ತುಮಕೂರು: ನಡೆದಾಡುವ ದೇವರಾದ ಪರಮಪೂಜ್ಯಡಾ. ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರ ದಿವ್ಯ ಕೃಪಾದೃಷ್ಟಿಗೆ ಪಾತ್ರರಾಗಿದ್ದ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯನವರು ಒಬ್ಬ ಆದರ್ಶ ಶರಣರಂತೆ ಬದುಕಿ ಮುಂದಿನ ಯುವಜನಾಂಗಕ್ಕೆ ಮಾದರಿಯಾಗಿದ್ದರು ಎಂದು ಸಿದ್ಧಗಂಗಾ ಮಠದ ಪೂಜ್ಯ ಅಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ತುಮಕೂರು ಜಿಲ್ಲಾ ಹಾಗು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಲಿಂ. ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯನವರ ಸಾಮಾಜಿಕ ಸೇವಾನಿಷ್ಠೆ ವಿಚಾರ ಸಂಕಿರಣವನ್ನು ಶ್ರೀಕ್ಷೇತ್ರದ ಕನ್ನಡ ಪಂಡಿತ್ ಕಾಲೇಜಿನ ಸ್ವಾಮೀ ಜಿ ಸಭಾಂಗಣದಲ್ಲಿ ಆಶೀರ್ವಚನ ನೀಡುತ್ತಾ ಶರಣರು ಬದುಕಿದ ರೀತಿ ಎಂದೆAದಿಗೂ ಆ ದರ್ಶ ಎಂದರು. ನಂತರ ವಿಚಾರ ಸಂಕಿರಣ ಉದ್ಘಾಟಿಸಿದ ಟಿ.ಕೆ.ನಂಜುAಡಪ್ಪನವರು ಶರಣ ಶ್ರೇಷ್ಠ ಮಲ್ಲಿಕಾ ರ್ಜುನಯ್ಯನವರ ಪತ್ರಗಳಲ್ಲಿನ ಜೀವನ ಮೌಲ್ಯ ಕುರಿತು ಮಾಡನಾಡಿದರು. ವಿದ್ವಾನ್ ಕೋ.ರಂ.ಬಸವರಾಜುರವರು ಸಾಮಾಜಿಕ ಚಿಂತನೆ ಕುರಿತು ಮಾತನಾಡಿದರು. ಅಧ್ಯಕ್ಷ ಸ್ಥಾನದಿಂದ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯನವರು ಮಾತನಾ ಡುತ್ತಾ ಶರಣ ಸಾಹಿತ್ಯ ಪರಿಷತ್ತಿನ ಸೇವಾ ಚಟುವಟಿಕೆಗಳಲ್ಲಿ ದತ್ತಿ ನೀಡಿರುವುದರಿಂದ ಶರಣ ತತ್ವಗಳನ್ನು ಬಿತ್ತನೆ ಮಾಡುವ…
Author: News Desk Benkiyabale
ತುಮಕೂರು: ಮತದಾರರ ಪಟ್ಟಿ ತಯಾರಿಕೆ ಸಂದರ್ಭದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಉಪ ವಿಭಾ ಗಾಧಿಕಾರಿ ಗೌರವ ಕುಮಾರ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತುಮಕೂರು ಉಪವಿಭಾಗ ಮಟ್ಟದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ತಯಾರಿಕೆ ಸಂಬAಧ ಮತದಾರರ ನೋಂದಣಾಧಿಕಾರಿಗಳ ಕರಡು ಕೈಪಿಡಿ ಕುರಿತು ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಅಭಿಪ್ರಾಯಗಳನ್ನು ಪಡೆ ಯುವ ಸಂಬAಧ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಉಪವಿಭಾಗ ವ್ಯಾಪ್ತಿಗೊಳಪಡುವ ಪ್ರತಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಿಂದ ಅನರ್ಹರ ಹೆಸರನ್ನು ಕೈಬಿಡಬೇಕು. ಮತದಾರರು ಎರಡು ಕಡೆ ಹೆಸರನ್ನು ನೋಂದಾಯಿಸಿಕೊAಡಿದ್ದರೆ ಒಂದು ಕಡೆ ಅವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು. ಮತದಾರರು ಮೃತರಾಗಿದ್ದರೆ, ವರ್ಗಾವಣೆಯಾಗಿದ್ದರೆ ಅಂತಹವರ ಹೆಸರನ್ನು ಕೈಬಿಟ್ಟು ನಿಖರವಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕೆಂದು ನಿರ್ದೇಶನ ನೀಡಿದರು. ಸಭೆಯಲ್ಲಿ ನೋಂದಾಯಿತ ಹಾಗೂ ಮಾನ್ಯತೆ ಪಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು…
ಚಿಕ್ಕನಾಯಕನಹಳ್ಳಿ: ಪುರಸಭಾ ಸದಸ್ಯ ರೇಣುಕ ಪ್ರಸಾದ್ರಿಂದ ನನಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಎಂದು ಮುಖ್ಯಾಧಿಕಾರಿ ಮಂಜಮ್ಮ ತಮ್ಮ ಅಳಲನ್ನು ವ್ಯಕ್ತಪಡಿಸಿದರು. ಸಂವಿಧಾನ ಉಳಿಸಿ ಹಾಗೂ ಮಾಹಿತಿ ಹಕ್ಕಿನ ನಿಯಮ ಇಲ್ಲಿನ ಪುರಸಭೆಗೆ ಅನ್ವಯವಾ ಗುವುದಿಲ್ಲವೆ ಎಂಬ ಪ್ರಶ್ನೆಯೊಂದಿಗೆ ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿರುವ ಸದಸ್ಯ ರೇಣುಕ ಪ್ರಸಾದ್ರಿಗೆ ಏಕೆ ಅವರು ಕೇಳಿದ ಮಾಹಿತಿ ನೀಡುತ್ತಿಲ್ಲ ಎಂಬ ವರದಿಗಾರರ ಪ್ರಶ್ನೆಗೆ ಮುಖ್ಯಾ ಧಿಕಾರಿ ಮಂಜಮ್ಮನವರು ಸಮರ್ಪಕವಾದ ಉತ್ತರ ನೀಡಲು ತಡಬಡಾಯಿಸಿದರು. ನಾನೀಗ ಮಾಹಿತಿ ನೀಡಿದ್ದೇನೆ ಎಂದರು. ಆದರೆ ಸದರಿ ಮಾಹಿತಿಯು ಅವಧಿ ಮೀರಿದ ನಂತರ ನೀಡಿದ ಮಾಹಿತಿಯಾಗಿದೆ ಹಾಗೂ ಅವರು ಕೇಳಿದ ಮಾಹಿತಿ ಅಗಾಧವಾಗಿದೆ ಎಂದು ಉತ್ತರಿಸಿದ್ದೀರಿ ಹಾಗೂ ಸಿಬ್ಬಂದಿಯ ಕೊರತೆ ಹಾಗೂ ಕಛೇರಿಯಲ್ಲಿಯೇ ವೀಕ್ಷೀಸಿ ಎಂಬ ಉತ್ತರ ಎಷ್ಟು ಸಮರ್ಪಕ ಎಂಬ ಪ್ರಶ್ನೆಗಳ ಸುರಿಮಳೆಗೆ ವಿಚಲಿತರಾದ ಮುಖ್ಯಾಧಿಕಾರಿ ರೇಣುಕಪ್ರಸಾದ್ರ ಮೇಲೆಯೇ ಆರೋಪಗಳ ಮಳೆಸುರಿಸಿದರು. ಅವರು ನನ್ನನ್ನು ಅವಾಚ್ಗಶಬ್ದ ಗಳಿಂದ ನಿಂದಿಸುತ್ತಾರೆ, ಇದರಿಂದ ನನಗೆ ಕೆಲಸವೇ ಮಾಡಲು ಆಗುತ್ತಿಲ್ಲ ಹಾಗೂ ಮಾನಸಿಕವಾಗಿ ನೊಂದಿದ್ದೇನೆ ಎಂದರು.…
ತುಮಕೂರು: ನಗರದ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಸಂಚುರ ವಾಚ್ ಕೇಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಕಾರ್ಮಿಕರು ನ್ಯಾಯಕ್ಕಾಗಿ ದಶಕದ ಹೆಚ್ಚು ಕಾಲ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಜಯದಕ್ಕಿದೆ. ಈ ಸಂಬAಧ ಕಾರ್ಖಾನೆಯನ್ನು ಅಕ್ರಮ ಬೀಗ ಮುದ್ರೆ ಗೆ ಒಳಪಡಿಸಿದ್ದ ಆಡಳಿತ ಮಂಡಳಿಯ ತೀರ್ಮಾನವನ್ನು ಪ್ರಶ್ನಿಸಿ ಅವರಿಗೆ ಕಾರ್ಮಿಕರಿಗೆ ನ್ಯಾಯ ಬದ್ಧವಾಗಿ ಬರಬೇಕಾದಂತಹ ಹಣದ ಪರಿಹಾರವನ್ನು ನೀಡುವಂತೆ ಕೋರಿ ಕಾರ್ಮಿಕ ನ್ಯಾಯಾಲಯದಲ್ಲಿ ದಾವೆ ಕಾರ್ಮಿಕರು ಕಾರ್ಮಿಕ ನ್ಯಾಯಾಧೀಕರಣ ಕಾರ್ಮಿಕ ನ್ಯಾಯಾಧಿಕರಣದಲ್ಲಿ ವಕೀಲರಾದಂತಹ ಹಿರಿಯ ಕಾರ್ಮಿಕ ನಾಯಕರು ಆದಂತ ಮುರಳೀಧರ್ ರವರು ವಿವಾದವನ್ನು ಕಾರ್ಮಿಕರ ಪರವಾಗಿ ವಾದಿಸಿ, ಪರಿಹಾರದ ಮತ್ತೊಬ್ಬನು ನೀಡುವಂತೆ ನ್ಯಾಯಾಲಯದ ಆದೇಶವನ್ನು ಪಡೆಯಲು ಯಶಸ್ವಿಯಾಗಿದ್ದರು. ಹಾಗೂ ಕಾರ್ಮಿಕ ಅಧಿಕಾರಿಗಳ ಸಮ್ಮುಖದಲ್ಲಿ ದಾವೇ ಹೊಡಿ ಈ ಅರ್ಜಿಯನ್ನು ವಿಚಾರಣೆ ನಡೆಸಿದ ಪ್ರಾಧಿಕಾರ ಕಾರ್ಮಿಕರು ಉಪಧಮಕ್ಕೆ ಅರ್ಹ ಎಂದು ತೀರ್ಪು ನೀಡಿತು. ನ್ಯಾಯಾಲಯಗಳ ಆದೇಶದ ನಂತರವೂ ಆಡಳಿತ ಮಂಡಳಿಯು ಕಾರ್ಮಿಕ ದಿನಾಚರಣೆವಾಗ ಬೇಕಾದಂತಹ ಹಾಗೂ ಪರಿಹಾರವನ್ನು ನೀಡದೆ ಇದ್ದ ಕಾರಣ ಕಾರ್ಮಿಕರು ಅಧಿಕಾರಿಗಳ…
ತುಮಕೂರು: ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ನಿಂದ ಬುಧವಾರ ನಗರದಲ್ಲಿ ಭಕ್ತಿ, ಸಡಗರದಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಗುತ್ತಿದೆ. ಬಿ.ಹೆಚ್.ರಸ್ತೆಯ ಶಿವಶ್ರೀ ಬ್ಯಾಂಕ್ ಬಳಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ಜಿ.ಬಿಜ್ಯೋತಿಗಣೇಶ್ ಭಾಗವಹಿಸಿ ಪೂಜೆ ಸಲ್ಲಿಸಿದರು. ಜಗದ್ಗುರು ಪಂಚಾಚಾರ್ಯ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ತತ್ವಗಳು ಇಂದಿನ ಸಮಾಜದ ಸಮಾನತೆಗೆ, ಧಾರ್ಮಿಕ ಸಾಮರಸ್ಯಕ್ಕೆ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ದಾರಿದೀಪದಂತಿವೆ. ರೇಣುಕಾಚಾರ್ಯರು ಶೈವ ತತ್ವ ಶಾಸ್ತçವನ್ನು ಜನಸಾಮಾನ್ಯರಿಗೆ ಪರಿಚಯಿಸಿ ಅದನ್ನು ಜೀವನದ ಭಾಗವನ್ನಾಗಿ ಮಾಡಿದ ಮಹಾ ಶರಣರು ಎಂದು ಹೇಳಿದರು. ರೇಣುಕಾಚಾರ್ಯರು ತಮ್ಮ ವಚನಗಳ ಮೂಲಕ ತತ್ವಗಳನ್ನು ಜನರಿಗೆ ತಿಳಿಸಿಕೊಟ್ಟರು. ಅವರ ವಚನಗಳು ಜನರಿಗೆ ಶ್ರಮ, ಭಕ್ತಿ, ನೈತಿಕತೆ ಮತ್ತು ಸಮಾನತೆಯನ್ನು ಸಾರಿವೆ. ಅವಮಾನಿತ ವರ್ಗಗಳನ್ನು ಪ್ರೀತಿಸಿ ಅವರಿಗೆ ತತ್ವ ಶಾಸ್ತç ಹಾಗೂ ಧಾರ್ಮಿಕ ಶಿಕ್ಷಣ ನೀಡಿದರು. ಲಿಂಗಾಯತ ಧರ್ಮದ ಮೂಲತ: ಸಿದ್ಧಾಂತಗಳನ್ನು ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಅವರು ತಮ್ಮ ಜೀವನವನ್ನು…
ತುಮಕೂರು: ನೊಂದ ಸಮಾಜದವರಿಗೆ ಉಳಿದ ಸಮಾಜದವರು ಧ್ವನಿಯಾಗಿ ಶಕ್ತಿ ತುಂಬಬೇಕು, ಪರಸ್ಪರ ನೆರವಾಗುತ್ತಾ ಸಹಬಾಳ್ವೆಯ ಸಮಾಜ ನಿರ್ಮಾಣ ಮಾಡಬೇಕು ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು. ಬುಧವಾರ ನಗರದ ವಿಘ್ನೇಶ್ವರ ಕಂಫರ್ಟ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸೇನೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಚಿದೇವ ಸೌಹಾರ್ದ ಪತ್ತಿನ ಸಹಕಾರಿ ಅಧ್ಯಕ್ಷ ಶಾಂತಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದ ಸ್ವಾಮೀಜಿ, ವಿವಿಧ ಜಾತಿಗಳು ಈ ಸಮಾಜದ ಬಳಗಗಳಿದ್ದಂತೆ. ಹಿಂದೆ ಕುಲಕಸುಬಿನ ಆಧಾರದಲ್ಲಿ ಜಾತಿಗಳು ಗುರುತಿಸಲ್ಪಟ್ಟಿದ್ದವು. ಆ ಎಲ್ಲಾ ಜಾತಿಯವರು ಊರಿನ ಜನರ ಹಿತಕ್ಕಾಗಿ ಸೌಹಾರ್ದತೆಯಿಂದ ತೊಡಗಿಕೊಂಡು ಆದರ್ಶವಾಗಿ ಬಾಳುತ್ತಿದ್ದರು. ಈಗಲೂ ಅದೇ ಬಾಂಧವ್ಯ ಜಾತಿಗಳ ನಡುವೆ ಬೆಳೆಯಬೇಕು ಎಂದು ಹೇಳಿದರು. ಯಾವುದೇ ಸಮಾಜ ಇತರರನ್ನು ಅವಲಂಭಿಸದೆ ಸ್ವಂತ ಶಕ್ತಿ ಬೆಳೆಸಿಕೊಂಡು ಸರ್ಕಾರದ ವಿವಿಧ ಸೌಲಭ್ಯ, ಸ್ಥಾನಮಾನಗಳನ್ನು ಪಡೆಯುವಂತಾಗಬೇಕು. ಇಂತಹ ಶಕ್ತಿ ಬರಬೇಕೆಂದರೆ ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಅವರಿಗೆ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ. ಮಡಿವಾಳ ಸಮಾಜದ ಶಾಂತಕುಮಾರ್ ಅವರನ್ನು ಇತರೆ ಹಿಂದುಳಿದ ಸಮಾಜದ…
ಚಿಕ್ಕನಾಯಕನಹಳ್ಳಿ: ಮಾಹಿತಿ ಹಕ್ಕಿನಡಿ ಕೇಳಲಾದ ಮಾಹಿತಿಗೆ ಪಟ್ಟಣದ ಪುರಸಭಾ ಮುಖ್ಯಾಧಿಕಾರಿ ತಿಂಗ ಳುಗಟ್ಟಲೆ ವಿಳಂಬ ಮಾಡಿ ಕಾಟಾಚಾರದ ಸಮಜಾಯಿಶಿ ನೀಡಿದ ಕುರಿತು ಪುರಸಭಾ ಸದಸ್ಯ ರೇಣುಕಪ್ರಸಾದ್ ಸಂವಿಧಾನ ಉಳಿಸಿ ಎಂದು ಕಪ್ಪು ಪಟ್ಟಿಧರಿಸಿ ಒಂಟಿಯಾಗಿ ಪ್ರತಿಭಟನೆ ನಡೆಸಿದರು. ಪಟ್ಟಣದ ಪುರಸಭೆ ಮುಂಭಾಗದಲ್ಲಿ ೧೨ ನೇ ವಾರ್ಡ್ನ ಸದಸ್ಯ ಸಿ.ಜೆ. ರೇಣುಕಪ್ರಸಾದ್ ತೋಳಿಗೆ ಕಪ್ಪುಪಟ್ಟಿ ಧರಿಸಿ “ಮುಖ್ಯಾಧಿಕಾರಿಗಳೇ ಸಂವಿಧಾನ ಉಳಿಸಿ. ಮಹಿತಿಹಕ್ಕು ಕಾಯ್ದೆ_೨೦೦೫ ಚಿಕ್ಕನಾಯಕನಹಳ್ಳಿ ಪುರಸಭಾ ವ್ಯಾಪ್ತಿಗೆ ಅನ್ವ ಯವಾಗುವುದಿಲ್ಲವೆ” ಎಂಬ ಬರಹದ ಕರಪತ್ರ ವನ್ನಿಡಿದು ದಿಡೀರ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ನಾನು ಹಾಲಿ ಪುರಸಭಾ ಸದಸ್ಯನಾಗಿದ್ದು ಈ ಹಿಂದೆ ಪುರಸಭೆಯು ಸುಮಾರು ೧೮ ತಿಂಗಳುಗಳ ಆಡಳಿತ ಉಪವಿಭಾಗಾಧಿಕಾರಿಗಳಡಿ ನಡೆದಿದ್ದು, ಸದರಿ ಅವಧಿಯ ಜಮಾ_ಖರ್ಚಿನ ವಿವರವನ್ನು ನೀಡಿ ಎಂದು ಕಳೆದ ವರ್ಷದ ನವೆಂಬರ್ನಲ್ಲಿ ಮಾಹಿತಿ ಹಕ್ಕಿನಡಿ ಕೇಳಿದ್ದೆ. ಆದರೆ ನಿಯಮದ ಪ್ರಕಾರ ೩೦ದಿನದೊಳಗೆ ನೀಡಿಬೇಕಿದ್ದರೂ ಉತ್ತರ ನೀಡದೆ ನಿರ್ಲ್ಯಕ್ಷಿದರು. ಈ ನಡುವೆ ಹೊಸದಾಗಿ ಬಂದ ಇಲ್ಲಿನ ಮಾಹಿತಿ ಅಧಿಕಾರಿ…
ತುಮಕೂರು: ಭಾರತವು ಅತ್ಯಂತ ವೇಗವಾಗಿ ಆರ್ಥಿಕವಾಗಿ ಬೆಳವಣಿಗೆ ಹೊಂದಿರುತ್ತದೆ. ಪ್ರಪಂಚದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಮುಂದಿನ ಐದು ವರ್ಷದಲ್ಲಿ ಹೊರಹೊಮ್ಮಲಿದೆ. ರಚನಾತ್ಮಕ ಬೆಳವಣಿಗೆಯ ೨೦೪೭ರಲ್ಲಿ ಮುಂದುವರಿದ ದೇಶವಾಗಲು ಭಾರತ ಮುಂದುವರಿಯುತ್ತಿದೆ. ಆರ್ಥಿಕತೆ ಹೆಚ್ಚುತ್ತಿರುವ ಭೂ ರಾಜಕೀಯ ಪ್ರಭಾವವು ದೇಶವನ್ನು ಮುಂದಿನ ಐದು ವರ್ಷಗಳಲ್ಲಿ ವಿಶ್ವದ ಮೂರನೇ ಅತಿ ದೈನಿಕ ಆರ್ಥಿಕತೆ ಪಾಲಿಸಲು ಪಟ್ಟಿ ಮಾಡಿದೆ. ಈ ಲಾಶಾಟ್ಟೇಜಿಕವಾದ ಅಭಿವೃದ್ಧಿ ೨೦೪೭ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನವನ್ನು ಗಳಿಸಲು ದಾರಿ ತೋರಿಸಬಹುದು ಈ ವಿಶ್ವ ಮಟ್ಟದಲ್ಲಿ ಸಮಗ್ರ ಮತ್ತು ಶಾಶ್ವತ ಆರ್ಥಿಕತೆ ಅಭಿವೃದ್ಧಿಗೆ ಒಂದು ಮಾಪಕವನ್ನು ಸ್ಥಾಪಿಸುತ್ತದೆ ಎಂದು ಪ್ರಜಾ ಪ್ರಗತಿ ಸಂಪಾದಕರಾದ ಎಸ್. ನಾಗಣ್ಣ ನವರು ತಿಳಿಸಿದರು. ಪ್ರದರ್ಶನ ಕಾರರ ಮಾಹಿತಿಯನ್ನು ಮುಖ್ಯ ಭಾಷಣಕಾರರು ಹಾಗೂ ಭಾರತ್ ಪ್ರಿಂಟರ್ ಎಕ್ಸ್ಪೋ-೨೦೨೫ ಕೊ ಛೇರ್ಮನ್ ತುಷಾರ್ ದೋತಿರವರು ಮಾತನಾಡಿ ಪ್ರಿಂಟಿAಗ್ ಪರಿಕಾರಕಗಳು ಆಫ್ ಸೆಟ್, ಡಿಜಿಟಲ್, ಫ್ರೀ ಪ್ರೆಸ್, ಪ್ಲೆಕ್ಸ್, ಸ್ಕ್ರೀನ್, ಗ್ರಾವೂರ್, ಪೋಸ್ಟ್ ಪ್ರೆಸ್ ಮತ್ತು ಪ್ಯಾಕೇಜ್…
ಕೊರಟಗೆರೆ: ಮಹಿಳೆಯರ ಸಂಪೂರ್ಣ ಸಬಲೀಕರಣವಾಗಿ ಆಕೆ ಎಲ್ಲಾ ಸಮಯದಲ್ಲೂ ಸುರಕ್ಷಿತಳಾದಾಗ ಮಾತ್ರ ವಿಶ್ವಮಹಿಳಾ ದಿನಾಚರಣೆಗೆ ಪರಿ ಪೂರ್ಣ ಅರ್ಥ ಬರುತ್ತದೆ ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಅಂಬಿಕಾ ತಿಳಿಸಿದರು ಅವರು ತಾಲೂಕಿನ ಎಲೆರಾಂಪುರ ಗ್ರಾಮದ ಶ್ರೀ ರೇಣುಕೇಶ್ವರ ಸಮುದಾಯದಲ್ಲಿ ನಡೆದ “ಎಲ್ & ಟಿ ಫೈನಾನ್ಸ್, ಆಕ್ಸಸ್ಲೈವ್ಲಿಹುಡ್ಸ್” ರವರ ಸಹಯೋಗದಲ್ಲಿ ನಡೆದ ಅಂತರ ರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ದೇಶ ಅಭಿವೃದ್ದಿ ಹೊಂದಬೇಕಾದರೆ ಮಹಿಳೆಯರಿಗೆ ಎಲ್ಲಾ ರಂಗದಲ್ಲೂ ಸಮಾನ ಅವಕಾಶ ನೀಡಬೇಕು, ಮಹಿಳೆಯರು ತಾಯಂದಿರಾಗಿ ಮಕ್ಕಳಿಗೆ ಗುಣಮಟ್ಟದ ನೈತಿಕ ಶಿಕ್ಷಣ ನೀಡಬೇಕು, ವಿಶೇಷವಾಗಿ ಪ್ರತಿ ಕುಟುಂಬದಲ್ಲಿ ತಾಯಂದಿರು ಹೆಣ್ಣು ಮಕ್ಕಳ ಬಾಲ್ಯ ಮತ್ತು ಪ್ರೌಡಾ ಬೆಳವಣಿಗೆಯಲ್ಲಿ ಸಂಪೂರ್ಣ ಗಮನ ಹರಿಸಬೇಕು, ಈ ಸಮಯದಲ್ಲಿ ಕೆಲವು ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಕ್ಕೂ ಒಳಗಾಗುತ್ತಿವೆ, ಇಂತಹ ಸಂದರ್ಭದಲ್ಲಿ ಮಕ್ಕಳ ಮನಸ್ಥಿತಿ ಕುಗ್ಗಿರುತ್ತದೆ ತಾಯಂದಿರು ಇದರ ಬಗ್ಗೆ ಸೂಕ್ಷö್ಮವಾಗಿ ಅರಿತು ಮಕ್ಕಳ ಜೊತೆ ಇರಬೇಕು, ಪ್ರೌಡಾವಸ್ಥೆಯಲ್ಲಿ ಹೆಣ್ಣು ಮಕ್ಕಳು ಕಾಮುಕರ ಮತ್ತು ಮೋಸಗಾರರ…
ತುಮಕೂರು: ಒಳಮೀಸಲಾತಿಗಾಗಿ ಒತ್ತಾಯಿಸಿ ದಸಂಸ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾದಿ ಸ್ಥಳ ಹರಿಹರದಿಂದ ಮಾರ್ಚ್ ೦೫ ರಂದು ಹೊರಟಿರುವ ಕ್ರಾಂತಿಕಾರಿ ಪಾದಯಾತ್ರೆ ಮಾರ್ಚ್ ೧೬ರ ಭಾನುವಾರದಂದು ತುಮಕೂರು ನಗರ ಪ್ರವೇಶಿಸಲಿದ್ದು ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಡುವ ಸಂಬAಧ ಇಂದು ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ ನಡೆಯಿತು. ಸುಮಾರು ೩೦ ವರ್ಷಗಳ ನಿರಂತರ ಹೋರಾ ಟದ ಫಲವಾಗಿ ೨೦೨೪ರ ಆಗಸ್ಟ್ ೦೧ ರಂದು ಸುಪ್ರಿಂಕೋರ್ಟಿನ ೭ ನ್ಯಾಯಾಧೀಶರ ಪೀಠ ಒಳ ಮೀಸಲಾತಿ ಜಾರಿ ಅಯಾಯ ರಾಜ್ಯ ಸರಕಾರಗಳ ಮಾಡಬಹುದು ಎಂಬ ತೀರ್ಪು ನೀಡಿದೆ. ಎಂಪೇರಿಕಲ್ ಡಾಟಾ ಹೆಸರಿನಲ್ಲಿ ಸರಕಾರಗಳು ವಿಳಂಭ ಧೋರಣೆ ಅನುಸರಿಸುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಎರಡು ವರ್ಷ ಕಳೆದರೂ ಮೀನಾಮೇಷ ಎಣಿಸುತ್ತಿದ್ದು, ಸರಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಪ್ರೊ.ಹರಿರಾಮ್ ಮತ್ತು ಭಾಸ್ಕರ್ ಪ್ರಸಾದ್ ನೇತೃತ್ವದ ಸುಮಾರು ೪೦ ಜನರ ತಂಡ…