ತುರುವೇಕೆರೆ: ಸಮುದಾಯ ಭವನಗಳು ಗ್ರಾಮದ ಆಸ್ತಿಯಾಗಿದ್ದು ಅದರ ಉತ್ತಮ ನಿರ್ವಹಣೆ ಗ್ರಾಮಸ್ಥರ ಹೊಣೆಗಾರಿಕೆಯಾಗಬೇಕು ಆಗ ಮಾತ್ರ ಗ್ರಾಮದಲ್ಲಿ ಅಭಿವೃದ್ಧಿಯ ಬೆಳಕು ಚೆಲ್ಲಲು ಸಾದ್ಯ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಅಭಿಪ್ರಾಯ ಪಟ್ಟರು. ತಾಲೂಕಿನ ದಬ್ಬೇಗಟ್ಟ ಹೋಬಳಿಯ ದೇವರ ಮಾವಿನಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಲಕ್ಷ್ಮಿದೇವಿ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ದಿಂದ ಮಂಜು ರಾಧ ಅನುದಾನ ಮೊತ್ತ ೨,೫೦,೦೦೦ ರೂಗಳನ್ನು ಸಮಿತಿಯರಿಗೆ ವಿತರಿಸಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮದ ಸರ್ವಾಂಗಿನ ಅಭಿವೃದ್ಧಿಗಾಗಿ ಗ್ರಾಮದಲ್ಲಿರುವ ದೇವಸ್ಥಾನಗಳ ಜೀರ್ಣೋದ್ಧಾರ, ಹಾಲು ಕಟ್ಟಡಗಳ ರಚನೆಗೆ ಪ್ರೋತ್ಸಾಹ, ಕುಡಿವ ನೀರು ಘಟಕಗಳ ಅಭಿವೃದ್ಧಿ, ಶಾಲಾ ಕಾಲೇಜುಗಳಿಗೆ ಪ್ರೋತ್ಸಾಹ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಿಗೆ ಅನುದಾನಗಳನ್ನು ನೀಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಇದರ ನಿರ್ವಹಣೆಯ ಜವಾಬ್ದಾರಿಯು ಅಷ್ಟೇ ಮುಖ್ಯ ವಾಗಿರುತ್ತದೆ. ಗ್ರಾಮಸ್ಥರೆಲ್ಲರೂ ಅದರ ಉತ್ತಮ ನಿರ್ವಹಣೆಯ ಹೊಣೆ ಹೊತ್ತರೆ ಮಾತ್ರ ಅದು ಗ್ರಾಮದ ಆಸ್ತಿ ಆಗಬಹುದೇ…
Author: News Desk Benkiyabale
ತುಮಕೂರು: ಗ್ರಾಮ ಸರಕಾರವೆಂದು ಕರೆಯುವ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಮಹಿಳಾ ಸದಸ್ಯರ ಪತಿಯರದೇ ದರ್ಬಾರು ಹೆಚ್ಚಾಗಿದ್ದು, ತಾವು ಕಳಪೆ ಕಾಮಗಾರಿ ನಡೆಸಿ,ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ(ಪಿಡಿಓ)ಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ(ರಿ) ರಾಜ್ಯಾಧ್ಯಕ್ಷ ಕೆ.ಹೆಚ್.ಶಿವಕುಮಾರ್(ಬಂಡೆಕುಮಾರ್) ಜಿ.ಪಂ.ಸಿಇಓ ಪ್ರಭು ಮತ್ತು ತಾ.ಪಂ.ಇಓ ಹರ್ಷಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲೆಯ ಹಲವು ಗ್ರಾಮಪಂ ಚಾಯಿತಿಗಳಲ್ಲಿ ಮಹಿಳಾ ಸದಸ್ಯರ ಹೆಸರಿನಲ್ಲಿ ಅವರ ಗಂಡAದಿರುವ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಲ್ಲದೆ,ಇಲ್ಲ, ಸಲ್ಲದ ಆರೋಪ ಮಾಡಿ ಅಮಾನತ್ತು ಮಾಡಿಸುವ ಬೆದರಿಕೆ ಹಾಕಿ ಕಳಪೆ ಕಾಮಗಾರಿಗಳ ಬಿಲ್ ಪಾವತಿಸಲು ಪಿಡಿ ಓಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ.ಇಂತಹ ಪ್ರಕರಣಗಳು ಆಗಿಂದಾಗ್ಗೆ ಹೆಚ್ಚುತ್ತಿವೆ. ಗ್ರಾ.ಪಂ. ಸದಸ್ಯರ ಕುಟುಂಬದವರು ಗುತ್ತಿಗೆ ಕಾಮಗಾರಿ ನಡೆಸುವಂತಿಲ್ಲ ಎಂಬ ನಿಯಮವಿದ್ದರೂ ಬೇನಾಮಿ ಹೆಸರಿನಲ್ಲಿ ಗ್ರಾಪಂ ವ್ಯಾಪ್ತಿಯ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಿ, ಅವು ಕಳಪೆ ಎಂದು ಕಂಡು ಬಂದರೂ ಬಿಲ್ ಪಾವತಿಸಲು ಒತ್ತಡ ತರಲಾಗುತ್ತಿದೆ.ಒಂದು ವೇಳೆ ಕಳಪೆ ಕಾಮಗಾರಿಗಳ ಬಗ್ಗೆ…
ತುರುವೇಕೆರೆ: ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸುತ್ತಿರುವ ರಾಗಿ ಹಣವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಟ್ಟಣದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷ ಧನಂಜಯಾರಾದ್ಯ ಮಾತನಾಡಿ ಜಿಲ್ಲೇಯಲ್ಲಿ ಎಲ್ಲಾ ರಾಗಿ ಖರೀದಿ ಕೇಂದ್ರಗಳಲ್ಲಿ ಮಾ.೩ ರಿಂದ ರಾಗಿ ಖರೀದಿಸುತ್ತಿದೆ. ಈಗಾಗಲೇ ಸಾವಿರಾರು ಕ್ವಿಂಟಾಲ್ ರಾಗಿಯನ್ನು ರೈತರಿಂದ ಖರೀದಿಸಿದ್ದು ಇದುವರೆವಿಗೂ ರಾಗಿ ಹಣವನ್ನು ರೈತರ ಖಾತೆಗೆ ಜಮಾ ಮಾಡಿರುವುದಿಲ್ಲ. ರೈತರು ಆರ್ಥಿಕವಾಗಿ ತೊಂದರಯಲ್ಲಿದ್ದು ಜೀವನ ನಿರ್ವಹಣೆಗೆ ಆ ಹಣವನ್ನೇ ಅವಲಂಬಿಸಿದ್ದಾರೆ. ಬ್ಯಾಂಕುಗಳು ಮತ್ತು ಖಾಸಗಿಯವರಿಂದ ಸಾಲ ಮಾಡಿದ್ದು ಮಾನಸಿಕವಾಗಿ ನೋವು ಅನುಭವಿಸುತ್ತಿದ್ದಾನೆ. ಆದುದರಿಂದ ರೈತರ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಆಯಾ ದಿನವೇ ಸರ್ಕಾರ ರೈತರ ಖಾತೆಗಳಿಗೆ ಹಣ ಜಮಾ ಮಾಡಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲೆಯ ತುರುವೇಕೆರೆ ಹಾಗೂ ಕೊರಟಗೆರೆ ತಾಲ್ಲೂಕುಗಳಲ್ಲಿ ಕ್ರಷರ್ ಗಣಿಗಾರಿಕೆ ನಡೆಯುತ್ತಿದ್ದು ಇದರ ಬಗ್ಗೆ ಹಲವಾರು…
ಹುಳಿಯಾರು: ಹುಳಿಯಾರು ಹೋಬ ಳಿಯ ಬರಕನಾಳು ಗ್ರಾಮ ಪಂಚಾಯತಿಯ ಬಾಲದೇವರಹಟ್ಟಿಯ ಜನಪದ ಹಾಡು ಗಾರ್ತಿ ಕರಿಯಮ್ಮ ಅವರಿಗೆ ಸಾಧಕ ಮಹಿಳೆ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಲೇಕಕಿಯರ ಸಂಘ, ತುಮಕೂರು ಶಾಖೆಯಿಂದ ದಿ|| ಸೋಮವತಿ ಮತ್ತು ದಿ|| ಇಂದಿರಮ್ಮ ಅವರ ನೆನಪಿನ ದತ್ತಿ ಪ್ರಶಸ್ತಿ ಇದಾಗಿದ್ದು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಾರ್ಚ್೨೦ ರ ಗುರುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಿದ್ದಾರೆ. ಮದುವೆಯಾಗಿ ಒಂದು ಮಗುವಿನ ತಾಯಿ ಯಾಗಿ, ಕೆಲವೇ ತಿಂಗಳ ನಂತರ ಸಂಗಾತಿ ಮರಿಯಣ್ಣ ಅವರನ್ನು ಕಳೆದುಕೊಳ್ಳುವರು. ಹಾಲುಗಳ್ಳಿನ ನವಜಾತ ಶಿಶು. ವಿಕಲಚೇತನೆಯಾದ ಆಕೆಯ ಅತ್ತೆ. ಮನೆತನದ ಜವಾಬ್ದಾರಿ ಕರಿಯಮ್ಮನ ಹೆಗಲಿಗೆ ಬೀಳುತ್ತವೆ. ಕಿರಿಯ ವಸ್ಸಿನಲ್ಲೇ ಒಕ್ಕಲು ತನಕ್ಕೆ ಕೊರಳು ಕೊಡುವರು. ಹೆಗಲು ಬಾವು, ಎದೆಬಾವುಗಳಂತಹ ಕಷ್ಟಗಳು ಎದುರಾಗುವವು. ಕಳೆದು ಹೋದ ಕಷ್ಟಗಳ ಮರೆಯಲು ಹಾಡುಗಾರಿಕೆಯ ಬೆನ್ನಿಗೆ ಬೀಳುವರು. ಬಲಗೊಂಡ, ಯಡಗೊಂಡ, ಮಾಳಮ್ಮ, ಚಿತ್ತಯ್ಯ, ಈರಬೊಮ್ಮಕ್ಕ, ಜಡೆಗೊಂಡ, ಹುಲಿಕಡಿದ ಚನ್ನಯ್ಯ, ಸೋಬಾನೆ ಮಂಗಳಾರತಿ ಪದಗಳು, ಹಸೆ ಪದಗಳು, ಜಾಡಿ ಪದಗಳು,…
ಚಿಕ್ಕನಾಯಕನಹಳ್ಳಿ: ಆಕಸ್ಮಿಕ ಬೆಂಕಿ ಅವಘಡದಿಂದ ೧೬ ಗುಡಿಸ ಲುಗಳು ಸುಟ್ಟ ಸ್ಥಳಕ್ಕೆ ಶಾಸಕ ಸಿ.ಬಿ. ಸುರೇಶ್ ಬಾಬು ಭೇಟಿ ನೀಡಿ ತಾತ್ಕಾಲಿಕ ಆಶ್ರಯಕ್ಕೆ ವ್ಯವಸ್ಥೆ ಮಾಡಲಾಯಿತು. ತಾಲ್ಲೂಕಿನ ಹಂದನಕೆರೆ ಹೋಬಳಿ ಮತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈ ಮರ ಕಾಮಲಾಪುರ ರಸ್ತೆಬದಿಯಲ್ಲಿದ್ದ ೧೬ ಗುಡಿಸಲುಗಳು ಆಕಸ್ಮಿಕ ಬೆಂಕಿಗೆ ಸಿಲುಕಿ ಸುಟ್ಟು ಹೋಗಿದ್ದವು. ಸುದ್ದಿ ತಿಳಿದಕತ್ಷಣ ಸ್ಥಳಕ್ಕೆ ಅದಿಕಾರಿಗಳೊಂದಿಗೆ ಆಗಮಿಸಿದ ಶಾಸಕ ಸಿ.ಬಿ. ಸುರೇಶ್ಬಾಬು ಸಂತ್ರಸ್ಥರನ್ನು ಸಂತೈಸಿ, ತಾತ್ಕಾಲಿಕ ಪರಿಹಾರ ಚೆಕ್ನ್ನು ವಿತರಿಸಿದರು. ನಿರಾಶ್ರಿತ ರಾದವರಿಗೆ ತಾತ್ಕಾಲಿಕವಾಗಿ ತಂಗುವ ವ್ಯವಸ್ಥೆ , ಆಹಾರ ಹಾಗೂ ಉಡಲು ಬಟ್ಟೆಗಳ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮ ಚಂದ್ರಯ್ಯಮ ತಾಲ್ಲೂಕು ಪಂಚಾಯಿತಿ ಕಾ ರ್ಯ ನಿರ್ವಹಣಾಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು ಇದ್ದರು.
ತಿಪಟೂರು: ಆಕಸ್ಮಿಕವಾಗಿ ಕುರಿ ಶೆಡ್ನಲ್ಲಿ ಬೆಂಕಿ ಸಂಭವಿಸಿ ೧೫೦ ಹೊರೆ ರಾಗಿ ಹುಲ್ಲು, ೩೦ ಹನಿ ನೀರಾವರಿ ಪೈಪ್ಗಳು, ಜೆಟ್ ಪೈಪುಗಳು ಬೆಂಕಿಯಿAದ ಸುಟ್ಟು ಹೋದ ಘಟನೆ ತಾಲೂಕಿನ ಕಸಬಾ ಹೋಬಳಿಯ ರಂಗಾಪುರ ಗ್ರಾಮದ ಕಲ್ಲೇಶ್ವರ ನಗರದ ಶಾರದಮ್ಮ ಜಮೀನಿನಲ್ಲಿ ನಡೆದಿದೆ. ಬೆಂಕಿ ಅವಘಡ ಕಂಡು ಸಾರ್ವಜನಿಕರು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ಆಗಮಿಸಿದ ನಂತರ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ಅಪಾರ ಪ್ರಮಾಣದ ನಷ್ಟವನ್ನು ತಪ್ಪಿಸಲಾಗಿದೆ. ಈ ಸಂದರ್ಭದಲ್ಲಿ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿಗಳಾದ ಹವಲ್ದಾರ ನಜೀರಸಾಬ್, ಚಿದಾ ನಂದ.ಸಿ.ಎಸ್, ಉಮೇಶ್, ಭರತ್.ಎಂ.ಜೆ, ಸಾರ್ವ ಜನಿಕರು ಹಾಜರಿದ್ದರು. ರಂಗಾಪುರ ಗ್ರಾಮದ ಕಲ್ಲೇ ಶ್ವರ ನಗರದ ಶಾರದಮ್ಮ ಜಮೀನಿನಲ್ಲಿ ಬೆಂಕಿ ಅವಘ ಡವನ್ನು ನಂದಿಸುತ್ತಿರುವ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು.
ತುಮಕೂರು: ಹತ್ತಾರು ವರ್ಷಗಳಿಂದ ದೇವಾಲಯವಿದ್ದ ಜಾಗ, ನೂರಾರು ತರಕಾರಿ, ಹೂವು, ಹಣ್ಣು ಮಾರಾಟಗಾರಿಗೆ ಆಶ್ರಯವಾಗಿದ್ದ ಸಿದ್ದಿವಿನಾಯಕ ಮಾರುಕಟ್ಟೆ ಜಾಗವನ್ನು ಮಂಗಳೂರಿನ ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ಗೆ ಸೇರಿದ ವ್ಯಕ್ತಿಗಳಿಗೆ ಮಾಲ್ ಕಟ್ಟಲು ಗುತ್ತಿಗೆ ನೀಡುವ ಮೂಲಕ ತುಮಕೂರು ನಗರದಲ್ಲಿ ಲ್ಯಾಂಡ್ ಜಿಹಾದ್ಗೆ ಬಿಜೆಪಿ ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಹಿಂದುಪರ ಸಂಘಟನೆಗಳ ಒಕ್ಕೂಟದವತಿ ಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಜರಂಗದಳ ತುಮಕೂರು ವಿಭಾಗದ ಸಂಚಾಲಕ ಮಂಜು ಭಾರ್ಗವ ಮಾತನಾಡಿ, ೧೯೫೨ರಲ್ಲಿ ತುಮಕೂರು ನಗರದ ವಿನಾ ಯಕನಗರದಲ್ಲಿನ ಸದರಿ ಜಾಗವನ್ನು ಉದ್ಯಾ ನವನಕ್ಕೆಂದು ಅಂದಿನ ಪುರಸಭೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಕಾಯ್ದಿರಿಸಲಾಗಿತ್ತು.ತದನಂತರ ಎಪಿಎಂಸಿಯವರು ಸದರಿ ಜಾಗ ವನ್ನು ತರಕಾರಿ, ಹೂವು, ಹಣ್ಣು, ದಿನಸಿ ಮಾರುಕಟ್ಟೆ ಮಾಡಲು ಬಿಟ್ಟುಕೊಡುವಂತೆ ಕೋರಿದಾಗ,ಅವರಿಗೆ ಹಸ್ತಾಂತರಿಸಲಾಯಿತು.ಹತ್ತಾರು ವರ್ಷಗಳ ಕಾಲ ಮಾರುಕಟ್ಟೆ ನಡೆದು, ಕಿರಿದಾಗುತ್ತಾ ಬಂದಾಗ ಮಾರುಕಟ್ಟೆಯನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿದ ನಂತರ,ಆ ಜಾಗದಲ್ಲಿದ್ದ ಗಣೇಶನ ಮೂರ್ತಿ ಪೂಜೆ ಪುನಃಸ್ಕಾರಗಳು ನಡೆಯತಿದ್ದು,…
ತುಮಕೂರು: ರಾಜ್ಯದಲ್ಲಿರುವ ಅಮೃತಮಹಲ್ ಕಾವಲ್ ಭೂಮಿಯನ್ನು ಸರಕಾರ ೧೯೫೬ರಲ್ಲಿಯೇ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಸುಪರ್ದಿಗೆ ನೀಡಿದ್ದರೂ ಸಹ,ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯವರು ಉದ್ದೇಶ ಪೂರ್ವಕವಾಗಿಯೇ ಅಮೃತ ಮಹಲ್ ಕಾವಲು ಭೂಮಿಯನ್ನು ಉಳುಮೆ ಮಾಡಿ ಜೀವನ ನಡೆಸು ತ್ತಿರುವ ಕುಟುಂಬಗಳನ್ನು ೧೯೪೨ರ ಸರಕಾರ ಗೆಜೇಟ್ ತೋರಿಸಿ ಒಕ್ಕೆಬಿಸಲು ಹೊರಟಿವೆ.ಈ ಗೊಂದಲ ಬಗೆಹರಿಸಿದ್ದರೆ,ಶೀಘ್ರವೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ನವ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್.ರಘುನಾಥ್ ತಿಳಿಸಿದ್ದಾರೆ. ಅರಣ್ಯ ಇಲಾಖೆ ಬೆದರಿಕೆ ಹಿನ್ನೆಲೆಯಲ್ಲಿ ಇಂದು ಖಾಸಗಿ ಹೊಟೇಲ್ನಲ್ಲಿ ನವ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಜಗದೀಶ್ ಅವರ ನೇತೃತ್ವದಲ್ಲಿ ಆಯೋ ಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮೃತ ಮಹಲ್ ಕಾವಲಿಗೆ ಸಂಬAಧಿ ಸಿದಂತೆ ೧೯೪೨ರಲ್ಲಿ ಅಂದಿನ ಮೈಸೂರು ಸಂಸ್ಥಾನ ಅಮೃತ ಮಹಲ್ ಗೋ ತಳಿಗಳ ಸಂರಕ್ಷಣೆಗೆAದು ನೀಡಿ,ಗೆಜೆಟ್ ನೋಟಿಫೀಕೇಷನ್ ಹೊರಡಿಸಿದೆ. ಆದರೆ ರಾಜರ ಅಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಆಡಳಿತ ಬಂದ ನಂತರ ೨೪-೧೦-೧೯೫೬ರಂದು…
ತುಮಕೂರು: ತುಮಕೂರು ವಿವಿಯಲ್ಲಿ ದೇಹಕ್ಕೆ ಹಾಗೂ ಮೆದುಳಿಗೆ ಎರಡಕ್ಕೂ ಪ್ರಸಾದದ ರೂಪದಲ್ಲಿ ಆಹಾರ ಹಾಗೂ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮೀ ಜಪಾನಂದ ಜೀ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಅನ್ನ ಪೂರ್ಣೇಶ್ವರಿ ಮಧ್ಯಾಹ್ನದ ಭೋಜನ ಯೋಜನೆ ಮೂರನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮಾತನಾಡಿ, ಇನ್ನು ಮುಂದೆ ವಾರದಲ್ಲೊಂದು ದಿನ ಸಿಹಿತಿನಿಸು ಹಾಗೂ ಮಜ್ಜಿಗೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು. ವಿವಿಯ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಈ ಯೋಜನೆಯಿಂದ ನಮ್ಮ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸುಧಾರಿಸಿದೆ. ಸುಸಂಸ್ಕೃತ ಪ್ರಜೆಯನ್ನು ರೂಪಿಸುವಲ್ಲಿ ನಮ್ಮ ಈ ಯೋಜನೆಯು ಮುಖ್ಯ ಪಾತ್ರ ವಹಿಸಿದೆ. ಇದರಿಂದಾಗಿ ಪ್ರವೇಶಾತಿ ಕೂಡ ಗಣನೀಯವಾಗಿ ಏರಿಕೆಯಾಗಿದೆ ಎಂದರು. ಉದ್ಯಮಿಗಳಾದ ಡಾ. ಹೆಚ್. ಜಿ. ಚಂದ್ರಶೇಖರ್, ಡಾ. ಆರ್. ಎಲ್. ರಮೇಶ್ ಬಾಬು, ಶಿರಡಿ ಸಾಯಿಬಾಬಾ ಮಂದಿರದ ಅಧ್ಯಕ್ಷ ರಾದ ನಟರಾಜ್ ಶೆಟ್ಟಿ, ಘಟಕ ಕಾಲೇಜುಗಳ ಪ್ರಾಂಶುಪಾಲರಾದ ಪ್ರೊ. ಪ್ರಕಾಶ್ ಎಂ. ಶೇಟ್ ಮತ್ತು ಪ್ರೊ.…
ತುಮಕೂರು: ಪ್ರಭಾವಿಗಳು, ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶಬಾಬು ಅವರ ಹಿಂಬಾಲಕರು ಆಗಿರುವ ಗುತ್ತಿಗೆದಾರರಾದ ಚಲುವರಾಜು, ರಾಜಣ್ಣ ಅವರಿಂದ ನನಗೆ ಜೀವ ಭಯವಿದ್ದು, ಸೂಕ್ತ ರಕ್ಷಣೆ ನೀಡಬೇಕು ಎಂದು ಲೋಕೋಪಯೋಗಿ ಇಲಾ ಖೆಯಲ್ಲಿ ನೊಂದಾಯಿತ ಗುತ್ತಿಗೆದಾರ ಜಯಣ್ಣ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾನು ಮೂಲತಃ ಚಿಕ್ಕನಾಯಕನಹಳ್ಳಿ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ವ್ಯಕ್ತಿಯಾಗಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾ ಯಿತ ಗುತ್ತಿಗೆದಾರನಾಗಿದ್ದು, ಈ ಹಿಂದೆ ನಾನು ಹುಳಿಯಾರು ಪಟ್ಟಣ ಪಂಚಾಯಿತಿಯ ಕೆಲ ಅಭಿವೃದ್ದಿ ಕಾಮಗಾರಿಗಳನ್ನು ಗುತ್ತಿಗೆ ಪಡೆದ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಮತ್ತು ಮಿಷ ನರಿಗಳನ್ನು ಒದಗಿಸುವ ಚುಲುವರಾಜ್ ಅವರಿಗೆ ಕೆಲವು ಕೆಲಸಗಳನ್ನು ಸಬ್ ಕಂಟ್ರಾಕ್ಟ್ ನೀಡಿ ಕೆಲಸ ಮಾಡಿದ್ದು, ಅಗತ್ಯಕ್ಕಿಂತ ಹೆಚ್ಚು ಹಣ ನೀಡಿ ದ್ದೇನು. ಹೆಚ್ಚುವರಿಯಾಗಿ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಹಲವು ಬಾರಿ ಮನವಿ ಮಾಡಿದಾಗಲೂ ಇಲ್ಲಸಲ್ಲದ ಸಬೂಬು ಹೇಳುತಿದ್ದ ಚಲುವರಾಜು, ಮಾರ್ಚ್ ೧೦ರ ಬೆಳಗ್ಗೆ ೧೦:೩೦ರ ಸುಮಾರಿಗೆ ನನ್ನ ಹುಟ್ಟೂರಿಗೆ ಹೋಗಲು ಕಾರಿನಲ್ಲಿ…