Author: News Desk Benkiyabale

ಬೆಂಗಳೂರು: ಈ ಸಾರಿಯ ಬಜೆಟ್‌ನಲ್ಲಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎತ್ತಿನಹೊಳೆ ಯೋಜನೆಯಡಿ ೨೪೧ ಕಿ ಮೀ ವರೆಗೆ ನೀರು ಹರಿಸುವುದಾಗಿ ಹೇಳಿದ್ದಾರೆ. ಇದರ ಅರ್ಥ ತುಮಕೂರು ಕೊನೆಯ ಭಾಗದ ವರೆಗೆ ನೀರು ಬರುತ್ತದೆ ಮತ್ತು ಜಿಲ್ಲೆಯ ಎಲ್ಲ ಬರಪೀಡಿತ ಪ್ರದೇಶಗಳ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು ಎಂದು ಅರ್ಥ. ಇದು ಆದರೆ ನಾನೇ ತುಮಕೂರಿನಲ್ಲಿ ೫೦,೦೦೦ ಜನರನ್ನು ಸೇರಿಸಿ ಸಿದ್ದರಾಮಯ್ಯನವರಿಗೆ ಬೆಳ್ಳಿ ಗದೆ ಕೊಟ್ಟು ಸನ್ಮಾನ ಮಾಡುತ್ತೇನೆ. ಅವರಿಂದ ಆ ಕೆಲಸ ಆಗದೇ ಇದ್ದರೆ ಮುಂದಿನ ಬಜೆಟ್‌ನಲ್ಲಿ ಅವರು ಸದನದ ಕ್ಷಮೆ ಕೇಳಬೇಕು. ವಿಧಾನಸಭೆಯಲ್ಲಿ ಸೋಮವಾರ ರಾತ್ರಿ ಬಜೆಟ್ ಮೇಲಿನ ಮುಂದುವರಿದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ತುಮ ಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡರು ಹಾಕಿದ ಪಂಥಾಹ್ವಾನ ಇದು. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯಡಿ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ೫೨೪ ಮೀಟರ್‌ಗೆ ಏರಿಸಿ ಮುಳುಗಡೆಯಾಗುವ ೧.೨೨ ಲಕ್ಷ ಎಕರೆ ಭೂಮಿಯ ಒಡೆಯರಿಗೆ ಪರಿಹಾರವನ್ನೂ ಕೊಡುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ…

Read More

ತುಮಕೂರು: ಜಿಎಸ್‌ಟಿ ಅಡಿಯಲ್ಲಿ ನೋಂದಣಿ ಯಾಗಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ಇತರರಿಗೆ ಪರಿಹಾರವನ್ನು ಒದಗಿಸುವ ದೃಷ್ಟಿಯಿಂದ ೨೦೨೪ ರ ಜೂನ್ ೨೨ ರಂದು ನಡೆದ ೫೩ನೇ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಅನುಸಾರ ೨೦೧೭-೧೮’ ೨೦೧೮-೧೯, ೨೦೧೯-೨೦ ಹಣಕಾಸು ವರ್ಷಗಳಿಗೆ ಅನುಗುಣವಾಗಿ ೩೧-೦೩-೨೦೨೫ ರ ಒಳಗೆ ಬಾಕಿ ಇರುವ ತೆರಿಗೆ ಹಣವನ್ನು ಕಟ್ಟಿದವರಿಗೆ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಷರತ್ತಿನ ಅನ್ವಯ ಕಟ್ಟಲು ಕಾಲಾವಕಾಶ ನೀಡಲಾಗಿದ್ದು, ಈ ಅವಕಾಶವನ್ನು ಬಾಕಿ ಇರುವವರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಪಿ ಆರ್ ಕುರಂದವಾಡ ಮನವಿ ಮಾಡಿದ್ದಾರೆ. ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ ರವರು ೩೧-೦೩-೨೦೨೫ ರವರೆಗೂ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಮಾಡಲಾಗಿರುವ ಶಿಫಾರಸನ್ನು ಸ್ವಾಗತಿಸಿರುವ ಅವರು, ಈ ಅನುಕೂಲತೆಯನ್ನು ಜಿಲ್ಲೆಯ ಎಲ್ಲಾ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ತುಮಕೂರು: ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಬದಲಾವಣೆ ಮಾಡುತ್ತಿರುವುದು ಸಮಾಜವನ್ನು ಮುಂದೆ ಕೊಂಡು ಹೋಗುವ ಬದಲು ಹಿಮ್ಮುಖವಾಗಿ ಸಾಗಿ ಮತ್ತೆ ಗುಲಾಮಿ ಪದ್ದತಿಯನ್ನು ಸೃಷ್ಟಿಸುವ ನಿಟ್ಟಿನಲ್ಲಿದೆ ಎಂದು ಹಿರಿಯ ಹೈಕೋರ್ಟ ವಕೀಲರಾದ ಶ್ರೀ ಮುರಳಿಧರ ಪೇಶ್ವೆ ಅವರು ಅಭಿಪ್ರಾಯ ಪಟ್ಟರು. ಮುಂದುವರಿದು ಮಾತನಾಡಿದ ಅವರು ದುಡಿವ ಜನರ ಆರೋಗ್ಯ -ಸಾಮಾಜಿಕ ಜೀವನ ಗಳ ಬಗ್ಗೆ ಹೆಚ್ಚು ಒತ್ತು ನೀಡುವುದನ್ನು ಕೈಬಿಟ್ಟಿರುವ ಸರ್ಕಾರವು ಕಾರ್ಪೊರೇಟ್ ಲಾಭವನ್ನು ಖಾತರಿ ಪಡಿಸುವ ಮತ್ತು ಅದಕ್ಕೆ ಯಾವುದೇ ಅಡೆ ತಡೆಗಳು ಅಗದಂತೆ , ಕಾರ್ಮಿಕರಿಗೆ ಇರುವ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಕಾರ್ಮಿಕ ವರ್ಗ ಎಚ್ಚೆತ್ತು ಹಕ್ಕುಗಳ ರಕ್ಷಣೆಗೆ ಮುಂದಾವುದು ಅತ್ಯಗತ್ಯ ಎಂದರು. ಭಾನುವಾರ ಮಧ್ಯಾನ್ನ ತುಮಕೂರು ನಗರದ ಜನ ಚಳುವಳಿ ಕೇಂದ್ರದಲ್ಲಿ ಸಿಐಟಿಯು – ಪ್ರಗತಿ ಕಾನೂನು ಕೇಂದ್ರ ಜಂಟಿಯಾಗಿ ಅಯೋಜಿಸಿದ್ದ “ಕಾರ್ಮಿಕ ಕಾನೂನುಗಳ ಬದಲಾವಣೆ- ಕಾರ್ಮಿಕರಿಗೆ ಇರುವ ಸವಾಲುಗಳು” ಕುರಿತು ಉಪನ್ಯಾಸವನ್ನು ನೀಡಿದರು. ಸರಳೀಕರಣದ ಹೆಸರಲ್ಲಿ ಕಾರ್ಮಿಕ ಕಾನೂನುಗಳ ಮೂಲ ತಿರುಳನ್ನು ತಿರುಚಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡುವ…

Read More

ಚಿಕ್ಕನಾಯಕನಹಳ್ಳಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಇಟಿ ಮತ್ತು ನೀಟ್ ತರಬೇತಿಯ ಸೌಲಭ್ಯ ಉಚಿತವಾಗಿ ದೊರೆತರೆ ನಗರ ಪ್ರದೇಶದ ಮಕ್ಕಳೊಂದಿಗೆ ಗ್ರಾಮೀಣ ಪ್ರದೇಶದ ಮಕ್ಕಳು ಸ್ಪರ್ಧೆ ತರಲು ಸಾಧ್ಯವಾಗುತ್ತದೆ ಎಂದು ಉಚಿತ ಸಿಇಟಿ ಹಾಗೂ ನೀಟ್ ತರಬೇತಿ ಶಿಬಿರವನ್ನು ಇದೆ ಮಾರ್ಚ್ ೧೯ ರಂದು ಉದ್ಘಾಟನೆ ಗೊಳ್ಳಲಿದೆ ಎಂದು ಶಾಸಕ ಹಾಗೂ ಜೆ ಡಿ ಎಲ್ ಪಿ ನಾಯಕ ಸಿಬಿ ಸುರೇಶ್ ಬಾಬು ಹೇಳಿದರು. ಅವರು ಇಂದು ಪಟ್ಟಣದ ಜೋಗಿಹಳ್ಳಿ ಗೇಟ್ ಬಳಿ ಇರುವ ಎಚ್ ಡಿ ಎಫ್ ಸಿ ಬ್ಯಾಂಕ್ ಮೇಲ್ಭಾಗದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸುರೇಶ್ ಬಾಬು ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಿಇಟಿ ತರಬೇತಿ ಹಮ್ಮಿಕೊಳ್ಳಲಾಗಿದೆ ಇದರ ಉದ್ಘಾಟನೆಯನ್ನು ಪಟ್ಟಣದ ತೀನಂಶ್ರೀ ಭವನದಲ್ಲಿ ಮಾರ್ಚ್ ೧೯ ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ ಪ್ರಭು ಉದ್ಘಾಟಿಸಲಿದ್ದಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿಇಟಿ ತರಬೇತಿಯ ಮೇಲುಸ್ತುವಾರಿ ಸಮಿತಿಯ ನಿರ್ವಹಣೆ…

Read More

ಪಾವಗಡ: ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀರಂಗಪುರ ತಾಂಡಾದ ಅಂಗನವಾಡಿ ಕೇಂದ್ರ ಮಾದರಿಯ ಕೇಂದ್ರವಾಗಿ ಹೊರಹೊಮ್ಮಿದ್ದು, ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ ಅವರ ಸೃಜನಶೀಲ ಕೆಲಸಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ಅಂಗನವಾಡಿಗೆ ಭೇಟಿ ನೀಡಿದ ಅವರು, ಪ್ಲಾಸ್ಟಿಕ್ ಪುನರ್ವ್ಯವಸ್ಥೆಯಿಂದ ತಯಾರಿಸಿದ ಆಕರ್ಷಕ ವಸ್ತುಗಳ ಮೂಲಕ ಮಕ್ಕಳಿಗೆ ಕಲಿಕೆಗೆ ಅನುಕೂಲಕರವಾದ ಪರಿಸರವನ್ನು ಒದಗಿಸಿರುವ ಬಗ್ಗೆ ಶ್ಲಾಘಿಸಿದರು. ಮಕ್ಕಳು ಕಲಿಯುತ್ತಿರುವ ಪ್ರಗತಿಯನ್ನೂ ವೀಕ್ಷಿಸಿ, ಸಾರ್ವಜನಿಕರಿಂದ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿ ಕುರಿತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಎಂ.ಎನ್, ಸಿಡಿಪಿಒ ಡಿ.ಜಿ ಸುನೀತ, ಮೇಲ್ವಿಚಾರಣೆ ಅಧಿಕಾರಿ ಭಾಗ್ಯಲಕ್ಷ್ಮಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. ಬೀದಿ ವ್ಯಾಪಾರಿಗಳಿಗೆ ಸಾಲ ವಿತರಣೆ, ಸೋಲಾರ್ ಪಾರ್ಕ್ ಪರಿಶೀಲನೆ ಇದರ ಹಿಂದೆ, ಪಟ್ಟಣದ ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ವಿತರಿಸಿ, ಫಲಾನುಭವಿಗಳ ಅನುಭವಗಳನ್ನು ಜಿಲ್ಲಾಧಿಕಾರಿ ಕೇಳಿಕೊಂಡರು. ನಂತರ…

Read More

ತುರುವೇಕೆರೆ: ಪಟ್ಟಣದ ಶ್ರೀ ಕೋಡಿಬಸವೇಶ್ವರ ಸ್ವಾಮಿ ಮತ್ತು ಶ್ರೀಭದ್ರಕಾಳಮ್ಮ ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಬಹಳ ವಿಜೃಂಭಣೆಯಿAದ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಶುಭ ಗೋದೋಳಿ ಲಗ್ನದಲ್ಲಿ ಶ್ರೀ ವೀರಭದ್ರಸ್ವಾಮಿಯವರ ಹಾಗೂ ಭದ್ರಕಾಳಿ ಯಮ್ಮನವರ ಕಲ್ಯಾಣೋತ್ಸವವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಭಾನುವಾರ ಮದ್ಯಾಹ್ನ ೨ ಗಂಟೆಗೆ ಸರಿಯಾಗಿ ವಿರಕ್ತ ಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಲಿಂಗದ ವೀರರ ಕುಣಿತ, ಧ್ವಜ ಕುಣಿತದೊಂದಿಗೆ ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವವು ವೈಭವ ಯುತವಾಗಿ ಅಪಾರ ಭಕ್ತರ ಸಮಕ್ಷಮದಲ್ಲಿ ನೆರವೇರಿತು. ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಪಾನಕ, ಫಲಹಾರ, ಮಜ್ಜಿಗೆ ವಿತರಿಸಿದರೆ, ದೇವಸ್ಥಾನ ಆಡಳಿತ ಮಂಡಳಿಯಿAದ ಬಂದAತ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪ ಡಿಸಲಾಗಿತ್ತು. ಶ್ರೀ ಬಸವೇಶ್ವರ ಯುವಕ ಸಂಘ, ಶ್ರೀ ವೀರಶೈವ ಸಮಾಜ ಹಾಗೂ ಶ್ರೀ ಮಹಿಳಾ ಸಮಾಜ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಜನಪ್ರ ತಿನಿಧಿಗಳು ಸೇರಿದಂತೆ…

Read More

ತುಮಕೂರು: ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕಾದರೆ ಪ್ರಜೆಗಳೆಲ್ಲ ರಾಮನಂತಾಗಬೇಕು ಹಾಗೂ ರಾಮನ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಅಭಿಪ್ರಾಯಪಟ್ಟರು. ಅವರು ತುಮಕೂರು ತಾಲ್ಲೂಕು ಗೊಲ್ಲಹಳ್ಳಿಯಲ್ಲಿ ಗುರುವಂದನಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಶ್ರೀಕೃಷ್ಣಾನುಗ್ರಹ ನಿಲಯವನ್ನು ಫಲಾನುಭವಿಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಗೊಂಡು ಶತಶತಮಾನಗಳ ಕನಸು ನನಸಾಗಿದೆ. ಆದರೆ ಇನ್ನೊಂದು ಕನಸು ಹಾಗೆಯೇ ಉಳಿದಿದೆ. ಅದು ರಾಮರಾಜ್ಯದ ಕನಸು. ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕಾದರೆ ಪ್ರಜೆಗಳೆಲ್ಲ ರಾಮನಂತಾಗಬೇಕು. ರಾಮನ ಅನೇಕ ಗುಣಗಳಲ್ಲಿ ಒಂದೊAದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ರಾಮರಾಜ್ಯದ ಕನಸು ನನಸಾಗಲಿದೆ ಎಂದು ಹೇಳಿದರು. ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ರಾಮಸೇವೆ. ಅಂತಹ ಕೆಲಸವನ್ನು ಇದೀಗ ಮಾಡಲಾಗಿದ್ದು, ಬಡ ಕುಟುಂಬವೊAದಕ್ಕೆ ಮನೆಯೊಂದನ್ನು ನಿರ್ಮಿಸುವುದರ ಮೂಲಕ ರಾಮಸೇವೆ ಮಾಡಲಾಗಿದೆ. ಸಮಾಜದಲ್ಲಿ ಉಳ್ಳವರು ಅಶಕ್ತರಿಗೆ ನೆರವಾಗಬೇಕು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಆಗ ಅದು ರಾಮನ ಸೇವೆಯಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗುರುವಂದನಾ ಸಮಿತಿಯ ಜಿ.ಕೆ.ಶ್ರೀನಿವಾಸ್ ಅವರು, ಕೆಲ…

Read More

ತುರುವೇಕೆರೆ: ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಕಲಾ ಸಂಗಮ ಕ್ರಿಯೇಷನ್ಸ್ ದಂಡಿನಶಿವರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಮಾ.೨೭ರಂದು ಗೀತ ಗಾಯನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸಂಗಮ ಕ್ರಿಯೇಷನ್ಸ್ ನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಈಶ್ವರ್‌ದಲ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಕಲಾಸಂಗಮ ಕ್ರಿಯೇಷನ್ಸ್ ಟ್ರಸ್ಟ್ ಒಂದು ಕ್ರಿಯಾಶೀಲ ಸಾಂಸ್ಕೃತಿಕ ಸಂಸ್ಥೆಯಾಗಿದ್ದು ಹಲವಾರು ರಂಗ ಪ್ರಯೋಗಗಳನ್ನು ಹಮ್ಮಿಕೊಳ್ಳುವ ಮೂಲಕ ನಾಡು, ನುಡಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವAತಹ ಕಾರ್ಯ ಚಟುವಟಿಕೆಯನ್ನು ಹೊಂದಿದೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹುಟ್ಟೂರು ದಂಡಿನಶಿವರದಲ್ಲಿ ಸಾಂಸ್ಕೃತಿಕ ಕ್ಷೇತ್ರ ಮಾಡುವ ನಿಟ್ಟಿನಲ್ಲಿ ಕಲಾ ಸಂಗಮ ಸಂಸ್ಥೆ ಸ್ಥಾಪಿಸಿ ಪ್ರತಿ ವರ್ಷ ರಂಗ ತರಭೇತಿ, ಕನ್ನಡ ಗೀತೆಗಳ ಗಾಯನೋತ್ಸವ, ವಿಶ್ವರಂಗಭೂಮಿ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವಗಳನ್ನು ರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ. ಆ…

Read More

ತುಮಕೂರು: ಮನುಷ್ಯನ ಸಾಧನೆ, ಆತನ ಸಮಾಜ ಸೇವೆಗಳು ಆತ ಸತ್ತ ಮೇಲೆ ಜನ ಕೊಂಡಾ ಡುವಂತಿರಬೇಕು. ಇದಕ್ಕೆ ತಾಜಾ ಉದಾಹರಣೆ ಎಂದರೆ ಚಲನಚಿತ್ರ ನಟರು, ಸಮಾಜ ಸೇವ ಕರು ಆದ ಡಾ.ಪುನಿತ್ ರಾಜ್‌ಕುಮಾರ್ ಎಂದು ತುಮಕೂರು ನಗರ ಶಾಸಕ ಜಿ.ಬಿ. ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಎಸ್.ಎಸ್.ಪುರಂನ ೬ನೇ ಕ್ರಾಸ್ ನಲ್ಲಿರುವ ಮಯೂರು ಯುವ ವೇದಿಕೆ ವತಿ ಯಿಂದ ಆಯೋಜಿಸಿದ್ದ ಡಾ.ಪುನಿತ್‌ರಾಜಕುಮಾರ್ ಅವರ ೫೦ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಪುನಿತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಬಲಗೈನಿಂದ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದು ಎಂಬ ಗಾಧೆ ಇದೆ.ಇದಕ್ಕೆ ಅನ್ವಯಿಸುವಂತೆ ಪುನಿತ್‌ರಾಜ್ ಕುಮಾರ್ ಬದುಕಿದ್ದರು.ಅವರು ಸಾಯುವವರೆಗೂ ಮಾಡಿದ ಧಾನ,ಧರ್ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.ಇಡೀ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.ಅವರ ಹಳೆಯ ಸಿನಿಮಾಗಳ ರೀ ರಿಲೀಸ್‌ನ್ನು ಲಕ್ಷಾಂತರ ಜನರು ವೀಕ್ಷಿಸುತ್ತಿರುವುದೇ ಅವರ ಜನಪ್ರಿಯತೆಗೆ ನಿರ್ದೇಶನ ಎಂದರು. ಮಯೂರ ಯುವ ವೇದಿಕೆಯ ಅಧ್ಯಕ್ಷ ಪಿ.ಸದಾಶಿವಯ್ಯ ಮಾತನಾಡಿ, ಕನ್ನಡಿಗರ ಹೃದಯದಲ್ಲಿ ಸದಾ ನೆಲೆಸಿರುವ ಡಾ.ಪುನಿತ್ ರಾಜಕುಮಾರ್…

Read More

ತುಮಕೂರು: ಪವಿತ್ರ ರಂಜಾನ್ ಪ್ರಯುಕ್ತ ವಿವಿಧ ಮುಸ್ಲೀಂ ಮುಖಂಡರು ಭಾನುವಾರ ಸಂಜೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅನ್ನ ದಾಸೋಹ ಕೇಂದ್ರ ಸಿದ್ಧಗಂಗಾ ಮಠದಲ್ಲಿ ಮುಖಂಡರು ರಂಜಾನ್ ಪ್ರಯುಕ್ತ ಕೈಗೊಂಡಿದ್ದ ಉಪವಾಸವನ್ನು ಅಂತ್ಯಗೊಳಿಸಿದರು. ಅಲ್ಲದೆ ಶ್ರೀಮಠದಲ್ಲಿ ನಡೆದ ಭಾವೈಕ್ಯತಾ ಸತ್ಕಾರ ಕೂಟದಲ್ಲಿ ಭಾಗವಹಿಸಿ ಫಲಾಹಾರ ಸೇವಿಸಿದರು. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹ್ರೂಜ್ ಖಾನ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್, ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಹಾಗೂ ಇತರೆ ಮುಖಂಡರು ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದು ಸಂಜೆ ಮಠದಲ್ಲಿ ನಡೆದ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ಭಾರತ ಎಲ್ಲಾ ಧರ್ಮಗಳಿಗೂ ಆಶ್ರಯ ನೀಡಿದೆ. ಇನ್ಯಾವ ದೇಶಗಳಲ್ಲೂ ಭಾರತದಷ್ಟು ಧರ್ಮಗಳು ಇಲ್ಲ. ಎಲ್ಲಾ ಧರ್ಮಗಳ ಸಾರ ಒಂದೇ, ಅದು ಶಾಂತಿ ಮತ್ತು ಪ್ರೀತಿ. ಎಲ್ಲಾ ಧರ್ಮದವರು ಶಾಂತಿ, ಸಹಬಾಳ್ವೆಯಿಂದ ಬಾಳಬೇಕು ಎಂಬುದು ಎಲ್ಲಾ ಧರ್ಮಗಳ ಆಶಯ. ಭಾರತ…

Read More