ತುಮಕೂರು:

      ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ವದಂತಿ ಹಬ್ಬಿಸಿದ್ದ ಹೇಮಂತ್ ಕುಮಾರ್ ಎಂಬ ಕಿಡಿಗೇಡಿಯನ್ನು ಕುಟುಕು ಕಾರ್ಯಾಚರಣೆ ಮಾಡಿ ಕೆಲವೇ ಗಂಟೆಗಳಲ್ಲಿ ಬಂಧಿಸಿದ ಪೋಲಿಸ್ ಸಿಬ್ಬಂದಿಯ ಕಾರ್ಯ ಶ್ಲಾಘನೀಯ.

      ಕಳೆದ 3 – 4 ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲೊಂದಾದ ಫೇಸ್‍ಬುಕ್ ನಲ್ಲಿ ಹೇಮಂತ್ ಗೌಡ ಎನ್ನುವ ಹೆಸರಿನ ಕಿಡಿಗೇಡಿಯೊಬ್ಬ ಕೆಲವು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದು, ತುಮಕೂರು ನಗರದ ಕಾಂಗ್ರೆಸ್ ಪಕ್ಷದ ಮುಸ್ಲಿಂ ಸಮುದಾಯದವರಾದ ಮಾಜಿ ಶಾಸಕ ರಫೀಕ್ ಅಹ್ಮದ್ ಸಂಬಂಧಿಕರ ಮಗನಿಂದ ಲವ್ ಜಿಹಾದ್ ಮತ್ತು ಡ್ರಗ್ಸ್ ದಂಧೆ ನಡೆಸಲಾಗುತ್ತಿದೆ ಎಂಬ ಸುಳ್ಳು ವದಂತಿಯನ್ನು ಬಿತ್ತರಿಸುತ್ತಿದ್ದ.

       ಈ ಸುದ್ದಿ ನನ್ನ ಗಮನಕ್ಕೆ ಬಂದ ಕೂಡಲೇ ಕ್ಯಾತ್ಸಂದ್ರ ಪೋಲಿಸ್ ಠಾಣೆಯಲ್ಲಿ ಮತ್ತು ನಗರದ ಸೈಬರ್ ಕ್ರೈಂ ಪೋಲೀಸ್ ಠಾಣೆಯಲ್ಲಿ ಅವನ ವಿರುದ್ಧ ಕಾನೂನು ಕ್ರಮಗಳನ್ನು ತಗೆದುಕೊಳ್ಳುವಂತೆ ದೂರು ದಾಖಲಿಸಿದ್ದೆವು.

      ನಾವು ನೀಡಿದ ದೂರಿನನ್ವಯ ಪ್ರಕರಣದ ಸತ್ಯಾಸತ್ಯತೆಯ ಶೋಧನೆ ನಡೆಸಿ ತಪ್ಪಿತಸ್ಧ ಹೇಮಂತ್ ಗೌಡ ಎಂಬುವವನನ್ನು ಕೂಡಲೇ ಪೋಲಿಸ್ ಸಿಬ್ಬಂಧಿಯು ಪತ್ತೆ ಮಾಡಿ ಈತನನ್ನು ಬಂಧಿಸಿದ್ದಾರೆ. ಇವನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು. ಹಾಗೂ ಈತನು ಹಾಕಿದ್ದ ಪೋಸ್ಟ್‍ಗಳನ್ನು ಶೇರ್ ಮಾಡಿ ಮತ್ತು ಕಮೆಂಟ್ ಮಾಡಿರುವವದ ಮೇಲೆಯೂ ಕ್ರಮಕೈಗೊಳ್ಳಲಿದ್ದಾರೆ.

      ಮುಂದಿನ ದಿನಗಳಲ್ಲಿ ಈ ರೀತಿಯ ಕೋಮುಸಾಮರಸ್ಯಕ್ಕೆ ಭಂಗ ತರುವಂತಹ ಕಿಡಿಗೇಡಿಗಳಿಗೆ ಇದೊಂದು ತಕ್ಕ ಪಾಠವಾಗಲಿದೆ. ಹಾಗೂ ಈ ತರಹದ ಪೋಸ್ಟ್‍ಗಳ ಸತ್ಯಾಸತ್ಯತೆ ತಿಳಿಯದ ಯುವ ಜನತೆಯು ಇವರಿಗೆ ಬೆಂಬಲ ನೀಡುತ್ತಿರುವುದು ಆತಂಕಕಾರಿ ವಿಷಯಾವಾಗಿದೆ. ಇಂತಹವರಿಗೆ ಕ್ಷಿಪ್ರ ಗತಿಯಲ್ಲಿ ಶಿಕ್ಷೆಯಾದರೆ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

      ನಮ್ಮ ದೂರಿಗೆ ಸ್ಪಂದಿಸಿ ಕೂಡಲೇ ಸೂಕ್ತವಾದ ಕಾನೂನು ಕ್ರಮ ಜರುಗಿಸಿದ ಪೋಲಿಸ್ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ.

(Visited 12 times, 1 visits today)