Author: News Desk Benkiyabale

ತುಮಕೂರು: ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರ ತುಮಕೂರು, ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ನ. 24 ರಂದು ಬೆಳಿಗ್ಗೆ ೧೦ ಗಂಟೆಗೆ ರ‍್ಪಡಿಸಲಾಗಿದೆ. ಕರ‍್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ನೆರವೇರಿಸುವರು. ಅಧ್ಯಕ್ಷತೆಯನ್ನು ಬೆಂಗಳೂರಿನ ಆರ್‌ಎನ್‌ಎಸ್ ಪದವಿ ಪರ‍್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರವಿಶಂಕರ್ ಬಿ.ವಿ. ವಹಿಸಲಿದ್ದಾರೆ. ರ‍್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಲ್ಲಿಕರ‍್ಜುನ ಕೆಂಕೆರೆ ಮಂದಾರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಚಂದನವನ ಕಂಪು ಮಾಸ ಪತ್ರಿಕೆಯ ಸಂಪಾದಕಿಯಾದ ಚಿಕ್ಕಮಗಳೂರಿನ ವಾಣಿ ಅವರು ಬಾಳೊಂದು ಭಾವಗೀತೆ ಕೃತಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಫ್ಲೋರಿಡಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಝಕಾವುಲ್ಲಾ ಷರೀಫ್‌, ರ‍್ನಾಟಕ ಗ್ರಾಮ್ಮೆನ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಾದ ಪ್ರದೀಪ್ ಎಸ್., ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದ ಸಂಸ್ಥಾಪಕರಾದ…

Read More

ತುಮಕೂರು : ತಾಲ್ಲೂಕಿನ ಹೆಬ್ಬೂರು ಗ್ರಾಮದ ಶ್ರೀ ಲಕ್ಷಿö್ಮÃವೆಂಕಟೇಶ್ವರ ಆಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಅಂದಾಜು 7286 ರೂ. ಮೌಲ್ಯದ 10.2 ಲೀಟರ್ ಪ್ರಮಾಣದ ಡೈಮಿಥೋಯೇಟ್-30% ಇ.ಸಿ.(ರೋಗಾರ್) ಎಂಬ ನಿಷೇಧಿತ ಕೀಟನಾಶಕವನ್ನು ಕೃಷಿ ಇಲಾಖೆಯ ಜಾರಿದಳ ವಿಭಾಗವು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂದು ಕೀಟನಾಶಕ ಪರಿವೀಕ್ಷಕ ಹಾಗೂ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ. ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಈ ಕೀಟನಾಶಕ ಬಳಸುವುದನ್ನು ನಿಷೇಧ ಮಾಡಿದ್ದರೂ ಸಹ ಲೇಬಲ್‌ನಲ್ಲಿ ನಮೂದಿಸಿ ನ್ಯೂ ಪ್ಯಾಕ್ ಆಗ್ರೋ ಕೆಮ್ ಕಂಪನಿಯು ಡೈಮಿಥೋಯೇಟ್-30% ಇ.ಸಿ., (ರೋಗಾರ್) ಎಂಬ ಕೀಟನಾಶಕವನ್ನು ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದರಿಂದ ಜಪ್ತಿ ಮಾಡಲಾಗಿದೆ. ಕೃಷಿ ಇಲಾಖೆಯ ಜಾರಿದಳ ವಿಭಾಗವು ನವೆಂಬರ್ 19ರಂದು ಶ್ರೀ ಲಕ್ಷಿö್ಮÃವೆಂಕಟೇಶ್ವರ ಆಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿ ನಿಯಮಾನುಸಾರ ಪರಿಶೀಲಿಸಿದಾಗ, ಮೇಲ್ಕಂಡ ಉಲ್ಲಂಘನೆ ಕಂಡು ಬಂದಿತ್ತು. ಕಳೆದ ಬಾರಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ನಿಷೇಧಿತ ಕೀಟನಾಶಕ ದಾಸ್ತಾನಿಗೆ…

Read More

ತುಮಕೂರು: 2300 ವರ್ಷಗಳ ಹಿಂದೆ ಅಶೋಕ ಬರೆಸಿದ ಮೊಟ್ಟಮೊದಲ ಉಪಲಬ್ಧ ಲಿಪಿಯ ಇತಿಹಾಸದಿಂದ ಗೋಚರಿಸುವುದು ಜ್ಞಾನ ವಿಸ್ತಾರವಾದಂತೆಲ್ಲ ಲಿಪಿಯ ಅವಶ್ಯಕತೆ ಹೆಚ್ಚಾಯಿತೆಂದು ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ತಿಳಿಸಿದರು. ತುಮಕೂರು ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬುಧವಾರ ಆಯೋಜಿಸಿದ್ದ ಶಾಸನ ಡಿಪ್ಲೋಮಾ ತರಗತಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಪಾರಂಪರಿಕವಾಗಿ ಬರುವ ವಿದ್ಯೆಯನ್ನು ಕೈಬಿಟ್ಟು ಅಕ್ಷರ ಜ್ಞಾನದ ಹಿಂದೆ ಬಿದ್ದಿರುವ ಯುಗದಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ. ಪ್ರಯತ್ನಪೂರ್ವಕವಾಗಿ ಕಲಿಯುವ ಅಕ್ಷರವನ್ನು ಎಂದಿಗೂ ವಿದ್ಯೆಯೊಂದಿಗೆ ಬೆರೆಸಬಾರದು. ಕುಲಕಸುಬಿನ ವಿದ್ಯೆ ಮಾಯವಾಗಿ ಕಾಂಚಾಣದ ಹಸಿವು ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಜ್ಞಾನ ನೀಡುವ ಪವಿತ್ರ ಕೇಂದ್ರವಾಗಬೇಕು. ಪ್ರಾಧ್ಯಾಪಕರು ವಿಷಯ ಕುರಿತು ಆಳವಾದ ಜ್ಞಾನ ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ವಿಷಯ ಮುಟ್ಟಿಸಬೇಕು ಎಂದರು. ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ…

Read More

ತುಮಕೂರು : ಜಿಲ್ಲೆಯ ತುರುವೇಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸಕಾಲದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಎಕ್ಸರೇ, ಇಸಿಜಿ ಯಂತ್ರಗಳು ಕೆಟ್ಟುಹೋಗಿವೆ. ಲಭ್ಯವಿರುವ ಬೆರಳೆಣಿಕೆಯಷ್ಟು ವೈದ್ಯರು ಕ್ಲಿನಿಕ್‌ಗಳನ್ನು ತೆರೆದು ರೋಗಿಗಳನ್ನು ತಮ್ಮ ಕ್ಲಿನಿಕ್‌ಗಳಿಗೆ ಶಿಫಾರಸ್ಸು ಮಾಡುತ್ತಿದ್ದಾರೆಂದು ತಾಲ್ಲೂಕು ಆಸ್ಪತ್ರೆಯ ವೈಫಲ್ಯಗಳ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಬಳಿ ದೂರುಗಳ ಸುರಿಮಳೆಗೈದರು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಅವರು ನವೆಂಬರ್ 12ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಜಿಲ್ಲೆಯಲ್ಲಿರುವ ಆಸ್ಪತ್ರೆ, ವಿದ್ಯಾರ್ಥಿನಿಲಯ, ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುರುವೇಕೆರೆ ತಾಲ್ಲೂಕು ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆ ಸೇವೆಯ ಬಗ್ಗೆ ಸಾರ್ವಜನಿಕರು ದೂರುಗಳನ್ನು ಹೇಳಿಕೊಂಡರು. ತಾಲ್ಲೂಕು ಆಸ್ಪತ್ರೆಯಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಆಸ್ಪತ್ರೆ ಸಮಸ್ಯೆಗಳ ಚಿತ್ರಣದ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಆಸ್ಪತ್ರೆಯಲ್ಲಿ…

Read More

ತುಮಕೂರು: ಸ್ವಾತAತ್ರö್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ವಕೀಲರ ಸಾಧನೆ ಅವಿಸ್ಮರಣೀಯ,ವಕೀಲರು ರಾಜಕೀಯ,ಸಹಕಾರ,ವಕೀಲ ವೃತ್ತಿ,ಸಮಾಜಸೇವೆ,ಧಾರ್ಮಿಕ ವಲಯ ಹೀಗೆ ನಾನಾ ವಿಭಾಗಗಳಲ್ಲಿ ವಕೀಲರು ಸಮಾಜಮುಖಿಯಾಗಿ ಕೆಲಸ ಮಾಡಿ ಸಮಾಜದ ಅಭ್ಯುದಯಕ್ಕಾಗಿ ದುಡಿದಿದ್ದಾರೆ,ಮುಂದೆಯೂ ವಕೀಲರು ನೊಂದವರ,ದೀನ-ದಲಿತರ,ಬಡವರ ನೋವಿಗೆ ಕಣ್ಣೀರಿಗೆ ಧ್ವನಿಯಾಗಿ ಕೆಲಸ ಮಾಡಲಿ ಎಂದು ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಹೇಳಿದರು. ಅವರು ಇಂದು ತುಮಕೂರು ಜಿಲ್ಲಾ ವಕೀಲರ ಸಂಘದಲ್ಲಿ ರಾಜ್ಯೋತ್ಸವ ಪ್ರಶಸ್ತಿ,ಕನಕಶ್ರೀ ಪ್ರಶಸ್ತಿ,ಸಹಕಾರರತ್ನ ಪ್ರಶಸ್ತಿ ಪಡೆದ ವಕೀಲರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನ ಉಪಾಧ್ಯಕ್ಷರು ಮತ್ತು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಹೆಬ್ಬಾಕಮಲ್ಲಿಕಾರ್ಜುನಯ್ಯನವರು ನನಗೆ ಎಲ್ಲಾ ಅಭಿನಂದನೆಗಳಿಗಿAತ ವಕೀಲರ ಸಂಘ ನೀಡಿದ ಸನ್ಮಾನ ದೊಡ್ಡದು,ನಾನು ಸಹಕಾರ ರಂಗದಲ್ಲಿ,ಸಮಾಜಸೇವೆಯಲ್ಲಿದ್ದು ಕಳೆದ 30 ವರ್ಷಗಳಿಂದ ಸಮಾಜದ ಅಭ್ಯುದಯಕ್ಕಾಗಿ ದುಡಿಯುತ್ತಿದ್ದೇವೆ,ಮುಂದೆಯೂ ಸಮಾಜಕ್ಕಾಗಿ ಸಹಕಾರ ರಂಗದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಿ ಬಡ ಮತ್ತು ಮಧ್ಯಮ ವರ್ಗದವರಿಗೋಸ್ಕರ ಹಲವಾರು ಕಾರ್ಯಕ್ರಮ ರೂಪಿಸಿ ಅವರಿಗೆ ಆರ್ಥಿಕ ಚೈತನ್ಯ…

Read More

ತುಮಕೂರು: ಶಿಕ್ಷಣದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗಲಿದೆ. ಪುರುಷ ಸಮಾಜವು ಮಹಿಳೆಯ ಜೊತೆ ನಿಂತು ಸರ್ವರೀತಿಯಲ್ಲೂ ಶಕ್ತಿ ತುಂಬಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷೀ ಚೌಧರಿ ಹೇಳಿದರು. ತುಮಕೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರವು ಪೊಲೀಸ್ ಬೇಟೆ ಕನ್ನಡ ವಾರ ಪತ್ರಿಕೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಹಿಳಾ ಸಬಲೀಕರಣ ಎತ್ತ ಸಾಗಿದೆ?’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಶೇ.27 ಮಹಿಳೆಯರು ಮಾತ್ರ ಉನ್ನತ ಶಿಕ್ಷಣದ ಮೆಟ್ಟಿಲೇರಿ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ. ಶಾಲಾ, ಕಾಲೇಜು, ಪದವಿ ಹಂತದಲ್ಲೇ ಬಹುತೇಕ ಹೆಣ್ಣುಮಕ್ಕಳು ವಿದ್ಯಾಭ್ಯಾಸ ನಿಲ್ಲಿಸಿ ಸಾಂಸಾರಿಕ ಜೀವನಕ್ಕೆ ಧುಮುಕುತ್ತಿರುವುದು ವಿಪರ್ಯಾಸ ಎಂದರು. ಹರೆಯದ ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ಬಲೆಯಲ್ಲಿ ಬಿದ್ದು ವಿದ್ಯಾರ್ಥಿಗಳು ಬದುಕನ್ನು ನಾಶಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳೇ ಬದುಕೆಂದು ನಿರ್ಧರಿಸಿ ನಡೆಯುತ್ತಿದ್ದಾರೆ. ಮೊಬೈಲ್ ಬಳಕೆ ಉಸಿರಾಟಕ್ಕಿಂತಲೂ ಮುಖ್ಯವೆಂದು ಭಾವಿಸಿರುವವರನ್ನು ಸಬಲೀಕರಣದತ್ತ ಕೊಂಡೊಯ್ಯುವುದಾದರೂ ಹೇಗೆಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಬದುಕಿನ ಶೇ.16.6 ಭಾಗವನ್ನು…

Read More

ತುಮಕೂರು: ಬಡವರು,ದೀನ ದಲಿತರು, ಶೋಷಿತರ ಪರವಾಗಿ ಸದಾ ಮಿಡಿಯುತಿದ್ದ ಮಾಜಿ ಪ್ರಧಾನ ಮಂತ್ರಿಗಳಾದ ಇಂದಿರಾಗಾAಧಿ ಅವರು,ಈ ದೇಶ ಕಂಡು ಅಪ್ರತಿಮ ರಾಜಕಾರಣಿ, ಆಡಳಿತಗಾರರಾಗಿದ್ದರು ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಿಳಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರು ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಮೊದಲ ಪ್ರಧಾನಿ ನೆಹರು ಅವರ ಸುಪುತ್ರಿಯಾಗಿ,ಸುಮಾರು 17 ವರ್ಷಗಳ ಕಾಲ ಭಾರತದ ಚುಕ್ಕಾಣಿ ಹಿಡಿದು, ತಮ್ಮ ಗಟ್ಟಿ ನಿರ್ಧಾರಗಳಿಂದ ಉಕ್ಕಿನ ಮಹಿಳೆ ಎಂಬ ಬಿರುದು ಪಡೆದರು.ಅವರು ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮ ಹಾಗೂ,ಬ್ಯಾಂಕುಗಳ, ಸಾರಿಗೆ ರಾಷ್ಟಿçÃಕರಣ ಅತಿ ಮಹತ್ವದ ವಿಚಾರಗಳಾಗಿವೆ ಎಂದರು. ಕಾAಗ್ರೆಸ್ ಪಕ್ಷ ಭಾರತವಲ್ಲದೆ, ನೆರೆ ಹೊರೆಯ ರಾಷ್ಟçಗಳು ಸುಭೀಕ್ಷೆವಾಗಿರಬೇಕು ಎಂದು ಭಾವಿಸಿದ್ದರು.ಆದರೆ ಫಲವಾಗಿ ಅಮೃತಸರದ ಗೋಲ್ಡನ್‌ಟೆಂಪಲ್ ವಿವಾದ ಹಾಗೂ ಶ್ರೀಲಂಕಾಕ್ಕೆ ಭಾರತೀಯ ಶಾಂತಿ ಪಾಲನಾ ಪಡೆಯನ್ನು ಕಳುಹಿಸಿದ್ದ ಕ್ಕಾಗಿ ಇಂದಿರಾಗಾAಧಿ ಮತ್ತು ರಾಜೀವ್‌ಗಾಂಧಿ ಹುತಾತ್ಮರಾದರು.ಆದರೆ ಭಾರತೀಯ ಜನತಾ ಪಾರ್ಟಿಯ…

Read More

ತುಮಕೂರು : ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 2ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು. ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಕೈಗಾರಿಕೆ, ಕಾರ್ಮಿಕ, ರೇಷ್ಮೆ, ಕಂದಾಯ, ವಿಕಲ ಚೇತನರ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಹಾಲು ಒಕ್ಕೂಟ, ವಿವಿಧ ನಿಗಮಗಳು, ಎನ್‌ಆರ್‌ಎಲ್‌ಎಂ ಸೇರಿದಂತೆ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಯೋಜನೆಗಳಡಿ 1.46 ಲಕ್ಷ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಸಿದ್ಧವಿರುವ ಲೋಕೋಪಯೋಗಿ, ಅಗ್ನಿಶಾಮಕ, ಪೊಲೀಸ್, ಸಣ್ಣ ನೀರಾವರಿ, ಸಮಾಜ ಕಲ್ಯಾಣ,…

Read More

ತುಮಕೂರು: ಜಿಲ್ಲಾಡಳಿತ ಕೇವಲ ದಾಖಲೆಗಾಗಿ ಮಾತ್ರ ದಲಿತರ ಕುಂದುಕೊರತೆ ಸಭೆ ನಡೆಸುತ್ತಿದ್ದು,ಹತ್ತಾರು ವರ್ಷಗಳಿಂದ ದಲಿತರನ್ನು ಕಾಡುತ್ತಿರುವ ನಿವೇಶನ ಹಕ್ಕುಪತ್ರ,ಸ್ಮಶಾನ,ಕಾರ್ಮಿಕ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಹಲವಾರು ಸವಲತ್ತುಗಳು ಇಂದಿಗೂ ದಲಿತ ಸಮುದಾಯಕ್ಕೆ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂದು ಕರ್ನಾಟಕ ಮಹಾಜನ ಪರಿವಾರ ಸಮಿತಿಯ ರಾಜ್ಯಾಧ್ಯಕ್ಷ ಹಂಚಿಹಳ್ಳಿ ರಾಮುಸ್ವಾಮಿ ಆರೋಪಿಸಿದ್ದಾರೆ. ನಗರದ ಮೇಳೆಹಳ್ಳಿಯಲ್ಲಿ ಕರ್ನಾಟಕ ಮಹಾಜನ ಪರಿವಾರ ಸಮಿತಿಯ ವಾರ್ಷಿಕೋತ್ಸವ ಹಾಗೂ ದಲಿತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಹಲವಾರು ಬಾರಿ ಕಾರ್ಮಿಕ ಇಲಾಖೆ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದರು,ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳು ದೊರೆಯುತ್ತಿಲ್ಲ.ಮಹಿಳೆಯರು ಕಚೇರಿಗೆ ಅಲೆಯುವುದೇ ಆಗಿದೆ. ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ಮಹಾಜನ ಪರಿವಾರ ಸಮಿತಿ ಹುಟ್ಟಿ ಹತ್ತುವರ್ಷಗಳೇ ಕಳೆದಿವೆ.ಇದು ಕೇವಲ ದಲಿತರ ಹಕ್ಕುಗಳಿಗೆ ಮಾತ್ರ ಹೋರಾಟ ಮಾಡುತ್ತಿಲ್ಲ.ಕಾರ್ಮಿಕರು,ಮಹಿಳೆಯರು, ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಿ ಹಲವಾರು ಹೋರಾಟ ಗಳನ್ನು ರೂಪಿಸಿದೆ.ಕಾರ್ಮಿಕರು ಸೂರಿಲ್ಲದ ಹತ್ತಾರು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ಜಿಲ್ಲಾಡಳಿತ…

Read More

ತುಮಕೂರು ನಗರದ ಶಿರಾಗೇಟ್ ಕನಕ ವೃತ್ತದಲ್ಲಿ ಭಕ್ತ ಕನಕದಾಸರ 537ನೇ ಜಯಂತಿಯ ಪ್ರಯುಕ್ತ ರೇವಣಸಿದ್ದೇಶ್ವರ ಮಠದ ಶ್ರೀ ಬಿಂದು ಶೇಖರ್ ಒಡೆಯರ್ ಸಾನಿಧ್ಯದಲ್ಲಿ ಕನಕದಾಸರ ಪುತ್ತಳಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಉತ್ಸವಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಚಾಲನೆ ನೀಡಿದರು. ಶಾಸಕ ಜಿಬಿ ಜ್ಯೋತಿಗಣೇಶ್ ಜಿ.ಪಂ ಸಿಇಓ ಜಿ.ಪ್ರಭು,ಪ್ರಜಾ ಪ್ರಗತಿ ಸಂಪಾದಕರಾದ ಎಸ್ ನಾಗಣ್ಣ, ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ,ಪಾಲಿಕೆ ಆಯುಕ್ತರಾದ ಬಿ ವಿ ಆಶ್ವೀಜ,ಪೋಲಿಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ಕಾಳಿದಾಸ ವಿದ್ಯಾರ‍್ಧಕ ಸಂಘದ ಅಧ್ಯಕ್ಷ ಮೈಲಪ್ಪ ,ಕುರುಬ ಸಂಘದ ಜಿಲ್ಲಾಧ್ಯಕ್ಷ ಟಿ ಆರ್ ಸುರೇಶ್ ಪಾಲಿಕೆ ಮಾಜಿ ಸದಸ್ಯರುಗಳಾದ ಎನ್ ಮಹೇಶ್,ಕೆಂಪರಾಜು,ಇಂದ್ರ ಕುಮಾರ್ , ಲಕ್ಷಿ÷್ಮ ನರಸಿಂಹರಾಜು,ಭೀಮ ರಾಜು, ಕಸಾಪ ಅಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪ, ರ‍್ಮರಾಜ್,ಜ್ವಾಲಾಮಾಲ ರಾಜಣ್ಣ,ಅನಿಲ್ ಕುಮಾರ್ , ನಳಿನಾ ಇಂದ್ರ ಕುಮಾರ್ ,ಯೋಗೀಶ್ ,ಹಾಗೂ ಜನಾಂಗದ ಮುಖಂಡರು ಗಳು ಉಪಸ್ಥಿತರಿದ್ದರು.

Read More