನನ್ನ ತೊಡೆ ಹಾಗೂ ಕೈಗೆ ತಾಕಿ ರಕ್ತಸ್ರಾವ ಉಂಟಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ, ಆದರೆ ಅಷ್ಟರೊಳಗಾಗಲೇ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನ ಸಹಾಯದಿಂದ ಪೋಲೀಸ್ ಠಾಣೆಗೆ ನನ್ನ ಮೇಲೆಯೇ ದೂರು ನೀಡಿದ್ದಾರೆ, ಅಲ್ಲದೆ ವಾಸ್ತವದ ಅರಿವಿಲ್ಲದ ಮಾಜಿ ಶಾಸಕರು ಸೋಮವಾರ ಪೋಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಒಟ್ಟಾರೆ ನಮ್ಮ ಗ್ರಾಮದಲ್ಲಿರುವ ಹಿಂದು ಮುಸ್ಲಿಂ ಭಾವೈಕ್ಯತೆಯನ್ನು ಇವರ ರಾಜಕೀಯ ದುರುದ್ದೇಶಕ್ಕೆ ಹೊಡೆಯಲು ಮುಂದಾಗಿದ್ದಾರೆ.

      ನನ್ನ ಮೇಲೆ ಪತ್ರಿಕಾಗೋಷ್ಠಿ ನಡೆಸಿ ನನ್ನನ್ನು ಗೂಂಡಾ ಎಂದು ಕರೆದಿರುವ ನಿಮಗೆ ನಾಚಿಕೆಯಾಗುವುದಿಲ್ಲವೇ, ತಾಲೂಕಿನಲ್ಲಿ ಹೊಡಿ-ಬಡಿ ಸಂಸ್ಕøತಿ ಹುಟ್ಟು ಹಾಕಿದವರು ನೀವು, ನನ್ನ ಮೇಲೆ ಒಂದೇ ಒಂದು ಕೇಸ್ ಇಲ್ಲ, ಕೃಷ್ಣಪ್ಪನ ಕಾಲದಲ್ಲಿ ಹಲವು ಅಮಾಯಕರ ಮೇಲೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಕೇಸ್ ದಾಖಲಿಸಿದ್ದಾರೆಂದು ದಾಖಲೆಗಳನ್ನು ಪತ್ರಿ ಕಾಗೋಷ್ಠಿಯಲ್ಲಿ ಬಹಿರಂಗ ಗೊಳಿಸಿದರು.

     ಮುಸ್ಲಿಂ ಯುವ ಮುಖಂಡ ಜಾಫರ್ ಮಾತನಾಡಿ ತಾಲೂಕಿನಲ್ಲಿ ಅಲ್ಪಸಂಖ್ಯಾತರಿಗೆ ಕೃಷ್ಣಪ್ಪನ ಕೊಡುಗೆ ಶೂನ್ಯ. ಇದೀಗ ತಮ್ಮ ರಾಜಕೀಯ ದುರುದ್ದೇಶದಿಂದ ಸಮುದಾಯವನ್ನು ಬಳಸಿಕೊಳ್ಳುತ್ತಿರುವುದು ಸರಿಯಿಲ್ಲ, ಕಳೆದ ವಿಧಾನಸಭಾ ಚುನಾವಣಾ ಸಂಧರ್ಭದಲ್ಲಿ ಕೃಷ್ಣಪ್ಪನ ಬೆಂಬಲಿಗರು ನನ್ನ ಮೇಲೆ ಹಲ್ಲೆಗೆ ಮುಂದಾದರು, ಅಂದು ನಾನು ಅಲ್ಪಸಂಖ್ಯಾತನಾಗಿ ಕಾಣಲಿಲ್ಲವೇ, ದುರುದ್ದೇಶ ಪೂರಕವಾಗಿ ಇದೇ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನನ್ನನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸಿದರು. ಒಂದೇ ಒಂದು ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯುಳ್ಳದ ನನ್ನನ್ನು ರೌಡಿ ಶೀಟರ್ ಪಟ್ಟಿಗೆ ಸೇರಿಸುವಾಗ ನನ್ನ ಕುಟುಂಬ ನಮ್ಮ ಸಮುದಾಯ ಇವರ ಕಣ್ಣಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.

      ಈ ಸಂದರ್ಭದಲ್ಲಿ ನಾಗಲಾಪುರ ಗ್ರಾಮದ ಮುಸ್ಲಿಂ ಮುಖಂಡರಾದ ಯಾಸೀನ್‍ಖಾನ್, ಸರ್ಧಾರ್, ಸಯ್ಯದ್, ಗೌಸ್‍ಫೀರ್, ಇಮ್ರಾನ್, ಸಗೀರ್, ಇತರರು ಇದ್ದರು.

(Visited 10 times, 1 visits today)