ತುಮಕೂರು: ಜಿಲ್ಲೆಯ ಶಿರಾ ನಗರದ ಕಲ್ಲುಕೋಟೆಯ ಸ್ಲಂ ಬೋರ್ಡ್ ಹಾಗೂ ಆಶ್ರಯ ಬಡಾವಣೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿAದ ಸರ್ವೆ ನಂಬರ್ ೧೦೩/೨Pಯ ೮ ಎಕರೆ ಜಾಗದಲ್ಲಿ ಉ೨ ಮಾದರಿಯ ೧೦೦೮ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಈ ಪೈಕಿ ೨೫೨ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು. ಆಶ್ರಯ ಬಡಾವಣೆಯಲ್ಲಿ ಸುಮಾರು ೪೦೦೦ ನಿವೇಶನಗಳ ಅಭಿವೃದ್ಧಿ ಕಾರ್ಯ ಪ್ರಗತಿ ಯಲ್ಲಿದ್ದು, ಶಿರಾ ನಗರದ ಕಲ್ಲುಕೋಟೆಯ ಸರ್ವೆ ನಂಬರ್ ೧೦೦ರ ೨೦ ಎಕರೆ ಜಾಗದಲ್ಲಿ ನಿವೇಶನಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳ ಲಾಗಿದೆ ಎಂದು ತಿಳಿಸಿದರಲ್ಲದೆ, ಶಿರಾ ತಾಲೂ ಕಿನ ಎಮ್ಮೇರಹಳ್ಳಿಯಲ್ಲಿ ೯೦ ಎಕರೆ ಜಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿರಾ ತಾಲೂಕಿನ ತಹ ಶೀಲ್ದಾರ್ ರೇಷ್ಮ ಹಾಗೂ ನಗರ ಸಭೆ ಆಯುಕ್ತ ರುದ್ರೇಶ್,…
Author: News Desk Benkiyabale
ಪಾವಗಡ: ಶುಕ್ರವಾರ ನಗರದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ನಿಕ್ಷಯ ಮಿತ್ರ ಯೋಜನೆಯಡಿಯಲ್ಲಿ ಪಾವಗಡ ತಾಲ್ಲೂಕಿನಲ್ಲಿ ಹಾಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳಿಗೆ ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ದವಸ ಧಾನ್ಯದ ಕಿಟ್ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ರವರ ಒಂದು ಪ್ರೋಟೀನ್ ಪೌಡರ್ ವಿತರಣೆ ಮಾಡಲಾಯಿತು. ದಿನಾಂಕ: ೭-೧೨-೨೦೨೪ ರಿಂದ ೨೪-೩-೨೦೨೫ರ ವಿಶ್ವ ಕ್ಷಯರೋಗ ದಿನಾಚರಣೆವರೆಗೆ “ನೂರು ದಿನದ ಕ್ಷಯರೋಗ ಜನ ಜಾಗೃತಿ ಹಾಗೂ ತಪಾಸಣೆ ಯೋಜನೆ” ಕಾರ್ಯಕ್ರಮವನ್ನು ಈಗಾಗಲೇ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾವಗಡ ತಾಲ್ಲೂಕಿನ ಕ್ಷಯರೋಗ ನಿಯಂತ್ರಣ ಘಟಕದ ಕೇಂದ್ರ ಸ್ಥಾನವಾದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಸದರಿ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಸ್ವಾಮಿ ಜಪಾನಂದಜೀ ರವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಎ.ಎಸ್.ಎಲ್.ಬಾಬು ರವರು ಆಗಮಿಸಿದ್ದರು. ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಕ್ಷಯರೋಗ ತಜ್ಞರಾದ…
ತುಮಕೂರು: ಮಾದಕ ದ್ರವ್ಯ ವ್ಯಸನಕ್ಕೆ ವಿದ್ಯಾರ್ಥಿಗಳೇ ಹೆಚ್ಚು ದಾಸರಾಗುತ್ತಿರುವುದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆತಂಕ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಬಾಲಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಡಾ: ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಆಯೋಜಿಸಲಾಗಿದ್ದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹವಾಸದಿಂದ ಕಾಲೇಜು ವಿದ್ಯಾರ್ಥಿಗಳು ಮದ್ಯ ಹಾಗೂ ಮಾದಕ ದ್ರವ್ಯಗಳ ಚಟಕ್ಕೆ ಮಾರುಹೋಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೆ ವೈಯಕ್ತಿಕ ಬದುಕೂ ಸಹ ಹಾಳಾಗುತ್ತದೆ. ಒಮ್ಮೆ ಮದ್ಯ ಹಾಗೂ ಮಾದಕ ಸೇವನೆಯ ಚಟವನ್ನು ಅಂಟಿಸಿಕೊAಡರೆ ಅದರಿಂದ ಹೊರ ಬರುವುದು…
ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ಕೇಂದ್ರ(ರಿ) ತುಮಕೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕರೆದು ಆಡಿಸುವುದರ ಜೊತೆ, ಕಲಿಸಿ, ಕಲಿತು ಆಡೋಣ ಎಂಬ ಧ್ಯೇಯ ವಾಕ್ಯದೊಂದಿಗೆ “ವಿಶ್ವ ರಂಗಭೂಮಿ ದಿನಾಚರಣೆಯ-೨೦೨೫”ರ ಅಂಗವಾಗಿ ಮಾರ್ಚ್ ೨೨ ರಿಂದ ೨೬ ರವರೆಗೆ ೫ ದಿನಗಳ ಯುಗಾದಿ ನಾಟಕೋತ್ಸವ-೨೦೨೫ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮಕೂರು ಇವರು ಹಮ್ಮಿಕೊಂಡಿರುವ ಯುಗಾದಿ ನಾಟಕೋತ್ಸವ ಮಾರ್ಚ್ ೨೨ ರಿಂದ ೨೬ರವರೆಗೆ ಪ್ರತಿ ದಿನ ಸಂಜೆ ೬:೩೦ ಗಂಟೆಗೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯಲಿದೆ.ಯುಗಾಧಿ ರಂಗೋತ್ಸವದಲ್ಲಿ ಜಾನಪದ ಕಲೆ, ರಂಗಸAಗೀತ, ಭರತನಾಟ್ಯ, ಪೌರಾಣಿಕ, ಸಾಮಾಜಿಕ ನಾಟಕಗಳು, ತತ್ವಪದ ಗಾಯನ, ಪರಿಸರ ಗೀತೆಗಳು, ಯಕ್ಷಗಾನ ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಥಳೀಯ ಮತ್ತು ನಾಡಿನ ವಿವಿಧ ಕಲಾ ತಂಡಗಳೊAದಿಗೆ ಏರ್ಪಡಿಸಲಾಗಿದೆ. ಮಾರ್ಚ್ ೨೨ ರ ಶನಿವಾರ ಸಂಜೆ ೬:೩೦ ಗಂಟೆಗೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ “ವಿಶ್ವ ರಂಗಭೂಮಿ ದಿನಾಚರಣೆಯ-೨೦೨೫”ರ…
ತುಮಕೂರುಃ ಆಧಾರ್ ಕಾರ್ಡ್ನೊಂದಿಗೆ ಎಪಿಕ್(ಇPIಅ) ಸಂಖ್ಯೆಯನ್ನು ಕೂಡಲೇ ಜೋಡಣೆ(ಐiಟಿಞ) ಮಾಡಲು ಕ್ರಮ ವಹಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ.ಮಂಗಳವಾರ ನವದೆಹಲಿಯ ನಿರ್ವಾಚನ ಸದನದಲ್ಲಿ ಚುನಾವಣಾ ಆಯುಕ್ತರಾದ ಡಾ: ಸುಖಬೀರ್ ಸಿಂಗ್ ಸಂಧು ಹಾಗೂ ಡಾ: ವಿವೇಕ್ ಜೋಶಿ, ಕೇಂದ್ರ ಗೃಹ ಕಾರ್ಯದರ್ಶಿ, ಶಾಸಕಾಂಗ ಇಲಾಖೆ ಕಾರ್ಯದರ್ಶಿ, ಯುಐಡಿಎಐ ಮುಖ್ಯ ಕಾರ್ಯ ನಿರ್ವಣಾಧಿಕಾರಿ, ಇಸಿಐನ ತಾಂತ್ರಿಕ ತಜ್ಞರೊಂದಿಗೆ ಸಭೆ ನಡೆಸಿ ಚರ್ಚಿಸಿದ ಅವರು, ಚುನಾವಣಾ ಆಯೋಗವು ಆರ್ಟಿಕಲ್ ೩೨೬, ಆರ್‌ಪಿ ಆಕ್ಟ್, ೧೯೫೦ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಕ್ರಮ ಕೈಗೊಳ್ಳಲಿದ್ದು, ತಜ್ಞರ ನಡುವಿನ ತಾಂತ್ರಿಕ ಸಮಾಲೋಚನೆಗಳನ್ನು ಶೀಘ್ರದಲ್ಲೇ ಪ್ರಾರಂಭವಾಗುವುದು ಎಂದು ತಿಳಿಸಿದ್ದಾರೆ. ಭಾರತದ ಸಂವಿಧಾನದ ೩೨೬ನೇ ವಿಧಿಯ ಪ್ರಕಾರ ಮತದಾನದ ಹಕ್ಕನ್ನು ಭಾರತದ ನಾಗರಿಕರಿಗೆ ಮಾತ್ರ ನೀಡಲಾಗುವುದು, ಆಧಾರ್ ಕಾರ್ಡ್ ವ್ಯಕ್ತಿಯ ಗುರುತನ್ನು ಮಾತ್ರ ಸ್ಥಾಪಿಸುತ್ತದೆಯಾದ್ದರಿಂದ ಇPIಅ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದನ್ನು ಸಂವಿಧಾನದ ೩೨೬ನೇ ವಿಧಿ, ೧೯೫೦ರ ಜನತಾ ಪ್ರಾತಿನಿಧ್ಯ…
ತುಮಕೂರು: ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಮಾರ್ಚ್ ೨೮ರಂದು ಶ್ರೀ ಅಗ್ನಿಬನ್ನಿರಾಯ ಜಯಂತಿ ಹಾಗೂ ಏಪ್ರಿಲ್ ೨ರಂದು ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ನಿಗಧಿತ ದಿನಾಂಕಗಳAದು ತಾಲ್ಲೂಕು ಮಟ್ಟದಲ್ಲಿಯೂ ಆಚರಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಯಂತಿ ದಿನದಂದು ಮಹನೀಯರ ತತ್ವಾದರ್ಶಗಳ ಕುರಿತು ಉಪನ್ಯಾಸವನ್ನು ಏರ್ಪಡಿಸಬೇಕು ಎಂದು ತಿಳಿಸಿದರಲ್ಲದೆ, ಜಯಂತಿ ಆಚರಣೆ ಕುರಿತು ಸಮುದಾಯದ ಮುಖಂಡರಿAದ ಸಲಹೆಗಳನ್ನು ಪಡೆದರು. ಸಮುದಾಯದವರ ಅಭಿಪ್ರಾಯ ಪಡೆದ ನಂತರ ಶ್ರೀ ಅಗ್ನಿಬನ್ನಿರಾಯ ಜಯಂತಿ ಕಾರ್ಯಕ್ರಮವನ್ನು ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಾಗೂ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ನಗರದ ಕನ್ನಡಭವನದಲ್ಲಿ ಏರ್ಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ, ಕನ್ನಡ ಮತ್ತು…
ತುಮಕೂರು: ಜಿಲ್ಲೆಯ ೧೧ ವಿಧಾನಸಭಾ ಕ್ಷೇತ್ರಗಳಲ್ಲಿ ೨೬೨೭ ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೂ ಮತಗಟ್ಟೆ ಮಟ್ಟದ ಏಜೆಂಟ್(ಬಿಎಲ್‌ಎ)ಗಳನ್ನು ನೇಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಮತದಾರರ ಪಟ್ಟಿ ತಯಾರಿಕೆ, ಬಿಎಲ್‌ಓಗಳ ನೇಮಕಾತಿ ಹಾಗೂ ಇತರೆ ಚುನಾವಣಾ ವಿಷಯಗಳ ಕುರಿತು ನೋಂದಾಯಿತ/ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯನ್ನು ಸದೃಢಪಡಿಸುವ ಹಾಗೂ ಯಾವುದೇ ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸುವ ಸಂಬAಧ ಈ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಚುನಾವಣೆಗಳಿಗೆ ಸಂಬAಧಿಸಿದAತೆ ಮತದಾರರ ಪಟ್ಟಿ ಹಾಗೂ ಇತರೆ ಚುನಾವಣಾ ಮಾಹಿತಿಗಳನ್ನು ಭಾರತ ಚುನಾವಣಾ ಆಯೋಗದ ವೆಬ್ ಸೈಟ್, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್‌ಸೈಟ್ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಕಾಲಕಾಲಕ್ಕೆ ಪ್ರಕಟಿಸಲಾಗುತ್ತಿದ್ದು, ರಾಜಕೀಯ ಪಕ್ಷಗಳು ಸದರಿ ವೆಬ್‌ಸೈಟ್‌ಗೆ ಭೇಟಿ…
ಚಿಕ್ಕನಾಯಕನಹಳ್ಳಿ: ಅಜಾದಿ ಕಾ ಅಮೃತಮಹೋತ್ಸವದ ಅಂಗವಾಗಿ ಕರುಣಾ ಕಾರ್ಯಕ್ರಮ ಹಾಗೂ ಪಶು ಆರೋಗ್ಯ ಶಿಬಿರವನ್ನು ತಾಲ್ಲೂಕಿನ ಎಚ್.ಎಂ. ಕಾವಲು ಗ್ರಾಮದಲ್ಲಿ ನಡೆಸಲಾಯಿತು. ತಾಲ್ಲೂಕಿನ ಹಂದನಕೆರೆ ಹೋಬಳಿ ಎಚ್.ಎಂ. ಕಾವಲು ಗ್ರಾಮದಲ್ಲಿ ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆಯಡಿ ನಡೆದ ಪಶು ಆರೋಗ್ಯ ಶಿಬಿರದಲ್ಲಿ ಬೆಳಿಗ್ಗೆ ಡಾ. ಪ್ರಮೋದ್‌ಕುಮಾರ್ ತಂಡದಿAದ ೧೦ ಬರಡುರಾಸುಗಳ ತಪಾಸಣೆ, ಚಿಕಿತ್ಸೆ ಹಾಗೂ ಗರ್ಭ ಪರೀಕ್ಷೆ ನಡೆಸಿ ಇವುಗಳಲ್ಲಿ ನಾಲ್ಕು ರಾಸುಗಳ ಗರ್ಭದೋಶ ಪತ್ತೆಹಚ್ಚಿ ಚಿಕಿತ್ಸೆ ನೀಡಲಾಯಿತು. ೨೦ ರಾಸುಗಳಿಗೆ ವಿವಿಧ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ನೀಡಿ, ೫೦೦ ಕುರಿ ಮೇಕೆಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಲಾಯಿತು. ೭೫ ಮಿಶ್ರತಳಿ ಹಸುಗಳಿಗೆ ತಲಾ ಒಂದು ಕೇಜಿ ಲವಣ,ಖನಿಜ ಹಾಗೂ ಜೀವಸತ್ವಯುಕ್ತ ಮಿಶ್ರಣವನ್ನು ನೀಡಲಾ ಯಿತು. ೩೦ ಕರುಗಳಿಗೆ ಜಂತುನಾಶಕ ಔಷಧಿಕುಡಿಸಿ ಆರೋಗ್ಯವರ್ಧಕ ಚುಚ್ಚುಮದ್ದು ನೀಡಲಾಯಿತು. ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೆ.ಮಾ. ನಾಗಭೂಷಣ್‌ರವರು ರೈತರ ಸೆಭೆನಡೆಸಿ ಮಾತನಾಡಿ, ಪಶುಪಾಲನೆಯನ್ನು ಲಾಭದಾಯಿಕಗೊಳಿಸಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ವೈಜ್ಞಾನಿಕ ಹಾಗೂ…
ತುಮಕೂರು: ಎಸ್‌ಎಸ್‌ಎಲ್‌ಸಿ ವರೆಗೂ ಹೆಣ್ಣು ಮಕ್ಕಳೇ ಮುಂದೆ ಇರುತ್ತಾರೆ. ಆಮೇಲೆ ಅವರು ಎಲ್ಲಿ ಹೋಗುತ್ತಾರೋ ತಿಳಿಯುವುದಿಲ್ಲ. ಹೀಗಾಗಿ ಮಹಿಳೆ ಶಿಕ್ಷಣದಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಲೇಖಕಿ ದು.ಸರಸ್ವತಿ ಹೇಳಿದರು. ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ಮಾರ್ಚ್ ೨೦ರಂದು ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳು ಓದಿಯೇ ಇಲ್ಲ ಅಂದರೆ ಉದ್ಯೋಗ ಎಲ್ಲಿಯದು? ಎಲ್ಲ ಹೆಣ್ಣು ಮಕ್ಕಳು ಶಾಲೆ ಬಿಟ್ಟು ಕೂಲಿನಾಲಿ ಮಾಡಿಕೊಂಡಿರುವುದನ್ನು ನಾವು ಕಾಣುತ್ತೇವೆ. ಹೆಣ್ಣು ಮಕ್ಕಳಿಗೆ ಆರೋಗ್ಯವೇ ಸರಿ ಇರುವುದಿಲ್ಲ. ತಾಯ್ತನದ ಮರಣ ಸಂಖ್ಯೆ ಹೆಚ್ಚಾಗಿದೆ. ಶಿಶು ಹತ್ಯೆ ಜಾಸ್ತಿ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹೆಣ್ಣು ಮಕ್ಕಳ ಮೇಲೆ ಹಿಂಸೆ, ದೌರ್ಜನ್ಯ ಎಥೇಚ್ಚವಾಗಿ ನಡೆಯುತ್ತಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮಹಿಳೆಯರ ಮೇಲಿನ ಹಿಂಸೆ, ದೌರ್ಜನ್ಯದಲ್ಲಿ ಮೇಲಿನ ಸ್ಥಾನದಲ್ಲಿದ್ದೇವೆ. ೭೫ ರಿಂದ ೮೫ರವರೆಗೂ ಮಹಿಳಾ ದಶಕ ಅಂತ ಮಾಡಿದರು. ಹೀಗಾಗಿ ಸರ್ಕಾರ ಪಂಚವಾರ್ಷಿಕ ಯೋಜನೆಯಲ್ಲಿ…
ಹುಳಿಯಾರು: ಹಂದನಕೆರೆ ಹೋಬಳಿ ಹೆಚ್.ಎಂ. ಕಾವಲು ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಚಿಕ್ಕನಾಯಕನಹಳ್ಳಿ ವತಿಯಿಂದ ಕರುಣಾ ಕಾರ್ಯಕ್ರಮ ಮತ್ತು ಪಶುಆರೋಗ್ಯ ಶಿಬಿರವನ್ನು ಬುಧವಾರ ಏರ್ಪಡಿಸಲಾಗಿತ್ತು. ಹಂದನಕೆರೆ ಪಶುಆಸ್ಪತ್ರೆಯ ಪಶುವೈ ದ್ಯಾಧಿಕಾರಿ ಡಾ.ಪ್ರಮೋದ್‌ಕುಮಾರ್ ರವರು ೧೦ ಬರಡು ರಾಸುಗಳಿಗೆ ಚಿಕಿತ್ಸೆ ಮತ್ತು ೧೦ ಗರ್ಭ ಪರೀಕ್ಷೆಗಳನ್ನು ನಡೆಸಿದರು. ೪ ವಿವಿಧ ಗರ್ಭಕೋಶ ತೊಂದರೆ ಇರುವ ರಾಸುಗಳಿಗೆ ಚಿಕಿತ್ಸೆ ೨೦ ರಾಸುಗಳಿಗೆ ವಿವಿಧ ಸಾಮಾನ್ಯ ತೊಂದರೆಗಳಿಗೆ ಚಿಕಿತ್ಸೆಯನ್ನು ನೀಡಿದರು. ೫೦೦ ಕುರಿ/ಮೇಕೆಗಳಿಗೆ ಜಂತುನಾಶಕ ಔಷಧಿಯನ್ನು ವಿತರಿಸಲಾಯಿತು. ಶಿಬಿರಕ್ಕೆ ಬಂದಿದ್ದ ಎಲ್ಲಾ ೧೨೫ ರಾಸುಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಲಾಯಿತು. ೭೫ ಮಿಶ್ರತಳಿ ಹಸುಗಳಿಗೆ ಒಂದು ಕೆಜಿಯ ಲವಣ/ಖನಿಜ/ಜೀವಸತ್ವಯುಕ್ತ ಟಾನಿಕ್ ಮಿಶ್ರಣವನ್ನು ನೀಡಲಾಯಿತು. ೩೦ ಕರುಗಳಿಗೆ ಜಂತು ನಾಶಕ ಔಷಧಿ ಕುಡಿಸಿ ಬೆಳವಣಿಗೆಗೆ ಪೂರಕವಾದ ಮತ್ತು ಆರೋಗ್ಯ ವರ್ಧಕ ಚುಚ್ಚು ಮದ್ದು ಹಾಗೂ ಟಾನಿಕ್‌ಗಳನ್ನು ನೀಡಲಾಯಿತು. ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರೆ.ವi.ನಾಗಭೂಷಣರವರು ನೆರೆದಿದ್ದ ರೈತರನ್ನು ಉದ್ದೇಶಿಸಿ ಪಶುಪಾಲನ ಚಟುವಟಿಕೆಗಳ ಕುರಿತು ಮಾತನಾಡಿದರು. ಕರುಗಳ ಸಾಕಾಣಿಕೆ…