ಮಧುಗಿರಿ: 

        ರೋಗಾಣು ನಮ್ಮ ಶತೃ, ರೋಗಿಯಲ್ಲ ಎಂಬ ದ್ಯೇಯದೊಂದಿಗೆ ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ತಂಡದಲ್ಲಿ ಅಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದು, ಸೋಂಕು ಹೆಚ್ಚಾಗಿರುವ ಪ್ರದೇಶಗಳಲ್ಲಿ ವಿಶೇಷ ನಿಗಾವಹಿಸಲಾಗಿದೆ. ಕೆಲವೊಮ್ಮೆ ಮಧ್ಯ ರಾತ್ರಿಯವರೆಗೂ ಕರ್ತವ್ಯ ನಿರ್ವಹಿಸಬೇಕಾದ ಸಂದರ್ಭಗಳು ಒದಗಿ ಬಂದರೂ ಬೆಳಗ್ಗೆ ಮತ್ತೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುವ ಎಸಿ ಮತ್ತು ತಹಶೀಲ್ದಾರ್‍ರವರ ಕಾರ್ಯದಕ್ಷತೆಗೆ ಅಧಿಕಾರಿಗಳು ಮತ್ತು ವೈದ್ಯರು ಸಾಥ್ ನೀಡಿದ್ದಾರೆ.

ರೆಸಾರ್ಟ್‍ನಂತಹ ವಾತಾವರಣ ನಿರ್ಮಾಣ:

       ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನದ ಸಮೀಪ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಸೋಂಕಿತರ ಚಿಕಿತ್ಸೆಗಾಗಿ 102 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದು, ಇಲ್ಲಿ ರೆಸ್ಪಾನ್ಸ್ಟ್‍ನಂತಹ ವಾತಾವರಣ ನಿರ್ಮಿಸಲಾಗಿದೆ. ಅಲ್ಲಿಗೆ ಬರುವ ಸೋಂಕಿತರನ್ನು ಕೋವಿಡ್ ಸೆಂಟರ್‍ನ ವಿಶೇಷ ಅತಿಥಿಗಳಂತೆ ಸತ್ಕರಿಸುತ್ತಿದ್ದು, ಸೋಂಕಿತರು ಬಂದ ಮಾರನೇ ದಿನವೇ ಭಯದ ವಾತಾವರಣ ಬಿಟ್ಟು, ರೆಸಾರ್ಟ್‍ನಂತಹ ವಾತಾವರಣವನ್ನು ಅನುಭವಿಸುತ್ತಿದ್ದಾರೆ.

ಏನೆಲ್ಲ ಸೌಲಭ್ಯವಿದೆ:

      ಉತ್ತಮ ಪರಿಸರ, ಸ್ವಚ್ಛ್ಚತೆಗೆ ಮೊದಲ ಅದ್ಯತೆ, ವೈದ್ಯಕೀಯ ಸೌಲಭ್ಯ, ವಿಟಮಿನ್‍ಯುಕ್ತ ಆಹಾರ, ಸ್ನಾನಕ್ಕೆ ಬಿಸಿ ನೀರು, ನಿಂಬೆ, ಚಹಾ, ಕಾಫಿ ಮತ್ತು ಕಷಾಯ, 24*7 ವೈದ್ಯಕೀಯ ಸೇವೆ, ಪೋಲೀಸ್ ಕಾವಲು, ಬೆಳಕಿನ ವ್ಯವಸ್ಥೆ, ಮುಖಗವಸು ಮತ್ತು ಸ್ಯಾನಿಟೈಸರ್‍ನ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 10 ದಿನಗಳವರೆಗೂ ನಾಲ್ಕು ಗೋಡೆಗಳ ಮದ್ಯೆ ಇರುವ ವಿಶೇಷ ಅತಿಥಿಗಳು ಡಿಪ್ರೆಷನ್‍ಗೆ ಜಾರಬಾರದೆಂಬ ಉದ್ದೇಶದಿಂದ ದೈನಂದಿನ ಸಮಾಚಾರಗಳನ್ನು ತಿಳಿಯಲು ಪ್ರತಿಯೊಬ್ಬರಿಗೂ ಓದಲು ದಿನ ಪತ್ರಿಕೆಗಳು, ಪುಸ್ತಕಗಳು, ಮನೋರಂಜನೆಗೆ (ಸೌಂಡ್ ಸಿಸ್ಟಮ್), ಆದ್ಯತೆ ನೀಡಿದ್ದು, ಕಳೆದ ಎರಡು ದಿನಗಳ ಹಿಂದೆ ಇಲ್ಲಿಗೆ ಬೇಟಿ ನೀಡಿದ್ದ ಜಿಲ್ಲೆಯ ಲೋಕಾಯುಕ್ತ ಡಿವೈಎಸ್ಪಿ ರವೀಶ್ ಇಲ್ಲಿನ ಪರಿಸರವನ್ನು ಪರಿಶೀಲಿಸಿ ಸ್ವತಃ ವಿಶೇಷ ಅತಿಥಿಗಳೊಂದಿಗೆ ಕೋವಿಡ್ ಕೇರ್ ಬಗ್ಗೆ ವಿಚಾರಿಸಿ ಓದಲು ದಿನಪತ್ರಿಕೆಗಳನ್ನು ವಿತರಿಸುವ ವಿನೂತನ ಕ್ರಮ ಜಿಲ್ಲೆಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     ಹೆಚ್ಚುವರಿ ಕೇಂದ್ರಗಳು :

      ಮುಂದಿನ ದಿನಗಳಲ್ಲಿ ಸೊಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮೀಪದ ಬಿಸಿಎಂ ಹಾಸ್ಟೆಲ್‍ನಲ್ಲಿ 30 ಹಾಸಿಗೆಗಳು ಮತ್ತು ಬಡವನಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ 100 ಹಾಸಿಗೆಗಳ ಸೌಕರ್ಯದ ಸಿದ್ದತೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಮಧುಗಿರಿಯ ಕೋವಿಡ್ ಕೇರ್ ಸೆಂಟರ್‍ಗೆ ಬೇಟಿ ನೀಡಿ ಪರಿಶೀಲಿಸಿ ಅಲ್ಲಿನವರೊಂದಿಗೆ ಸ್ವತಃ ಮಾತನಾಡಿದ್ದು, ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಲೂಕು ಆಡಳಿತ ಸೋಂಕಿತರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಇಲ್ಲಿನ ಪರಿಸರ ಬಹಳಷ್ಟು ಉತ್ತಮವಾಗಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದ್ದು, ಮಾದರಿ ಕೇಂದ್ರವಾಗಿದೆ.

– ಸಿ.ಆರ್. ರವೀಶ್, ಲೋಕಾಯುಕ್ತ ಡಿವೈಎಸ್ಪಿ, ತುಮಕೂರು.

      ಈಗ ಮಧುಗಿರಿ ಸಾರ್ವಜನಿಕ ಅಸ್ಪತ್ರೆಯಲ್ಲಿ 20 ನಿಮಿಷಕ್ಕೆ ಕರೋನಾ ವರದಿ ವರದಿ ಬರುತ್ತಿದ್ದು, ಸೊಂಕು ಕಾಣಿಸಿಕೊಂಡ ತಕ್ಷಣಕ್ಕೆ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಪಾಸಿಟೀವ್ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಗುಣಮಟ್ಟದ ಚಿಕಿತ್ಸೆ ನೀಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. – ಡಾ. ರತ್ನಾವತಿ, ಕೋವಿಡ್ ನೋಡಲ್ ಅಧಿಕಾರಿ, ಮಧುಗಿರಿ.

      ರೋಗಿ ನಮ್ಮ ಶತೃವಲ್ಲ, ರೋಗಾಣು ನಮ್ಮ ಶತೃ ಎಂಬ ದ್ಯೇಯದೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಾಲೂಕಿನ ಅಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದು, ಸೊಂಕಿತರನ್ನು ಕೋವಿಡ್ ಕೇರ್ ಕೇಂದ್ರದಲ್ಲಿ ವಿಶೇಷ ಅತಿಥಿಗಳಂತೆ ಗೌರವಿಸುತ್ತಿದ್ದು, ಗುಣಮಟ್ಟದ ಸೌಕರ್ಯವನ್ನು ಕಲ್ಪಿಸಲಾಗಿದೆ. ಪೋಷಕರೊಂದಿಗೆ ಕೇಂದ್ರಕ್ಕೆ ಬಂದಿದ್ದ ಮಗುವೊಂದು ಇಲ್ಲಿನ ಕೇಂದ್ರದಲ್ಲಿ ನಮ್ಮ ತಂದೆ ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಂಡರು ಧನ್ಯವಾದಗಳು ಎಂದು ಬರೆದು ಕೇಂದ್ರದ ಬಾಗಿಲಿಗೆ ಅಂಟಿಸಿ ಹೋದ ಸಾಲುಗಳು ನಮ್ಮ ಕೆಲಸಕ್ಕೆ ಮತ್ತಷ್ಟು ಪ್ರೇರಣೆ ನೀಡಿದೆ.

      – ಡಾ. ಜಿ. ವಿಶ್ವನಾಥ್, ತಹಶೀಲ್ದಾರ್ ಮಧುಗಿರಿ.
 

(Visited 33 times, 1 visits today)