ತುಮಕೂರು:
ತುಮಕೂರು ನಗರ ವಿಭಾಗದ ಪೊಲೀಸರು ಹಾಗೂ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ 20 ಜನ ಪೊಲೀಸರಿಗೆ ಶನಿವಾರ ಬೆಳಿಗ್ಗೆ ಎಸ್ಪಿ ಅವರ ಕಛೇರಿಯ ಮುಂಭಾಗದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇಸಿದಿ ನತಂತರ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೊರೊನಾ ಪಾಸಿಟೀವ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಗುಣಮುಖರಾಗಿ ಮತ್ತೆ ಕರ್ತವ್ಯಕ್ಕೆ ಹಾಜರಾದ ಕರ್ತವ್ಯ ನಿರ್ವಹಿಸುತ್ತಿರುವ ನಿಮ್ಮ ಕಾರ್ಯವೈಖರಿ ನಿಜಕ್ಕೂ ಮೆಚ್ಚುಗೆ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸುಮಾರು 20 ಕ್ಕೂ ಹೆಚ್ಚು ಸಿಬ್ಬಂದಿಗಳು ಕುಟುಂಬದವರು ಪಾಸಿಟೀವ್ ಬಂದ ಸಂದರ್ಭದಲ್ಲಿ ನಿಮ್ಮ ಕುಟುಂಬದವರಿಗೆ ಆತ್ಮವಿಶ್ವಾಸ ಹೆಚ್ಚಿಸಿ ನಾವು ನಿಮ್ಮೊಂದಿಗಿದ್ದೇವೆ ಆತಂಕ ಬೇಡ ಎಂದು ಮನವಿ ಮಾಡಿದ್ದೆವು. ಇಲಾಖೆಯ ಹಿರಿಯ ಅಧಿಕಾರಿಗಳಾದ ಶಿಮಂತ್ ಕುಮಾರ್ ಸಿಂಗ್ ಸೇರಿದಂತೆ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್‍ರವರು ತುಮಕೂರು ಜಿಲ್ಲೆಯ ಪೊಲೀಸರು ಕೋವಿಡ್-19 ಸಂದರ್ಭದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದಕ್ಕೆ ಮೂಲ ಕಾರಣ ನಿಮ್ಮ ಕರ್ತವ್ಯ ಪ್ರಜ್ಞೆ ಎಂದು ಅವರು ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನಗರದ ಡಿವೈಎಸ್‍ಪಿ ತಿಪ್ಪೇಸ್ವಾಮಿರವರು ಮಾತನಾಡಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೋವಿಡ್-19 ಸಂದರ್ಭದಲ್ಲಿ ಸೋಂಕಿಗೆ ತಗುಲಿದಾಗ ಆತ್ಮವಿಶ್ವಾಸ ಕಳೆದುಕೊಳ್ಳದೆ ಗುಣಮುಖರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರ ಕಾರ್ಯ ವೈಖರಿ ಬಗ್ಗೆ ಕೊಂಡಾಡಿದರು.
ಕೊರೊನಾ ವಾರಿಯರಸ್ ಅಗಿದ್ದ ಪೇದೆ ಪಾಸಿಟಿವ್ ಸೋಂಕು ತಗುಲಿ ನಂತರ ಗುಣಮುಖರಾಗಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿ ಸನ್ನಾನ ಸ್ವೀಕರಿಸಿ ಮಾತನಾಡಿದ ರಾಮಚಂದ್ರಪ್ಪರವರು ಇಂದು ಸೋಂಕು ತಗುಲಿದೆ ವ್ಯಕ್ತಿ ಗುಣಮುಖರಾಗಿ ಹೊರ ಬಂದರು ಯಾರು ನಮ್ಮನ್ನು ಮಾತನಾಡಿಸಲು ಹತ್ತಿರ ಬರುತ್ತಿರಲಿಲ್ಲಾ ಅದರೆ ನಮ್ಮ ಎಸ್ಪಿಯವರಾದ ಕೋನಂ ವಂಶಿಕೃಷ್ಣ ಅವರು ಎಲ್ಲಿಯೂ ಅ ರೀತಿ ನೆಡೆದುಕೊಳ್ಳಲಿಲ್ಲ. ಎಲ್ಲ್ಲರನ್ನು ಹತ್ತಿರ ಬಂದು ನಿಮ್ಮ ಆರೋಗ್ಯ ಹೇಗಿದೆ ನಿಮ್ಮ ಕುಟುಂಬದವರಿಗೆ ಏನಾದರೂ ಸಮಸ್ಯೆ ಇದೆಯಾ ಎಂದು ಕೇಳಿ ನಿರಂತರವಾಗಿ ನಮ್ಮ ಜೊತೆ ಸಂಪರ್ಕದಲ್ಲಿ ಇದ್ದರು. ಅಲ್ಲದೆ ಹಿರಿಯ ಅಧಿಕಾರಿಗಳನ್ನು ನಮಗಾಗಿ ನೇಮಿಸಿದ್ದರು. ಎಸ್ಪಿಯವರ ಕೆಲಸ, ಸಹಕಾರ, ನಮಗೆ ಪ್ರೇರಣೆ ನೀಡಿತು ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಸೂರ್ಯ ನಾರಾಯಣ್ ಪರಮೇಶ್ವರ್,ಇನ್‍ಸ್ಪೆಕ್ಟರ್‍ಗಳಾದ ಚನ್ನೇಗೌಡ, ನವೀನ್, ಪಾರ್ವತಮ್ಮ ಇತರರು ಉಪಸ್ಥಿತರಿದ್ದರು.