ತುರುವೇಕೆರೆ:

      ತಾಲೂಕಿನಲ್ಲಿ ಕೋವಿಡ್ ನೆಪವೊಡ್ಡಿ 144 ಸೆಕ್ಷನ್ ಜಾರಿ ಮಾಡುವ ಮೂಲಕ, ತಾಲೂಕು ಅಡಳಿತ ಪ್ರತಿಪಕ್ಷವನ್ನು ಧÀಮನ ಮಾಡಲು ಹೊರಟಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಗುಡ್ಡೇನಹಳ್ಳಿ ರೈತರನ್ನು ಸಾಗುವಳಿ ಭೂಮಿಯಿಂದ ಒಕ್ಕಲೆಬ್ಬಿಸಿರುವ ತಾಲೂಕು ಅಡಳಿತ ಹಾಗೂ ಪೋಲೀಸ್ ಇಲಾಖೆಗಳ ರೈತ ವಿರೋದಿ ಖಂಡಿಸಿ ಇದೇ 31 ರಂದು ಪ್ರತಿಭಟನೆ ಮಾಡಿಯೇ ತೀರುವುದಾಗಿ ಹೇಳಿದ ಅವರು ಪ್ರತಿಭಟನೆಯಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮರಸ್ವಾಮಿಯವರು ಸಹಾ ನಮ್ಮೊಂದಿಗೆ ಧ್ವನಿಗೂಡಿಸಲಿದ್ದಾರೆ. ಅದರಂತೆ ಗುಡ್ಡೇನಹಳ್ಳಿ ರೈತರೊಂದಿಗೆ ಹಾಗೂ ಜೆಡಿಎಸ್ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ತಾಲ್ಲೂಕು ಕಛೇರಿ ಆವರಣದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.

      ತಾಲೂಕು ಆಡಳಿತ ಕೋವಿಡ್ ನೆಪವೊಡ್ಡಿ 144 ಸೆಕ್ಷನ್ ಜಾರಿ ಮಾಡಿದೆ ಆದರೆ ತಾಲೂಕಿನಲ್ಲಿ ಯಾವುದೇ ಕೋಮುವಾದ ಗಲಾಟೆಯಾಗಲಿ ಅಥವಾ ಗೋಲಿಬಾರ್ ಆಗಲಿ ನಡೆದಿಲ್ಲ ಆದರೂ 144ಸೆಕ್ಷನ್ ಜಾರಿಗೆ ತಂದಿರುವುದು ಖಂಡನೀಯ. ಜೆಡಿಎಸ್ ಪಕ್ಷ ರೈತರ ಪರವಾಗಿದ್ದು ನ್ಯಾಯಯುತ ಹೋರಾಟಕ್ಕೆ ಮುಂದಾಗಿದೆ ಆದರೆ ತಾಲ್ಲೂಕು ಅಡಳಿತ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು ರೈತರ ಹಿತದೃಷ್ಟಿಯಿಂದ 31ರ ಸೋಮವಾರ ನಮ್ಮ ಪಕ್ಷ ಪ್ರತಿಭಟನೆ ಮಾಡಿಯೇ ತೀರುತ್ತದೆ ಎಂದರು.

      ಈ ಸಂದರ್ಭದಲ್ಲಿ ವಿಎಸ್‍ಎಸ್‍ಎನ್ ಅಧ್ಯಕ್ಷ ಗುಡ್ಡೇನಹಳ್ಳಿ ಬಸವರಾಜು, ಜೆಡಿಎಸ್ ಮುಖಂಡರುಗಳಾದ ರಾಜೀವ್‍ಕೃಷ್ಣಪ್ಪ, ಬಿ.ಎಂ.ರಮೇಶ್, ಕೊಳಾಲ ಗಂಗಾಧರ್, ಮಾವಿನಕೆರೆ ವಿಜಿಕುಮಾರ್, ಕುಶಾಲ್‍ಕುಮಾರ್, ಯೋಗೀಶ್, ವೆಂಕಟೇಶ್‍ಮೂರ್ತಿ, ಮಂಗೀಕುಪ್ಪೆ ಬಸವರಾಜು ಸೇರಿದಂತೆ ಇತರರು ಇದ್ದರು.

(Visited 15 times, 1 visits today)