ದೇಹ ಪುರುಷನಾಗಿದ್ದರೂ ಮಾನಸಿಕವಾಗಿ ಮತ್ತು ಹಾರ್ಮೋನಲ್ ಎಫೆಕ್ಟ್ನಿಂದಾಗಿ ಹೆಣ್ಣಾಗಿರೋರನ್ನ, ದೇಹ ಹೆಣ್ಣಾಗಿದ್ದರೂ ಭಾವನೆಯಿಂದ ಗಂಡಾಗಿದ್ದು ನಿತ್ಯ ತಮ್ಮಲ್ಲೇ ಸೆಣಸಾಡುವಂಥ ಹಲವರನ್ನು ನೋಡೇ ನೋಡಿರ್ತೀರಿ. ಆದ್ರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಲಿಂಗ ಪರಿವರ್ತನೆಯಂಥ ಸರ್ಜರಿ ಮಾಡಿಸಿಕೊಳ್ಳೋದು ಎಲ್ಲರಿಂದಲೂ ಸಾಧ್ಯವಿಲ್ಲ. ಆದ್ರೆ, ಪರಮೇಶ್ವರ್ ಪುತ್ರನಾಗಿದ್ದ ಶಶಾಂಕ್ ಪರಮೇಶ್ವರ್ ದಿಟ್ಟ ನಿರ್ಧಾರ ಕೈಗೊಂಡು ಕಳೆದ ವರ್ಷ ಲಿಂಗಪರಿವರ್ತನೆ ಸರ್ಜರಿ ಮಾಡಿಸಿಕೊಂಡು ಶನಾ ಆಗಿ ಬದಲಾಗಿದ್ದರು. ಆದ್ರೆ ಈ ಪರಿವರ್ತನೆಯನ್ನು ಪರಮೇಶ್ವರ್ ಆಗಲೀ ಅಥವಾ ಅವರ ಕುಟುಂಬವಾಗಲೀ ಇನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ರಾಜ್ಯ ಸರ್ಕಾರದಲ್ಲಿ ಮೋಸ್ಟ್ ಪವರ್ಫುಲ್ ಪೊಲಿಟಿಶಿಯನ್ ಡಿಸಿಎಂ, ಅವರಿಗೆ ಮತ್ತು ಅವರ ಕುಟುಂಬಕ್ಕೆ ಇಂದು ಧರ್ಮ ಸಂಕಟವನ್ನು ತಂದಿಟ್ಟಿದೆ.
ಅಷ್ಟಕ್ಕೂ ಆಗ್ತಿರೋದು ಏನು?
ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿ, ಗೃಹ ಸಚಿವರಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸ್ತಿರುವ ಡಾ.ಜಿ.ಪರಮೇಶ್ವರ್ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ. ಕೇವಲ ಅವರೊಬ್ಬರೇ ಅಲ್ಲದೇ ಅವರ ಕುಟುಂಬವೇ ಧರ್ಮಸಂಕಟದಲ್ಲಿ ಸಿಲುಕಿದೆ.
2018ರ ಆರಂಭದಲ್ಲಿ ಡಾ.ಜಿ.ಪರಮೇಶ್ವರ್ ಅವರ ಒಬ್ಬನೇ ಮಗ ವಿದೇಶದಲ್ಲಿದ್ದು ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ರು. ಆದ್ರೆ, ಇದನ್ನು ಒಪ್ಪಲಾಗದೇ ಪರಮೇಶ್ವರ್ ಸಾಕಷ್ಟು ನೋವಿನಲ್ಲಿಯೇ ಇಷ್ಟು ದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ರು. ಇದೀಗ ಪರಮೇಶ್ವರ್ ಅವರ ‘ಮಗ’ಳು ಬೆಂಗಳೂರಿಗೇ ವಾಪಸ್ ಆಗಿದ್ದಾರೆ. ಪರಮೇಶ್ವರ್ ಅವರ ನಿವಾಸದಲ್ಲೇ ಇದ್ದಾರೆ. ಇದು ಡಿಸಿಎಂ ಪರಮೇಶ್ವರ್ ಕುಟುಂಬವನ್ನ ಧರ್ಮಸಂಕಟದಲ್ಲಿ ಸಿಲುಕಿಸಿದೆ.
ಧರ್ಮಸಂಕಟಕ್ಕೆ ಕಾರಣವೇನು..?
ಮೂರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಡಾ.ಜಿ.ಪರಮೇಶ್ವರ್ ಅವರ ಮನೆಯಲ್ಲೇ ಮಗಳು ಶನಾ ಓಡಾಡುತ್ತಿದ್ದಾರೆ. ಅಲ್ಲದೇ ಶನಾ ಎಂಬ ಹೆಸರಿನಿಂದ ಜನರಿಗೆ ಚಿರಪರಿಚಿತರಾಗಿದ್ದಾರೆ. ಬೈಕ್ ರೈಡಿಂಗ್, ಕಾರ್ ಡ್ರೈವಿಂಗ್ ಸೇರಿದಂತೆ ಅನೇಕ ಹವ್ಯಾಸಗಳನ್ನು ತಮ್ಮ ಮನೆಯಿಂದಲೇ ಮಾಡುತ್ತಿರುವ ಶನಾರನ್ನು ಜನ ನೋಡಿ ಏನಾಂತಾರೋ ಅನ್ನೋ ಭಾವನೆ ಪರಮೇಶ್ವರ್ ಮತ್ತು ಅವರ ಕುಟುಂಬದಲ್ಲಿ ಹುಟ್ಟಿಕೊಂಡಿದೆ ಎನ್ನಲಾಗ್ತಿದೆ. ಇದರಿಂದಾಗಿ ಮನೆಗೆ ಯಾವುದೇ ನಾಯಕರು, ಹಿಂಬಾಲಕರು, ಪರಮೇಶ್ವರ್ ವಿಧಾನಸಭೆ ಮತದಾರರು ಬಂದರೂ ಈ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಎನ್ನಲಾಗ್ತಿದೆ. ಕೈಗೆ ಬಂದಿರುವ ಮಗ ಹೀಗೆ ಆದನಲ್ಲ ಏನು ಮಾಡೋಕೆ ಆಗುತ್ತೆ, ನೀವು ಈ ಬಗ್ಗೆ ಯೋಚಿಸಬೇಡಿ ಎಂದು ಜನ ಹೇಳುತ್ತಲೇ ಗಾಯದ ಮೇಲೆ ಉಪ್ಪು ಸಿಂಪಡಿಸುವ ಕೆಲಸ ಮಾಡುತ್ತಿರೋದ್ರಿಂದ ಈ ಘಟನೆಯಿಂದ ಹೊರ ಬರಲೂ ಆಗದೇ, ಇತ್ತ ಸಿಕ್ಕಿರುವ ಅಧಿಕಾರವನ್ನು ತುಂಬು ಮನಸ್ಸಿನಿಂದ ಅನುಭವಿಸಲು ಆಗದೇ ಪರಮೇಶ್ವರ್ ಹೆಣಗಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಹೈ ಲೆವೆಲ್ ಲೈಫ್ ಸ್ಟೈಲ್, ಪಾರ್ಟೀಸ್..!
https://www.youtube.com/watch?time_continue=70&v=z37sfQX8lLo
ಲಿಂಗ ಪರಿವರ್ತನೆ ಬಳಿಕ ಶನಾ, ಸ್ನೇಹಿತರನ್ನು ಮನೆಗೆ ಕರೆಯುವುದು, ಜಾಲಿ ರೈಡ್‌ಗೆ ಹೋಗುವುದು, ಪಾರ್ಟಿ ಕೂಡ ಮನೆಯಲ್ಲೇ ಮಾಡುತ್ತಿರೋದು ಪರಮೇಶ್ವರ್ ಹಾಗೂ ಅವರ ಪತ್ನಿಗೆ ಅರಗಿಸಿಕೊಳ್ಳುವುದು ಕೊಂಚ ಕಷ್ಟವೇ ಆಗಿದೆ. ಎಲ್ಲಾ ಭಗವಂತನ ಲೀಲೆ ಎಂದು ಪರಮೇಶ್ವರ್ ಮತ್ತು ಅವರ ಪತ್ನಿ ಬಂದ್ದಿದ್ದನ್ನೆಲ್ಲಾ ಎದುರಿಸುತ್ತಿದ್ದಾರೆ ಎನ್ನಲಾಗಿದೆ.