ವಿಶಾಖಪಟ್ಟಣಂ:
ಆಂಧ್ರಪ್ರದೇಶ ವೈಎಸ್ಆರ್ ಕಾಂಗ್ರೆಸ್ ಪಕ್ಷದ ವರಿಷ್ಠ , ಮಾಜಿ ಮುಖ್ಯಮಂತ್ರಿ ವೈ.ಎಸ್. ಆರ್. ಪುತ್ರ ಜಗನ್ ರೆಡ್ಡಿಗೆ ವಿಶಾಖಪಟ್ಟಣಂ ಏರ್ಪೋರ್ಟ್ನಲ್ಲಿ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಏರ್ಪೋರ್ಟ್ಗೆ ಆಗಮಿಸಿ ಲಾಂಜ್ನಲ್ಲಿ ಕುಳಿತಿದ್ದ ವೈ.ಎಸ್.ಜಗನ್ಮೋಹನ್ ರೆಡ್ಡಿ ಜತೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಆಗಮಿಸಿದ ದುಷ್ಕರ್ಮಿ ಕೃತ್ಯ ಎಸಗಿದ್ದಾನೆ. ಕೋಳಿ ಕಾಳಗಕ್ಕೆ ಬಳಸುವ ಚಾಕುವಿನಿಂದ ಜಗನ್ ಎದ ಭುಜಕ್ಕೆ ಇರಿದ್ದಾನೆ. ಜಗನ್ ಅವರಿಗೆ ಏರ್ಪೋರ್ಟ್ನಲ್ಲಿಯೇ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಜಗನ್ ಜತೆಗೇ ಇದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಚಾಕು ಇರಿದ ವ್ಯಕ್ತಿ ಹೋಟೆಲ್ವೊಂದರಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
(Visited 11 times, 1 visits today)