ತುಮಕೂರು:
ಬೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ 2017-18ನೇ ಸಾಲಿನ ವಿದ್ಯುತ್ ಕಳವು ಪ್ರಕರಣದಲ್ಲಿ ದಾಖಲಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎಂ.ವಿ.ಶೇಷಾದ್ರಿ ತಿಳಿಸಿದ್ದಾರೆ.
ಮಧುಗಿರಿ ತಾಲ್ಲೂಕು ಚೀಲನಹಳ್ಳಿ ಗ್ರಾಮದ ನಿವಾಸಿ 42ವರ್ಷದ ಮಲ್ಲೇಶಪ್ಪ ಬಿನ್ ಲೇ.ಮಲ್ಲೇಲಿಂಗಪ್ಪ ಹಾಗೂ ತುರುವೇಕೆರೆ ತಾಲ್ಲೂಕು ತಾಳೇಕೆರೆ ಗ್ರಾಮದ ನಿವಾಸಿ 63 ವರ್ಷದ ತಿಮ್ಮೇಗೌಡ ಬಿನ್ ಪಟೇಲ್ ಶಿವಣ್ಣ ಅವರೇ ಬಂಧಿತ ಆರೋಪಿಗಳು.
ಆರೋಪಿಗಳು ವಿದ್ಯುತ್ ಕಳವು ಮಾಡಿದ್ದರಿಂದ 16,326(ಮಲ್ಲೇಶಪ್ಪ)ರೂ. ಹಾಗೂ 47,154 (ತಿಮ್ಮೇಗೌಡ)ರೂ. ಸೇರಿ ಇಲಾಖೆಗೆ ಒಟ್ಟು 63,480 ರೂ.ಗಳಷ್ಟು ನಷ್ಟವಾಗಿದೆ.
ಅಕ್ರಮವಾಗಿ ವಿದ್ಯುತ್ ಬಳಸಿದ ಹಣವನ್ನು ಪಾವತಿಸದೆ, ನ್ಯಾಯಾಲಯಕ್ಕೂ ಹಾಜರಾಗದೆ ತಲೆ ಮರೆಸಿಕೊಂಡಿದ್ದರು. ಬೆಸ್ಕಾಂ ಜಾಗೃತಿದಳ ಪೊಲೀಸ್ ಅಧೀಕ್ಷಕ ಎಂ.ನಾರಾಯಣ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅವರ ಮಾರ್ಗದರ್ಶನದಲ್ಲಿ ನವೆಂಬರ್ 19ರಂದು ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೋಹನ್ ಕುಮಾರ್, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮಹಾಲಕ್ಷ್ಮಮ್ಮ, ಸಿಬ್ಬಂದಿಗಳಾದ ಪುರುಷೋತ್ತಮ್, ರಮೇಶ್, ಬಸವರಾಜು, ಹೋಂಗಾರ್ಡ್ ಸಿಬ್ಬಂದಿ ಮೋಹನ್‍ಕುಮಾರ್ ಸಹಕರಿಸಿದ್ದರು ಎಂದು ಅವರು ತಿಳಿಸಿದ್ದಾರೆ.