ಪಾವಗಡ :
ಮಧುಮೇಹದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತಾಲ್ಲೂಕಿನ ವಳ್ಳೂರು ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ತಿರುಮಣೆ ವತಿಯಿಂದ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಳ್ಳೂರು ಗ್ರಾಮ ಪಂಚಾಯ್ತಿಯ ವಳ್ಳೂರು ಗ್ರಾಮದಲ್ಲಿ ತಿರುಮಣೆ ಸಮುದಾಯ ಆರೋಗ್ಯ ಕೇಂದ್ರದಿಂದ ಮಧುಮೇಹದ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂರು ಜನ ವಿದ್ಯಾರ್ಥಿಗಳು ಜಾತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಬಿತ್ತಿ ಪತ್ರಗಳನ್ನು ಗ್ರಾಮಸ್ಥರಿಗೆ ಹಂಚಲಾಯಿತು.
ಇದೇ ವೇಳೆ ಗ್ರಾಮ ಪಂಚಾಯ್ತಿ ಕಾರ್ಯಲಯದಲ್ಲಿ ಮಧುಮೇಹ, ರಕ್ತದೂತ್ತಡ ಶಿಬಿರವನ್ನು ಆಯೋಜಿಸಿ ಜನತೆಗೆ ತಪಾಸಣೆ ನಡೆಸಲಾಯಿತು.
ಆಪ್ತ ಸಮಾಲೋಚರಾದ ಆರ್.ಕೋಮಲೇಶ್ ಮಾತನಾಡಿ ಸಾಂಕ್ರಮಿಕ ರೋಗಗಳು ಹೆಚ್ಚಾಗಿ ಕಂಡು ಬರುತ್ತಿದ್ದು , ಪ್ರಸ್ತುತ ದೇಶದಲ್ಲಿ 59 % ಜನ ಈ ರೋಗಗಳಿಂದ ಬಳುತ್ತಿದ್ದಾರೆ. ಧೂಮಪಾನ, ಮದ್ಯಪಾನ, ತಂಬಾಕು ಸೇವನೆಗಳಿಂದ ದೂರವಿದ್ದು ಉತ್ತಮ ಆರೋಗ್ಯ ಮತ್ತು ಪೌಷ್ಠಿಕಾಂಶದಿಂದ ಕೂಡಿದ ಆಹಾರ ಸೇವನೆ ಮಾಡಬೇಕು. ಮೂವತ್ತು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಮಾಡುತ್ತಿದ್ದು ಇದರ ಸದುಪಯೋಗ ಪಡೆದುಕೋಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‍ಸಿಪಿ ಸಿಬ್ಬಂದಿ ಶಶಿಕಲಾ ,ಪ್ರಯೋಗ ಶಾಲಾ ತಜ್ಣರಾದ ಓಬಳೇಶಪ್ಪ , ಶುಶ್ರೂಷಕಿ ವಿಶಾಲಾಕ್ಷಿ ,ಮುಖ್ಯೋಪಾದ್ಯಾರಾದ ನಟರಾಜ್ ,ಹಾಗೂ ಶಾಲಾ ಸಹಶಿಕ್ಷಕರು , ಅಂಗನವಾಡಿ ಕಾರ್ಯರ್ತೆಯರು , ಆಶಾಕಾರ್ಯಕರ್ತೆಯರು , ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.