ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ಕೆಲವೆಡೆ ಬುಧವಾರ ರಾತ್ರಿ ಬೀಸಿದ ಮಳೆ ಗಾಳಿಗೆ ವಿದ್ಯುತ್ ಕಂಬಗಳು ಮತ್ತು ಮರ ಗಿಡಗಳು ಧರೆಗುರುಳಿವೆ. ನಿನ್ನೆ ಸಂಜೆ ತಾಲ್ಲೂಕಿನ ಅಲ್ಲಲ್ಲಿ ಕೆಲ ನಿಮಿಷಗಳ ವರೆಗೆ ಸೋನೆ ಮಳೆ ಬಂದರೆ; ಇನ್ನೂ ಕೆಲವೆಡೆ ರಸ್ತೆಯ ನೀರು ಹರಿಯುವಂತೆ ಮಳೆ ಬಿದ್ದಿರುವುದಾಗಿ ತಿಳಿದು ಬಂದಿದೆ. ತಾಲ್ಲೂಕಿನ ಹೆಡಿಗೇಹಳ್ಳಿ, ಅರೆಮಲ್ಲೇನಹಳ್ಳಿ, ಹುಲಿಕಲ್ ನಾಲೆ, ಬೆಂಡೇಕೆರೆ, ಅಬುಕನಹಳ್ಳಿ, ಕಡೇಹಳ್ಳಿ, ತಂಗಡ, ಬ್ರಹ್ಮದೇವರಹಳ್ಳಿ, ಸೋಪ್ ನಹಳ್ಳಿ ಗ್ರಾಮದ ಹೊರ ವಲಯದಲ್ಲಿ ತೆಂಗು ಹಾಗು ಇನ್ನಿತರ ಮರಗಳ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ಸುಮಾರು ೧೫ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗು ಲೈನ್ ಗಳು ತುಂಡರಿಸಿವೆ. ಹುಲಿಕಲ್ ಹೇಮಾವತಿ ನಾಲೆ ಸಮೀಪ ಒಂದು ವಿದ್ಯುತ್ ಪರಿವರ್ತಕ ಬಿದ್ದು ಹಾಳಾಗಿದೆ. ಅದೇ ರೀತಿ ಬಡಗರಹಳ್ಳಿಯ ದೊಡ್ಡಯ್ಯ ಹಂದಿಜೋಗಿ ಕಾಲೋನಿಯ ನಿವಾಸಿ ಗಂಗಯ್ಯ ಅವರ ಮನೆಯ ಶೀಟು ಮತ್ತು ಹೆಂಚುಗಳು ಗಾಳಿಗೆ ತರಗೆಲೆಗಳಂತೆ ತೂರಿ ಹೋಗಿದ್ದು ಇದರಿಂದ ಮಳೆಯ ಹನಿಗೆ ಮನೆಯ ವಸ್ತುಗಳು…
Author: News Desk Benkiyabale
ತುಮಕೂರು: ಋಷಿಮುನಿಗಳು ನೀಡುತ್ತಿದ್ದ ಗುರುಕುಲ ಶಿಕ್ಷಣ ವ್ಯವಸ್ಥೆಯಿಂದ ಹಿಡಿದು ಇಂದಿನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಗೆ ಹೊಂದಿಕೊAಡಿರುವ ಶಿಕ್ಷಣ ವ್ಯವಸ್ಥೆಯಡಿ ನೀಡುತ್ತಿರುವ ತಂತ್ರಜ್ಞಾನದ ಶಿಕ್ಷಣವು ಮೌಲ್ಯ ಯುತ, ಸಂಸ್ಕಾರಯುತವಾಗಿರಬೇಕು ಆಗಾ ಸಮಾಜದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿಗಳಾದ ಮರಿಯಪ್ಪ ಅವರು ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ವಿವೇಕ ವಾಣಿ ಟ್ರಸ್ಟ್ ವತಿಯಿಂದ ಮೂರನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಮಾನವನಿಗೆ ಸಂಸ್ಕಾರಯುತ ಶಿಕ್ಷಣ ಬಹಳ ಮುಖ್ಯವಾಗಿದ್ದು ಮಗುವಿನ ನಡೆ ನುಡಿ ಬಗ್ಗೆ ಪೋಷಕರು ಗಮನ ಹರಿಸಬೇಕು ಕೆಲಸದ ಒತ್ತಡದ ನಡುವೆ ಮಕ್ಕಳು ಕಲಿಯುತ್ತಿರುವ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿದಾಗ ಮಕ್ಕಳು ಅತ್ಯುತ್ತಮವಾಗಿ ಸಂಸ್ಕಾರಯುತ ಶಿಕ್ಷಣವನ್ನು ಪಡೆಯುತ್ತಾರೆ, ಬದಲಾಗುತ್ತಿರುವ ಆಧುನಿಕ ಶಿಕ್ಷಣ ವ್ಯವಸ್ಥೆ ಗಳಿಂದಾಗಿ ಪೋಷಕರೇ ಮಕ್ಕಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ. ಎಸ್…
ಚಿಕ್ಕನಾಯಕನಹಳ್ಳಿ: ಹೆಣ್ಣು ಮಕ್ಕಳೆಂದರೆ ಶೋಷಣೆ ಎಂದಿಗೂ ಆಗಬಾರದು ಮಹಿಳೆಯ ದಿಟ್ಟತನದ ಆತ್ಮಸ್ಥೈರ್ಯದ ಮೂಲಕ ದೇಶದ ಪ್ರಗತಿ ಕೂಡ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕ್ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಎಸ್ ಟಿ ಸತೀಶ್ ಹೇಳಿದರು ನಗರದ ರೋಟರಿ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ ಮತ್ತು ವಕೀಲರ ಸಂಘದ ಸಂ ಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಂದು ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಾರ್ಚ್ ೮ರಂದೆ ಕಾರ್ಯಕ್ರಮ ಮಾಡಬೇಕಿತ್ತು ನ್ಯಾಯಾಲಯದಲ್ಲಿ ಲೋಕ ಅಗಲ ಇದ್ದ ಕಾರಣ ಸಾಧ್ಯವಾಗಲಿಲ್ಲ ಪ್ರತಿ ಮಹಿಳೆಗೂ ನಾನಾ ರೀತಿಯ ಅಡಚಣೆಗಳು ಸರ್ವೆ ಸಾಮಾನ್ಯವಾಗಿವೆ ಮಹಿಳೆಯ ಅಸಮಾ ನತೆಯಿಂದ ದೌರ್ಜನ್ಯಕ್ಕೆ ಹೆಚ್ಚು ಒಳಗಾಗಿರುವುದು ಇಲ್ಲಿ ಪುರುಷ ಮತ್ತು ಮಹಿಳೆ ಎಂಬ ಯಾರಿಗೂ ಕೀಳರಿಮೆ ಇರಬಾರದು ದಿನನಿತ್ಯದ ಜೀವನ ದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಅತ್ಯವಶ್ಯಕ…
ಹುಳಿಯಾರು: ಮೊಬಿಲಿಟಿ ಇಂಡಿಯಾ ಸಂಸ್ಥೆಯು ಸಿರಾ ಮತ್ತು ತುರುವೇಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಆಯ್ದ ಶಾಲೆಗಳಲ್ಲಿ ವಿಕಲಚೇತನ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಶಾಲಾವಧಿಯ ನಂತರ ಕಾರ್ಯನಿರ್ವಹಿಸುತ್ತಿರುವ ೨೦ ಸಮುದಾಯ ಶಿಕ್ಷಣ ಕೇಂದ್ರದ ಬೋಧಕರಿಗೆ ವಿಜ್ಞಾನ ಸಂಬAಧಿತ ಕಲಿಕಾ ಮತ್ತು ಬೋಧನ ಉಪಕರಣಗಳ ತಯಾರಿ ಕುರಿತು ಒಂದು ದಿನದ ಕಾರ್ಯಗಾರವನ್ನು ಹುಳಿಯಾರಿನ ವಾಸವಿ ಭವನದಲ್ಲಿ ಬುಧವಾರ ಆಯೋಜಿಸಲಾಗಿತ್ತು. ವಿಜ್ಞಾನ ಶಿಕ್ಷಕರಾದ ಜಯಣ್ಣ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಹಲವಾರು ಪ್ರಯೋಗಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಅವುಗಳಲ್ಲಿ ಪ್ರಮುಖವಾಗಿ ವಿದ್ಯುತ್ ಮಂಡಲ, ವಿದ್ಯುತ್ ವಾಹಕ ಮತ್ತು ಅವಾಹಕ, ಗಾಳಿಗೆ ಸರ್ವತೋಮುಖ ಒತ್ತಡವಿದೆ, ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ, ಸೂರ್ಯಗ್ರಹಣ ಚಂದ್ರಗ್ರಹಣ ಉಂಟಾಗುವ ರೀತಿ, ಭೂಮಿಯ ಚಲನೆಯಿಂದ ಹಗಲು ರಾತ್ರಿ ಉಂಟಾಗುವಿಕೆ, ಸತ್ಯ ಪ್ರತಿಬಿಂಬ, ಶಾಖದ ವರ್ಗಾವಣೆ, ಬೆಳಕಿನ ಪ್ರತಿಫಲನ ಹಾಗೂ ನ್ಯೂಟಾನಿನ ಚಕ್ರ ಮುಂತಾದ ಪ್ರಯೋಗಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ರಾಜಣ್ಣ, ಸ್ವಯಂಸೇವಕರಾದ…
ಹುಳಿಯಾರು: ದೇಶದಲ್ಲಿ ನಿರುದ್ಯೋಗವಿದೆ. ಕಂಪನಿಗಳಲ್ಲಿ ಕೆಲಸಗಾರರು ೧೦ ರಿಂದ ೧೨ ಗಂಟೆ ಕೆಲಸ ಮಾಡುವಂತಹ ನಿಯಮಗಳು ಬರುತ್ತಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸ್ವಉದ್ಯೋಗ ಮಾಡುವುದು ಅವಶ್ಯಕ. ಆದ್ದರಿಂದ ನೀವೆಲ್ಲರ ಉದ್ಯಮಿಗಳಾಗಿ ಹಣ ಸಂಪಾದಿಸಿ ಒಳ್ಳಯ ಜೀವನವನ್ನು ಪಡೆಯಿರಿ ಎಂದು ಮಾಸ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣಪ್ಪ ಸಲಹೆ ನೀಡಿದವರು. ಹುಳಿಯಾರು ಹೋಬಳಿಯ ಸಿಂಗಾಪುರ ಗ್ರಾಮದಲ್ಲಿ ಕಳ್ಳಂಬೆಳ್ಳದ ನವ್ಯ ದಿಶಾ ಸಂಸ್ಥೆ ಹಾಗೂ ಚಿಕ್ಕನಾಯಕನಹಳ್ಳಿ ಸೃಜನಾ ಮಹಿಳಾ ಸಂಘಟನೆ ಆಯೋಜಿಸಿದ್ದ ಯುವ ಉದ್ಯಮಿ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಿಮಗೆ ಅನೇಕ ಕೌಶಲಗಳ ಬಗ್ಗೆ ತಿಳಿದಿದೆ, ಅನೇಕ ಉದ್ಯೋಗಗಳ ಬಗ್ಗೆ ಪರಿಚಯವಿದೆ, ಆದರೆ ಅದನ್ನು ಕಾರ್ಯಗತ ಮಾಡಲು ಮಹಿಳೆಯರಿಗೆ ಮನೆಯಲ್ಲಿ ಅನೇಕ ಅಡ್ಡಿ ಆತಂಕಗಳಿವೆ. ಅವುಗಳಿಂದ ಆಚೆ ತರುವುದು ಈ ತರಬೇತಿಯ ಮುಖ್ಯ ಉದ್ದೇಶ. ಮಹಿಳೆಯರನ್ನು ಸ್ವತಂತ್ರ ಉದ್ಯಮಿಗಳನ್ನಾಗಿ ಮಾಡಲು ಅಗತ್ಯ ಮಾರ್ಗದರ್ಶನವನ್ನು ತರಬೇತಿ ಪಡೆಯುವವರಿಗೆ ನೀಡಲಾಗುವುದು ಎಂದು ಹೇಳಿದವರು. ಮುಖ್ಯ ತರಬೇತಿರಾದ ಕೆಂಪಣ್ಣ, ಸಂಪನ್ಮೂಲ ವ್ಯಕ್ತಿಗಳಾದ…
ಪಾವಗಡ: ತಾಲೂಕಿನ ಬ್ಯಾಡನೂರು ವಡ್ಡರಹಟ್ಟಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಉಪನಿರ್ದೇಶಕರಾದ ಚೇತನ್ ಕುಮಾರ್ ರವರು ಮಾತನಾಡಿ, ಗೊಲ್ಲರ ಹಟ್ಟಿಯಲ್ಲಿ ಆಚರಿಸುವ ಅನಿಷ್ಟ ಪದ್ಧತಿಗಳು ಬಾಲ್ಯವಿವಾಹ ಹದಿ ಹರೆಯದ ಗರ್ಬಿಣಿ ಮತ್ತು ಇಲಾಖಾ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು ನಂತರ ಜಿಲ್ಲಾ ನಿರೂಪಣಾಧಿಕಾರಿಗಳಾದ ದಿನೇಶ್ ರವರು ಮಾತನಾಡಿ ಮಗುವಿನ ಆರೈಕೆ, ಪೋಷಣ್ ಅಭಿಯಾನ ಯೋಜನೆ ಬಾಣಂತಿ ಆರೈಕೆ ಬಗ್ಗೆ ಅರಿವು ಮೂಡಿಸಿದರು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಲಾಖಾ ಯೋಜನೆಗಳ ಬಗ್ಗೆ ಪಾತ್ರಾಭಿ ನಯದ ಮೂಲಕ ವ್ಯಕ್ತ ಪಡಿಸಿದರು ಕರಡಿ ಕುಣಿತ ಕೋಲಾಟ ಸೋಬಾನೆ ಪದ ಪುಟ್ಟ ಮಕ್ಕಳ ನೃತ್ಯ ಮುಂತಾದ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ ಸುನಿತಾ ರವರು ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಾಗರಾಜ್, ರಾಜಾನಾಯ್ಕ, ಶಶಿಧರ,ಮೇಲ್ವಿಚಾರ ಕಿಯರು, ಸಮುದಾಯದ ಮುಖಂಡರು, ಮಹಿಳಾ…
ಹುಳಿಯಾರು: ಹುಳಿಯಾರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಆಟೋಟ ಸ್ಪರ್ಧೆನಡೆಸಿ ಬಹುಮಾನ ವಿತರಿಸಲಾಯಿತು. ಚಮಚದಿಂದ ನಾಣ್ಯ ಜೋಡಿಸುವ ಆಟದಲ್ಲಿ ಎಚ್.ಎಸ್.ಸುಲೋಚನ ಪ್ರಥಮ, ಗೌರಮ್ಮ ದ್ವಿತೀಯ, ಸುಶೀಲಮ್ಮ ತೃತೀಯ, ಕಪ್ ಜೋಡಿಸುವ ಆಟದಲ್ಲಿ ಸುಶೀಲಮ್ಮ ಪ್ರಥಮ, ಪ್ರೇಮ ದ್ವಿತೀಯ, ಭಾಗ್ಯಮ್ಮ ತೃತೀಯ, ಬಕೇಟ್ ಇನ್ದ ಬಾಲ್ನಲ್ಲಿ ಶುಧಕ್ಕ ಪ್ರಥಮ, ಸುಜಾತಮ್ಮ ದ್ವಿತೀಯ, ಭಾಗ್ಯಮ್ಮ ತೃತೀಯ ಬಹುಮಾನ ಪಡೆದುಕೊಂಡರು. ಚಮಚಗೋಲಿ ಆಟದಲ್ಲಿ ರೇಖಾ ಪ್ರಥಮ, ಅರ್ಪಿತಾ ದ್ವಿತೀಯ, ಲಕ್ಷಿö್ಮÃ ತೃತೀಯ, ಜೋಡಿ ಆಟದಲ್ಲಿ ಸುಶ್ರಾವ್ಯ ಪ್ರಥಮ, ಲಾವಣ್ಯ ದ್ವಿತೀಯ, ಕವಿತಾ ತೃತೀಯ, ಬಾಲ್ ಪಾಸಿಂಗ್ನಲ್ಲಿ ಅಪೂರ್ವ ಪ್ರಥಮ, ಸುಶ್ರಾವ್ಯ ದ್ವಿತೀಯ, ಯಶೋಧಮ್ಮ ತೃತೀಯ ಬಹುಮಾನ ಪಡೆದು ಕೊಂಡರು. ವಿಜೇತರಿಗೆ ಆಧ್ಯಾತ್ಮ ಶಿಕ್ಷಕಿ ಗೀತಕ್ಕ, ಸಿಆರ್ಪಿ ಕವಿತಾ, ಪ್ರಭುಕುಮಾರ್, ಸುಜಾತ, ಪೂರ್ಣಿಮ, ಸನತ್ ಕುಮಾರ್, ಎಸ್.ಎನ್.ಲಾವಣ್ಯ ಮತ್ತಿತರರು ಬಹುಮಾನ ವಿತರಿಸಿದರು. ಹುಳಿಯಾರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಆಟೋಟ ಸ್ಪರ್ಧೆನಡೆಸಿ ಬಹುಮಾನ ವಿತರಿಸಲಾಯಿತು.
ಹುಳಿಯಾರು: ರಾಜಕಾರಣಿಗಳೆಲ್ಲರೂ ನಾವು ರೈತರ ಮಕ್ಕಳು, ನಮ್ಮನ್ನು ಗೆಲ್ಲಿಸಿದರೆ ರೈತ ಪರ ಆಡಳಿತ ನಡೆಸುವುದಾಗಿ ಹೇಳುತ್ತಾರೆ. ಗೆದ್ದ ನಂತರ ಕಾರ್ಪರೇಟ್ ಕಂಪನಿಗಳ ಪರ ನಿಂತು ರೈತರನ್ನು ಕಡೆಗಣಿಸುತ್ತಾರೆ. ಹಾಗಾಗಿ ರೈತರು ಪಕ್ಷ, ಜಾತಿ ಬಿಟ್ಟು ರೈತ ಸಂಘದ ಮೂಲಕ ಸಂಘಟಿತರಾದಾಗ ಮಾತ್ರ ರೈತ ಪರವಾದ ಸರ್ಕಾರ ಮಾಡಲು ಸಾಧ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಕರೆ ನೀಡಿದರು. ಹುಳಿಯಾರಿನ ವಾಲ್ಮೀಕಿ ಸರ್ಕಲ್ನಲ್ಲಿ ಹೊಸ ಹಳ್ಳಿ ಚಂದ್ರಣ್ಣ ಬಣದ ರೈತ ಸಂಘಕ್ಕೆ ವಿವಿಧ ಹಳ್ಳಿಗಳ ರೈತರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಸರ್ಕಾರಿ ನೌಕರರು, ಜಾತಿಪರ ಸಂಘಟನೆಗಳು, ವೃತಿ ಪರ ಸಂಘಟನೆಗಳು ಸಂಘಟನೆಯ ಮಹತ್ವ ಅರಿತು ಸಂಘಟಿತರಾಗಿ ತಮ್ಮ ಪಾಲಿನ ಹಕ್ಕಿಗಾಗಿ ಹೋರಾಟ ರೂಪಿಸಿ ಸರ್ಕಾರಗಳ ಕಿವಿ ಹಿಂಡಿ ಕೆಲಸ ಮಾಡಿಸಿಕೊಳ್ಳುತ್ತಿವೆ. ಆದರೆ ಇಡೀ ದೇಶಕ್ಕೆ ಅನ್ನ ಕೊಡುವ, ಶೇ.೭೦ ತಕ್ಕೂ ಹೆಚ್ಚು ಉದ್ಯೋಗ ಸೃಷ್ಠಿಸುವ ರೈತರು ಮಾತ್ರ ಅಸಂಘಟಿತರಾಗಿ ದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ರೈತನನ್ನು ಅವಲಂಬಿಸಿಸಿದ್ದರೂ…
ಚಿಕ್ಕನಾಯಕನಹಳ್ಳಿ: ಬೇಸಿಗೆ ಸಂದರ್ಭದಲ್ಲಿ ಕಾಡುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಅನೈರ್ಮದಿಂದ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ನಿಯಂತ್ರಿಸಲು ಸಂಬAಧಿಸಿದ ಇಲಾಖೆಗಳು ಸೂಕ್ತಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಿö್ಮನಾರಾಯಣ್ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗ ಣದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ ಇಂದಿನ ಸಭೆಯಲ್ಲಿ ೨೨ಕ್ಕೂ ಮಿಗಿಲಾಗಿ ಸಾರ್ವಜನಿಕರಿಂದ ಅಹವಾಲು ಬಂದಿದ್ದು, ಕಂದಾಯ ಇಲಾ ಖೆಗೆ ಸಂಬAದಿಸಿದAತೆ ಹೆಚ್ಚು ಅರ್ಜಿಗಳು ಬಂದಿವೆ.ಸಮರ್ಪಕವಾದ ಅರ್ಜಿಗಳನ್ನು ನಿಗದಿತ ಸಮಯಕ್ಕೆ ವಿಲೇವಾರಿ ಮಾಡಲಾಗುವುದು ಹಾಗೂ ನ್ಯಾಯಾಲಯದಲ್ಲಿ ಹಾಗೂ ಸಕಾರಣವಿ ಲ್ಲದ ಅರ್ಜಿಗಳನ್ನು ಕಾರಣ ನೀಡಿ ವಿಲೇವಾರಿ ಮಾಡಲಾಗುವುದೆಂದರು. ಸಭೆಯಲ್ಲಿ ಸಾರ್ವಜನಿಕವಾಗಿ ಬಂದ ದೂರಿನಂತೆ ಪಟ್ಟಣದಲ್ಲಿ ನಾಯಿಗಳ ಕಾಟ ಹಾಗೂ ರಸ್ತೆಬದಿಯಲ್ಲಿ ತಿಂಡಿ, ತಿನಿಸು ತಯಾರಿಸಿ ಮಾರಾ ಟ ಮಾಡುವ ಪರವಾನಗಿಯಿಲ್ಲದ ಅಂಗಡಿಗಳು ವಿಪರೀತವಾಗಿ ಹೆಚ್ಚಿದ್ದು, ಸದರಿ ಆಹಾರ ಪದಾರ್ಥಗಳು ತಿನ್ನಲು ಯೋಗ್ಯವೇ ಎಂಬ ಪರಿಶೀಲನೆಯಾಗಿಲ್ಲವೆಂಬ ದೂರಿಗೆ ಸಭೆಯಲ್ಲಿದ್ದ ಪುರಸಭಾ…
ತುರುವೇಕೆರೆ: ಇತಿಹಾಸ ಪ್ರಸಿದ್ದ ಪಟ್ಟಣದ ಶ್ರೀ ಬೇಟೆರಾಯ ಸ್ವಾಮಿಯ ರ ಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧುವಾರ ಮದ್ಯಾಹ್ನ ಬಹಳ ವಿಜೃಂಬಣೆಯಿAದ ನೆರವೇರಿತು. ಬುಧುವಾರ ಬ್ರಹ್ಮ ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಬೇಟೆರಾಯಸ್ವಾಮಿ ಮೂಲ ದೇವರಿಗೆ ಪಂಚಾಮೃತ, ಕ್ಷೀರಾಭಿಷೇಕ ಸೇರಿದಂತೆ ದೇವಾಲಯದಲ್ಲಿ ಅನೇಕ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾದಿಗಳು ದೇವಾಲಯಕ್ಕೆ ತೆರಳಿ ವಿಶೇ಼ಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಬೇಟರಾಯಸ್ವಾಮಿಯನ್ನು ರಥದಲ್ಲಿ ಕುಳ್ಳರಿಸಿ ಎಡೆ ನೇವೇದ್ಯ ನಂತರ ರಥಕ್ಕೆ ಪೂಜೆ ಸಲ್ಲಿಸಿದರು. ಅಕಾಶದಲ್ಲಿ ಗರುಡ ದರ್ಶನ ನೀಡುತ್ತಿದ್ದಂತೆ ನೆರದಿದ್ದ ಆಪಾರ ಭಕ್ತರು ಗೋವಿಂದಾ ಗೋವಿಂದ ಸುಬ್ಬಾ ಸುಬ್ಬಾ ಗೋವಿಂದ ಬೇಟರಾಯಸ್ವಾಮಿ ಗೋವಿಂದ ನಾಮ ಸ್ಮರಣೆ ಮುಗಿಲು ಮಟ್ಟಿತ್ತು. ತಹಸೀಲ್ದಾರ್ ಕುಂ.ಇ.ಅಹಮದ್ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡುತ್ತಲೆ ಭಕ್ತರು ಜೈಘೋಷ ಕೂಗುತ್ತಾ ರಥವನ್ನು ಬಹಳ ಉತ್ಸಾಹದಿಂದ ಎಳೆದರು. ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಕ್ತಿ ಭಾವದಿಂದ ರಥಕ್ಕೆ ಬಾಳೆಹಣ್ಣು, ದವನವನ್ನು ಎಸೆದರೆ. ಬಂದAತ ಭಕ್ತಾಧಿಗಳಿಗೆ ಪಾನಕ, ಪಲಹಾರ, ಮಜ್ಜಿಗೆ, ಹಾಗೂ ಬೂಂದಿ-ಪಾಯಸ, ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.…