ತುಮಕೂರು: ಜಾತಿ,ಧರ್ಮ,ವರ್ಣ, ವರ್ಗ,ಭಾಷೆಯ ಹೆಸರಿನಲ್ಲಿ ಛಿದ್ರವಾಗಿರುವ ಭಾರತವನ್ನು ಒಂದೇ ಸೂರನಡಿ ತರುವ ಉದ್ದೇಶದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಸಂವಿಧಾನದಲ್ಲಿ ಜಾತ್ಯಾತೀತ ತತ್ವಗಳನ್ನು ಆಳವಡಿಸಿ, ಎಲ್ಲರೂ ಸಮಾನತೆಯಿಂದ ಬದುಕುವಂತಹ ಅವಕಾಶ ಕಲ್ಪಿಸಿದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ತಿಳಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪರಿಶಿಷ್ಟ ವಿಭಾಗದಿಂದ ಹಮ್ಮಿಕೊಂಡಿದ್ದ ಸಂವಿಧಾನದ ಆಶಯಗಳು ಮತ್ತು ರಾಜಕೀಯ ಜಾಗೃತಿ ಎಂಬ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ,ಕರಪತ್ರ ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು, ವರ್ಣ,ವರ್ಗ ಬೇಧಗಳಿಂದ ಬಸವಳಿದಿದ್ದ ಭಾರತ,ಇನ್ನೂ ಮುಂದಾದರೂ ಸಮಾನತೆ,ಸಾಮಾಜಿಕ ನ್ಯಾಂiÀi,ಜಾತ್ಯಾತೀತ ತತ್ವಗಳ ಮೇಲೆ ನಡೆದು ಶತಮಾನ ಗಳಿಂದ ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾದ ಜನರು, ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂಬ ಕಾರಣಕ್ಕೆ ಹಲವಾರು ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು,ಇದು ಯಾವುದೇ ಒಂದು ಜಾತಿ,ಧರ್ಮವನ್ನು ಗಮನದಲ್ಲಿಟ್ಟು ಕೊಂಡು ಬರೆದ ಸಂವಿಧಾನವಲ್ಲ. ಇಡೀ ಭಾರತೀಯರ ಸಮಗ್ರ ಆಭಿವೃದ್ದಿಯ ದೃಷ್ಟಿಕೋನದ ಸಂವಿಧಾನ ಎಂದರು. ಪುರುಷ ಪ್ರಧಾನ ಸಮಾಜದಲ್ಲಿ ಎರಡನೇ ಪ್ರಜೆಯಾಗಿದ್ದ ಮಹಿಳೆಯರಿಗೆ ಅಸ್ತಿಯ ಹಕ್ಕು ಸಿಗಬೇಕು, ಗಂಡಿಗೆ…
Author: News Desk Benkiyabale
ಹುಳಿಯಾರು: ಉತ್ತಮ ಆರೋಗ್ಯವಿದ್ದರೆ ಮಾತ್ರ ಕಲಿಕೆಗೆ ಸಹಕಾರಿಯಾಗುತ್ತದೆ. ಮಕ್ಕಳು ಕಲಿಕೆಯ ಜೊತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು. ಹುಳಿಯಾರು ಹೋಬಳಿಯ ಚಿಕ್ಕಬಿದರೆ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಕಲಿಕೆ ಮತ್ತು ಆರೋಗ್ಯ ವಿಷಯದ ಕುರಿತು ಅವರು ಮಾತನಾಡಿದರು. ಉತ್ತಮ ಆರೋಗ್ಯಕ್ಕೆ ನೀರು ಅತ್ಯಗತ್ಯವಾಗಿದೆ. ಹೆಚ್ಚಾಗಿ ನೀರು ಕುಡಿಯಿರಿ, ಮಳೆಗಾಲದಲ್ಲಿ ಮಳೆ ನೀರು ಕುಡಿಯಿರಿ, ನಮ್ಮ ಭಾಗದ ಪ್ರಮುಖ ಹಣ್ಣುಗಳಾದ ಮಾವು, ಹಲಸು, ಸೀಬೆ ಹಣ್ಣನ್ನು ಹೆಚ್ಚಾಗಿ ಬಳಸಿ, ಮನೆಯ ಮುಂದೆ ಪಪ್ಪಾಯಿ, ನುಗ್ಗೆ, ಬಳ್ಳಿತರಕಾರಿಗಳನ್ನು ಬೆಳೆದು ಬಳಸುವುದನ್ನು ವೃಢಿಸಿಕೊಳ್ಳಿ. ಸಿರಿ ಧಾನ್ಯಗಳನ್ನು ಹೆಚ್ಚಾಗಿ ಬಳಸಿ ಆರೋಗ್ಯದಿಂದಿರಿ ಎಂದು ಸಲಹೆ ನೀಡಿದರು. ಶಿಕ್ಷಣ ಎಂದರೆ ಶಿಕ್ಷೆಯಲ್ಲ. ಆದರೂ ಶಿಕ್ಷೆ ಕೊಟ್ಟೆ ಕಲಿಸುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿ ಜೀವನ ಎಂದರೆ ವಿದ್ಯೆ ಕಲಿಯುವುದಷ್ಟೆ. ಆದರೂ ದಮ್ಮಯ್ಯ ದಪ್ಪಯ್ಯ ಕಲಿರಪ್ಪ ಅನ್ನಬೇಕಿದೆ. ಕಲಿಕೆ ಎಂದರೆ ಸರ್ವಾಂಗೀಣ ಬೆಳವಣಿಗೆ ಪೂರವಾಗಿರಬೇಕು. ಆದರೂ ಆಟ, ಹಾಡು,…
ತುಮಕೂರು: ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಫೆಬ್ರವರಿ 17 ರಿಂದ ಮಾರ್ಚ್ 3ರವರೆಗೆ ನಡೆಯಲಿರುವ ಕೃಷಿ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಮೈಸೂರು ಕೇಂದ್ರ ಸಂವಹನ ಇಲಾಖೆ ವತಿಯಿಂದ ಆಯೋಜಿಸಿರುವ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ವಿಕಸಿತ ಬಜೆಟ್ @2047 ಛಾಯಾಚಿತ್ರ ಪ್ರದರ್ಶನವು ಜನರಿಗೆ ಬಹಳ ಉಪಯುಕ್ತ ಮಾಹಿತಿ ನೀಡುತ್ತಿದೆ ಎಂದು ನಗರ ಕ್ಷೇತ್ರದ ಶಾಸಕ ಜ್ಯೋತಿ ಗಣೇಶ್ ತಿಳಿಸಿದರು. ಸೋಮವಾರ ಸಂಜೆ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ 2025ರ ನೂತನ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು. ಪ್ರದರ್ಶನದಲ್ಲಿ ವಿಕಸಿತ ಭಾರತ ಬಜೆಟ್ 2025-26, ಪಿಎಂ ಇಂಟರ್ನ್ಶಿಪ್ ಯೋಜನೆ, ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಪಿಎಂ ಸೂರ್ಯ ಘರ್, ವಿಕಸಿತ ಭಾರತಕ್ಕೆ ಪ್ರಧಾನ ಮಂತ್ರಿಯವರ ದೂರದೃಷ್ಠಿ 2047 ಹಾಗೂ ಇತರೆ ಯೋಜನೆಗಳ ಛಾಯಾಚಿತ್ರ ಪ್ರದರ್ಶನದ ಜೊತೆಗೆ ಯೋಜನೆಗಳ ಫಲಾನುಭವಿಗಳು ಹಂಚಿಕೊAಡಿರುವ ಅನಿಸಿಕೆ ಮತ್ತು ಇತರೆ…
ಹುಳಿಯಾರು: ಹುಳಿಯಾರು ಹೋಬಳಿಯ ಕಂಪನಹಳ್ಳಿ ವ್ಯಾಪ್ತಿಯಲ್ಲಿರುವ ತೋಟದ ಮನೆಗಳಿಗೆ ಕಳೆದ ಹದಿನೈದಿಪ್ಪತ್ತು ದಿನಗಳಿಂದ ಹಗಲುರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯಾಗದೆ ನಿವಾಸಿಗಳಿಗೆ ತೊಂದರೆಯಾಗಿದ್ದು ರಾತ್ರಿ ವೇಳೆಯಾದರೂ ಸಿಂಗಲ್ ಫೇಸ್ ವಿದ್ಯುತ್ ಕೊಡಿ ಎಂದು ಇಲ್ಲಿನ ನಿವಾಸಿಗಳು ಸೋಮವಾರ ಬೆಸ್ಕಾಂ ಎಸ್ಒ ರಘುರಾಮ್ ಅವರಿಗೆ ಮನವಿ ಮಾಡಿದರು. ಕಂಪನಹಳ್ಳಿ ಸುತ್ತಮತ್ತಲಿನಲ್ಲಿ ಹದಿನೈದಿಪ್ಪತ್ತು ರೈತರು ಕುಟುಂಬ ಹಾಗೂ ಜಾನುವಾರುಗಳೊಂದಿಗೆ ಜಮೀನು ಗಳಲ್ಲೇ ನಿರ್ಮಿಸಿರುವ ಮನೆಗಳಲ್ಲಿ ವಾಸವಾಗಿದ್ದಾರೆ. ಜಮೀನಿನಲ್ಲಿರುವ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಇದೆ. ಇವುಗಳಿಗೆ ದಿನದಲ್ಲಿ ಹಗಲಿನಲ್ಲಿ ಮಧ್ಯಾಹ್ನ, ರಾತ್ರಿ ವೇಳೆಯಲ್ಲಿ ಮಧ್ಯರಾತ್ರಿ ಮೂರು ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಉಳಿದ ಸಮಯದಲ್ಲಿ ವಿದ್ಯುತ್ ಇರುವುದಿಲ್ಲ ಎಂದರು. ರೈತರ ತೋಟದ ಮನೆಗಳಿಗೆ ಪಂಪ್ಸೆಟ್ಗಳಿಗೆ ಪೂರೈಕೆಯಾಗುವಾಗ ಮಾತ್ರ ವಿದ್ಯುತ್ ಲಭ್ಯವಿರುತ್ತದೆ. ಉಳಿದ ಸಮಯದಲ್ಲಿ ಇರುವುದಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ಗೃಹಿಣಿಯರ ಅಡುಗೆ, ಮಕ್ಕಳ ವಿದ್ಯಾಬ್ಯಾಸಕ್ಕೆ ಭಾರಿ ತೊಂದರೆಯಾಗಿದೆ ಎಂದು ತಿಳಿಸಿದರು. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಓದುತ್ತಿರುವ ಇಪ್ಪತ್ತಕ್ಕೂ ಹೆಚ್ಚು ಮಕ್ಕಳಿದ್ದಾರೆ. ಈಗ ಪರೀಕ್ಷೆ ಸಮಯವಾಗಿರುವುದರಿಂದ ರಾತ್ರಿ…
ತುಮಕೂರು: ಕಳೆದ ಎಂಟು ದಿನಗಳಿಂದ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಅಡಳಿತ ಅಧಿಕಾರಿಗಳ ಸಂಘ, ಕೇಂದ್ರ ಸಮಿತಿಯ ನಿರ್ದೇಶಕನದ ಮೇರೆಗೆ ಮುಷ್ಕರ ಕೈಗೊಂಡಿದ್ದರೂ ಸರಕಾರ ಇದುವರೆಗೂ ನಮ್ಮ ಬೇಡಿಕೆಗಳ ಈಡೇರಿಸಲು ಗಮನಹರಿಸಿರುವುದಿಲ್ಲ ಎಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್ಚಿ.ದೇವರಾಜು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕಳೆದ ಎಂಟು ದಿನಗಳಲ್ಲಿ ಮೂಲಭೂತ ಸೌಕರ್ಯ, ಬಡ್ತಿ, ಅಂತರ ಜಿಲ್ಲಾ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತಿದ್ದೇವೆ. ಆದರೆ ಸರಕಾರದ ಪ್ರತಿನಿಧಿಗಳಿಂದ ಇದುವರೆಗೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.ಹಾಗಾಗಿ ಮುಷ್ಕರವನ್ನು ಮುಂದುವರೆಸುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ನಾವು ಸರಕಾರಕ್ಕೆ ಹೊರೆಯಾಗುವಂತಹ ಯಾವ ಬೇಡಿಕೆಗಳನ್ನು ಮುಂದಿಟ್ಟಿಲ್ಲ.ಬದಲಾಗಿ, ನಮ್ಮ ಮೇಲಿರುವ ಹೊರೆಯನ್ನು ಇಳಿಸಿ ಎಂದು ಕೇಳುತಿದ್ದೇವೆ ಎಂದರು. ಸರಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಮಿತಿಯ ಸದಸ್ಯರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರೂ, ಬೇಡಿಕೆಗಳ ಈಡೇರಿಕೆಯ ಬಗ್ಗೆ ಸ್ಪಷ್ಟ…
ತುಮಕೂರು: ನಗರದ ಟೌನ್ ಹಾಲ್ ವೃತ್ತದ ಬಳಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಶನಿವಾರ ಹೆಲಿಕಾಪ್ಟರ್ ವೇದಿಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಜಿಲ್ಲೆಯ ಗುಬ್ಬಿ ತಾಲ್ಲೂಕು ಬಿದರೆಹಳ್ಳದ ಬಳಿ ಹೆಚ್ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕದ ಕುರುಹಾಗಿ ಪಾಲಿಕೆ ಕಚೇರಿಯ ಹೊರ ಆವರಣದಲ್ಲಿ 30ಲಕ್ಷ ರೂ. ವೆಚ್ಚದಲ್ಲಿ ಹೆಲಿಕಾಪ್ಟರ್ ಅನ್ನು ಪ್ರದರ್ಶಿಸಲು ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯ ಹಾಗೂ ಹೊರಗಿನಿಂದ ಬರುವವರಿಗೂ ಜಿಲ್ಲೆಯಲ್ಲಿರುವ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಬಗ್ಗೆ ಮಾಹಿತಿ ತಿಳಿಯಲಿದೆ ಎಂದು ತಿಳಿಸಿದರು. ಹೆಲಿಕಾಪ್ಟರ್ ಘಟಕದ ಕುರುಹಾಗಿ 50 ಲಕ್ಷ ರೂ. ಮೌಲ್ಯದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಐighಣ Uಣiಟiಣಥಿ ಊeಟiಛಿoಠಿಣeಡಿ)ಅನ್ನು ಪ್ರದರ್ಶಿಸಲಾಗುವುದು. ಹೆಲಿಕಾಪ್ಟರ್ ಪ್ರದರ್ಶನಕ್ಕಾಗಿ 5 ಅಡಿ ಎತ್ತರ ಹಾಗೂ 50 ಅಡಿ ವ್ಯಾಸದ ಸುತ್ತುವ ವೇದಿಕೆ(ಖoಣಚಿಣioಟಿ Pಟಚಿಣಜಿoಡಿm)ಯನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ನಂತರ ಮಾತನಾಡಿದ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಬಿದರೆಹಳ್ಳದಲ್ಲಿರುವ ಹೆಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯವರು…
ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡ,ಹಿರಿಯ, ಸಜ್ಜನ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ತೀರಾ ಅವಹೇಳನಕಾರಿಯಾಗಿ ಮಾತನಾಡುವುದು ತರವಲ್ಲ. ಇದನ್ನು ನಾನು ಖಂಡಿಸುತ್ತೇನೆ. ತಮ್ಮ ಹೇಳಿಕೆ ಬಗ್ಗೆ ಕೊರಟಗೆರೆ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆಯ ಕ್ಷಮೆಯಾಚಿಸಬೇಕು ಎಂದು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಸಲಹೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗೃಹ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಒಬ್ಬರ ಬಗ್ಗೆ ಅಸಮಾಧಾನ ಇದ್ದರೆ ಅದನ್ನು ಬಹಿರಂಗವಾಗಿ ಎಂದು ವ್ತಕ್ತಪಡಿಸುವುದಿಲ್ಲ.ಐದು ಬಾರಿ ಶಾಸಕರಾಗಿ ಮಂತ್ರಿಯಾಗಿ, ಡಿಸಿಎಂ ಆಗಿ ಕೆಲಸ ಮಾಡಿದ ಅಂತಹ ವ್ಯಕ್ತಿಯನ್ನು ಹಿಯಾಳಿಸುವಂತೆ ಮಾತನಾಡುವುದು ಸರಿಯಲ್ಲ. ಟೀಕೆಗಳು ಇರಲಿ ಅದು ವಯುಕ್ತಿಕ ಮಟ್ಟಕ್ಕೆ ಇಳಿಯಬಾರದು. ಈ ನಿಟ್ಟಿನಲ್ಲಿ ಗ್ರಾಮಾಂತರ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರಿಬ್ಬರುವ ವೈಯುಕ್ತಿಕ ಮಟ್ಟದ ಆರೋಪ, ಪ್ರತ್ಯಾರೋಪ ಕೈಬಿಡಬೇಕು. ಟೀಕೆ ಸಂದರ್ಭದಲ್ಲಿ ಪದ ಬಳಕೆ ಇನ್ನೊಬ್ಬರಿಗೆ ನೋವಾಗದಂತೆ ಎಚ್ಚರ ವಹಿಸುವುದು ಸೂಕ್ತ ವೆಂದರು. ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ತನ್ನದೇ ಆದ ಘನತೆ ಗೌರವವಿದೆ.1962 ರಿಂದಲೂ…
ತುಮಕೂರು: ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಶನಿವಾರ ನಗರದ ಪಿಎನ್ಆರ್ ಪಾಳ್ಯದಲ್ಲಿ ಪಾಲಿಕೆ ವತಿಯಿಂದ ಹೊಸದಾಗಿ ನಿರ್ಮಿಸಲಾಗಿರುವ ನೀರಿನ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪಿಎನ್ಆರ್ ಪಾಳ್ಯದಲ್ಲಿರುವ 50 ದಶ ಲಕ್ಷ ಮೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕದಲ್ಲಿ 7ಲಕ್ಷ ರೂ. ವೆಚ್ಚದಲ್ಲಿ ಈ ಪ್ರಯೋಗಾಲಯವನ್ನು ನಿರ್ಮಿಸಲಾಗಿದ್ದು, ಪ್ರಯೋಗಾಲಯದಲ್ಲಿ ನಗರದ ನಾಗರಿಕರಿಗೆ ಸರಬರಾಜಾಗುವ ಮುನ್ನವೇ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಈ ಪ್ರಕ್ರಿಯೆಯಿಂದ ನೀರಿನಿಂದ ಹರಡುವ ಅನೇಕ ಜಲಜನ್ಯ ಖಾಯಿಲೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಸ್ಥಳದಲ್ಲಿ ಹಾಜರಿದ್ದ ರಾಸಾಯನ ತಜ್ಞ ಬಿ.ಕೆ.ದೇವರಾಜು ಪ್ರಯೋಗಾಲಯದಲ್ಲಿ ನೀರಿನ ತಾಪಮಾನ, ವಾಸನೆ, ಬಣ್ಣ, ರುಚಿ, ಪವರ್ ಆಫ್ ಹೈಡ್ರೋಜನ್(Pಊ), ಟರ್ಬಿಲಿಟಿ, ಟಿಡಿಎಸ್, ಸಾಲಿಡ್, ಟೋಟಲ್ ಡಿಸಾಲ್ವ್ ಸೇರಿದಂತೆ ಭೌತಿಕ, ರಾಸಾಯನಿಕ ಹಾಗೂ ಜೈವಿಕ ನಿಯತಾಂಕ(Pಚಿಡಿಚಿmeಣeಡಿ)ಗಳನ್ನು ಪರೀಕ್ಷಿಸಲಾಗುವುದು ಎಂದು ನೀರಿನ ಗುಣಮಟ್ಟ ಪರೀಕ್ಷೆ ಕುರಿತು ಸಚಿವರಿಗೆ ವಿವರಿಸಿದರು. ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮಾತನಾಡಿ, ಪ್ರಸ್ತುತ ನಗರದಲ್ಲಿ…
ತುರುವೇಕೆರೆ: ತಾಲೂಕಿನ ಬಾಣಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅದ್ಯಕ್ಷರಾಗಿ ದುಂಡದೊರೆರಾಜ್ ಹಾಗೂ ಉಪಾದ್ಯಕ್ಷರಾಗಿ ಕೋಡಿಹಳ್ಳಿ ಸಾವಿತ್ರಮ್ಮ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದುಂಡ ದೊರೆರಾಜ್ ಅವರಿಗೆ 7 ಸದಸ್ಯರ ಮೂಲಕ ಆಯ್ಕೆಯಾದರು. ಅದರಂತೆ ಉಪಾದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೋಡಿಹಳ್ಳಿ ಸಾವಿತ್ರಮ್ಮ ಅವರಿಗೂ 7 ಸದಸ್ಯರ ಮೂಲಕ ಆಯ್ಕೆಯಾದ ಹಿನ್ನಲೆ ಅಧ್ಯಕ್ಷ ಸ್ಥಾನಕ್ಕೆ ದುಂಡ ದೊರೆರಾಜ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೋಡಿಹಳ್ಳಿ ಸಾವಿತ್ರಮ್ಮ ಆಯ್ಕೆಯಾಗಿದ್ದಾರೆಂದು ಚುನಾವಣಾದಿಕಾರಿಗಳು ಘೋಷಿಸಿದರು. ಚುನಾವಣಾದಿಕಾರಿಯಾಗಿ ಸಿಡಿಓ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು. ನೂತನ ಅದ್ಯಕ್ಷ, ಉಪಾಧ್ಯಕ್ಷ ಬೆಂಬಲಿಗರು ಸಿಹಿ ಹಂಚಿ ಪಠಾಕಿ ಸಿಡಿಸಿ ಸಂಬ್ರಮ ವ್ಯಕ್ತಪಡಿಸಿದರು. ಸಹಕಾರ ಸಂಘದ ನಿರ್ದೇಶಕರುಗಳಾದ ನಾಗರಾಜು, ಜಿ.ಸಿ.ನಿಜಗುಣಮೂರ್ತಿ, ಬೈರಪ್ಪಾಜಿ ಹೆಚ್.ಎಸ್., ಡಿ.ಆರ್.ಶಿವರಾಮಯ್ಯ. ಸಂತೋಷ್ ಕಂಟ್ಲಿ, ಮಾಜಿ ಸದಸ್ಯ ಹನುಮೇಗೌಡ, ಗ್ರಾ.ಪಂ.ಸದಸ್ಯರಾದ ದುಂಡ ನವೀನ್, ಬಾಣಸಂದ್ರ ಪ್ರಕಾಶ್, ಮುಖಂಡರಾದ ರಾಜಣ್ಣ, ಉಮೇಶ್, ಯೋಗೀಶ್, ಉದಯ್ ಕುಮಾರ್, ಶ್ರೀನಿವಾಸ್, ಅಶೋಕ್ ಕುಮಾರ್, ಮೇಲ್ವಿಚಾರಕರಾದ ಹರ್ಷ ಸೇರಿದಂತೆ ಬ್ಯಾಂಕ್ ಸಿಬ್ಬಂದಿ…
ತುಮಕೂರು: ದಿಯಾ ಸಂಸ್ಥೆಯಿAದ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ನೀಡುತ್ತಿದ್ದು ಇವರ ಕಾರ್ಯವೈಖರಿಯಿಂದ ಸಮಾಜದಲ್ಲಿ ಅನೇಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸಲಿಕ್ಕೆ ಮಾದರಿಯಾಗಿದ್ದಾರೆ ಎಂದು ನಿವೃತ್ತರ ಮಹಾಮನೆ ಅಧ್ಯಕ್ಷರಾದ ಬಾ.ಹ. ರಮಾಕುಮಾರಿರವರು ತಿಳಿಸಿದರು. ನಗರದ ಕೆ. ಆರ್. ಬಡಾವಣೆಯಲ್ಲಿರುವ ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ಕಚೇರಿ ಮುಂಭಾಗದಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಕಂಬಳಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದಿಯಾ ಸಂಸ್ಥೆಯ ನಿಸ್ವಾರ್ಥ ಸೇವೆ ನನಗೆ ಸೇವೆ ಸಲ್ಲಿಸಲಿಕ್ಕೆ ಪ್ರೇರಣೆಯಾಗಿದ್ದು , ಟ್ರಸ್ಟ್ ನ ಸಂಸ್ಥಾಪಕರಾದ ಡಾ.ಇಮ್ಯಾನುಯಾಲ್ ಜಯಕುಮಾರ್ ಅವರ ಕುಟುಂಬ ಸಮೇತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ನನಗೆ ಖುಷಿ ತಂದಿದೆ ಎಂದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಶಿಲ್ಪ ದೊಡ್ಡಮನೆ ರವರು ಮಾತನಾಡಿ ಸಮಾಜದಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ದಿಯಾ ಚಾರಿಟಬಲ್ ಟ್ರಸ್ಟ್ ಇಂಡಿಯಾ ಏಕೈಕ ಸಂಸ್ಥೆಯಾಗಿದೆ. ನಮ್ಮ ಇಲಾಖೆಯಿಂದ ಕೆಲವರಿಗೆ ಮಾತ್ರ ಸೇವೆ ಒದಗಿಸಲಿಕ್ಕೆ ಸಾಧ್ಯ, ದಿಯಾ…