ಪಾವಗಡ ಸೋಲಾರ್ ಪಾರ್ಕ್ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಗೆ ಆಗಮಿಸಿದ್ದ ತುಮಕೂರು ಜಿಲ್ಲಾಧಿಕಾರಿಗಳಾದ ಕೆ ಶ್ರೀನಿವಾಸ್ ರವರಿಗೆ ಸಿ ಎಸ್ ಆರ್ ಫಂಡ್ ದುರುಪಯೋಗಿರುವ ಬಗ್ಗೆ ಬಳಸಮುದ್ರ ಗ್ರಾಮದ ಗ್ರಾಮಸ್ಥರಿಂದ ಮನವಿ ಪತ್ರ ಕೊಡಲಾಯಿತು. ತಾಲೂಕಿನ ಗಡಿ ಗ್ರಾಮ ಪಂಚಾಯತಿಗಳಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ವಿಶ್ವವಿಖ್ಯಾತ ಸೋಲಾರ್ ಪಾರ್ಕ್ ಅನ್ನು ನಿರ್ಮಿಸಿ ವಳ್ಳೂರು ಮತ್ತು ತಿರುಮಣಿ ಗ್ರಾಮ ಪಂಚಾಯತಿ ವ್ಯಾಪ್ತಿ ಬರುವ ಎಲ್ಲಾ ಹಳ್ಳಿಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಈವರೆಗೂ ಅಭಿವೃದ್ಧಿಗೆ ಗೋಚರವಾಗದ ಬಳಸಮುದ್ರ ಗ್ರಾಮವು ಅಧಿಕಾರಿಗಳ ನಿರ್ಲಕ್ಷಕ್ಕೆ ಗುರಿಯಾಗಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸೌರಶಕ್ತಿಗೆ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳಾದ ಕೆ ಶ್ರೀನಿವಾಸ್ ರವರಿಗೆ ಗ್ರಾಮದ ಗ್ರಾಮಸ್ಥರು ವೆಂಕಟಮ್ಮನಹಳ್ಳಿ ನಾನಿ ನೇತೃತ್ವದಲ್ಲಿ ಮನವಿ ಪತ್ರ ಕೊಡಲಾಯಿತು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆಂದು ಭಾವಿಸಿ, ಪಾರ್ಕಿನ ಅಂತರ್ಭಾಗದ ಗ್ರಾಮವಾದ ಬಳಸಮುದ್ರವು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿ ಎಸ್ ಆರ್ ) ನಿಧಿಯಿಂದ ಸುತ್ತಮುತ್ತಲ…
Author: News Desk Benkiyabale
ತುಮಕೂರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಅಹವಾಲುಗಳನ್ನು ಇತ್ಯರ್ಥ ಪಡಿಸುವ ಉದ್ದೇಶದಿಂದ ಪ್ರಪ್ರಥಮ ಬಾರಿಗೆ ಐ.ಡಿ. ಹಳ್ಳಿ ಹೋಬಳಿಯಲ್ಲಿ ಮೊದಲ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ಜಿಲ್ಲೆಯ ಮಧುಗಿರಿ ತಾಲ್ಲೂಕು ಇಟಕ ದಿಬ್ಬನಹಳ್ಳಿ (ಐ.ಡಿ.ಹಳ್ಳಿ) ಹೋಬಳಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆ, ಆರ್.ಡಿ.ಪಿ.ಆರ್ ಇಲಾಖೆಗೆ ಸಂಬAಧಿಸಿದAತೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಎಲ್ಲಾ ಇಲಾಖೆಗಳಿಗೆ ಸಂಬAಧಿಸಿದAತೆ ಸಾರ್ವಜನಿಕರು ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಿವೇಶನ ಇರುವರಿಗೆ ಗೃಹ ನಿರ್ಮಾಣ ಸೌಲಭ್ಯ ಹಾಗೂ ನಿವೇಶನ ಇಲ್ಲದವರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕು, ಆಗಸ್ಟ್ ೩೦ರಂದು ಎಲ್ಲಾ ಅರ್ಹ ಮಹಿಳಾ ಫಲಾನುಭವಿಗಳಿಗೆ ಗೃಹಲಕ್ಷಿö್ಮÃ ಯೋಜನೆಯ ಹಣ ಜಮಾ ಆಗಲಿದೆ, ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ಸೌಲಭ್ಯಗಳನ್ನು ತಲುಪುಸುವುದೇ ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಿ…
ತುಮಕೂರು ಹಳ್ಳಿಗಳು ಹಾಗೂ ಗ್ರಾಮೀಣ ಜನರ ರ‍್ವತೋಮುಖ ಅಭಿವೃದ್ಧಿಗಾಗಿಯೇ ಈ ರ‍್ಕಾರದ ಯೋಜನೆಗಳು ಮೀಸಲು. ಅವುಗಳ ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಿ ಎಂದು ಐಇಸಿ ಸಂಯೋಜಕರಾದ ರಮ್ಯ ಕೆ.ಎಸ್ ಸರ‍್ವಜನಿಕರಿಗೆ ಮನವಿ ಮಾಡಿದರು. ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರಾಮನಹಳ್ಳಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ “ಮಾಹಿತಿ ಶಿಕ್ಷಣ ಸಂವಹನ” ವಿಶೇಷ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಮಹತ್ತರ ಕೆಲಸವನ್ನು ನಮ್ಮ ಯೋಜನೆ ಮಾಡುತ್ತಿದೆ. ಪ್ರತಿಯೊಂದು ಕುಟುಂಬಕ್ಕೆ ಒಂದು ರ‍್ಥಿಕ ರ‍್ಷದಲ್ಲಿ ೧೦೦ ದಿನ ಕೂಲಿ ಕೆಲಸವನ್ನು ನೀಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತಿದೆ. ಈ ಮೊದಲು ೩೦೯ರೂ ಇದ್ದ ಕೂಲಿ ದರವನ್ನು ಪ್ರಸಕ್ತ ಸಾಲಿನ ಏಪ್ರೀಲ್ ೧, ೨೦೨೩ ರಿಂದ ನಿಂದ ೩೧೬ ರೂ ಗಳಿಗೆ ಕೂಲಿ ದರವನ್ನು ಹೆಚ್ಚಿಸಲಾಗಿದೆ. ಸಮುದಾಯ ಕಾಮಗಾರಿಗಳಲ್ಲಿ ಕೆಲಸ ಮಾಡುದರ ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ *ಬಚ್ಚಲು ಇಂಗು…
ಪಾವಗಡ : ಪ್ರತಿದಿನವೂ ಜೀವದ ಹಂಗು ತೊರೆದು ಜನರಿಗೆ ಬೆಳಕನ್ನು ನೀಡಲು ಪ್ರಯತ್ನ ಪಡುತ್ತಿರುತ್ತೀರುವ ಬೆಸ್ಕಾಂ ಸಿಬ್ಬಂದಿಗಳ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಶಾಸಕರಾದ ಎಚ್ ವಿ ವೆಂಕಟೇಶ್ ತಿಳಿಸಿದರು. ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ರಾಜ್ಯ ರ‍್ಕಾರದ ಪಂಚ ಯೋಜನೆಗಳಲ್ಲಿ ಒಂದಾದ ಗೃಹಜೋತಿ ಯೋಜನೆಯ ‘ಉಚಿತ ಬೆಳಕು ಸುಸ್ತಿರ ಬದುಕು’ ಎಂಬ ಯೋಜನೆಗೆ ಚಾಲನೆ ನೀಡಿ ನಂತರ ಅವರು ಮಾತನಾಡುತ್ತಾ, ರಾಜ್ಯ ರ‍್ಕಾರವು ಮತದಾರರಿಗೆ ನೀಡಿದಂತಹ ಐದು ಮಹತ್ವಕಾಂಕ್ಷಿ ಯೋಜನೆಗಳನ್ನು ನಮ್ಮ ರ‍್ಕಾರವು ಒಂದೊಂದೇ ಈಡೇರಿಸುತ್ತಾ ಬರುತ್ತಿದೆ. ರಾಜಸ್ಥಾನ ದಲ್ಲಿ ೩೫೦೦ ಮೆಗಾ ವ್ಯಾಟ್ಸ್ ವಿದ್ಯುತ್ ಉತ್ಪತ್ತಿ ಆಗುತ್ತಿತ್ತು ಇದು ಏಷ್ಯಾದಲ್ಲಿಯೇ ಒಂದನೇ ಸ್ಥಾನದಲ್ಲಿದೆ. ಈಗ ನಮ್ಮ ತಿರುಮಣಿ ಸೋಲಾರ್ ಪರ‍್ಕ್ ಎರಡನೇ ಸ್ಥಾನದಲ್ಲಿದೆ. ಮತ್ತು ನಾನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇಂಧನ ಸಚಿವ ಜರ‍್ಜ್ ನೊಂದಿಗೆ ರ‍್ಚಿಸಿ ನಾನು ಗೆದ್ದ ಮೂರು ತಿಂಗಳ ಒಳಗೆ ಡಿಕೆ ಶಿವಕುಮಾರ್ ಮತ್ತು ಜರ‍್ಜ್ ರವರನ್ನು…
ತುಮಕೂರು ನಂಜುAಡಸ್ವಾಮಿ ಅವರ ರೈತಪರ ಚಳವಳಿ, ಕೊಡುಗೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ರಾಷ್ಟçವ್ಯಾಪಿ ಹೆಸರು ಪಡೆದಿತ್ತು ಎಂದು ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಮುಜಾ಼ಫರ್ ಅಸ್ಸಾದಿ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ. ಡಿ. ನಂಜುAಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಮಂಗಳವಾರ ಆಯೋಜಿಸಿದ್ದ ‘ನಂಜುAಡ ಸ್ವಾಮಿಯವರ ದೃಷ್ಟಿಯಲ್ಲಿ ಕರ್ನಾಟಕದಲ್ಲಿ ರೈತ ಚಳುವಳಿ ಮತ್ತು ಅಸ್ಮಿತೆ ರಾಜಕಾರಣ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ನಾಡಿನ ರೈತಪರ ಚಳವಳಿಗಳು ೧೯೮೦ರ ಮುನ್ನ ರಾಷ್ಟçವ್ಯಾಪಿಯಾಗಿರಲಿಲ್ಲ. ನಂಜುAಡಸ್ವಾಮಿ ಅವರಿಗಿದ್ದ ರೈತಪರ ಕಾಳಜಿ, ದೂರದೃಷ್ಟಿ ರಾಜಕೀಯ ಅಸ್ಮಿತೆ ಪಡೆಯದೆಯೇ, ಆಂತರಿಕವಾಗಿ ವಿಶ್ಲೇಷಣೆಗೊಳಪಟ್ಟು ಬಂಡವಾಳಶಾಹಿ, ಕೈಗಾರಿಕೋದ್ಯಮ, ಜಾಗತೀಕರಣದ ವಿರುದ್ಧ ಕರುನಾಡಿನ ಒಳಗೂ ಹಾಗೂ ಹೊರಗೂ ರಾಷ್ಟçವ್ಯಾಪಿ ಹೋರಾಟವಾಯಿತು ಎಂದು ತಿಳಿಸಿದರು. ರೈತನ ಏಳ್ಗೆಗಾಗಿ ಸಣ್ಣ ಇಳುವರಿದಾರರ ಸಂಘಟನೆಯನ್ನು ಜಾರಿಗೆ ತರುವುದರಿಂದ ಹಿಡಿದು, ಜಮೀನುದಾರರ ಹಿಡಿತದಿಂದ ರೈತರನ್ನು ಬಿಡಿಸಿ, ಸ್ವಾಭಿಮಾನದ ಬದುಕು ರೂಪಿಸಿಕೊಡುವ ಬೌದ್ಧಿಕ…
ತುಮಕೂರು ಪ್ರತಿ ಹೋಬಳಿಯ ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ಅಧಿಕಾರಿಗಳು ನಡೆಸಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ಒದಗಿಸಬೇಕೆಂದು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿAದು ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ ಐ.ಡಿ ಹಳ್ಳಿಯಲ್ಲಿ ಆಗಸ್ಟ್ ೨೩ರಂದು ಮತ್ತು ದೊಡ್ಡೆರಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ಆಗಸ್ಟ್ ೩೦ರಂದು ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸದರಿ ಸಭೆಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಬೇಕೆಂದು ಸೂಚಿಸಿದರು. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳಬೇಕು. ಇದಕ್ಕಾಗಿ ಅಗತ್ಯ ನೆರವನ್ನು ಒದಗಿಸಲಾಗುವುದು ಎಂದ ಅವರು, ತಾಲೂಕಿನಲ್ಲಿ ಸರ್ಕಾರಿ ಜಮೀನು ಒತ್ತುವರಿಯನ್ನು ತೆರವುಗೊಳಿಸಲು ಕ್ರಮವಹಿಸಬೇಕು. ಮಾಯಗೊಂಡನಹಳ್ಳಿ ಗ್ರಾಮದಲ್ಲಿ ಮಕ್ಕಳು ಶಾಲೆಗೆ ಹೋಗಲು ದಾರಿ ಬಿಡದೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದು, ಇದನ್ನು ಕೂಡಲೇ ಬಗೆಹರಿಸಬೇಕೆಂದು ತಿಳಿಸಿದರು. ತಾಲ್ಲೂಕು ವ್ಯಾಪ್ತಿಯ ರೈಲ್ವೆ ಯೋಜನೆಗಳು,…
ತುಮಕೂರು ಇಲ್ಲಿನ ಝೆನ್ ಟೀಮ್ ವತಿಯಿಂದ ಇದೇ ತಿಂಗಳ ೧೯ ರಂದು ಶನಿವಾರ ಸಂಜೆ ೭ ಗಂಟೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಖ್ಯಾತ ನಟ ಪ್ರಕಾಶ್ ರೈ ಅವರ `ನಿರ್ದಿಗಂತ’ ಸಂಸ್ಥೆಯ ನೇತೃತ್ವದಲ್ಲಿ `ಗಾಯಗಳು’ ನಾಟಕವನ್ನು ಆಯೋಜಿಸಲಾಗಿದೆ ಎಂದು ಝೆನ್ ಟೀಮ್ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ. ಈ ನಾಟಕದ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಡಾ. ಶ್ರೀಪಾದ ಭಟ್ ಅವರದು. ಶ್ವೇತಾರಾಣಿ ಹಾಸನ ಅವರ ಸಹ ನಿರ್ದೇಶನವಿದೆ. ಪಿರಾಂಡೆಲೊ ಅವರ ವಾರ್, ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ಮಂಟೋ ಅವರ ಶರೀಫನ್, ಕೃಷ್ಣಮೂರ್ತಿ ಹನೂರು ಅವರ ಅe್ಞÁತನೊಬ್ಬನ ಆತ್ಮಕತೆ, ಬ್ರೆಕ್ಟ್, ಸಾಹಿರ್ ಲುಧಿಯಾನ್ವಿ ಸೇರಿದಂತೆ ಹಲವರ ಕಥೆ, ಕವನ, ಕಾದಂಬರಿ, ನಾಟಕ ಆಧಾರಿತ ರಂಗರೂಪವಿದು. ಪ್ರವೇಶ ದರ ೫೦ ರು. ಇದ್ದು ನಾಟಕ ಪ್ರದರ್ಶನಕ್ಕೆ ೧೦ ನಿಮಿಷಕ್ಕೆ ಮುಂಚೆ ಪ್ರೇಕ್ಷಕರು ಆಗಮಿಸಲು ಕೋರಲಾಗಿದೆ. ಟಿಕೆಟ್‌ಗಾಗಿ ೯೯೮೬೩೭೫೬೭೦ ಈ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು. ಇಡಿಯ ಜಗತ್ತು ಯುದ್ಧೋನ್ಮಾದದಿಂದ ನರಳುತ್ತಿದೆ. ರಾಜಕಾರಣಿಗಳ, ಧರ್ಮಗುರುಗಳ, ಮಾರುಕಟ್ಟೆಯ…
ತುಮಕೂರು ಗುಬ್ಬಿ ತಾಲ್ಲೂಕಿನ ಕಾರೇಕುರ್ಚಿ ಮತ್ತು ತಿಪಟೂರು ತಾಲ್ಲೂಕಿನ ದೊಣೆ ಗಂಗಾಕ್ಷೇತ್ರವು ತಿಪಟೂರು ಮತ್ತು ಗುಬ್ಬಿ ತಾಲ್ಲೂಕಿನ ಗಡಿಯಲ್ಲಿರುವ ಶ್ರೀ ಗುರುಸಿದ್ಧರಾಮೇಶ್ವರಸ್ವಾಮಿ ತಪೋವನ ಭಕ್ತಾದಿಗಳ ಪಾಲಿನ ಸುಕ್ಷೆತ್ರವಾಗಿದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಶ್ರೀ ಗುರುಸಿದ್ಧರಾಮೇಶ್ವರ ಮತ್ತು ದೊಣೆಗಂಗಾಮಾತೆಯ ಆರಾಧನೆಯನ್ನು ಮಾಡುತ್ತಾರೆ. ದಾಸೋಹಕ್ಕೆ ಹೆಸರಾಗಿರುವ ವೀರಶೈವ ಲಿಂಗಾಯತ ಸಮಾಜವು, ಶ್ರೀಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಅನ್ನದಾಸೋಹ ಹಾಗೂ ಸೂಕ್ತ ವಸತಿ ಸೌಲಭ್ಯ ಕಲ್ಪಿಸುವ ಸದುದ್ದೇಶದಿಂದ ಸುಮಾರು ೨ಕೋಟಿ ವೆಚ್ಚದಲ್ಲಿ ದೊಣೆ ಗಂಗಾಕ್ಷೇತ್ರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಲ್ಲಿಗೆ ಬರುವಂತಹ ಸಕಲ ಭಕ್ತಾದಿಗಳಿಗೆ ಅನುಕೂಲವಾಗಲೆಂದು ನಿತ್ಯ ದಾಸೋಹದ ಮಹಾಮನೆ ಮತ್ತು ವಸತಿಗೃಹದ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಆಗಸ್ಟ್ ೧೯ರ ಶನಿವಾರ ಬೆಳಿಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ತಿಪಟೂರಿನ ಶಾಸಕರಾದ ಕೆ.ಷಡಕ್ಷರಿ ಯವರು ವಹಿಸಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಯನ್ನು ಸಂಸದರಾದ ಜಿ.ಎಸ್. ಬಸವರಾಜು ಮಾಡಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ದೊಣೆಗಂಗಾ ಕ್ಷೇತ್ರ ಕಾರೇಕುರ್ಚಿ ಟ್ರಸ್ಟ್ನ ಅಧ್ಯಕ್ಷರಾದ ರಂಭಾಪುರಿ…
ಚಿಕ್ಕನಾಯಕನಹಳ್ಳಿ ಸ್ವಾತಂತ್ರ‍್ಯ ದೊರಕುವ ಸಂದರ್ಭದಲ್ಲಿ ಅನೇಕ ಮಹಾನ್ ಹೋರಾಟಗಾರರು, ಯೋಧರು ದೇಶದ ಮಣ್ಣಿಗಾಗಿ ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದಾರೆ ಎಂದು ಮಾನ್ಯ ತಹಶಿಲ್ದಾರರಾದ ನಾಗಮಣಿ ವಿ ಅವರು ತಿಳಿಸಿದರು. ಸ್ವಾತಂತ್ರ‍್ಯ ದಿನಾಚರಣೆ ಹಾಗೂ ಅಮೃತ ಮಹೋತ್ಸವ ಪ್ರಯುಕ್ತ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಸಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತ್ ಆವರಣದಲ್ಲಿ ಆಯೋಜಿಸಲಾಗಿದ್ದ ಮೇರಾ ಮಟ್ಟಿ, ಮೇರಾ ದೇಶ್ ನನ್ನ ಮಣ್ಣು, ನನ್ನ ದೇಶ ಕಾರ್ಯಕ್ರಮವನ್ನು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಿAದ ಮಣ್ಣು ಸಂಗ್ರಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಣ್ಣು ಅಮೃತಕ್ಕೆ ಸಮಾನ ಅಂತಹಾ ಮಣ್ಣನ್ನು ನಾವು ಇಂದು ಸಂಗ್ರಹಿಸಿ ದೆಹಲಿಗೆ ಕಳುಹಿಸಿಕೊಡುತ್ತಿದ್ದೇವೆ. ಇಂತಹ ಐತಿಹಾಸಿಕ ಘಟನೆಗೆ ಕಾರ್ಯಕ್ರಮ ಸಾಕ್ಷಿಯಾಗಿದೆ. ಮಣ್ಣನ್ನು ಜಿಲ್ಲಾ ಪಂಚಾಯತಿಗೆ ಕಳಿಸಿ, ಬಳಿಕ ರಾಜಧಾನಿ ಬೆಂಗಳೂರಿಗೆ ಹೋಗಲಿದೆ. ಅಲ್ಲಿಂದ ದೆಹಲಿಗೆ ಹೋಗಿ ಪ್ರಧಾನ ಮಂತ್ರಿಗಳು ಸಸಿ ನೆಟ್ಟು ಎಲ್ಲ ಮಣ್ಣನ್ನು ಆ ಗಿಡಗಳನ್ನು ಬೆಳೆಸಲು ಹಾಗೂ ವೀರ ಮರಣ ಹೊಂದಿದ…
ಪಾವಗಡ ಕೆ.ರಾಮಪುರ ಗ್ರಾಮ ಸಾಕ್ಷರತಾ ಅಂದೋಲನ ಕಾರ್ಯಕ್ರಮದಲ್ಲಿ ರಾಷ್ಟç ಮಟ್ಟದಲ್ಲಿ ಸದ್ದು ಮಾಡಿದ ಶಾಲೆಯಾಗಿದ್ದು, ನಗರ ಪ್ರದೇಶದ ಮಕ್ಕಳಿಗಿಂತ ಹಳ್ಳಿಯ ಮಕ್ಕಳಲ್ಲಿ ಪ್ರೀತಿಯೇ ಹೆಚ್ಚು ಎಂದು ಜಪಾನಂದ ಸ್ವಾಮಿಜಿ ತಿಳಿಸಿದರು. ಶುಕ್ರವಾರ ಕೆ.ರಾಮಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೂತನ ಸಮವಸ್ತç, ಬ್ಯಾಗ್, ಲೇಖನ ಸಾಮಾಗ್ರಿಗಳನ್ನ ವಿತರಿಸಿ ಮಾತನಾಡಿದ ಅವರು ಇಂದಿನ ಮಕ್ಕಳೇ ಭವಿಷ್ಯ ಭಾರತದ ಪ್ರಜೆಗಳು, ಈಧೆಶವನ್ನ ಸುಭದ್ರವಾಗಿ ಕಾಪಾಡುವ ಮಕ್ಕಳಿಗೆ ಗುಣಮಟ್ಟದ ಸಮವಸ್ತç, ಶಾಲಾ ಬ್ಯಾಗ್, ಲೇಖನ ಸಾಮಾಗ್ರಿಗಳನ್ನ ವಿತರಣೆ ಮಾಡಲಾಗುತ್ತಿದೆ ಎಂದಾ ಅವರು ದೇಶ ಉದ್ದಾರವಾಗಲೂ, ಅಭಿವೃದ್ದಿ ಕಾಣಲು ಶಿಕ್ಷಕರೇ ಮುಖ್ಯ ಕಾರಣ, ಚಂದ್ರಲೋಕಕ್ಕೆ ರಾಕೇಟ್ ಹಾರಿಸುವ ನಾವು ನಾಲ್ಕು ಗೋಡೆಗಳ ಮದ್ಯೆ ದೇಶದ ಭವಿಷ್ಯ ಬರೆಯುವ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರಿಲ್ಲದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದರು. ಶಿಕ್ಷಣ ಇಲಾಖೆಯ ಹಲವರು ನನ್ನನ್ನು ಬೇಟಿ ಮಾಡಿ ಅತಿಥಿ ಶಿಕ್ಷಕರನ್ನ ನೀಡುವಂತೆ ಕೆಳಿದ್ದಾರೆ ಮುಂದಿನ ದಿನಗಳಲ್ಲಿ ಅದನ್ನ ಕೂಡ ಬಗೆಹರಿಸುವ ಕೇಲಸ ಮಾಡೇ ತೀರುತ್ತೆನೆ, ಮದುಗಿರಿ…