Author: News Desk Benkiyabale

ತುರುವೇಕೆರೆ: ಪಟ್ಟಣದ ಶ್ರೀ ಕೋಡಿಬಸವೇಶ್ವರ ಸ್ವಾಮಿ ಮತ್ತು ಶ್ರೀಭದ್ರಕಾಳಮ್ಮ ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಬಹಳ ವಿಜೃಂಭಣೆಯಿAದ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಶುಭ ಗೋದೋಳಿ ಲಗ್ನದಲ್ಲಿ ಶ್ರೀ ವೀರಭದ್ರಸ್ವಾಮಿಯವರ ಹಾಗೂ ಭದ್ರಕಾಳಿ ಯಮ್ಮನವರ ಕಲ್ಯಾಣೋತ್ಸವವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಭಾನುವಾರ ಮದ್ಯಾಹ್ನ ೨ ಗಂಟೆಗೆ ಸರಿಯಾಗಿ ವಿರಕ್ತ ಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಲಿಂಗದ ವೀರರ ಕುಣಿತ, ಧ್ವಜ ಕುಣಿತದೊಂದಿಗೆ ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವವು ವೈಭವ ಯುತವಾಗಿ ಅಪಾರ ಭಕ್ತರ ಸಮಕ್ಷಮದಲ್ಲಿ ನೆರವೇರಿತು. ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಪಾನಕ, ಫಲಹಾರ, ಮಜ್ಜಿಗೆ ವಿತರಿಸಿದರೆ, ದೇವಸ್ಥಾನ ಆಡಳಿತ ಮಂಡಳಿಯಿAದ ಬಂದAತ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪ ಡಿಸಲಾಗಿತ್ತು. ಶ್ರೀ ಬಸವೇಶ್ವರ ಯುವಕ ಸಂಘ, ಶ್ರೀ ವೀರಶೈವ ಸಮಾಜ ಹಾಗೂ ಶ್ರೀ ಮಹಿಳಾ ಸಮಾಜ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಜನಪ್ರ ತಿನಿಧಿಗಳು ಸೇರಿದಂತೆ…

Read More

ತುಮಕೂರು: ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕಾದರೆ ಪ್ರಜೆಗಳೆಲ್ಲ ರಾಮನಂತಾಗಬೇಕು ಹಾಗೂ ರಾಮನ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಅಭಿಪ್ರಾಯಪಟ್ಟರು. ಅವರು ತುಮಕೂರು ತಾಲ್ಲೂಕು ಗೊಲ್ಲಹಳ್ಳಿಯಲ್ಲಿ ಗುರುವಂದನಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಶ್ರೀಕೃಷ್ಣಾನುಗ್ರಹ ನಿಲಯವನ್ನು ಫಲಾನುಭವಿಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಗೊಂಡು ಶತಶತಮಾನಗಳ ಕನಸು ನನಸಾಗಿದೆ. ಆದರೆ ಇನ್ನೊಂದು ಕನಸು ಹಾಗೆಯೇ ಉಳಿದಿದೆ. ಅದು ರಾಮರಾಜ್ಯದ ಕನಸು. ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕಾದರೆ ಪ್ರಜೆಗಳೆಲ್ಲ ರಾಮನಂತಾಗಬೇಕು. ರಾಮನ ಅನೇಕ ಗುಣಗಳಲ್ಲಿ ಒಂದೊAದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ರಾಮರಾಜ್ಯದ ಕನಸು ನನಸಾಗಲಿದೆ ಎಂದು ಹೇಳಿದರು. ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ರಾಮಸೇವೆ. ಅಂತಹ ಕೆಲಸವನ್ನು ಇದೀಗ ಮಾಡಲಾಗಿದ್ದು, ಬಡ ಕುಟುಂಬವೊAದಕ್ಕೆ ಮನೆಯೊಂದನ್ನು ನಿರ್ಮಿಸುವುದರ ಮೂಲಕ ರಾಮಸೇವೆ ಮಾಡಲಾಗಿದೆ. ಸಮಾಜದಲ್ಲಿ ಉಳ್ಳವರು ಅಶಕ್ತರಿಗೆ ನೆರವಾಗಬೇಕು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಆಗ ಅದು ರಾಮನ ಸೇವೆಯಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗುರುವಂದನಾ ಸಮಿತಿಯ ಜಿ.ಕೆ.ಶ್ರೀನಿವಾಸ್ ಅವರು, ಕೆಲ…

Read More

ತುರುವೇಕೆರೆ: ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಕಲಾ ಸಂಗಮ ಕ್ರಿಯೇಷನ್ಸ್ ದಂಡಿನಶಿವರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಮಾ.೨೭ರಂದು ಗೀತ ಗಾಯನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸಂಗಮ ಕ್ರಿಯೇಷನ್ಸ್ ನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಈಶ್ವರ್‌ದಲ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಕಲಾಸಂಗಮ ಕ್ರಿಯೇಷನ್ಸ್ ಟ್ರಸ್ಟ್ ಒಂದು ಕ್ರಿಯಾಶೀಲ ಸಾಂಸ್ಕೃತಿಕ ಸಂಸ್ಥೆಯಾಗಿದ್ದು ಹಲವಾರು ರಂಗ ಪ್ರಯೋಗಗಳನ್ನು ಹಮ್ಮಿಕೊಳ್ಳುವ ಮೂಲಕ ನಾಡು, ನುಡಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವAತಹ ಕಾರ್ಯ ಚಟುವಟಿಕೆಯನ್ನು ಹೊಂದಿದೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹುಟ್ಟೂರು ದಂಡಿನಶಿವರದಲ್ಲಿ ಸಾಂಸ್ಕೃತಿಕ ಕ್ಷೇತ್ರ ಮಾಡುವ ನಿಟ್ಟಿನಲ್ಲಿ ಕಲಾ ಸಂಗಮ ಸಂಸ್ಥೆ ಸ್ಥಾಪಿಸಿ ಪ್ರತಿ ವರ್ಷ ರಂಗ ತರಭೇತಿ, ಕನ್ನಡ ಗೀತೆಗಳ ಗಾಯನೋತ್ಸವ, ವಿಶ್ವರಂಗಭೂಮಿ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವಗಳನ್ನು ರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ. ಆ…

Read More

ತುಮಕೂರು: ಮನುಷ್ಯನ ಸಾಧನೆ, ಆತನ ಸಮಾಜ ಸೇವೆಗಳು ಆತ ಸತ್ತ ಮೇಲೆ ಜನ ಕೊಂಡಾ ಡುವಂತಿರಬೇಕು. ಇದಕ್ಕೆ ತಾಜಾ ಉದಾಹರಣೆ ಎಂದರೆ ಚಲನಚಿತ್ರ ನಟರು, ಸಮಾಜ ಸೇವ ಕರು ಆದ ಡಾ.ಪುನಿತ್ ರಾಜ್‌ಕುಮಾರ್ ಎಂದು ತುಮಕೂರು ನಗರ ಶಾಸಕ ಜಿ.ಬಿ. ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಎಸ್.ಎಸ್.ಪುರಂನ ೬ನೇ ಕ್ರಾಸ್ ನಲ್ಲಿರುವ ಮಯೂರು ಯುವ ವೇದಿಕೆ ವತಿ ಯಿಂದ ಆಯೋಜಿಸಿದ್ದ ಡಾ.ಪುನಿತ್‌ರಾಜಕುಮಾರ್ ಅವರ ೫೦ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಪುನಿತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಬಲಗೈನಿಂದ ಕೊಟ್ಟ ದಾನ ಎಡಗೈಗೆ ಗೊತ್ತಾಗಬಾರದು ಎಂಬ ಗಾಧೆ ಇದೆ.ಇದಕ್ಕೆ ಅನ್ವಯಿಸುವಂತೆ ಪುನಿತ್‌ರಾಜ್ ಕುಮಾರ್ ಬದುಕಿದ್ದರು.ಅವರು ಸಾಯುವವರೆಗೂ ಮಾಡಿದ ಧಾನ,ಧರ್ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.ಇಡೀ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.ಅವರ ಹಳೆಯ ಸಿನಿಮಾಗಳ ರೀ ರಿಲೀಸ್‌ನ್ನು ಲಕ್ಷಾಂತರ ಜನರು ವೀಕ್ಷಿಸುತ್ತಿರುವುದೇ ಅವರ ಜನಪ್ರಿಯತೆಗೆ ನಿರ್ದೇಶನ ಎಂದರು. ಮಯೂರ ಯುವ ವೇದಿಕೆಯ ಅಧ್ಯಕ್ಷ ಪಿ.ಸದಾಶಿವಯ್ಯ ಮಾತನಾಡಿ, ಕನ್ನಡಿಗರ ಹೃದಯದಲ್ಲಿ ಸದಾ ನೆಲೆಸಿರುವ ಡಾ.ಪುನಿತ್ ರಾಜಕುಮಾರ್…

Read More

ತುಮಕೂರು: ಪವಿತ್ರ ರಂಜಾನ್ ಪ್ರಯುಕ್ತ ವಿವಿಧ ಮುಸ್ಲೀಂ ಮುಖಂಡರು ಭಾನುವಾರ ಸಂಜೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅನ್ನ ದಾಸೋಹ ಕೇಂದ್ರ ಸಿದ್ಧಗಂಗಾ ಮಠದಲ್ಲಿ ಮುಖಂಡರು ರಂಜಾನ್ ಪ್ರಯುಕ್ತ ಕೈಗೊಂಡಿದ್ದ ಉಪವಾಸವನ್ನು ಅಂತ್ಯಗೊಳಿಸಿದರು. ಅಲ್ಲದೆ ಶ್ರೀಮಠದಲ್ಲಿ ನಡೆದ ಭಾವೈಕ್ಯತಾ ಸತ್ಕಾರ ಕೂಟದಲ್ಲಿ ಭಾಗವಹಿಸಿ ಫಲಾಹಾರ ಸೇವಿಸಿದರು. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹ್ರೂಜ್ ಖಾನ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್, ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಹಾಗೂ ಇತರೆ ಮುಖಂಡರು ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದು ಸಂಜೆ ಮಠದಲ್ಲಿ ನಡೆದ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ಭಾರತ ಎಲ್ಲಾ ಧರ್ಮಗಳಿಗೂ ಆಶ್ರಯ ನೀಡಿದೆ. ಇನ್ಯಾವ ದೇಶಗಳಲ್ಲೂ ಭಾರತದಷ್ಟು ಧರ್ಮಗಳು ಇಲ್ಲ. ಎಲ್ಲಾ ಧರ್ಮಗಳ ಸಾರ ಒಂದೇ, ಅದು ಶಾಂತಿ ಮತ್ತು ಪ್ರೀತಿ. ಎಲ್ಲಾ ಧರ್ಮದವರು ಶಾಂತಿ, ಸಹಬಾಳ್ವೆಯಿಂದ ಬಾಳಬೇಕು ಎಂಬುದು ಎಲ್ಲಾ ಧರ್ಮಗಳ ಆಶಯ. ಭಾರತ…

Read More

ಗುಬ್ಬಿ: ರೈತರಿಗೆ ಜಮೀನು ಮಂಜೂರು ಮಾಡಿಕೊಡುವಂತೆ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸುವ ಅರ್ಜಿ ನಮೂನೆ ಭರ್ತಿ ಮಾಡಿಕೊಂಡು ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸುವ ಮಧ್ಯವರ್ತಿಯ ದಂಧೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಸರ್ಕಾರ ಭೂ ಸುಧಾರಣಾ ಕಾನೂನು ಮರುಸ್ಥಾಪಿಸಲು ಹೆಚ್ಚುವರಿ ಭೂಮಿ ವಶಕ್ಕೆ ಪಡೆದು ಅರ್ಹರಿಗೆ ಮಂಜೂರು ಮಾಡುವ ಆದೇಶ ತಿಳಿದ ಬಳಿಕ ತಾಲ್ಲೂಕಿನ ಗಡಿ ಭಾಗದಲ್ಲಿ ಗೋಮಾಳ ಜಮೀನು ಸರ್ಕಾರ ಮಂಜೂರು ಮಾಡುತ್ತದೆ ಎಂಬ ವದಂತಿ ಹಬ್ಬಿಸಿ ಮುಗ್ಧ ಹಳ್ಳಿ ಜನರಿಂದ ಮುಖ್ಯ ಮಂತ್ರಿಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಭೂಮಿ ಸಿಗುತ್ತದೆ ಎಂಬ ಗಾಢವಾದ ನಂಬಿಕೆಗೆ ಸಿಲುಕಿದ ರೈತರಿಗೆ ಅರ್ಜಿ ನಮೂನೆಯನ್ನು ಸಾವಿರ ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಯಾವುದೇ ದಾಖಲೆ ಇಲ್ಲದೆ ಮನಬಂದAತೆ ಬೇರೆ ಜಿಲ್ಲೆ ತಾಲ್ಲೂಕಿನ ರೈತರು ಸಹ ಅರ್ಜಿ ನೀಡುತ್ತಿದ್ದಾರೆ ಎಂಬ ಚರ್ಚೆ ತಾಲ್ಲೂಕು ಕಚೇರಿ ಆವರಣದಲ್ಲಿ ಕಂಡು ಬಂತು. ಕೆಲ ತಿಂಗಳ ಹಿಂದೆ ಚೇಳೂರು ಮತ್ತು ಹಾಗಲ ವಾಡಿ ಹೋಬಳಿಯ ರೈತರು ಹೋರಾಟ ನಡೆಸಿ ಭೂಮಿ…

Read More

ತುಮಕೂರು: ದಿನೇ ದಿನೇ ಬಿಸಿಲಿನ ಝಳ ಹೆಚ್ಚಾಗುತ್ತಿರುವುದರಿಂದ ಪಡಿತರ ಧಾನ್ಯ ವಿತರಿಸಲು ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ ೬ ಗಂಟೆಯಿAದಲೇ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಅವರಿಗೆ ಸೂಚನೆ ನೀಡಿದರು. ಪಾವಗಡ ಪಟ್ಟಣದ ಶ್ರೀರಾಮಕೃಷ್ಣ ನ್ಯಾಯ ಬೆಲೆ ಅಂಗಡಿಗೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿ ಕುಟುಂಬದ ಪ್ರತಿ ಸದಸ್ಯರಿಗೆ ೧೫ ಕೆ.ಜಿ. ಅಕ್ಕಿ ಸಮರ್ಪಕ ವಿತರಣೆ ಬಗ್ಗೆ ಪರಿಶೀಲಿಸಿ ಮಾತನಾ ಡಿದ ಅವರು, ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾಯದೆ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ನಿಗಧಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತೆರೆಯುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾ ರಿಗಳಿಗೆ ನಿರ್ದೇಶನ ನೀಡಿದರಲ್ಲದೆ, ಪಡಿತರ ಧಾನ್ಯ ಪಡೆಯಲು ನ್ಯಾಯಬೆಲೆ ಅಂಗಡಿ ಮುಂದೆ ಸಾಲು ಗಟ್ಟಿ ನಿಂತಿದ್ದ ಪಡಿತರ ಧಾನ್ಯದ ಗುಣಮಟ್ಟ ಹಾಗೂ ಕ್ರಮವಾಗಿ ವಿತರಿಸುತ್ತಿರುವ ಬಗ್ಗೆ ಫಲಾನುಭವಿಗಳಿಂದ ಮಾಹಿತಿ ಪಡೆದರು. ನಂತರ ನಾಗಲಮಡಿಕೆ ಕ್ರಾಸ್ ಬಳಿ ಭೇಟಿ ನೀಡಿ…

Read More

ತುಮಕೂರು: ಮನುಷ್ಯನ ಬದುಕಿನಲ್ಲಿ ಸಂತಸ, ಸತ್ಕೀರ್ತಿ, ನೆಮ್ಮದಿ ನಿರಂತರವಾಗಿ ನೆಲೆಸಬೇಕಾದರೆ ಅದಕ್ಕೆ ಭಗವಂತನ ಪ್ರಾರ್ಥನೆ ಅನಿವಾರ್ಯ ಹಾಗೂ ಅತ್ಯವಶ್ಯಕ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಪೀಠಾಧ್ಯಕ್ಷರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಅಭಿಪ್ರಾ ಯಪಟ್ಟರು. ಅವರು ಇಂದು ಬೆಳಗ್ಗೆ (ಮಾರ್ಚ್ ೧೫) ತುಮಕೂರಿನ ಕೆ.ಆರ್.ಬಡಾವಣೆಯಲ್ಲಿರುವ ಶ್ರೀ ಕೃಷ್ಣಮಂದಿರದಲ್ಲಿ ಏರ್ಪಟ್ಟಿದ್ದ ಮಂದಿರದ ೧೫ ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ನಮ್ಮ ಮನೆಯಲ್ಲಿರುವ ದೇವರ ಕೋಣೆಯ ಜೊತೆಗೆ ನಮ್ಮ ಮನಸ್ಸಿನಲ್ಲೂ ದೇವರಿರಬೇಕು. ಸದಾ ದೇವರ ನಾಮಸ್ಮರಣೆ ಮಾಡುತ್ತಿರಬೇಕು. ಮಾಡುವ ಕೆಲಸ ನಿಸ್ವಾರ್ಥಮನೋಭಾವದಿಂದ ಕೂಡಿರಬೇಕು. ಆಗ ನಮ್ಮ ಜೀವನ ನಿತ್ಯೋತ್ಸವವಾಗುತ್ತದೆ ಎಂದು ಮಹಾಭಾರತದ ಹಲವು ಪ್ರಸಂಗಗಳನ್ನು ಉಲ್ಲೇಖಿಸಿದ ಶ್ರೀಪಾದಂಗಳು, ತುಮಕೂರಿನಲ್ಲಿ ಪೇಜಾವರ ಹಿರಿಯ ಶ್ರೀಗಳಿಂದ ಸ್ಥಾಪಿತವಾದ ಶ್ರೀಕೃಷ್ಣ ಮಂದಿರವು ಕಳೆದ ೧೫ ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ಮಾಡು ತ್ತಿರುವುದನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಕೃಷ್ಣ ಮಂದಿರದ ಕಾರ್ಯಾಧ್ಯಕ್ಷ ಶ್ರೀನಿವಾಸ ಹತ್ವಾರ್, ಮಾಧ್ವ ಮಹಾಮಂಡಲದ ಜಿಲ್ಲಾ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್,…

Read More

ಪಾವಗಡ: ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಶ್ರೀ ಯೋಗಿ ನಾರಾಯಣ ಯತೀಂದ್ರರ ೨೯೯ನೇ ಜಯಂತಿ ಭಕ್ತಿಭಾವದಿಂದ ಆಚರಿಸಲಾಯಿತು. ತಾಲೂಕು ಆಡಳಿತ ಮತ್ತು ತಾಲೂಕು ಬಲಿಜ ಸಂಘದ ವತಿಯಿಂದ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಿ.ಎನ್. ವರದರಾಜು ಭಾಗವಹಿಸಿ, ಸಮುದಾಯದ ಜನತೆಗೆ ಶುಭಕೋರಿದರು. ಅವರು ಮುಂದಿನ ದಿನಗಳಲ್ಲಿ ಸಮುದಾಯವು ವಿಜೃಂಭಣೆಯಿAದ ಕಾರ್ಯಕ್ರಮಗಳನ್ನು ನಡೆಸಿದರೆ, ಸರ್ಕಾರದಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಬಲಿಜ ಸಮುದಾಯದ ಮುಖಂಡ ರವಿ ಮಾತನಾಡಿ, ಸಮುದಾಯದ ಒಗ್ಗಟ್ಟಿನ ಮಹತ್ವವನ್ನು ಕುರಿತು ಮಾತನಾಡಿದರು. ನಂತರ ಪಟ್ಟಣದ ಶ್ರೀ ಯೋಗಿ ನಾರಾಯ ಣಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಪೂಜೆಗಳನ್ನು ಸಮುದಾಯದ ಬಂಧುಗಳು ನೆರವೇರಿಸಿದರು ಕಾರ್ಯಕ್ರಮದಲ್ಲಿ ತಾಲೂಕು ಬಲಿಜ ಸಂಘದ ಅಧ್ಯಕ್ಷ ಗುರ್ರಪ್ಪ, ಪುರಸಭಾ ಸದಸ್ಯರಾದ ವೆಂಕಟರಮಣ, ಸತ್ಯ ಲೋಕೇಶ್, ಗಜ ರಮೇಶ್, ಬಿಜೆಪಿ ರವಿ, ಗೋವಿಂದ ಬಾಬು, ಅಶ್ವತ್ಥಪ್ಪ, ಪೋಟೋ ಅಮರ್, ಪ್ರಸಾದ್ ಬಾಬು, ಮಹೇಶ್, ರಾಘವೇಂದ್ರ, ಸುರೇಶ್, ನವೀನ್, ಎಸ್.ಎಸ್.ಕೆ ವಿನಯ್ ಬಾಬು, ಪತ್ರಕರ್ತ ಅನಿಲ್ ಮಹಾದೇವ್,…

Read More

ತಿಪಟೂರು: ನಗರದ ಸಂತೆಪೇಟೆ ಬಸವೇಶ್ವರ ದೇವಸ್ಥಾನದ ಕದಳಿ ಬಳಗ ಮಹಿಳಾ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರನ್ನು ಸನ್ಮಾನಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿAದ ಸಾಲವನ್ನು ಪಡೆದು ಮೊದಲು ಗಾಡಿಯ ಮೂಲಕ ತರಕಾರಿ ಮಾರಾಟ ಮಾಡುತ್ತಾ, ನಂತರ ದ್ವಿಚಕ್ರ ವಾಹನ ಮೂಲಕ, ನಾಲ್ಕು ಚಕ್ರದ ವಾಹನ ಖರೀದಿ ಮಾಡಿ ಹಳ್ಳಿ ಹಳ್ಳಿಗೆ ತೆರಳಿ ಸ್ವಾವಲಂಬಿ ವ್ಯಾಪಾರ ಮಾಡುತ್ತಿರುವ ತರಕಾರಿ ಗಂಗಮ್ಮ ಹಾಗೂ ಗಾಯನದಲ್ಲಿ ಕರೋಗಿಗಾನಶ್ರೀ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಪುಷ್ಪಮೂರ್ತಿ ಮತ್ತು ರಾಜೀವ್ ಗಾಂಧೀ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣದ ಎಂ.ಡಿ.ಎಸ್ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಡಾ.ಪ್ರಗತಿಸಂಗಮೇಶ್ ಸಾಧನೆ ಮಾಡಿದವರಿಗೆ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕದಳಿ ಬಳಗದ ಪ್ರಭಾವಿ ಶ್ವನಾಥ್, ಅನು, ಮಂಜುಳತಿಮ್ಮೇಗೌಡ, ರೇಖಾ ಅನೂಪ್, ಆಶಾ ಮಂಜುನಾಥ್, ಕ್ಯಾತ್ಯಾ ಯಿನಿ, ಹೇಮಾಕಿಟ್ಟಿ, ಉಮಾನಾ ರಾಯ ಣಗೌಡ, ಅನುಸಂಗಮೇಶ್, ರೇವತಿಉಮೇಶ್, ಸುಮನಾ, ಜಯಮ್ಮ, ಸ್ವಪ್ನರೇಣು, ಮಮತ ಪಟೇಲ್, ಮಂಜಮ್ಮ, ರೇಣುಕ,…

Read More