ಎಚ್.ಬಿ.ಕಿರಣ್ ಕುಮಾರ್ ಹುಳಿಯಾರು: ಯಾವ ಕ್ಷಣದಲ್ಲಿ ಬೇಕಾದರೂ ಕುಸಿದು ಬೀಳುವ ಕಟ್ಟಡದಲ್ಲಿ ಕಂದಮ್ಮಗಳ ಆಟ, ಪಾಠ, ಊಟ ನಡೆಯುತ್ತಿದೆ. ಸಂಪೂರ್ಣ ಶಿಥಿಲಾವಸ್ಥೆಯ ಕಟ್ಟಡ ಎಂಬ ಅರಿವಿದ್ದರೂ ಸಹ ಅದರಲ್ಲಿಯೇ ಅಂಗನವಾಡಿ ಕೇಂದ್ರ ನಡೆಸುವ ಮೂಲಕ ಮುಗ್ಧ ಮಕ್ಕಳ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ. ಹೌದು, ಇದು ಹುಳಿಯಾರು ಪಟ್ಟಣದ ಎ ಕೇಂದ್ರದ ಅಂಗನವಾಡಿ ಕಟ್ಟಡದ ದುಸ್ತಿತಿ. ೧೯೫೯ ರಲ್ಲಿ ಮೈಸೂರು ಸಂಸ್ಥಾನದ ನ್ಯಾಯಂಗ, ಕಾರ್ಮೀಕ ಮತ್ತು ಸ್ಥಳೀಯ ಸಂಸ್ಥೆಗಳ ಸಚಿವರಾದ ಸುಬ್ರಹ್ಮಣ್ಯ ಅವರು ಉದ್ಘಾಟಿಸಿದ ಶಿಶುವಿಹಾರದ ಕಟ್ಟಡದಲ್ಲಿ ೧೯೮೯ ರಿಂದ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಆದರೆ ಈಗ ಈ ಕಟ್ಟಡ ಸಂಪೂರ್ಣ ಹಾಳಾಗಿದ್ದು ದುರಸ್ಥಿ ಮಾಡಿಸುವುದಕ್ಕಿಂದ ಕೆಡುವುದೆ ಲೇಸು ಎನ್ನುವಂತಿದೆ. ಕೇAದ್ರದ ಸುತ್ತ ಬಿರುಕು ಬಿಟ್ಟ ಗೋಡೆಗಳು, ಹೆಂಚುಗಳು ಮುರಿದಿವೆ, ತೀರುಗಳು ಗೆದ್ದಲು ಹಿಡಿದಿವೆ. ಪರಿಣಾಮ ಮಳೆ ಬಂದರೆ ಕಟ್ಟಡದ ತುಂಬೆಲ್ಲಾ ನೀರು ತುಂಬುತ್ತದೆ. ಗಾಳಿ ಬಂದರೆ ತುಂಡಾಗಿರುವ ಹೆಂಚುಗಳು ತಲೆ ಮೇಲೆ ಬೀಳುತ್ತವೆ. ಭಾರಿ ಮಳೆಗಾಳಿ ಬಂದರೆ ಗೋಡೆಗಳೇ…
Author: News Desk Benkiyabale
ತುಮಕೂರು ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುವುದು ವಿದ್ಯಾರ್ಜನೆಯ ಜೊತೆಗೆ ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆಗಳು ಮೇಳೈಸಿದಾಗಲೇ ಎಂಬುದು ಸರ್ವವಿದಿತ. ಜನ್ಮತಃ ಪ್ರತಿಯೊಂದು ಮಗುವೂ ಪ್ರತಿಭಾಶಾಲಿಯೇ. ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಬೇಕಾದ ಮೆರುಗು ನೀಡಿ, ಸೂಕ್ತ ಅವಕಾಶಗಳನ್ನು ಒದಗಿಸಿದರೆ ಶಿಕ್ಷಣದ ಅರ್ಥವೂ ಪರಿಪೂರ್ಣವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಪಟ್ಟಿಯಲ್ಲಿನ ಅತ್ಯುನ್ನತ ಶ್ರೇಣಿಯೊಂದೇ ಮಕ್ಕಳ ನಿಜವಾದ ಸಾಮರ್ಥ್ಯವನ್ನು ಬಿಂಬಿಸಲಾಗದು. ಅದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿನ ಅವರ ತೊಡಗಿಸಿಕೊಳ್ಳುವಿಕೆಯು ಬದುಕಿನ ಹಲವು ಮಜಲುಗಳನ್ನು ಗೆಲ್ಲಲು ಬೇಕಾದ ಆತ್ಮಸ್ಥೆöÊರ್ಯವನ್ನು ಅವರಲ್ಲಿ ತುಂಬುತ್ತದೆ. ಈ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಸರು ಮಾಡಿರುವ ವಿದ್ಯಾನಿಧಿ ಪದವಿಪೂರ್ವ ಕಾಲೇಜು ಡಿಸೆಂಬರ್ ೧೫ರಂದು ವೈಭವದ ಸಾಂಸ್ಕೃತಿಕ ಉತ್ಸವ ಅಮೇಜ್- ೨೦೨೩ನ್ನು ಹಮ್ಮಿಕೊಂಡಿದೆ. ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಂಜೆ ನಾಲ್ಕು ಗಂಟೆಗೆ ಅಮೇಜ್-೨೦೨೩ ಉದ್ಘಾಟನೆಗೊಳ್ಳುವುದಕ್ಕಿದೆ. ನಿವೃತ್ತ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕರಾದ ಭಾಸ್ಕರ್ ರಾವ್, ಐಪಿಎಸ್., ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ತುಮಕೂರಿನ ಸೂಪರ್‌ಇಂಟೆAಡೆAಟ್ ಆಫ್ ಪೋಲೀಸ್ ಅಶೋಕ್ ಕೆ.ವಿ. ಐಪಿಎಸ್.,…
ತುಮಕೂರು ನಾಯಿಗಳಿಗೆ ರೇಬೀಸ್ ಲಸಿಕೆ ನೀಡುವಿಕೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಗಳನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವAತೆ ಜಿಲ್ಲಾ ಪ್ರಾಣಿದಯಾ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿಣಿ ಸಭೆಯ ನಡುವಳಿಯ ರೀತ್ಯ ಕ್ಯೆಗೊಂಡಿರುವ ಕ್ರಮಗಳ ಪರಿಶೀಲನೆ ಮಾಡಿದ ಅವರು, ಯಾವುದೇ ಸಭೆಯಲ್ಲಿ ನಿರ್ಣಯಿಸಿದ ನಡವಳಿಗಳನ್ನು ಸಮಗ್ರ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯ ಉಪ ನಿರ್ದೇಶಕ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘ ಸದಸ್ಯ ಕಾರ್ಯದರ್ಶಿ ಡಾ.ಗೀರಿಶ್ ಬಾಬು ರೆಡ್ಡಿ ಮಾತನಾಡಿ, ತುಮಕೂರು ನಗರದಲ್ಲಿ ೨೦೨೦ರ ಪ್ರಾಣಿ ಗಣತಿ ಅನುಸಾರ ಎರಡು ಸಾವಿರ ನಾಯಿಗಳಿದ್ದು, ಪ್ರಸ್ತುತ ಸುಮಾರು ಹತ್ತು ಸಾವಿರ…
ಬೆಳಗಾವಿ ವನ್ಯ ಜೀವಿಗಳಿಗೆ ಸಂಬAಧ ಪಟ್ಟ ವಸ್ತುಗಳು ಮನೆಯಲ್ಲಿದ್ದರೆ ಯಾರೂ ಭಯಪಡವು ಅಗತ್ಯವಿಲ್ಲ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ – ಬಿ.ಸುರೇಶಗೌಡ ರಾಜ್ಯದಲ್ಲಿ ಅನೇಕರು ಪೂರ್ವಜರ ಕಾಲದಿಂದಲೂ ಕೂಡ ಕೆಲವು ಮನೆಗಳಲ್ಲಿ ಇಂದಿಗೂ ಜಿಂಕೆ ಕೊಂಬು, ಕಾಡುಕೋಣದ ಕೊಂಬು ಮತ್ತಿತರ ವನ್ಯಜೀವಿಗಳ ಪರಿಕರಗಳನ್ನು ಮನೆಗಳ ಗೋಡೆ ಮತ್ತು ಕಂಬಗಳಲ್ಲಿ ಅಳವಡಿಸಿರುವುದು ಕೇಳಿ ಬಂದಿದೆ. ಇದರಿಂದ ಇತ್ತೀಚೆಗೆ ಹುಲಿ ಉಗುರು ಪ್ರಕರಣ ಬೆಳಕಿಗೆ ಬಂದಾಗಿನಿAದ ಈ ವಿಚಾರವಾಗಿ ಜನ ಭಯಭೀತರಾಗಿದ್ದಾರೆ. ಆದ್ದರಿಂದ ಮನೆಗಳಲ್ಲಿರುವ ಜಿಂಕೆ ಕೊಂಬು, ಕಾಡುಕೋಣದ ಕೊಂಬುಗಳನ್ನು ಸಕ್ರಮಗೊಳಿಸುವ ಬಗ್ಗೆ ಸರ್ಕಾರದ ಗಮನದಲ್ಲಿದೆಯೇ? ಎಂಬ ಕುರಿತಂತೆ ನಿಯಮ ೭೩ ರಡಿ ಮಂಗಳವಾರ ಸರ್ಕಾರದ ಗಮನ ಸೆಳೆದರು . ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡರು ಈ ಬಗ್ಗೆ ಗಮನ ಸೆಳೆದರು. ಈ ಹಿಂದೆ ಈ ರೀತಿಯ ಪ್ರಕರಣಗಳಲ್ಲಿ ಪರಿಕರಗಳನ್ನು ಸರ್ಕಾರಕ್ಕೆ ವಾಪಸ್ಸು ನೀಡಲು ಮತ್ತು ಸಕ್ರಮೀಕರಣ ಗೊಳಿಸಿಕೊಳ್ಳಲು ಸಾಕಷ್ಠು ಸಮಯಾವಾಕಾಶ ನೀಡಿತ್ತಾದರೂ ಕೂಡಾ…
ಕೊರಟಗೆರೆ ತುಮಕೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಂದ ಕೊರಟಗೆರೆ ತಾಲ್ಲೂಕು ಕೋಳಾಲ ಪೋಲೀಸ್ ಠಾಣೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಜನಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ಸಾರ್ವಜನಿಕರು, ಮುಖಂಡರು ಹಾಗೂ ರೈತರು ತಮ್ಮ ಅಹವಾಲುಗಳನ್ನು ವರಿಷ್ಠಾಧಿಕಾರಿಗಳಾದ ಅಶೋಕ್.ಕೆ.ವಿ. ಯವರಿಗೆ ನೀಡಿದರು, ಇದರಲ್ಲಿ ಬಹತೇಕ ಜಮೀನು ವಿವಾದ, ದಾರಿ, ವಾರಸತ್ವದ ಬಗ್ಗೆ ದೂರುಗಳಿದ್ದವು ಈ ದೂರು ತಂದವರಲ್ಲಿ ಹೆಚ್ಚಿನವರು ವಯೋವೃದ್ದರಿದ್ದರು ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾ ಎಸ್.ಪಿ.ರವರು ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕ್ಕೆ ಪೋಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ರೈತರು ಕೆಲವು ತಿಂಗಳುಗಳಿAದ ಕೋಳಾಲ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವ ಬೋರ್‌ವೆಲ್ ಪಂಪ್‌ಸೆಟ್‌ನ ಕೇಬಲ್ ಕಳ್ಳತನದ ಬಗ್ಗೆ ಆತಂಕ ವ್ಯಕ್ತಪಡಿಸಿದರು, ಸಾರ್ವಜನಿಕರು ಸರಗಳ್ಳತನದ ಬಗ್ಗೆ ದೂರು ಹೇಳಿದರು. ಸಭೆಯಲ್ಲಿ ಕೋಳಾಲ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳು, ಕೋಳಾಲ ಬಸ್ಟಾಂಡ್ ಅನಧಿಕೃತ ಅಂಗಡಿ, ರಸ್ತೆ ಬದಿ ವ್ಯಾಪಾರದಿಂದ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ಒಂದೇ ವಿಷಯದ ಸಿವಿಲ್ ವಿವಾದಗಳಿಗೆ ಪದೆ ಪದೆ ದಾಖಲು…
ಕುಣಿಗಲ್: ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ. ಪಟ್ಟಣದ ಕೆಆರ್‌ಎಸ್ ಅಗ್ರಹಾರ ಹೊಸಬಡವಣೆ, ಬಾಲಕರ ವಸತಿ ನಿಲಯ ಸಮೀಪದಲ್ಲಿ ಈ ಘಟನೆ ನಡೆದಿದೆ. ತುಮಕೂರು ತಾಲೂಕು ಹೆಬ್ಬರು ಹೋಬಳಿ, ಜಲ್ಲಿಪಾಳ್ಯ ಗ್ರಾಮದ ಅಂದಾನಯ್ಯ ಸೇರಿದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಅAದಾನಯ್ಯ ಬಾಲಕರ ವಸತಿ ಗೃಹ ಸಮೀಪ ಮನೆಯೊಂದನ್ನು ಬಾಡಿಗೆ ಪಡೆದು ಇಬ್ಬರು ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಪಿಐ ನವೀನ್‌ಗೌಡ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ಅಂದಾನಯ್ಯ ಹಾಗೂ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.
ಹುಳಿಯಾರು: ಅವೈಜ್ಞಾನಿಕ ಮತ್ತು ಅಪೂರ್ಣ ಚರಂಡಿ ಕಾಮಗಾರಿಯಿಂದಾಗಿ ಮನೆ ಮತ್ತು ಅಂಗಡಿಗಳಿಗೆ ಮಳೆ ಹಾಗೂ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಠಿಸುತ್ತಿದ್ದರೂ ಸಹ ಹುಳಿಯಾರು ಪಪಂ ಅಧಿಕಾರಿಗಳು ಮಾತ್ರ ಜಾಣ ಕುರುಡು ಮತ್ತು ಜಾಣ ಮೌನ ಪ್ರದರ್ಶಿಸುತ್ತಿದ್ದಾರೆ. ಹುಳಿಯಾರಿನ ಸಂತೆ ಬೀದಿಯಲ್ಲಿನ ಮನೆಗಳ ಕೊಳಚೆ ನೀರು ಹರಿಸಲು ಹುಳಿಯಾರು ಕೆರೆಯ ತೂಬು ನಾಲೆಯನ್ನೇ ಚರಂಡಿಯನ್ನಾಗಿ ಮಾರ್ಪಡಿಸಿದಾಗಲೇ ಇಲ್ಲಿನ ನಿವಾಸಿಗಳು ತಕರಾರು ತೆಗೆದಿದ್ದರು. ನಾಲೆಯನ್ನು ಈಗಾಗಲೇ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಿದ್ದಾರೆ, ಮೊದಲು ಅವುಗಳನ್ನು ತೆರವು ಮಾಡಿ ನಂತರ ನಾಲೆಯಲ್ಲಿ ನೀರು ಸರಾಗವಾಗಿ ಹರಿಯುವುದನ್ನು ಪರೀಕ್ಷಿಸಿ ಚರಂಡಿ ಮಾಡಿ ಎಂಬ ಸಲಹೆಯನ್ನೂ ಸಹ ಕೊಟ್ಟಿದ್ದರು. ಅಲ್ಲಿನ ನಿವಾಸಿಗಳ ಸಲಹೆ ಕೇಳದೆ ಚರಂಡಿ ಕಾಮಗಾರಿ ಆರಂಭಿಸಿದರು. ಸಂತೆ ಬೀದಿಯಿಂದ ಒತ್ತುವರಿ ಮಾಡಿಕೊಂಡು ಉಳಿಸಿರುವ ಅಳಿದುಳಿದ ಜಾಗದಲ್ಲೇ ಚರಂಡಿ ಕಾಮಗಾರಿ ಮಾಡಿದರು. ಆದರೆ ರಾಮಗೋಪಾಲ್ ಸರ್ಕಲ್ ಬಳಿ ನಾಲೆ ಸಂಪೂರ್ಣವಾಗಿ ಒತ್ತುವಾರಿಯಾಗಿ ಮುಂದೆ ಚರಂಡಿ ಕಾಮಗಾರಿ ಮಾಡಲಾಗದೆ ಸ್ಥಗಿತಗೊಳಿಸಿದರು. ಆಗ ಅಲ್ಲಿನ ನಿವಾಸಿಗಳು ಕಾಮಗಾರಿ ಪೂರ್ಣ…
ತುಮಕೂರು ಕುಟುಂಬದಲ್ಲಿ ಹಲವಾರು ಸಮಸ್ಯೆಗಳು ತಲೆದೋರುವುದು ಸಹಜ,ಸಣ್ಣಪುಟ್ಟ ಸಮಸ್ಯೆಗಳು,ಭಿನ್ನಾಭಿಪ್ರಾಯಗಳು ಬರುವುದು ಸಹಜ,ಸತಿ-ಪತಿಗಳು ಅವುಗಳನ್ನೇ ದೊಡ್ಡದು ಮಾಡಿಕೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ತರವಲ್ಲ,ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲವನ್ನೂ ಮರೆತು ಮುಂದಿನ ಜೀವನ ನಡೆಸಬೇಕು,ಮಕ್ಕಳ ಮುಂದಿನ ಓದು,ಮದುವೆ,ಇತ್ಯಾದಿ ಜವಾಬ್ದಾರಿಗಳು ತಂದೆ-ತಾಯಿಗಳಾದ ನಿಮ್ಮ ಮೇಲಿದೆ ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರರವರು ಹೇಳಿದರು. ಅವರು ಇಂದು ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ್ ಅದಾಲತ್ ನಲ್ಲಿ ಪುನರ್ ಒಂದಾದ ಸತಿ-ಪತಿಗಳನ್ನು ಕುರಿತು ಮಾತನಾಡಿದರು. ವಿವಾಹ ವಿಚ್ಛೇದನಕ್ಕೆ ಸದರಿ ನ್ಯಾಯಾಲಯದಲ್ಲಿ ಹಲವಾರು ಜನ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಕಳೆದ ಒಂದು ತಿಂಗಳಿನಿAದ ಅರ್ಜಿದಾರರ ಪರ ವಕೀಲರು ಮತ್ತು ಎದುರುರಾರರ ವಕೀಲರು,ಕೌಟುಂಬಿಕ ಜಿಲ್ಲಾ ನ್ಯಾಯಾಧೀಶರು ಎರಡೂ ಕಡೆಯವರಿಗೆ ಬುದ್ಧಿ ಹೇಳಿದ ಪರಿಣಾಮ ಇಂದು ೧೦ ಜೋಡಿಗಳು ಮತ್ತೆ ಹಾರ ಬದಲಾಯಿಸಿಕೊಂಡು, ಪರಸ್ಪರ ಸಿಹಿ ತಿನ್ನಿಸಿ ಮತ್ತೆ ಒಂದಾದ ಘಟನೆಗೆ ಇಲ್ಲಿನ ಜಿಲ್ಲಾ ನ್ಯಾಯಾಧೀಶರು,ವಕೀಲರುಗಳು ಸಾಕ್ಷಿಯಾದರು. ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಮುನಿರಾಜರವರು…
ತುಮಕೂರು: ತಾಲೂಕು ಬಿದರೆಕಟ್ಟೆಯಲ್ಲಿ ನಿರ್ಮಾಣ ವಾಗುತ್ತಿರುವ ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ಗೆ ಶಿಕ್ಷಣ ಭೀಷ್ಮ ಡಾ.ಹೆಚ್.ಎಂ.ಗAಗಾಧರಯ್ಯ ಅವರ ಹೆಸರಿಡಬೇಕೆಂದು ಕನ್ನಡಸೇನೆ, ಹಾಗೂ ವಿವಿಧ ಕನ್ನಡಪರ, ದಲಿತ ಸಂಘಟನೆಗಳ ಮುಖಂಡರು ಇಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಮತ್ತು ರಿಜಿಸ್ಟಾರ್ ನಾಯಿದಾ ಜಮ್ಹ್, ಜಮ್ಹ್ ಅವರಿಗೆ ಮನವಿ ಸಲ್ಲಿಸಿದರು. ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ನೇತೃತ್ವದಲ್ಲಿ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಉಮೇಶ್, ಪಿ.ಎನ್.ರಾಮಯ್ಯ, ವಕೀಲ ನಾಗೇಶ್ ಸೇರಿದಂತೆ ಹಲವು ಮುಖಂಡರುಗಳು ನಿಯೋಗ ತೆರಳಿ, ಕುಲಪತಿಗಳು ಮತ್ತು ಕುಲಸಚಿವರಿಗೆ ಮನವಿ ಸಲ್ಲಿಸದ್ದಾರೆ. ಈ ವೇಳೆ ಮಾತನಾಡಿದ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್,ಕುಣಿಗಲ್ ತಾಲೂಕು ಅಮೃತೂರಿನಲ್ಲಿ ಹುಟ್ಟಿದ ಡಾ.ಹೆಚ್.ಎಮ್.ಗಂಗಾಧರಯ್ಯ ಸ್ವಾತಂತ್ರ ಪೂರ್ವದಲ್ಲಿ ಮಹಾತ್ಮಗಾಂಧಿ, ವಿನೋಭಾ ಭಾವೆ ಅವರ ಕರೆಗಳಿಗೆ ಓಗಟ್ಟು, ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿ,ಗ್ರಾಮೀಣ ಭಾಗದ ಬಡ,ದಲಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶಯದೊಂದಿಗೆ ಸನಿವಾಸ ಪ್ರೌಢಶಾಲೆಯೊಂದನ್ನು ಆರಂಭಿಸಿ,ಹAತ ಹಂತವಾಗಿ ಶಾಲಾ, ಕಾಲೇಜುಗಳ ಜೊತೆಗೆ, ಮೆಡಿಕಲ್, ಇಂಜನಿಯರಿAಗ್ ಕಾಲೇಜುಗಳನ್ನು ಸ್ಥಾಪನೆ ಮಾಡಿ ಲಕ್ಷಾಂತರ ಮಕ್ಕಳಿಗೆ…
ತುಮಕೂರು: ಹಲವಾರು ವರ್ಷಗಳಿಂದ ತಮ್ಮ ಸ್ವತ್ತಿನ ಹೆಸರು ತಿದ್ದುಪಡಿ, ಅಳತೆಯಲ್ಲಿನ ವೆತ್ಯಾಸ, ಜನನ, ಮರಣ ಪತ್ರದಲ್ಲಿ ದಿನಾಂಕ, ಹೆಸರು ತಿದ್ದುಪಡಿ, ನಲ್ಲಿ, ಮನೆ ಕಂದಾಯ, ಯುಜಿಡಿ ಸಂಪರ್ಕ ಸೇರಿದಂತೆ ಹಲವು ಸೇವೆಯನ್ನು ತ್ವರಿತವಾಗಿ ಜನರಿಗೆ ಒದಗಿಸುವ ಉದ್ದೇಶದಿಂದ ಪಾಲಿಕೆವತಿಯಿಂದ ತ್ವರಿತ ಸೇವೆ ಆಭಿಯಾನವನ್ನು ಪಾಲಿಕೆ ಆವರಣದಲ್ಲಿ ಹಮ್ಮಿಕೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಆಯುಕ್ತರಾದ ಆಶ್ವಿಜ ತಿಳಿಸಿದ್ದಾರೆ. ಅಭಿಯಾನದ ಮೇಲುಸ್ತುವಾರಿ ವಹಿಸಿಕೊಂಡು ಸ್ತಳದಲ್ಲಿಯೇ ಹಾಜರಿದ್ದು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಆಯುಕ್ತರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ಹತ್ತಾರು ವರ್ಷಗಳಿಂದ ತಮ್ಮ ಆಸ್ತಿ, ಜನನ, ಮರಣ ಪತ್ರಗಳಲ್ಲಿ ಆಗಿರುವ ಸಣ್ಣ, ಪುಟ್ಟ ತಪ್ಪುಗಳಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತಿದ್ದಾರೆ. ಇಂತಹವರಿಗೆ ಅನುಕೂಲವಾಗಲೆಂದು ಈ ಅಭಿಯಾನವನ್ನು ಆಯೋಜಿಸಲಾಗಿದೆ ಎಂದರು. ಇAದು ಪಾಲಿಕೆಯ ಅವರಣದಲ್ಲಿ ೬ ಕೌಂಟರ್‌ಗಳನ್ನು ತೆರೆದು,ಜನನ,ಮರಣ,ಅಳತೆಯಲ್ಲಿನ ವೆತ್ಯಾಸ,ಮತದಾರರ ನೊಂದಣಿ, ನಲ್ಲಿ ಮತ್ತು ಯುಜಿಡಿ ಸಮಪರ್ಕ,ಟ್ರೆಡ್ ಲೈಸನ್ಸ್ಗೆ ಸಂಬAಧಿಸಿದAತೆ ದಾಖಲೆಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.ಹಿರಿಯ ನಾಗರಿಕರಿಗೆ ಪ್ರತ್ಯೇಕ ಲೈನ್ ಮಾಡಿ,ತ್ವರಿತವಾಗಿ ಅವರ ಕೆಲಸಗಳನ್ನು ಪೂರೈಸಿಕೊಡಲಾಗುತ್ತಿದೆ. ಮರುಪರಿಶೀಲನೆ…