ಕೊರಟಗೆರೆ: ಅಭಿಮಾನಿಗಳ ಆರಾಧ್ಯ ದೈವ ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ೫೦ನೇ ವರ್ಷದ ಜನ್ಮದಿನದ ಪ್ರಯುಕ್ತ ೧೩ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಹಾಗೂ ಸಿಹಿ ವಿತರಣೆ ಮಾಡಿದ ಅಪ್ಪು ಅಭಿಮಾನಿಗಳು.. ಪುನೀತ್ ರಾಜಕುಮಾರ್ ನಡೆದು ಬಂದ ಹಾದಿಯಲ್ಲಿ ಅವರ ಅಭಿಮಾನಿಗಳು ಮುಂದೆ ಸಾಗುತ್ತಿರುವುದು ಬಹಳಷ್ಟು ಸಂತಸದ ವಿಷಯವಾಗಿದೆ. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಪುರ ಗ್ರಾಮ ಪಂಚಾಯತಿ ಸದಸ್ಯ ವೆಂಕಟರೆಡ್ಡಿ ಹಾಗೂ ಗ್ರಾಮದ ಅಪ್ಪು ಅಪ್ಪಟ ಅಭಿಮಾನಿಗಳಿಂದ ಕರ್ನಾಟಕ ರತ್ನ ಅಭಿಮಾನಿಗಳ ಆರಾಧ್ಯ ದೈವ ಬೆಟ್ಟದ ಹೂವು ಡಾ. ಪುನೀತ್ ರಾಜಕುಮಾರ್ ಜನುಮದಿನದ ಪ್ರತಿ ವರ್ಷವು ಇಂತಹ ಒಂದಲ್ಲ ಒಂದು ರೀತಿಯ ವಿಶೇಷ ಕಾರ್ಯಕ್ರಮಗಳನ್ನ ಆಯೋಜನೆ ಅಪ್ಪು ಅಭಿಮಾನಿಗಳು ಮಾಡುತ್ತಿದ್ದಾರೆ.. ರಾಜ್ಯದ ಎಲ್ಲಾ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಅಪ್ಪು ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸುತ್ತಾರೆ ಅಷ್ಟೇ ಅಲ್ಲ ದೇಶದ ನಾನಾ ಭಾಗಗಳಲ್ಲಿ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಆಚರಣೆ ಮಾಡುತ್ತಿದ್ದಾರೆ ಇದೇ ತಾನೇ ಒಬ್ಬ…
Author: News Desk Benkiyabale
ಹುಳಿಯಾರು: ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದಲ್ಲಿ ಚಿತ್ರನಟ ಪುನೀತ್ ರಾಜ್ಕುಮಾರ್ ರವರ ೫೦ ನೇ ಹುಟ್ಟು ಹಬ್ಬವನ್ನು ಸೋಮವಾರ ಸಡಗರ ಸಂಭ್ರಮದಿAದ ಆಚರಿಸಲಾಯಿತು. ಈ ಹಿನ್ನಲೆಯಲ್ಲಿ ಬೆಳ್ಳಾರ ಗ್ರಾಮದ ವೃತ್ತಕ್ಕೆ ಪುನೀತ್ ರಾಜ್ಕುಮಾರ್ ವೃತ್ತ ಎಂದು ನಾಮಕರಣ ಮಾಡಿ ಕೇಕ್ ಕತ್ತರಿಸಿ ಸಿಹಿ ಹಂಚಿ ನೆಚ್ಚಿನ ನಾಯಕ ನಟನ ಹುಟ್ಟು ಹಬ್ಬವನ್ನು ಸಂಭ್ರಮಿಸಿದರು. ಗ್ರಾಪA ಅಧ್ಯಕ್ಷೆ ರಾಧರಾಜು, ಚಿಕ್ಕನಾಯಕನ ಹಳ್ಳಿ ರೇಣುಕಾಂಬ ಸಹಕಾರ ಸಂಘದ ಅಧ್ಯಕ್ಷ ಬೆಳ್ಳಾರ ಎಸ್.ಮಲ್ಲಿಕಾರ್ಜುನಯ್ಯ, ವಕೀಲ ಮೋಹನ್, ಪೊಸ್ಟ್ ಕೃಷ್ಣಪ್ಪ, ಗ್ರಾಪಂ ಸದಸ್ಯರಾದ ಲಕ್ಕೇನಹಳ್ಳಿ ರಘುವೀರ್, ಹೊಯ್ಸಳಕಟ್ಟೆ ಕಾಂತರಾಜು, ಬೆಳ್ಳಾರ ಗೊಲ್ಲರಹಟ್ಟಿ ಚಿಕ್ಕಣ್ಣ, ಆರ್ಯ ಈಡಿಗರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ನಾಗರಾಜು, ಕಾರ್ಯದರ್ಶಿ ಸೋ ಮಣ್ಣ, ಜಿಲ್ಲಾ ಸಂಘದ ಸದಸ್ಯ ನಾರಾಯಣ ಸ್ವಾಮಿ ಇತರರು ಉಪಸ್ಥಿತರಿದ್ದರು.
ತುರುವೇಕೆರೆ: ತಾಲೂಕಿನ ಕೋಳಘಟ್ಟದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಎಸಿಯವರು ಆದೇಶ ನೀಡಿದರು ಕಂದಾಯ ಹಾಗೂ ಗಣಿ ಅದಿಕಾರಿಗಳ ಕಣ್ಣತಪ್ಪಿಸಿ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಗಂಗಾಧರಯ್ಯ ಆರೋಪಿಸಿದ್ದಾರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲೂ ಕಿನ ಕೋಳಘಟ್ಟ ಸರ್ವೇ ನಂ ೫೫ರಲ್ಲಿ ೧೬೩ ಎಕರೆ ಭೂಮಿ ಇದ್ದು ಸುಮಾರು ವರ್ಷ ಗಳಿಂದ ರೈತರು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಮಾತ್ರ ಭೂಮಿ ಮಂಜೂರಾಗಿದ್ದು ಇನ್ನು ಕೆಲವರು ಅನುಭವದಲ್ಲಿದ್ದಾರೆ. ಸರ್ವೇ ನಂ ೪೯/೧,೪೯/೨, ರಲ್ಲಿ ಅಕ್ರಮವಾಗಿ ರಾಜುಗೌಡ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಮತ್ತು ರೈತರಿಂದ ಅಕ್ರಮವಾಗಿ ಜಿ.ಪಿ.ಎ ಮಾಡಿಸಿಕೊಂಡು ಕ್ರಷರ್ ಗಣಿಗಾರಿಕೆ ನೆಡೆಸುತ್ತಿದ್ದು. ಕೆಲವು ಪೋಲೀಸರು ಹಾಗೂ ಅಧಿಕಾರಿಗಳು ಕ್ರಷರ್ ಮಾಲೀಕರ ಜೊತೆ ಕೈಜೋಡಿಸಿ ಸರ್ಕಾರಕ್ಕೆ ಮತ್ತು ರೈತರಿಗೆ ಮೋಸಮಾಡುತಿದ್ದಾರೆ ಎಂದು ಆರೋಪಿಸಿ ೨೦೧೯ ರಲ್ಲಿ ಸರ್ವೇ ನಂ. ೫೫ ರಲ್ಲಿ ಗೋಮಾಳ ಎಂದು ಉಪವಿಭಾಗಾಧಿಕಾರಿಗಳು ವರದಿಯನ್ನು ನೀಡಿದ್ದರೂ ಕೂಡ ಅಲ್ಲಿ…
ತುಮಕೂರು: ಸ್ಪರ್ಧಾತ್ಮಕ ಜಗತ್ತಿಗೆ ಕಂಪ್ಯೂಟರ್ ಜ್ಞಾನ ಮತ್ತು ಅದರ ಬಳಕೆ ಅನಿವಾರ್ಯ. ವಿದ್ಯಾಭ್ಯಾಸದ ಸಮಯದಿಂದಲೇ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆದುಕೊಂಡರೆ ಭವಿಷ್ಯ ಉಜ್ವ ಲವಾಗುವುದು ಎಂದು ತುಮಕೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಹೇಳಿದರು. ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗವು ಸೋಮವಾರ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಕುರಿತ ಒಂದು ದಿನದ ರಾಷ್ಟಿçÃಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ವಿಭಾಗಗಳಲ್ಲಿಯೂ ತಂತ್ರಜ್ಞಾನ ಬಳಕೆ ಅವಶ್ಯಕವಾಗಿದೆ. ಎಲ್ಲಾ ಕಚೇರಿಗಳಲ್ಲಿಯೂ ಕಂಪ್ಯೂಟರ್, ಲ್ಯಾಪ್ಟಾಪ್ ನೋಡುತ್ತಿರುತ್ತೇವೆ. ಇಂತಹ ಯುಗಕ್ಕೆ ತಂತ್ರಜ್ಞಾನದ ಅರಿವು ಮುಂಚೂಣಿಯಲ್ಲಿರಬೇಕು ಎಂದರು. ಸAಪನ್ಮೂಲ ವ್ಯಕ್ತಿಗಳಾದ ಡಾ. ಆನಂದ ಕುಮಾರ್ ಸುಬ್ರಮಣಿ ನಾಥನ್ ಮಾತನಾಡಿ, ತಂತ್ರಜ್ಞಾನ ಕ್ಷೇತ್ರ ಕಿರಿದಾದುದಲ್ಲ. ಅದರಲ್ಲಿ ನೀವು ಕಲಿಯಬೇಕಾದ ಕ್ಷೇತ್ರವನ್ನು ಮೊದಲು ಆಯ್ಕೆ ಮಾಡಿಕೊಳ್ಳಿ. ಆಸಕ್ತಿ ಇಟ್ಟು ಕಲಿತರೆ ಯಾವುದೂ ಕಷ್ಟವಾಗುವುದಿಲ್ಲ. ಯಾವುದೇ ಕಲಿಕೆಯಾದರೂ ಜೀವನವನ್ನು ಉನ್ನತ ಮಟ್ಟ ಕ್ಕೆ ಕೊಂಡೊಯ್ಯುವ ಸಾಧನವೆಂಬುದನ್ನು ನೆನಪಿ ಟ್ಟುಕೊಳ್ಳಿ ಇಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಎಸ್.ಎಸ್.ಐ.ಟಿ…
ತುಮಕೂರು: “ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ-ತಮ್ಮ ವಿದ್ಯೆಗೆ ತಕ್ಕ ಹಾಗೇ ಉದ್ಯೋಗ ಪಡೆದುಕೊಳ್ಳಬಹುದು”. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದ ಉದ್ಯೋಗಕ್ಕೆ ಬೇಕಾಗುವ ಎಲ್ಲಾ ಸಕಲ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು, ಕೌಶಲ್ಯವಿಲ್ಲದಿದ್ದರೆ ಕೆಲಸ ಸಿಗುವುದು ಬಹಳ ಕಷ್ಟವಾಗುತ್ತದೆ ಎಂದು ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಸಿ.ಎ. ಎಸ್.ವಿಶ್ವನಾಥ್ರವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ತುಮಕೂರು ಹಾಗೂ ನಿರ್ಮಾಣ್ ಆರ್ಗನೈಜೇಷನ್ ಇವರ ಸಹಯೋಗದೊಂದಿಗೆ ಅನನ್ಯ ಸಮೂಹ ಸಂಸ್ಥೆಗಳು, ಅನನ್ಯ ಇನ್ಟಿ÷್ಸಟ್ಯೂಟ್ ಅಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಇವರುಗಳ ಸಹಯೋಗದಲ್ಲಿ ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಚ್ ೧೭ ರಂದು ಸೋಮವಾರÀ ಅನನ್ಯ ಕ್ಯಾಂಪಸ್ನಲ್ಲಿ “ಉದ್ಯೋಗ ಮೇಳ-೨೦೨೫”ರನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು ೩೫ ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳಿAದ ಉದ್ಯೋಗಾವಕಾಶವನ್ನು ಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಸಿ.ಎ. ಎಸ್.ವಿಶ್ವನಾಥ್ರವರು ಮಾತನಾಡುತ್ತಾ ‘’ಉದ್ಯೋಗಾರ್ತಿಗಳು ಹೆಚ್ಚಿನ ಕೌಶಲ್ಯ ಪಡೆಯಬೇಕೆಂದು ತಿಳಿಸುತ್ತಾ, ಭಾರತದಲ್ಲಿ ಕಳೆದ ಆರು ವರ್ಷಗಳಿಂದ ಇಂಟನ್ಶಿಫ್ ಪಡೆಯುತ್ತಿರುವವರ…
ಬೆಂಗಳೂರು: ಈ ಸಾರಿಯ ಬಜೆಟ್ನಲ್ಲಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎತ್ತಿನಹೊಳೆ ಯೋಜನೆಯಡಿ ೨೪೧ ಕಿ ಮೀ ವರೆಗೆ ನೀರು ಹರಿಸುವುದಾಗಿ ಹೇಳಿದ್ದಾರೆ. ಇದರ ಅರ್ಥ ತುಮಕೂರು ಕೊನೆಯ ಭಾಗದ ವರೆಗೆ ನೀರು ಬರುತ್ತದೆ ಮತ್ತು ಜಿಲ್ಲೆಯ ಎಲ್ಲ ಬರಪೀಡಿತ ಪ್ರದೇಶಗಳ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು ಎಂದು ಅರ್ಥ. ಇದು ಆದರೆ ನಾನೇ ತುಮಕೂರಿನಲ್ಲಿ ೫೦,೦೦೦ ಜನರನ್ನು ಸೇರಿಸಿ ಸಿದ್ದರಾಮಯ್ಯನವರಿಗೆ ಬೆಳ್ಳಿ ಗದೆ ಕೊಟ್ಟು ಸನ್ಮಾನ ಮಾಡುತ್ತೇನೆ. ಅವರಿಂದ ಆ ಕೆಲಸ ಆಗದೇ ಇದ್ದರೆ ಮುಂದಿನ ಬಜೆಟ್ನಲ್ಲಿ ಅವರು ಸದನದ ಕ್ಷಮೆ ಕೇಳಬೇಕು. ವಿಧಾನಸಭೆಯಲ್ಲಿ ಸೋಮವಾರ ರಾತ್ರಿ ಬಜೆಟ್ ಮೇಲಿನ ಮುಂದುವರಿದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ತುಮ ಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡರು ಹಾಕಿದ ಪಂಥಾಹ್ವಾನ ಇದು. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯಡಿ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ೫೨೪ ಮೀಟರ್ಗೆ ಏರಿಸಿ ಮುಳುಗಡೆಯಾಗುವ ೧.೨೨ ಲಕ್ಷ ಎಕರೆ ಭೂಮಿಯ ಒಡೆಯರಿಗೆ ಪರಿಹಾರವನ್ನೂ ಕೊಡುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ…
ತುಮಕೂರು: ಜಿಎಸ್ಟಿ ಅಡಿಯಲ್ಲಿ ನೋಂದಣಿ ಯಾಗಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ಇತರರಿಗೆ ಪರಿಹಾರವನ್ನು ಒದಗಿಸುವ ದೃಷ್ಟಿಯಿಂದ ೨೦೨೪ ರ ಜೂನ್ ೨೨ ರಂದು ನಡೆದ ೫೩ನೇ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಅನುಸಾರ ೨೦೧೭-೧೮’ ೨೦೧೮-೧೯, ೨೦೧೯-೨೦ ಹಣಕಾಸು ವರ್ಷಗಳಿಗೆ ಅನುಗುಣವಾಗಿ ೩೧-೦೩-೨೦೨೫ ರ ಒಳಗೆ ಬಾಕಿ ಇರುವ ತೆರಿಗೆ ಹಣವನ್ನು ಕಟ್ಟಿದವರಿಗೆ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಷರತ್ತಿನ ಅನ್ವಯ ಕಟ್ಟಲು ಕಾಲಾವಕಾಶ ನೀಡಲಾಗಿದ್ದು, ಈ ಅವಕಾಶವನ್ನು ಬಾಕಿ ಇರುವವರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಪಿ ಆರ್ ಕುರಂದವಾಡ ಮನವಿ ಮಾಡಿದ್ದಾರೆ. ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ ರವರು ೩೧-೦೩-೨೦೨೫ ರವರೆಗೂ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಮಾಡಲಾಗಿರುವ ಶಿಫಾರಸನ್ನು ಸ್ವಾಗತಿಸಿರುವ ಅವರು, ಈ ಅನುಕೂಲತೆಯನ್ನು ಜಿಲ್ಲೆಯ ಎಲ್ಲಾ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ತುಮಕೂರು: ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಬದಲಾವಣೆ ಮಾಡುತ್ತಿರುವುದು ಸಮಾಜವನ್ನು ಮುಂದೆ ಕೊಂಡು ಹೋಗುವ ಬದಲು ಹಿಮ್ಮುಖವಾಗಿ ಸಾಗಿ ಮತ್ತೆ ಗುಲಾಮಿ ಪದ್ದತಿಯನ್ನು ಸೃಷ್ಟಿಸುವ ನಿಟ್ಟಿನಲ್ಲಿದೆ ಎಂದು ಹಿರಿಯ ಹೈಕೋರ್ಟ ವಕೀಲರಾದ ಶ್ರೀ ಮುರಳಿಧರ ಪೇಶ್ವೆ ಅವರು ಅಭಿಪ್ರಾಯ ಪಟ್ಟರು. ಮುಂದುವರಿದು ಮಾತನಾಡಿದ ಅವರು ದುಡಿವ ಜನರ ಆರೋಗ್ಯ -ಸಾಮಾಜಿಕ ಜೀವನ ಗಳ ಬಗ್ಗೆ ಹೆಚ್ಚು ಒತ್ತು ನೀಡುವುದನ್ನು ಕೈಬಿಟ್ಟಿರುವ ಸರ್ಕಾರವು ಕಾರ್ಪೊರೇಟ್ ಲಾಭವನ್ನು ಖಾತರಿ ಪಡಿಸುವ ಮತ್ತು ಅದಕ್ಕೆ ಯಾವುದೇ ಅಡೆ ತಡೆಗಳು ಅಗದಂತೆ , ಕಾರ್ಮಿಕರಿಗೆ ಇರುವ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಕಾರ್ಮಿಕ ವರ್ಗ ಎಚ್ಚೆತ್ತು ಹಕ್ಕುಗಳ ರಕ್ಷಣೆಗೆ ಮುಂದಾವುದು ಅತ್ಯಗತ್ಯ ಎಂದರು. ಭಾನುವಾರ ಮಧ್ಯಾನ್ನ ತುಮಕೂರು ನಗರದ ಜನ ಚಳುವಳಿ ಕೇಂದ್ರದಲ್ಲಿ ಸಿಐಟಿಯು – ಪ್ರಗತಿ ಕಾನೂನು ಕೇಂದ್ರ ಜಂಟಿಯಾಗಿ ಅಯೋಜಿಸಿದ್ದ “ಕಾರ್ಮಿಕ ಕಾನೂನುಗಳ ಬದಲಾವಣೆ- ಕಾರ್ಮಿಕರಿಗೆ ಇರುವ ಸವಾಲುಗಳು” ಕುರಿತು ಉಪನ್ಯಾಸವನ್ನು ನೀಡಿದರು. ಸರಳೀಕರಣದ ಹೆಸರಲ್ಲಿ ಕಾರ್ಮಿಕ ಕಾನೂನುಗಳ ಮೂಲ ತಿರುಳನ್ನು ತಿರುಚಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡುವ…
ಚಿಕ್ಕನಾಯಕನಹಳ್ಳಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಇಟಿ ಮತ್ತು ನೀಟ್ ತರಬೇತಿಯ ಸೌಲಭ್ಯ ಉಚಿತವಾಗಿ ದೊರೆತರೆ ನಗರ ಪ್ರದೇಶದ ಮಕ್ಕಳೊಂದಿಗೆ ಗ್ರಾಮೀಣ ಪ್ರದೇಶದ ಮಕ್ಕಳು ಸ್ಪರ್ಧೆ ತರಲು ಸಾಧ್ಯವಾಗುತ್ತದೆ ಎಂದು ಉಚಿತ ಸಿಇಟಿ ಹಾಗೂ ನೀಟ್ ತರಬೇತಿ ಶಿಬಿರವನ್ನು ಇದೆ ಮಾರ್ಚ್ ೧೯ ರಂದು ಉದ್ಘಾಟನೆ ಗೊಳ್ಳಲಿದೆ ಎಂದು ಶಾಸಕ ಹಾಗೂ ಜೆ ಡಿ ಎಲ್ ಪಿ ನಾಯಕ ಸಿಬಿ ಸುರೇಶ್ ಬಾಬು ಹೇಳಿದರು. ಅವರು ಇಂದು ಪಟ್ಟಣದ ಜೋಗಿಹಳ್ಳಿ ಗೇಟ್ ಬಳಿ ಇರುವ ಎಚ್ ಡಿ ಎಫ್ ಸಿ ಬ್ಯಾಂಕ್ ಮೇಲ್ಭಾಗದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸುರೇಶ್ ಬಾಬು ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಿಇಟಿ ತರಬೇತಿ ಹಮ್ಮಿಕೊಳ್ಳಲಾಗಿದೆ ಇದರ ಉದ್ಘಾಟನೆಯನ್ನು ಪಟ್ಟಣದ ತೀನಂಶ್ರೀ ಭವನದಲ್ಲಿ ಮಾರ್ಚ್ ೧೯ ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ ಪ್ರಭು ಉದ್ಘಾಟಿಸಲಿದ್ದಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿಇಟಿ ತರಬೇತಿಯ ಮೇಲುಸ್ತುವಾರಿ ಸಮಿತಿಯ ನಿರ್ವಹಣೆ…
ಪಾವಗಡ: ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀರಂಗಪುರ ತಾಂಡಾದ ಅಂಗನವಾಡಿ ಕೇಂದ್ರ ಮಾದರಿಯ ಕೇಂದ್ರವಾಗಿ ಹೊರಹೊಮ್ಮಿದ್ದು, ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ಸುಶೀಲಮ್ಮ ಅವರ ಸೃಜನಶೀಲ ಕೆಲಸಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ಅಂಗನವಾಡಿಗೆ ಭೇಟಿ ನೀಡಿದ ಅವರು, ಪ್ಲಾಸ್ಟಿಕ್ ಪುನರ್ವ್ಯವಸ್ಥೆಯಿಂದ ತಯಾರಿಸಿದ ಆಕರ್ಷಕ ವಸ್ತುಗಳ ಮೂಲಕ ಮಕ್ಕಳಿಗೆ ಕಲಿಕೆಗೆ ಅನುಕೂಲಕರವಾದ ಪರಿಸರವನ್ನು ಒದಗಿಸಿರುವ ಬಗ್ಗೆ ಶ್ಲಾಘಿಸಿದರು. ಮಕ್ಕಳು ಕಲಿಯುತ್ತಿರುವ ಪ್ರಗತಿಯನ್ನೂ ವೀಕ್ಷಿಸಿ, ಸಾರ್ವಜನಿಕರಿಂದ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿ ಕುರಿತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಎಂ.ಎನ್, ಸಿಡಿಪಿಒ ಡಿ.ಜಿ ಸುನೀತ, ಮೇಲ್ವಿಚಾರಣೆ ಅಧಿಕಾರಿ ಭಾಗ್ಯಲಕ್ಷ್ಮಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. ಬೀದಿ ವ್ಯಾಪಾರಿಗಳಿಗೆ ಸಾಲ ವಿತರಣೆ, ಸೋಲಾರ್ ಪಾರ್ಕ್ ಪರಿಶೀಲನೆ ಇದರ ಹಿಂದೆ, ಪಟ್ಟಣದ ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ವಿತರಿಸಿ, ಫಲಾನುಭವಿಗಳ ಅನುಭವಗಳನ್ನು ಜಿಲ್ಲಾಧಿಕಾರಿ ಕೇಳಿಕೊಂಡರು. ನಂತರ…