ತುರುವೇಕೆರೆ:
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯರಿಂದ ಮುಂಬರುವ ವಿಧಾಸಭಾ ಚುನಾವಣೆಯ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುವ ದುರುದ್ದೇಶದಿಂದ ತಾಲೂಕಿಗೆ ಕರೆಸಿಕೊಂಡರೆ ವಿನಹ ರೈತರಿಗೆ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದಲ್ಲ ಎಂದು ಶಾಸಕ ಮಸಾಲಜಯರಾಮ್ ಎಂ.ಟಿ.ಕೃಷ್ಣಪ್ಪನ ವಿರುದ್ಧ ಕಿಡಿಕಾರಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುಡ್ಡೇನಹಳ್ಳಿಯಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಡೆಸಿದ ಕಾರ್ಯಾಚರಣೆ ನನಗೆ ತಿಳಿದ ಮರುದಿನವೇ ರೈತರ ಹಿತ ಕಾಯುವ ದೃಷ್ಠಿಯಿಂದ ಖುದ್ದು ನಾನೇ ಗುಡ್ಡಡೇನಹಳ್ಳಿಗೆ ತೆರಳಿ ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ತೆಂಗಿನ ಸಸಿನೆಟ್ಟು ರೈತರಿಗೆ ದೈರ್ಯತುಂಬಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಗುಡ್ಡೇನಹಳ್ಳಿ ಗ್ರಾಮಸ್ಥರೆಲ್ಲರಿಗೂ ಜಮೀನು ಮುಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಸ್ಥಳೀಯ ರೈತರು ಕೂಡ ಪ್ರತಿಭಟನೆ ಮಾಡುವುದಿಲ್ಲವೆಂದು ಹೇಳಿದ್ದರು. ಆದರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತನ್ನ ರಾಜಕೀಯ ದುರುದ್ದೇಶದಿಂದ ಗುಡ್ಡೇನಹಳ್ಳಿಯ ಕ್ಷುಲ್ಲಕ ಕಾರಣವನ್ನು ದೊಡ್ಡದಾಗಿ ನಿರ್ಮಿಸಿ ತಾಲೂಕಿನಲ್ಲಿ 144ಸೆಕ್ಷನ್ ಜಾರಿಯಾಗುವಂತೆ ಮಾಡಿ ತಾಲೂಕಿನಲ್ಲಿ ಅಶಾಂತಿಗೆ ಕಾರಣರಾಗಿದ್ದರೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚೌದ್ರಿ ನಾಗೇಶ್ ಮಾತನಾಡಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನ ವರ್ತನೆ ಖಂಡನೀಯ ಅಧಿಕಾರಿಗಳನ್ನು ನಿಂದಿಸುವುದು ಹಾಗೂ ಹೊಡೆಯುವುದು ಅವರ ಸಂಸ್ಕøತಿ ಮಾಡಿಕೊಂಡಿದ್ದಾg.É ಪ್ರತಿಯೊಂದು ವಿಚಾರವನ್ನು ರಾಜಕೀಯ ದೃಷ್ಟಿಯಿಂದಲೇ ನೋಡುವ ಅವರಿಂದ ತಾಲೂಕಿನಲ್ಲಿ ಶಾಂತಿ ಭಂಗವಾಗಿದೆ ಇಂತಹವರನ್ನು ಗುಂಡಾ ಕಾಯ್ದೆಯಡಿ ಭಂದಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದರು.
ಪಕ್ಷದ ಅಧ್ಯಕ್ಷ ಹೆಡಗಿಹಳ್ಳಿ ವಿಶ್ವನಾಥ್, ಪಕ್ಷದ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ವಿ.ಬಿ.ಸುರೆಶ್, ವಿ.ಟಿ.ವೆಂಕಟರಾಮಯ್ಯ, ರೇಣುಕಪ್ಪ, ಸಿ.ಎಸ್.ಪುರ ಮುಖಂಡರಾದ ನಾಗರಾಜು, ಪಾಪು, ಇತರರು ಇದ್ದರು.