Author: News Desk Benkiyabale

ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2024-25ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಸ್ನಾತಕ/ಸ್ನಾತಕೋತ್ತರ ಕೋರ್ಸುಗಳಾದ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಲ್.ಐ.ಎಸ್ಸಿ., ಬಿ.ಎಸ್.ಡಬ್ಲೂö್ಯ., ಬಿ.ಎಸ್ಸಿ  ಎಂ.ಎ., ಎಂ.ಸಿ.ಜೆ., ಎಂ.ಕಾA., ಎಂ.ಸಿ.ಎ., ಎಂ.ಎಸ್.ಡಬ್ಲೂö್ಯ., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ. ಎಂ.ಬಿ.ಎ., ಪಿ.ಜಿ. ಸರ್ಟಿಫಿಕೇಟ್, ಡಿಪ್ಲೋಮಾ, ಸರ್ಟಿಫಿಕೇಟ್ ಪ್ರೋಗ್ರಾಮ್ಸ್ಗಳಿಗೆ ಪ್ರವೇಶ ಪಡೆಯಲು ಮಾರ್ಚ್ 31 ಕಡೆಯ ದಿನವಾಗಿದೆ. ಪ್ರಥಮ ವರ್ಷದ ಪ್ರವೇಶಾತಿಗಾಗಿ ಬಿ.ಎ. ತರಗತಿಗೆ 8400 ರೂ., ಬಿ.ಕಾಂ.-8900 ರೂ., ಬಿ.ಸಿ.ಎ/ಬಿ.ಎಸ್ಸಿ.-23900 ರೂ., ಬಿ.ಬಿ.ಎ./ಬಿ.ಎಲ್.ಐ.ಎಸ್ಸಿ/ಎಂ.ಕಾA.-12400 ರೂ., ಬಿ.ಎಸ್.ಡಬ್ಲೂö್ಯ.-12900 ರೂ., ಎಂ.ಎ.-10600 ರೂ., ಎಂ.ಸಿ.ಜೆ.-16200,. ಎಂ.ಬಿ.ಎ.-29900, ಎಂ.ಎಸ್ಸಿ./ಎA.ಸಿ.ಎ.-29700, ಎಂ.ಎಸ್.ಡಬ್ಲೂö್ಯ.-21300, ಎಂ.ಎಲ್.ಐ.ಎಸ್ಸಿ.-18150 ರೂ.ಗಳ ಶುಲ್ಕ ನಿಗಧಿಪಡಿಸಲಾಗಿದೆ. ಪದವಿಪೂರ್ವ ಹಾಗೂ ಸ್ನಾತಕ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ ತುಮಕೂರು, ಟೂಡಾ ಲೇಔಟ್, ರಾಜೀವ್‌ಗಾಂಧಿ ನಗರ, ಗಂಗಸAದ್ರ ಮುಖ್ಯರಸ್ತೆ, ಮೆಳೆಕೋಟೆ, ತುಮಕೂರು-572105…

Read More

ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿಯ ಪದವಿ ಕಾಲೇಜಿನ ಆವರಣದಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. 1999-2000 ಸಾಲಿನ ಏಳನೇ ತರಗತಿ ವ್ಯಾಸಂಗ ಮಾಡಿದ ಕತ್ತಿಮರ ಶಾಲೆಯ ವಿದ್ಯಾರ್ಥಿಗಳು. 2002-03 ನೇಸಾಲಿನ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡಿದ ಜಯಪ್ರಕಾಶ ಪ್ರೌಢ ಶಾಲೆಯ ವಿದ್ಯಾರ್ಥಿಗಳು, 2004-05 ನೇ ಸಾಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಒಂದೆಡೆ ಸೇರಿ ಕಾರ್ಯಕ್ರಮವನ್ನು ನಡೆಸಿದರು. 25 ವರ್ಷಗಳ ನಂತರ ಒಂದಾದ ಗೆಳೆಯ ಗೆಳತಿಯರು ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ವಂದಿಸುವ ಹಾಗೂ ತಮ್ಮ ಬಾಲ್ಯದ ನೆನಪುಗಳನ್ನು ಮರುಕಳಿಸುವ ಅಂಗವಾಗಿ ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗಾಯತ್ರಮ್ಮ, ಪದ್ಮಮ್ಮ, ಶಾರದಮ್ಮ, ರಾಮೇಗೌಡರು, ಶಂಕರಲಿAಗಪ್ಪ, ಸುರೇಶ್, ಶಾಂತಕುಮಾರ್, ತಮ್ಮಣ್ಣ, ನವೀನ್, ಕವಿತಾ, ಸಿದ್ದಗಂಗಮ,್ಮ ನೀಲಮ್ಮ, ಲಕ್ಷ್ಮಯ್ಯ, ಪಾಂಡಣ್ಣ, ರಂಗಸ್ವಾಮಿ, ಸೇರಿದಂತೆ ನಿವೃತ್ತ ಶಿಕ್ಷಕರಿಗೆ ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿ ರಮೇಶ್.ಜಿ.ಎಸ್ ಮಾತನಾಡಿ ತನ್ನ ಬಾಲ್ಯದ ಶಾಲೆಗಳಲ್ಲಿ ಪ್ರೀತಿಯಿಂದ ಮುದ್ದು ಮಾಡಿ ವಿದ್ಯೆ ಕಲಿಸಿದ ಗುರುಗಳನ್ನು…

Read More

ತುಮಕೂರು: ಒಳಮೀಸಲಾತಿ ಜಾರಿಯಾಗುವವರೆಗೂ ಬ್ಯಾಕಲಾಗ್ ಸೇರಿದಂತೆ ಯಾವುದೇ ಸರಕಾರಿ ಹುದ್ದೆಗಳನ್ನು ತುಂಬ ಬಾರದು, ತುಮಕೂರು ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರಿಗೆ ವಿಧಾನ ಪರಿಷತ್ ಹಾಗೂ ವಿವಿಧ ನಿಗಮ ಮಂಡಳಿಗಳ ಪದಾಧಿಕಾರಿಗಳ ಹುದ್ದೆ ನೀಡಬೇಕೆಂದು ಆಗ್ರಹಿಸಿ ಇಂದು ಮಾದಿಗ ಸಂಘಟನೆಗಳ ಒಕ್ಕೂಟದವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೆ ಸಂಬAದಿಸಿದAತೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಅಗತ್ಯ ದಾಖಲೆಗಳನ್ನು ಕಲೆ ಹಾಕಿದ್ದು, ಶೀಘ್ರದಲ್ಲಿಯೆ ವರದಿ ನೀಡುವ ಸಾಧ್ಯತೆ ಇದೆ. ಇಂತಹ ಸಮಯ ವಿಳಂಭ ಕಾರಣ ನೀಡಿ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಅನುಮತಿ ಕೋರಿರುವುದು ದುರದೃಷ್ಟಕರ. ಹಾಗಾಗಿ ಸರಕಾರ ಯಾವ ಕಾರಣಕ್ಕೂ ಒಳಮೀಸಲಾತಿ ಜಾರಿಯಗುವವರೆಗೂ ಸರಕಾರಿ ಹುದ್ದೆಗಳನ್ನು ತುಂಬಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸಲ್ಲಿಸಿದ ನಂತರ ಮಾತನಾಡಿದ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೋಡಿಯಾಲ ಮಹದೇವ್,ಸುಮಾರು 3 ದಶಕಗಳ ಹೋರಾಟದ ಫಲವಾಗಿ ಸುಪ್ರಿಂಕೋರ್ಟು ಒಳಮೀಸಲಾತಿ ಜಾರಿಯ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ನೀಡಿದೆ. ಇಂತಹ ವೇಳೆಯಲ್ಲಿ ಎಂಪೆರಿಕಲ್ ಡಾಟಾ ಪಡೆಯಲು…

Read More

ಹುಳಿಯಾರು: ಹುಳಿಯಾರು ಹೋಬಳಿ ಕಂಪನಹಳ್ಳಿ ಬಳಿಯ ತೆಂಗಿನ ತೋಟವೊಂದರಲ್ಲಿ ನೀರಾ ಇಳಿಸುತ್ತಿದ್ದ ರೈತನ ಮೇಲೆ ಅಬಕಾರಿ ಅಧಿಕಾರಿಗಳು ಶುಕ್ರವಾರ ದಿಡೀರ್ ದಾಳಿ ಮಾಡಿದ್ದರು. ನೀರಾ ಇಳಿಸುತ್ತಿದ್ದ ರೈತ ಈರಣ್ಣ ಅವರನ್ನು ಬಂಧಿಸಿ ನೀರಾ ಇಳಿಸಲು ಬಳಸುತ್ತಿದ್ದ ಪರಿಕರಗಳನ್ನು ವಶ ಪಡಿಸಿಕೊಂಡರು. ವಿಚಾರ ತಿಳಿದ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಘಟನಾ ಸ್ಥಳಕ್ಕೆ ದೌಡಾಯಿಸಿ ಅಬಕಾರಿ ಜೀಪಿಗೆ ಅಡ್ಡ ಕುಳಿತು ಈರಣ್ಣ ಅವನ್ನು ಬಿಡಿಸಿಕೊಂಡ ಪ್ರಕರಣ ನಡೆದಿದೆ. ರೈತ ಹೋರಾಟಗಾರ ಪ್ರೊ.ಎಂ.ಡಿ.ನAಜುAಡಸ್ವಾಮಿ ಅವರ ನೀರಾ ಚಳುವಳಿಯಿಂದ ಪ್ರಭಾವಿತರಾಗಿ ಹುಳಿಯಾರಿನ ಈರಣ್ಣ ಕಳೆದ ಮೂರು ದಶಕಗಳಿಂದಲೂ ಈ ಭಾಗದಲ್ಲಿ ನೀರಾ ಇಳಿಸುವ ಮೂಲಕ ನೀರಾ ಈರಣ್ಣನೆಂದೆ ಪ್ರಖ್ಯಾತರಾಗಿದ್ದಾರೆ. ಎಂದಿನAತೆ ಶುಕ್ರವಾರವೂ ಸಹ ನೀರಾ ಇಳಿಸುವಾಗ ಏಕಾಏಕಿ ಅಬಕಾರಿ ಇನ್ಸ್ಪೆಕ್ಟರ್ ಎ.ಕೆ.ನವೀನ್ ಅವರು ತಮ್ಮ ಹತ್ತನ್ನೆರಡು ಮಂದಿ ಪಡೆಯ ಜೊತೆ ದಾಳಿ ಮಾಡಿ ಈರಣ್ಣ ಅವನ್ನು ಬಂಧಿಸಿ ಅಲ್ಲಿದ್ದ ನೀರಾ, ನೀರಾ ಇಳಿಸಲು ಬಳಸುತ್ತಿದ್ದ ಪರಿಕರಗಳನ್ನು ವಶ ಪಡಿಸಿಕೊಂಡರು. ವಿಚಾರ ತಿಳಿದ ರೈತ ಸಂಘದ…

Read More

ತುಮಕೂರು: ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿಯೇ ತಮ್ಮ ಜೀವನದ ಗುರಿಯನ್ನು ನಿರ್ಧರಿಸಿ ಅದನ್ನು ತಲುಪಲು ಶ್ರಮವಹಿಸಿ ಕಲಿತು ಮುನ್ನಡೆಯಿರಿ ಎಂದು ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾನಿಲಯದಲ್ಲಿ ಎಲೆಕ್ಟಿçಕಲ್ ಆಂಡ್ ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್ ಹಾಗೂ ಜಿಟಿಟಿ ಫೌಂಡೇಷನ್ ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ “ಎಲೆಕ್ಟಿçಕ್ ವೆಹಿಕಲ್ ಟೆಕ್ನಾಲಜಿ” ಎಂಬ ವಿಷಯದ ಕುರಿತು ಇಂದಿನಿAದ ಆರಂಭಗೊAಡ 30ದಿನಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮ ಜಗತ್ತಿಗೆ ಅಗತ್ಯವಿರುವ ತಂತ್ರಜ್ಞಾನವನ್ನು ಅರಿತುಕೊಂಡು ಮುನ್ನಡೆಯಬೇಕು ಆಗ ಮಾತ್ರ ನೀವು ಯಶಸ್ವಿಯಾಗುತ್ತೇವೆ. ಹಾಗಾಗಿ ವಿದ್ಯಾರ್ಥಿಗಳು ಪ್ರತಿನಿತ್ಯ ಕಲಿಯಬೇಕು.ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುಬೇಕು ಹಾಗೂ ಕೈಗಾರಿಕೆಗಳಿಗೆ ಬೇಕಾದ ಕೌಶಲವನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಎಲೆಕ್ಟಿçಕ್ ಅಂಡ್ ಎಲೆಕ್ಟಾçನಿಕ್ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ರಾಜೇಶ್ ಕಾಮತ್ ಮಾತನಾಡಿ, ಕಾಲೇಜಿನಲ್ಲಿ ನಡೆಯುವ ತರಬೇತಿ ಕಾರ್ಯಗಾರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸಿ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು. ನಿಮ್ಮಲ್ಲಿ…

Read More

ತುಮಕೂರು : ಇಂದು ತುಮಕೂರು ನಗರದಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ವಿ.ವೆಂಕಟೇಶ್‌ರವರ ಮನೆಗೆ ತುಮಕೂರು ಜಿಲ್ಲೆಯ ಭೋವಿ ಸಮಾಜದ ಕೆಲ ಮುಖಂಡರು ತೆರಳಿ ಅಭಿನಂದಿಸಿದರು. ಅಭಿನಂದನೆಗಳನ್ನು ಸಲ್ಲಿಸಿ ಉದ್ಯಮಿ, ಭೋವಿ ಸಮಾಜದ ಮುಖಂಡರು, ಸಮಾಜ ಸೇವಕರಾದ ಗೋಲ್ಡ್ ದೀಪು ಮಾತನಾಡಿ ನಮ್ಮ ಭೋವಿ ಸಮುದಾಯವು ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಇಂತಹ ಸಮುದಾಯದಲ್ಲಿ ಹುಟ್ಟಿದಂತಹ ಕೆಲವಷ್ಟೇ ಮಂದಿ ಮಾತ್ರ ಸಮಾಜಮುಖಿಯಾಗಿ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಲು ಸಾಧ್ಯ ಅದರಂತೆ ಇತ್ತೀಚೆಗೆ ನಡೆದ ತುಮುಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಆ ಪ್ರಯುಕ್ತ ಇಂದು ನಮ್ಮ ಸಮಾಜದ ಮುಖಂಡರುಗಳೊAದಿಗೆ ಶಾಸಕರು ಹಾಗೂ ತುಮುಲ್ ಅಧ್ಯಕ್ಷರಾದ ಹೆಚ್.ವಿ.ವೆಂಕಟೇಶ್‌ರವರನ್ನು ಇಂದು ಅಭಿನಂದಿಸುತ್ತಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭೋವಿಪಾಳ್ಯ ಉಮೇಶ್, ಆಕಾಶ್, ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More

ತುಮಕೂರು: ಕರ್ನಾಟಕ ರಾಜ್ಯ ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ಹಾಗು ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 83ನೇ ಹುಟ್ಟು ಹಬ್ಬವನ್ನು ಎಸ್.ಎಸ್.ಪುರಂನ ಉಮಾಮಹಾ ಗಣಪತಿ ದೇವಾಲಯದ ಬಳಿ ಅನಾಥ ಮಕ್ಕಳಿಗೆ ಉಪಹಾರ ನೀಡುವ ಮೂಲಕ ಆಚರಿಸಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 83ನೇ ಹುಟ್ಟು ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್,ಬಿ.ಎಸ್.ಯಡಿಯೂರಪ್ಪ ಓರ್ವ ಹುಟ್ಟು ಹೋರಾಟಗಾರರು,ಸೈಕಲ್‌ಮೇಲೆ ಶಿಕಾರಿಪುರದಿಂದ ವಿಧಾನಸೌಧದವರೆಗೆ ಯಾತ್ರೆ ಕೈಗೊಂಡು, ಬಿಜೆಪಿ ಪಕ್ಷವನ್ನು ಹಂತ ಹಂತವಾಗಿ ಅಧಿಕಾರಕ್ಕೆ ತಂದವರು. ಹಿಡಿದ ಕೆಲಸವನ್ನು ಎಂದಿಗೂ ಕೈಬಿಡದೆ ನಡೆಸುತ್ತಿದ್ದ ಅವರ ಜೀವನ ಇತರೆ ರಾಜಕಾರಣಿಗಳಿಗೆ ಮಾದರಿ.83ನೇ ವಯಸ್ಸಿನಲ್ಲಿಯೂ ಪಕ್ಷವನ್ನು ಮುನ್ನೆಡೆಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭಗವಂತ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು. ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ಸಂಚಾಲಕ ಸದಾಶಿವಯ್ಯ ಮಾತನಾಡಿ,ಕರ್ನಾಟಕ ರಾಜ್ಯದ ಅಭಿವೃದ್ದಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆ ಅಪಾರವಾಗಿದೆ.1972 ಶಿಕಾರಿಪುರದಲ್ಲಿ ಜನಸಂಘದ ಜಿಲ್ಲಾಧ್ಯಕ್ಷರಾಗಿ ಸಾರ್ವಜನಿಕ ಸೇವೆಗೆ…

Read More

ತುಮಕೂರು: ಐತಿಹಾಸಿಕ ಪ್ರಸಿದ್ದ ಸಿದ್ದಗಂಗೆಯಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿAದ ನಡೆಯಿತು. ಶ್ರೀಕ್ಷೇತ್ರ ಸಿದ್ದಗಂಗೆಯ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಬೆಳಿಗ್ಗೆ 11.55ಕ್ಕೆ ಸರಿಯಾಗಿ ಶುಭ ಲಗ್ನದಲ್ಲಿ ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹಾಗೂ ಶ್ರೀಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ರಥೋತ್ಸವದಲ್ಲಿ ಶ್ರೀಕ್ಷೇತ್ರದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಓ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ, ವಿವಿಧ ಮಠಾಧೀಶರುಗಳು ಸೇರಿದಂತೆ ಅನೇಕ ಗಣ್ಯರು, ಭಕ್ತಾದಿಗಳು ಪಾಲ್ಗೊಂಡು ರಥವನ್ನು ಮುಂದಕ್ಕೆ ಎಳೆದು ಭಕ್ತಿ ಸಮರ್ಪಿಸಿದರು. ಇದಕ್ಕೂ ಮುನ್ನ ರಥಕ್ಕೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಃ, ಕಳಸಗಳ ಆರಾಧನೆ, ರಥಾಂಗ ಪೂಜೆ ಸೇರಿದಂತೆ ವಿವಿಧ ಪೂಜೆ ಸಲ್ಲಿಸಿ ಶ್ರೀಕ್ಷೇತ್ರದ…

Read More

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪುಣ್ಯಕ್ಷೇತ್ರಗಳಲ್ಲೊಂದಾದ ತಮ್ಮಡಿಹಳ್ಳಿ ಶ್ರೀ ಪರ್ವತ ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದ ಅರಣ್ಯ ಹಾಗೂ ಪೈಪ್‌ಲೈನ್‌ಗಳಿಗೆ ಹಾನಿಯಾದ ಘೆಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಕುಪ್ಪೂರು-ತಮ್ಮಡಿಹಳ್ಳಯಲ್ಲಿನ ಶ್ರೀಪರ್ವತಮಲ್ಲಿಕಾರ್ಜುನ ಬೆಟ್ಟದ ಸುತ್ತಲಿನ ಕುರುಚಲು ಅರಣ್ಯ ಪ್ರದೇಶಕ್ಕೆ ಮಂಗಳವಾರ ಮದ್ಯಾಹ್ನ 1 ಗಂಟೆಯ ಸಮಯದಲಿ ಆಕಸ್ಮಿಕ ಬೆಂಕಿ ಕಾಣಸಿಕೊಂಡು ಕ್ಷಣಾರ್ಧದಲ್ಲಿ ಬೆಟ್ಟದ ಸುತ್ತಲೂ ವ್ಯಾಪಿಸಿದೆ. ಬೆಟ್ಟವು ಸುಮಾರು 100 ಎಕರೆ ವ್ಯಾಪ್ತಿಯ ವಿಸ್ತೀಣದವಿದ್ದು, ಜಾಲಿಗಿರಿ ಮರಗಳ ಬೀಡಾಗಿದೆ, ಇದರ ಜೊತೆಗೆ ಮುತ್ತುಗ ಮತ್ತಿತರ ಕಾಡುಮರಗಳಿಂದ ಬೆಟ್ಟ ಆವೃತಗೊಂಡಿದ್ದು ಯತೇಚ್ಚವಾಗಿ ದರ್ಬೆ ಹುಲ್ಲಿನ ಬಿಡಾಗಿದೆ. ಬೆಂಕಿಯ ಕೆನ್ನಾಲಿಗೆಯು ಒಣಗಿದ ದರ್ಬೆಹುಲ್ಲಿಗೆ ವ್ಯಾಪಿಸಿದ ಕಾರಣ ವೇಗವಾಗಿ ಎಲ್ಲಡೆ ವಿಸ್ತರಣೆಗೊಂಡಿದೆ. ಬೆಂಕಿ ಕಾಣಸಿಕೊಂಡ ತಕ್ಷಣ ಸ್ಥಳೀಯರು ಹಾಗೂ ಬೆಟ್ಟದ ಕೆಳಭಾಗದಲ್ಲಿನ ವಿರಕ್ತಮಠದ ಸಿಬ್ಬಂದಿಗಳು ಬೆಂಕಿ ನಂದಿಸಲು ಯತ್ನಿಸಿದರೂ ಸಫಲವಾಗದ ಕಾರಣ ತಕ್ಷಣ ಆಗ್ನಿಶಾಮಕ ವಾಹನ್ಕಕೆ ಕರೆಮಾಡಿ ಸ್ವಲ್ಪ ಸಮಯದಲ್ಲಿಯೇ ವಾಹನ ಆಗಮಿಸಿ ಸುಮಾರು 2 ಗಂಟೆಗಳ ಕಾಲ ಸಿಬ್ಬಂದಿ ಹರಸಾಹಸದಿಂದ ಬೆಂಕಿಯನ್ನು…

Read More

ತುಮಕೂರು: ದೇಶದಲ್ಲಿ ಸಾಮಾಜಿಕ ಚಿಂತಕರ ಸಂಖ್ಯೆ ಕಡಿಮೆಯಾಗುತ್ತಿದೆ, ವ್ಯಕ್ತಿಗತ ಚಿಂತನೆಗಳು ಮೇಲುಗೈ ಪಡೆಯುತ್ತಿವೆ. ಇಂತಹ ಸಂದರ್ಭದೊಳಗೆ ಸಾಮಾಜಿಕ ಸಹಿಷ್ಣುತೆಯ ಲೇಖಕರ ಅಗತ್ಯ ಹೆಚ್ಚಿದೆ ಎಂದು ಹಿರಿಯ ಜಾನಪದ ವಿದ್ವಾಂಸರಾದ ಡಾ.ಜಿ.ವಿ. ಆನಂದಮೂರ್ತಿ ವಿಶ್ಲೇಷಿಸಿದರು. ಜನಮುಖಿ ಬಳಗ ತುಮಕೂರು, ಗೋಪಿಕಾ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ತುಮಕೂರಿನ ಜನ ಚಳವಳಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಡವನಹಳ್ಳಿ ವೀರಣ್ಣಗೌಡ ಅವರ ಉರಿವ ದೀಪದ ಕೆಳಗೆ ಕಥಾ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ದೇಶದ ಉದ್ದಗಲಕ್ಕೂ ಇಂದು ಸಾಂಸ್ಕೃತಿಕ ಅರಾಜಕತೆ ಹೆಚ್ಚುತ್ತಿದೆ. ಸಾಂಸ್ಕೃತಿಕ ಮತ್ತು ರಾಜಕೀಯ ಅರಾಜಕತೆಯ ನಡುವೆ ಸಾಹಿತ್ಯ ಕ್ಷೇತ್ರದಲ್ಲೂ ಅರಾಜಕತೆ ಸೃಷ್ಟಿಯಾಗಿದೆ. ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರö್ಯದ ದಮನವಾಗುತ್ತಿದೆ. ಹಿಂದಿನ ಚಿಂತನೆಗಳು ಮತ್ತು ಚರ್ಚೆಗಳು ಈಗ ನಡೆಯುತ್ತಿಲ್ಲ ಎಂದು ವಿಷಾದಿಸಿದರು. ಹಿಂದೆ ಚಳವಳಿಗೂ ಭಾಷೆಗೂ ಅವಿನಾಭಾವ ಸಂಬAಧವಿತ್ತು. ಈಗ ಭಾಷಾ ಚಿಂತಕರು ಮತ್ತು ಸಾಮಾಜಿಕ ಚಿಂತಕರ ಕೊರತೆಯನ್ನು ಕಾಣುತ್ತಿದ್ದೇವೆ. ಬಡತನ, ಜಾತಿಯತೆ, ಅಸ್ಪೃಷ್ಯತೆ ವಿರುದ್ಧ ಹೋರಾಡಲು ಸಾಮಾಜಿಕ ಚಳುವಳಿ ಹುಟ್ಟಿದ್ದವು. ಈ ಎಲ್ಲ ಹೋರಾಟಗಳು…

Read More