Author: News Desk Benkiyabale

ತುಮಕೂರು: ಹತ್ತಾರು ವರ್ಷಗಳಿಂದ ದೇವಾಲಯವಿದ್ದ ಜಾಗ, ನೂರಾರು ತರಕಾರಿ, ಹೂವು, ಹಣ್ಣು ಮಾರಾಟಗಾರಿಗೆ ಆಶ್ರಯವಾಗಿದ್ದ ಸಿದ್ದಿವಿನಾಯಕ ಮಾರುಕಟ್ಟೆ ಜಾಗವನ್ನು ಮಂಗಳೂರಿನ ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ಗೆ ಸೇರಿದ ವ್ಯಕ್ತಿಗಳಿಗೆ ಮಾಲ್ ಕಟ್ಟಲು ಗುತ್ತಿಗೆ ನೀಡುವ ಮೂಲಕ ತುಮಕೂರು ನಗರದಲ್ಲಿ ಲ್ಯಾಂಡ್ ಜಿಹಾದ್‌ಗೆ ಬಿಜೆಪಿ ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಹಿಂದುಪರ ಸಂಘಟನೆಗಳ ಒಕ್ಕೂಟದವತಿ ಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಜರಂಗದಳ ತುಮಕೂರು ವಿಭಾಗದ ಸಂಚಾಲಕ ಮಂಜು ಭಾರ್ಗವ ಮಾತನಾಡಿ, ೧೯೫೨ರಲ್ಲಿ ತುಮಕೂರು ನಗರದ ವಿನಾ ಯಕನಗರದಲ್ಲಿನ ಸದರಿ ಜಾಗವನ್ನು ಉದ್ಯಾ ನವನಕ್ಕೆಂದು ಅಂದಿನ ಪುರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಕಾಯ್ದಿರಿಸಲಾಗಿತ್ತು.ತದನಂತರ ಎಪಿಎಂಸಿಯವರು ಸದರಿ ಜಾಗ ವನ್ನು ತರಕಾರಿ, ಹೂವು, ಹಣ್ಣು, ದಿನಸಿ ಮಾರುಕಟ್ಟೆ ಮಾಡಲು ಬಿಟ್ಟುಕೊಡುವಂತೆ ಕೋರಿದಾಗ,ಅವರಿಗೆ ಹಸ್ತಾಂತರಿಸಲಾಯಿತು.ಹತ್ತಾರು ವರ್ಷಗಳ ಕಾಲ ಮಾರುಕಟ್ಟೆ ನಡೆದು, ಕಿರಿದಾಗುತ್ತಾ ಬಂದಾಗ ಮಾರುಕಟ್ಟೆಯನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿದ ನಂತರ,ಆ ಜಾಗದಲ್ಲಿದ್ದ ಗಣೇಶನ ಮೂರ್ತಿ ಪೂಜೆ ಪುನಃಸ್ಕಾರಗಳು ನಡೆಯತಿದ್ದು,…

Read More

ತುಮಕೂರು: ರಾಜ್ಯದಲ್ಲಿರುವ ಅಮೃತಮಹಲ್ ಕಾವಲ್ ಭೂಮಿಯನ್ನು ಸರಕಾರ ೧೯೫೬ರಲ್ಲಿಯೇ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಸುಪರ್ದಿಗೆ ನೀಡಿದ್ದರೂ ಸಹ,ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯವರು ಉದ್ದೇಶ ಪೂರ್ವಕವಾಗಿಯೇ ಅಮೃತ ಮಹಲ್ ಕಾವಲು ಭೂಮಿಯನ್ನು ಉಳುಮೆ ಮಾಡಿ ಜೀವನ ನಡೆಸು ತ್ತಿರುವ ಕುಟುಂಬಗಳನ್ನು ೧೯೪೨ರ ಸರಕಾರ ಗೆಜೇಟ್ ತೋರಿಸಿ ಒಕ್ಕೆಬಿಸಲು ಹೊರಟಿವೆ.ಈ ಗೊಂದಲ ಬಗೆಹರಿಸಿದ್ದರೆ,ಶೀಘ್ರವೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ನವ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್.ರಘುನಾಥ್ ತಿಳಿಸಿದ್ದಾರೆ. ಅರಣ್ಯ ಇಲಾಖೆ ಬೆದರಿಕೆ ಹಿನ್ನೆಲೆಯಲ್ಲಿ ಇಂದು ಖಾಸಗಿ ಹೊಟೇಲ್‌ನಲ್ಲಿ ನವ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಜಗದೀಶ್ ಅವರ ನೇತೃತ್ವದಲ್ಲಿ ಆಯೋ ಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮೃತ ಮಹಲ್ ಕಾವಲಿಗೆ ಸಂಬAಧಿ ಸಿದಂತೆ ೧೯೪೨ರಲ್ಲಿ ಅಂದಿನ ಮೈಸೂರು ಸಂಸ್ಥಾನ ಅಮೃತ ಮಹಲ್ ಗೋ ತಳಿಗಳ ಸಂರಕ್ಷಣೆಗೆAದು ನೀಡಿ,ಗೆಜೆಟ್ ನೋಟಿಫೀಕೇಷನ್ ಹೊರಡಿಸಿದೆ. ಆದರೆ ರಾಜರ ಅಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಆಡಳಿತ ಬಂದ ನಂತರ ೨೪-೧೦-೧೯೫೬ರಂದು…

Read More

ತುಮಕೂರು: ತುಮಕೂರು ವಿವಿಯಲ್ಲಿ ದೇಹಕ್ಕೆ ಹಾಗೂ ಮೆದುಳಿಗೆ ಎರಡಕ್ಕೂ ಪ್ರಸಾದದ ರೂಪದಲ್ಲಿ ಆಹಾರ ಹಾಗೂ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮೀ ಜಪಾನಂದ ಜೀ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಅನ್ನ ಪೂರ್ಣೇಶ್ವರಿ ಮಧ್ಯಾಹ್ನದ ಭೋಜನ ಯೋಜನೆ ಮೂರನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮಾತನಾಡಿ, ಇನ್ನು ಮುಂದೆ ವಾರದಲ್ಲೊಂದು ದಿನ ಸಿಹಿತಿನಿಸು ಹಾಗೂ ಮಜ್ಜಿಗೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ವಿವಿಯ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಈ ಯೋಜನೆಯಿಂದ ನಮ್ಮ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸುಧಾರಿಸಿದೆ. ಸುಸಂಸ್ಕೃತ ಪ್ರಜೆಯನ್ನು ರೂಪಿಸುವಲ್ಲಿ ನಮ್ಮ ಈ ಯೋಜನೆಯು ಮುಖ್ಯ ಪಾತ್ರ ವಹಿಸಿದೆ. ಇದರಿಂದಾಗಿ ಪ್ರವೇಶಾತಿ ಕೂಡ ಗಣನೀಯವಾಗಿ ಏರಿಕೆಯಾಗಿದೆ ಎಂದರು. ಉದ್ಯಮಿಗಳಾದ ಡಾ. ಹೆಚ್. ಜಿ. ಚಂದ್ರಶೇಖರ್, ಡಾ. ಆರ್. ಎಲ್. ರಮೇಶ್ ಬಾಬು, ಶಿರಡಿ ಸಾಯಿಬಾಬಾ ಮಂದಿರದ ಅಧ್ಯಕ್ಷ ರಾದ ನಟರಾಜ್ ಶೆಟ್ಟಿ, ಘಟಕ ಕಾಲೇಜುಗಳ ಪ್ರಾಂಶುಪಾಲರಾದ ಪ್ರೊ. ಪ್ರಕಾಶ್ ಎಂ. ಶೇಟ್ ಮತ್ತು ಪ್ರೊ.…

Read More

ತುಮಕೂರು: ಪ್ರಭಾವಿಗಳು, ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶಬಾಬು ಅವರ ಹಿಂಬಾಲಕರು ಆಗಿರುವ ಗುತ್ತಿಗೆದಾರರಾದ ಚಲುವರಾಜು, ರಾಜಣ್ಣ ಅವರಿಂದ ನನಗೆ ಜೀವ ಭಯವಿದ್ದು, ಸೂಕ್ತ ರಕ್ಷಣೆ ನೀಡಬೇಕು ಎಂದು ಲೋಕೋಪಯೋಗಿ ಇಲಾ ಖೆಯಲ್ಲಿ ನೊಂದಾಯಿತ ಗುತ್ತಿಗೆದಾರ ಜಯಣ್ಣ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾನು ಮೂಲತಃ ಚಿಕ್ಕನಾಯಕನಹಳ್ಳಿ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ವ್ಯಕ್ತಿಯಾಗಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾ ಯಿತ ಗುತ್ತಿಗೆದಾರನಾಗಿದ್ದು, ಈ ಹಿಂದೆ ನಾನು ಹುಳಿಯಾರು ಪಟ್ಟಣ ಪಂಚಾಯಿತಿಯ ಕೆಲ ಅಭಿವೃದ್ದಿ ಕಾಮಗಾರಿಗಳನ್ನು ಗುತ್ತಿಗೆ ಪಡೆದ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಮತ್ತು ಮಿಷ ನರಿಗಳನ್ನು ಒದಗಿಸುವ ಚುಲುವರಾಜ್ ಅವರಿಗೆ ಕೆಲವು ಕೆಲಸಗಳನ್ನು ಸಬ್ ಕಂಟ್ರಾಕ್ಟ್ ನೀಡಿ ಕೆಲಸ ಮಾಡಿದ್ದು, ಅಗತ್ಯಕ್ಕಿಂತ ಹೆಚ್ಚು ಹಣ ನೀಡಿ ದ್ದೇನು. ಹೆಚ್ಚುವರಿಯಾಗಿ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಹಲವು ಬಾರಿ ಮನವಿ ಮಾಡಿದಾಗಲೂ ಇಲ್ಲಸಲ್ಲದ ಸಬೂಬು ಹೇಳುತಿದ್ದ ಚಲುವರಾಜು, ಮಾರ್ಚ್ ೧೦ರ ಬೆಳಗ್ಗೆ ೧೦:೩೦ರ ಸುಮಾರಿಗೆ ನನ್ನ ಹುಟ್ಟೂರಿಗೆ ಹೋಗಲು ಕಾರಿನಲ್ಲಿ…

Read More

ಪಾವಗಡ: ಪಟ್ಟಣದ ಸಾರ್ವಜನಿಕ ಅಸ್ಪತ್ರೆಯಲ್ಲಿ ವೈದ್ಯರನ್ನು ನೇಮಿಸಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ತಾಲ್ಲೂಕು ಬಿ.ಜೆ.ಪಿ. ಪಕ್ಷದ ವತಿಯಿಂದ ಸೋಮವಾರ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹೆಕಿ ಅಕ್ರೋಶ ಹೊರಹಾಕಿ ತಹಶೀಲ್ದಾರ್ ಡಿ.ಎನ್. ವರದರಾಜುಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲ್ಲೂಕು ಬಿ.ಜೆ.ಪಿ. ಪಕ್ಷದ ಅಧ್ಯಕ್ಷರಾದ ದೊಡ್ಡಹಳ್ಳಿ ಅಶೋಕ್ ಮಾತನಾಡಿ, ತಾಲ್ಲೂಕು ವೈದ್ಯರಾದ ಕಿರಣ್ ಕುಮಾರ್ ರವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಮಾಡಿ, ತಾಲ್ಲೂಕಿನಲ್ಲಿ ಕಾಂಗ್ರೆಸ್ ಪ್ರೇರಿತ ಅಧಿಕಾರಿಗಳಿದ್ದು ಅವರನ್ನು ರೆಡ್ ಬುಕ್ ನಲ್ಲಿ ನಮೂದಿಸಲಾಗುವುದು, ಮುಂದಿನ ದಿನಗಳಲ್ಲಿ ಅವರನ್ನು ತಾಲ್ಲೂಕು ಬಿಟ್ಟು ಓಡಿಸಲಾಗುತ್ತದೆ, ನಮ್ಮ ಬಿ.ಜೆ.ಪಿ. ಅಧಿಕಾರವದಿಯಲ್ಲಿ ೧೩ ಕೋಟಿ ವೆಚ್ಚದಲ್ಲಿ ಸರ್ಕಾರಿ ಅಸ್ಪತ್ರೆಯನ್ನು ನಿರ್ಮಾಣ ಮಾಡಿದ್ದರೆ,ಇಲ್ಲಿಯವರೆಗೂ ವೈದ್ಯ ರನ್ನು, ಕನಿಷ್ಟ ಪಕ್ಷ ನರ್ಸಗಳನ್ನು ನೇಮಕ ಮಾಡಿಲ್ಲಾ, ಅಂಬುಲೆನಸ್ ಗಳಿಗೆ ಡೀಸಲ್ ಹಾಕಿಸಲು ಹಣ ಇಲ್ಲಾ ಎನ್ನುತ್ತಾರೆ, ರಾಜ್ಯ ಸರ್ಕಾರ ೧೩ ಸಾವಿರ ಕೋಟಿ ಎಸ್.ಸಿ. ಎಸ್.ಟಿ. ಹಣವನ್ನು ದುರ್ಬಳಕ್ಕೆ ಮಾಡಿದ್ದು, ಈ ಕೂಡಲೆ ಶಾಸಕರು ಕ್ರಮ ಜರುಗಿಸಿ ಅಸ್ಪತ್ರೆಗೆ…

Read More

ಕೊರಟಗೆರೆ: ಅಭಿಮಾನಿಗಳ ಆರಾಧ್ಯ ದೈವ ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ೫೦ನೇ ವರ್ಷದ ಜನ್ಮದಿನದ ಪ್ರಯುಕ್ತ ೧೩ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಹಾಗೂ ಸಿಹಿ ವಿತರಣೆ ಮಾಡಿದ ಅಪ್ಪು ಅಭಿಮಾನಿಗಳು.. ಪುನೀತ್ ರಾಜಕುಮಾರ್ ನಡೆದು ಬಂದ ಹಾದಿಯಲ್ಲಿ ಅವರ ಅಭಿಮಾನಿಗಳು ಮುಂದೆ ಸಾಗುತ್ತಿರುವುದು ಬಹಳಷ್ಟು ಸಂತಸದ ವಿಷಯವಾಗಿದೆ. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಪುರ ಗ್ರಾಮ ಪಂಚಾಯತಿ ಸದಸ್ಯ ವೆಂಕಟರೆಡ್ಡಿ ಹಾಗೂ ಗ್ರಾಮದ ಅಪ್ಪು ಅಪ್ಪಟ ಅಭಿಮಾನಿಗಳಿಂದ ಕರ್ನಾಟಕ ರತ್ನ ಅಭಿಮಾನಿಗಳ ಆರಾಧ್ಯ ದೈವ ಬೆಟ್ಟದ ಹೂವು ಡಾ. ಪುನೀತ್ ರಾಜಕುಮಾರ್ ಜನುಮದಿನದ ಪ್ರತಿ ವರ್ಷವು ಇಂತಹ ಒಂದಲ್ಲ ಒಂದು ರೀತಿಯ ವಿಶೇಷ ಕಾರ್ಯಕ್ರಮಗಳನ್ನ ಆಯೋಜನೆ ಅಪ್ಪು ಅಭಿಮಾನಿಗಳು ಮಾಡುತ್ತಿದ್ದಾರೆ.. ರಾಜ್ಯದ ಎಲ್ಲಾ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಅಪ್ಪು ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸುತ್ತಾರೆ ಅಷ್ಟೇ ಅಲ್ಲ ದೇಶದ ನಾನಾ ಭಾಗಗಳಲ್ಲಿ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಆಚರಣೆ ಮಾಡುತ್ತಿದ್ದಾರೆ ಇದೇ ತಾನೇ ಒಬ್ಬ…

Read More

ಹುಳಿಯಾರು: ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದಲ್ಲಿ ಚಿತ್ರನಟ ಪುನೀತ್ ರಾಜ್‌ಕುಮಾರ್ ರವರ ೫೦ ನೇ ಹುಟ್ಟು ಹಬ್ಬವನ್ನು ಸೋಮವಾರ ಸಡಗರ ಸಂಭ್ರಮದಿAದ ಆಚರಿಸಲಾಯಿತು. ಈ ಹಿನ್ನಲೆಯಲ್ಲಿ ಬೆಳ್ಳಾರ ಗ್ರಾಮದ ವೃತ್ತಕ್ಕೆ ಪುನೀತ್ ರಾಜ್‌ಕುಮಾರ್ ವೃತ್ತ ಎಂದು ನಾಮಕರಣ ಮಾಡಿ ಕೇಕ್ ಕತ್ತರಿಸಿ ಸಿಹಿ ಹಂಚಿ ನೆಚ್ಚಿನ ನಾಯಕ ನಟನ ಹುಟ್ಟು ಹಬ್ಬವನ್ನು ಸಂಭ್ರಮಿಸಿದರು. ಗ್ರಾಪA ಅಧ್ಯಕ್ಷೆ ರಾಧರಾಜು, ಚಿಕ್ಕನಾಯಕನ ಹಳ್ಳಿ ರೇಣುಕಾಂಬ ಸಹಕಾರ ಸಂಘದ ಅಧ್ಯಕ್ಷ ಬೆಳ್ಳಾರ ಎಸ್.ಮಲ್ಲಿಕಾರ್ಜುನಯ್ಯ, ವಕೀಲ ಮೋಹನ್, ಪೊಸ್ಟ್ ಕೃಷ್ಣಪ್ಪ, ಗ್ರಾಪಂ ಸದಸ್ಯರಾದ ಲಕ್ಕೇನಹಳ್ಳಿ ರಘುವೀರ್, ಹೊಯ್ಸಳಕಟ್ಟೆ ಕಾಂತರಾಜು, ಬೆಳ್ಳಾರ ಗೊಲ್ಲರಹಟ್ಟಿ ಚಿಕ್ಕಣ್ಣ, ಆರ್ಯ ಈಡಿಗರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ನಾಗರಾಜು, ಕಾರ್ಯದರ್ಶಿ ಸೋ ಮಣ್ಣ, ಜಿಲ್ಲಾ ಸಂಘದ ಸದಸ್ಯ ನಾರಾಯಣ ಸ್ವಾಮಿ ಇತರರು ಉಪಸ್ಥಿತರಿದ್ದರು.

Read More

ತುರುವೇಕೆರೆ: ತಾಲೂಕಿನ ಕೋಳಘಟ್ಟದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಎಸಿಯವರು ಆದೇಶ ನೀಡಿದರು ಕಂದಾಯ ಹಾಗೂ ಗಣಿ ಅದಿಕಾರಿಗಳ ಕಣ್ಣತಪ್ಪಿಸಿ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಗಂಗಾಧರಯ್ಯ ಆರೋಪಿಸಿದ್ದಾರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲೂ ಕಿನ ಕೋಳಘಟ್ಟ ಸರ್ವೇ ನಂ ೫೫ರಲ್ಲಿ ೧೬೩ ಎಕರೆ ಭೂಮಿ ಇದ್ದು ಸುಮಾರು ವರ್ಷ ಗಳಿಂದ ರೈತರು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಮಾತ್ರ ಭೂಮಿ ಮಂಜೂರಾಗಿದ್ದು ಇನ್ನು ಕೆಲವರು ಅನುಭವದಲ್ಲಿದ್ದಾರೆ. ಸರ್ವೇ ನಂ ೪೯/೧,೪೯/೨, ರಲ್ಲಿ ಅಕ್ರಮವಾಗಿ ರಾಜುಗೌಡ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಮತ್ತು ರೈತರಿಂದ ಅಕ್ರಮವಾಗಿ ಜಿ.ಪಿ.ಎ ಮಾಡಿಸಿಕೊಂಡು ಕ್ರಷರ್ ಗಣಿಗಾರಿಕೆ ನೆಡೆಸುತ್ತಿದ್ದು. ಕೆಲವು ಪೋಲೀಸರು ಹಾಗೂ ಅಧಿಕಾರಿಗಳು ಕ್ರಷರ್ ಮಾಲೀಕರ ಜೊತೆ ಕೈಜೋಡಿಸಿ ಸರ್ಕಾರಕ್ಕೆ ಮತ್ತು ರೈತರಿಗೆ ಮೋಸಮಾಡುತಿದ್ದಾರೆ ಎಂದು ಆರೋಪಿಸಿ ೨೦೧೯ ರಲ್ಲಿ ಸರ್ವೇ ನಂ. ೫೫ ರಲ್ಲಿ ಗೋಮಾಳ ಎಂದು ಉಪವಿಭಾಗಾಧಿಕಾರಿಗಳು ವರದಿಯನ್ನು ನೀಡಿದ್ದರೂ ಕೂಡ ಅಲ್ಲಿ…

Read More

ತುಮಕೂರು: ಸ್ಪರ್ಧಾತ್ಮಕ ಜಗತ್ತಿಗೆ ಕಂಪ್ಯೂಟರ್ ಜ್ಞಾನ ಮತ್ತು ಅದರ ಬಳಕೆ ಅನಿವಾರ್ಯ. ವಿದ್ಯಾಭ್ಯಾಸದ ಸಮಯದಿಂದಲೇ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆದುಕೊಂಡರೆ ಭವಿಷ್ಯ ಉಜ್ವ ಲವಾಗುವುದು ಎಂದು ತುಮಕೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಹೇಳಿದರು. ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗವು ಸೋಮವಾರ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಕುರಿತ ಒಂದು ದಿನದ ರಾಷ್ಟಿçÃಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ವಿಭಾಗಗಳಲ್ಲಿಯೂ ತಂತ್ರಜ್ಞಾನ ಬಳಕೆ ಅವಶ್ಯಕವಾಗಿದೆ. ಎಲ್ಲಾ ಕಚೇರಿಗಳಲ್ಲಿಯೂ ಕಂಪ್ಯೂಟರ್, ಲ್ಯಾಪ್ಟಾಪ್ ನೋಡುತ್ತಿರುತ್ತೇವೆ. ಇಂತಹ ಯುಗಕ್ಕೆ ತಂತ್ರಜ್ಞಾನದ ಅರಿವು ಮುಂಚೂಣಿಯಲ್ಲಿರಬೇಕು ಎಂದರು. ಸAಪನ್ಮೂಲ ವ್ಯಕ್ತಿಗಳಾದ ಡಾ. ಆನಂದ ಕುಮಾರ್ ಸುಬ್ರಮಣಿ ನಾಥನ್ ಮಾತನಾಡಿ, ತಂತ್ರಜ್ಞಾನ ಕ್ಷೇತ್ರ ಕಿರಿದಾದುದಲ್ಲ. ಅದರಲ್ಲಿ ನೀವು ಕಲಿಯಬೇಕಾದ ಕ್ಷೇತ್ರವನ್ನು ಮೊದಲು ಆಯ್ಕೆ ಮಾಡಿಕೊಳ್ಳಿ. ಆಸಕ್ತಿ ಇಟ್ಟು ಕಲಿತರೆ ಯಾವುದೂ ಕಷ್ಟವಾಗುವುದಿಲ್ಲ. ಯಾವುದೇ ಕಲಿಕೆಯಾದರೂ ಜೀವನವನ್ನು ಉನ್ನತ ಮಟ್ಟ ಕ್ಕೆ ಕೊಂಡೊಯ್ಯುವ ಸಾಧನವೆಂಬುದನ್ನು ನೆನಪಿ ಟ್ಟುಕೊಳ್ಳಿ ಇಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಎಸ್.ಎಸ್.ಐ.ಟಿ…

Read More

ತುಮಕೂರು: “ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ-ತಮ್ಮ ವಿದ್ಯೆಗೆ ತಕ್ಕ ಹಾಗೇ ಉದ್ಯೋಗ ಪಡೆದುಕೊಳ್ಳಬಹುದು”. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದ ಉದ್ಯೋಗಕ್ಕೆ ಬೇಕಾಗುವ ಎಲ್ಲಾ ಸಕಲ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು, ಕೌಶಲ್ಯವಿಲ್ಲದಿದ್ದರೆ ಕೆಲಸ ಸಿಗುವುದು ಬಹಳ ಕಷ್ಟವಾಗುತ್ತದೆ ಎಂದು ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಸಿ.ಎ. ಎಸ್.ವಿಶ್ವನಾಥ್‌ರವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ತುಮಕೂರು ಹಾಗೂ ನಿರ್ಮಾಣ್ ಆರ್ಗನೈಜೇಷನ್ ಇವರ ಸಹಯೋಗದೊಂದಿಗೆ ಅನನ್ಯ ಸಮೂಹ ಸಂಸ್ಥೆಗಳು, ಅನನ್ಯ ಇನ್ಟಿ÷್ಸಟ್ಯೂಟ್ ಅಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಇವರುಗಳ ಸಹಯೋಗದಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಚ್ ೧೭ ರಂದು ಸೋಮವಾರÀ ಅನನ್ಯ ಕ್ಯಾಂಪಸ್‌ನಲ್ಲಿ “ಉದ್ಯೋಗ ಮೇಳ-೨೦೨೫”ರನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ೩೫ ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳಿAದ ಉದ್ಯೋಗಾವಕಾಶವನ್ನು ಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಸಿ.ಎ. ಎಸ್.ವಿಶ್ವನಾಥ್‌ರವರು ಮಾತನಾಡುತ್ತಾ ‘’ಉದ್ಯೋಗಾರ್ತಿಗಳು ಹೆಚ್ಚಿನ ಕೌಶಲ್ಯ ಪಡೆಯಬೇಕೆಂದು ತಿಳಿಸುತ್ತಾ, ಭಾರತದಲ್ಲಿ ಕಳೆದ ಆರು ವರ್ಷಗಳಿಂದ ಇಂಟನ್‌ಶಿಫ್ ಪಡೆಯುತ್ತಿರುವವರ…

Read More