ತುಮಕೂರು:
ನೀರಿನ ತೊಟ್ಟಿಗೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಜಿವಾಜಿಹಟ್ಟಿಯಲ್ಲಿ ನಡೆದಿದೆ.
ಹಡವನಹಳ್ಳಿಯ ಶಂಕ್ರಪ್ಪ-ವನಿತಾ ದಂಪತಿ ಮಗ ಭರತ್(3) ಮತ್ತು ಗೊಲ್ಲರಹಟ್ಟಿಯ ಲಕ್ಷ್ಮೀ-ಪರಮೇಶ್ ದಂಪತಿ ಮಗು ಭರತ್(2) ಮೃತ ದುರ್ದೈವಿಗಳು.
ಅಜ್ಜಿ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ಮನೆ ನಿರ್ಮಾಣಕ್ಕೆ ನಿರ್ಮಿಸಿದ್ದ ತೊಟ್ಟಿ ಬಳಿ ಆಟವಾಡುವಾಗ ಒಳಗೆ ಬಿದ್ದು ಮೃತಪಟ್ಟಿದ್ದಾರೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
(Visited 23 times, 1 visits today)