Author: News Desk Benkiyabale

ತುಮಕೂರು : ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಳೆದ 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಖಾಲಿ ಇರುವ ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆ ಇಂದು ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. ಕರವಸೂಲಿಗಾರ(ಬಿಲ್ ಕಲೆಕ್ಟರ್) ವೃಂದದಿAದ ಗ್ರೇಡ್-2 ಕಾರ್ಯದರ್ಶಿ ಹುದ್ದೆಗಳಿಗೆ 13 ಮಂದಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ 8 ಮಂದಿ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಿAದ ಗ್ರೇಡ್ 2 ಕಾರ್ಯದರ್ಶಿ ಹುದ್ದೆಗೆ 9 ಮಂದಿ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ 9 ಮಂದಿ ಸೇರಿದಂತೆ ಒಟ್ಟು 39 ನೌಕರರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ. ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಡ್ತಿ ನೀಡಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ(ಅಭಿವೃದ್ಧಿ) ಕೆ.ಪಿ. ಸಂಜೀವಪ್ಪ ಮತ್ತು ಸಕ್ಷಮ ಪ್ರಾಧಿಕಾರ ಸಮಿತಿಯ ಸದಸ್ಯರು…

Read More

ಹುಳಿಯಾರು: ಖಾಸಗಿ ಒಡತನದ ಸೋಲಾರ್ ಕಂಪನಿಗೆ ಸರ್ಕಾರಿ ಭೂಮಿ ಗುತ್ತಿಗೆ ನೀಡುವ ಮೂಲಕ ಆ ಭೂಮಿಯಲ್ಲಿ ಅನ್ನ ತಿನ್ನುತ್ತಿದ್ದ ದಲಿತರನ್ನು ಒಕ್ಕಲೆಬ್ಬಿಸಿ, ಬೀದಿಗೆ ತಳ್ಳಿರುವ ಘಟನೆ ಹುಳಿಯಾರು ಸಮೀಪದ ಕಂದಿಗೆರೆ ಹೋಬಳಿಯ ಚಿಕ್ಕರಾಂಪುರದಲ್ಲಿ ನಡೆದಿದೆ. ಸರ್ಕಾರಿ ಸರ್ವೇ ನಂ. 14 ರಲ್ಲಿರುವ 148 ಎಕರೆ ಸರ್ಕಾರಿ ಭೂಮಿಯನ್ನು ಚಿಕ್ಕರಾಂಪುರದ ಪರಿಶಿಷ್ಟ ಜಾತಿಯ ಒಂದೇ ಕೋಮಿನ ನೂರಾರು ಜನ ಕಳೆದ 30-40 ವರ್ಷಗಳಿಂದ ಉಳುಮೆ ಮಾಡಿಕೊಂಡಿದ್ದು ತಮ್ಮ ಹಸಿದ ಹೊಟ್ಟೆಯ ತುಂಬಲು ಹಿಡಿ ಅನ್ನ ಬೆಳೆದುಕೊಳ್ಳುತ್ತಿದ್ದರು. ಮಳೆಯಾಶ್ರಿತ ಬೆಳೆಯಾದ ರಾಗಿ, ಹುರುಳಿ ಬೆಳೆದು ವರ್ಷ ಪೂರ್ತಿ ಈ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಸರ್ವೇ 14 ರಲ್ಲಿ ಸುಮಾರು 62 ಕುಟುಂಬ ತಲಾ ಎರಡೆರಡು ಎಕರೆ ಭೂಮಿಯನ್ನು 1980 ರಿಂದಲೂ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. 1990 ಮತ್ತು 1998 ಹಾಗೂ 2018 ರಲ್ಲಿ ಈ ಭಾಗದ ಭೂರಹಿತ ದಲಿತ ವರ್ಗದ ರೈತರು ಫಾರಂ: 50, 53, ಮತ್ತು 57 ನಲ್ಲಿ…

Read More

ತುಮಕೂರು : ಜಿಲ್ಲಾಡಳಿತ ವತಿಯಿಂದ ನವೆಂಬರ್ ಮಾಹೆಯಲ್ಲಿ ಆಚರಿಸಲಾಗುತ್ತಿರುವ ಸಂತ ಶ್ರೇಷ್ಠ ವೀರರಾಣಿ ಒನಕೆ ಓಬವ್ವ ಜಯಂತಿ ಹಾಗೂ ಕನಕದಾಸರ ಜಯಂತಿಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನವಂಬರ್ 11ರಂದು ವೀರರಾಣಿ ಒನಕೆ ಓಬವ್ವ ಜಯಂತಿ ಮತ್ತು ನವೆಂಬರ್ 18ರಂದು ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಒನಕೆ ಓಬವ್ವ ಹಾಗೂ ಕನಕದಾಸರ ವಿಚಾರಧಾರೆ ಮತ್ತು ಅವರ ಜೀವನ ಕುರಿತು ತಿಳಿಸುವ ಮೂಲಕ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜನೆ ಮಾಡಬೇಕು. ಜಯಂತಿ ಅಂಗವಾಗಿ ಸಮುದಾಯದ ತಲಾ 10 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ವೇದಿಕೆ ಕಾರ್ಯಕ್ರಮದ ಮುನ್ನ ನಗರದ ಶಿರಾ ಗೇಟ್, ದಿಬ್ಬೂರು ಸೇರಿದಂತೆ ವಿವಿಧ ಭಾಗಗಳಿಂದ ಮೆರವಣಿಗೆ ಆಗಮಿಸುವುದರಿಂದ ಮೆರವಣಿಗೆಗೆ ವಿವಿಧ ಕಲಾ ತಂಡಗಳನ್ನು ಕರೆತರುವಂತೆ…

Read More

ಹುಳಿಯಾರು: ಬಾಳಲ್ಲಿ ಸ್ವಲ್ಪವಾದರೂ ನೆಮ್ಮದಿ ಹಾಗೂ ಶಾಂತಿಯ ಬದುಕಿಗೆ ದೇವರ ಅರಿವು ಮತ್ತು ಧರ್ಮದ ಆಚರಣೆಯು ಅವಶ್ಯಕತೆ ಬೇಕಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು. ಹುಳಿಯಾರು ಸಮೀಪದ ದೊಡ್ಡಎಣ್ಣೆಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಆಧ್ಯಾತ್ಮಿಕ-ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ-ಸಮಾಧಾನ ದೊರೆಯಲಿ ಎಂದು ಹೇಳಿದರು. ಎಲ್ಲಾ ಧರ್ಮಗಳಲ್ಲೂ ಧರ್ಮದ ಮೌಲ್ಯಗಳು ಏನಿದ್ದಾವೋ ಅವುಗಳ ಪರಿಪಾಲನೆಯಿಂದ ಜೀವ ಜಗತ್ತು ಬಹಳ ಸುಖಮಯವಾಗಿ ನೆಮ್ಮದಿಯಿಂದ ಬಾಳಿ ಬದುಕಲಿಕ್ಕೆ ಸಾಧ್ಯವಾಗುತ್ತದೆ. ಆದರೆ ಇಂದು ಮನುಷ್ಯ ದೇವರು ಮತ್ತು ಧರ್ಮದ ಬಗ್ಗೆ ನಿರಾಸಕ್ತಿ ತಾಳಿರುವುದರಿಂದ ಸಿರಿ ಸಂಪತ್ತುಗಳಿದ್ದರೂ ಶಾಂತಿ ನೆಮ್ಮದಿ ಇಲ್ಲವಾಗಿದೆ. ಗುರುವಿನ ಮೂಲಕ ಶಿವನನ್ನು ಅರಿತು ಬಾಳಿದರೆ ಜೀವನದಲ್ಲಿ ಉನ್ನತಿಯನ್ನು ಪಡಿಯಲಿಕ್ಕೆ ಸಾಧ್ಯವಾಗುತ್ತದೆ ಎಂದರು. ಗೋವಿಂದ ಭಟ್ಟರು ಬ್ರಾಹ್ಮಣ ಕುಲದಲ್ಲಿ ಹುಟ್ಟಿದಂತವರು, ಶರೀಫ ಸಾಹೇಬರು ಇಸ್ಲಾಂ ಧರ್ಮದಲ್ಲಿ ಹುಟ್ಟಿದಂತವರು ಆದರೆ…

Read More

ತುಮಕೂರು: ಶರಣ ಚಳವಳಿಯ ನಂತರ ಅತಿ ಹೆಚ್ಚು ಜನರ ಒಡನಾಟ ಹೊಂದಿದ್ದ ಚಳವಳಿ ಎಂದರೆ ಅದು ದಲಿತ ಸಂಘರ್ಷ ಸಮಿತಿಯ ಹೋರಾಟಗಳಾಗಿವೆ.ಜನರ ನಡುವೆಯೇ ಇದ್ದ, ಅವರ ನೋವು, ನಲಿವುಗಳಿಗೆ ದ್ವನಿಯಾಗಿದ್ದ ದಸಂಸ, ಇದನ್ನು ಕನ್ನಡ ವಿವಿಯ ಆಧ್ಯಯನ ವರದಿಗಳು ದೃಢಪಡಿಸಿವೆ ಎಂದು ಹಿರಿಯ ಗಾಯಕ, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದ್ದಾರೆ. ನಗರದ ಪಾವನ ಆಸ್ಪತ್ರೆಯಲ್ಲಿ ಇಂದು ಬಹಜನ ನಾಯಕ ಬೆಲ್ಲದಮಡು ರಂಗಸ್ವಾಮಿ ಅವರ 75ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,ದಲಿತ ಚಳವಳಿಯ ಆರಂಭದಲ್ಲಿ ಗುರುತಿಸಿಕೊಂಡಿದ್ದ ಎಲ್ಲಾ ನಾಯಕರು ತಾಯ್ತತನದಿಂದ ಕೆಲಸ ಮಾಡಿದ್ದರು.ಹಾಗಾಗಿಯೇ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಾಯಿತು ಎಂದರು. ದಸAಸ ಮತ್ತು ನಮ್ಮದು 45 ವರ್ಷಗಳ ಒಡೆನಾಟ. ಹತ್ತನೇ ತರಗತಿ ಅನುತ್ತೀರ್ಣಗೊಂಡು ದನ ಕಾಯುವಾಗ ಸಮಯ ಕಳೆಯಲು ವಿವಿಧ ರೀತಿಯ ಗೀತೆಗಳನ್ನು ಹಾಡುತ್ತಿದ ನನ್ನನ್ನು ಹಿರಿಯರೊಬ್ಬರು ಕೋಟಗಾನಹಳ್ಳಿ ರಾಮಯ್ಯ ಬಳಿ ತಂದು ಬಿಟ್ಟರು,ಅಲಿಂದ ಆರಂಭವಾದ ದಸಂಸ…

Read More

ತುಮಕೂರು : ಜಿಲ್ಲಾಡಳಿತ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನವೆಂಬರ್ 7 ರಿಂದ 10ರವರೆಗೆ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ: ಬಾಲಗುರುಮೂರ್ತಿ ತಿಳಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 10 ವರ್ಷಗಳ ನಂತರ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದ್ದು, ಕ್ರೀಡಾಕೂಟದಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದಿಂದ 19 ವರ್ಷದೊಳಗಿನ 3000 ವಿದ್ಯಾರ್ಥಿಗಳು ರಾಜ್ಯದ ವಿವಿಧ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಲಿದ್ದಾರೆ. ಕ್ರೀಡಾಕೂಟದ ನಿರ್ಣಾಯಕರಾಗಿ 100 ಅಥ್ಲೆಟಿಕ್ಸ್ ಪರಿಣಿತ ತಾಂತ್ರಿಕ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನವೆಂಬರ್ 7ರಂದು ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಉದ್ಘಾಟನೆ ನಂತರ 1,500 ಮೀಟರ್ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ. ನಂತರ ನವೆಂಬರ್ 9ರ…

Read More

ತುಮಕೂರು : ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಅನಿರ್ಬಂಧಿತ ಅನುದಾನದಡಿ ಮೂಲಭೂತ ಸೌಕರ್ಯಕ್ಕೆ ಸಂಬAಧಿಸಿದAತೆ 1000 ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದ್ದು, ಎಲ್ಲಾ ಕಾಮಗಾರಿಗಳು ಗುಣಮಟ್ಟದಲ್ಲಿ ಅನುಷ್ಠಾನವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ. ಅಧಿಕಾರಿಗಳಿಗೆ ಸೂಚಿಸಿದರು. ಪಂಚಾಯತ್ ರಾಜ್ ಇಲಾಖೆಗಳ ನಿರ್ವಹಣೆ ಮತ್ತು ದುರಸ್ತಿ, ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ, ಪ್ರಧಾನಮಂತ್ರಿ ಗ್ರಾಮ ಸಡಕ್ ರಸ್ತೆ ಕಾಮಗಾರಿಗಳ ಪರಿಶೀಲನೆ, ಮುಖ್ಯಮಂತ್ರಿಗಳ ವಿಶೇಷ ಅನುದಾನ, ಆರೋಗ್ಯ, ಆಯುಷ್, ಹಿಂದುಳಿದ ವರ್ಗಗಳ ಕಲ್ಯಾಣ, ಕೃಷಿ, ರೇಷ್ಮೆ, ತೋಟಗಾರಿಕಾ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಇಲಾಖೆಗಳಿಂದ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನವಾಗುತ್ತಿವೆ. ಈ ಎಲ್ಲಾ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿ ಅನುಷ್ಠಾನವಾಗಬೇಕು. ಕಾಮಗಾರಿಗಳ ಗುಣಮಟ್ಟದ ದೃಢೀಕರಣವನ್ನು ಸಂಬAಧಪಟ್ಟ ಇಲಾಖೆಯವರು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು ಎಂದು ತಿಳಿಸಿದರು. ಮೂಲಭೂತ ಸೌಕರ್ಯಗಳಾದ ಶಾಲೆ, ಅಂಗನವಾಡಿ,…

Read More

ತುಮಕೂರು: ಪದವೀಧರರು ಉದ್ಯೋಗ ಪಡೆಯುವ ಅವಕಾಶಗಳಿಗೆ ಕಾಯುವ ಬದಲು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಆಕ್-ಲಕ್ಷö್ಯ ಉದ್ಯೋಗ ನಿಯೋಜನಾ ಸಂಸ್ಥೆಯ ನಿರ್ದೇಶಕ ರಾಜಾ ಶಶಿಧರ್ ಹೇಳಿದರು. ವಿ ವಿಜ್ಞಾನ ಕಾಲೇಜಿನ ಉದ್ಯೋಗ ಕೋಶ ಮತ್ತು ವೃತ್ತಿ ಸಮಾಲೋಚನ ಕೋಶವು ಆಕ್-ಲಕ್ಷö್ಯ ಉದ್ಯೋಗ ನಿಯೋಜನಾ ಸಂಸ್ಥೆಯ ಸಹಯೋಗದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದರು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು, ಉದ್ಯೋಗ ಪಡೆಯಲು ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ತಯಾರುಮಾಡಬೇಕು. ಉದ್ಯೋಗ ಪಡೆಯಲು ಅವರನ್ನು ನೂಕುವಂಥ ಪರಿಸ್ಥಿತಿ ಉಂಟಾಗಿದೆ. ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ, ಅವಧಿ ಮೀರಿ ಪದವಿಯನ್ನು ಮುಗಿಸಿದವರಿಗೆ ಬಹುತೇಕ ಉದ್ಯೋಗ ಸಂಸ್ಥೆಗಳಲ್ಲಿ ಸಂದರ್ಶನಕ್ಕೆ ಹಾಜರಾಗಲು ಅರ್ಹತೆ ಇರುವುದಿಲ್ಲ ಎಂದರು.ಸAವಹನ ಕೌಶಲ್ಯ, ಗುಣಮಟ್ಟದ ಬರೆವಣಿಗೆ, ವಿಷಯ ಪರಿಣಿತಿಯ ನೈಪುಣ್ಯತೆ ಹೊಂದಿದವರಿಗೆ ಕೇಳುವಷ್ಟು ಸಂಬಳ ನೀಡಿ ಕಂಪನಿಗಳು ಆಯ್ಕೆಮಾಡಿಕೊಳ್ಳುತ್ತಿವೆ ಎಂದು ತಿಳಿಸಿದರು. ಆಕ್-ಲಕ್ಷö್ಯ ಉದ್ಯೋಗ ನಿಯೋಜನಾ ಸಂಸ್ಥೆಯ ನಿರ್ದೇಶಕ ಅಶೋಕ್ ರಾಮಚಂದ್ರನ್ ಅವರು ಉದ್ಯೋಗ ಆಯ್ಕೆಯ ಹಂತಗಳ ಕುರಿತು ವಿವರಿಸಿದರು ಹಾಗೂ…

Read More

ತುಮಕೂರು: ನಮ್ಮದೇ ಶ್ರೇಷ್ಠ ಎಂಬ ವಾದದ ಮೂಲಕ ಇತರೆಯವರನ್ನು ಹೊರ ಹಾಕುವ ಮನುವಾದದ ವಿರುದ್ದ ಅತ್ಯಂತ ಸಂಘಟಿತವಾಗಿ ನಡೆದ ಹೋರಾಟವೇ ಎಲ್ಲರನ್ನು ಒಳಗೊಳ್ಳುವ ಶರಣಚಳವಳಿ,ಅದು ಕಲ್ಯಾಣದ ಕ್ರಾಂತಿಯಲ್ಲ, ಪರಿವರ್ತನೆಯ ಚಳವಳಿ ಎಂದು ಹಿರಿಯ ಸಾಹಿತಿ ಮತ್ತು ಬಸವತತ್ವದ ಪ್ರತಿಪಾದಕರಾದ ರಂಜಾನ್ ದರ್ಗಾ ತಿಳಿಸಿದ್ದಾರೆ. ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣ:ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಇಡೀ ಪ್ರಪಂಚದ ಮೊಟ್ಟ ಮೊದಲ ಒಳ್ಳಗೊಳ್ಳುವ ಸಂಸ್ಕೃತಿ ಎಂದರೆ ಅದು ಬಸವ ಸಂಸ್ಕೃತಿ. ಹಾಗಾಗಿಯೇ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಕರೆಯಲಾಗುತ್ತದೆ ಎಂದರು. ಬಸವ ಸಂಸ್ಕೃತಿ ಅಥವಾ ಶರಣ ಚಳವಳಿ ಎಂಬುದು ವೈದಿಕರ ವಿರುದ್ದ ಅವೈದಿಕರು,ವರ್ಣ ಭೇಧ,ವರ್ಗ ಭೇಧ, ಲಿಂಗಭೇಧವನ್ನು ದಿಕ್ಕರಿಸಿ ನಡೆಸಿದ ಸಂಘಟಿತ ಹೋರಾಟವಾಗಿದೆ.ಹಾಗಾಗಿಯೇ ಲೋಕಾಯುತರನ್ನ,ಚಾರ್ವಕರನ್ನು ಕೊಂದ ವೈದಿಕರೇ ಬಸವಣ್ಣ ಮತ್ತು ಆತನ ಅನುಯಾಯಿಗಳನ್ನು ಕಲ್ಯಾಣ ಕ್ರಾಂತಿಯ ಹೆಸರಿನಲ್ಲಿ ನಡೆಸಿದ ನರಮೇಧ. ಬಸವಣ್ಣ ಹಾಗೂ ಅವರ ಅನುಯಾಯಿಗಳನ್ನು…

Read More

ತುಮಕೂರು: ಕುಲಾಂತರಿ ಬೀಜ ನಿಯಮ ಜಾರಿಗೆ ವಿರೋಧಿಸಿ,ಹೇಮಾವತಿ ನಾಲೆಗೆ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ರದ್ದು ಹಾಗೂ ಮಳೆಯಿಂದ ಆಗಿರುವ ಬೆಳೆಹಾನಿಗೆ ವೈಜ್ಞಾನಿಕ ಪರಿಹಾರಕ್ಕೆ ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಿಕ್ಕಬೋರೇಗೌಡ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ರವೀಶ್ ಅವರ ನೇತೃತ್ವದಲ್ಲಿ ರೈತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿ¨sಟನೆ ನಡೆಸಿ, ತುಮಕೂರು ತಹಶೀಲ್ದಾರರವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಪರಿಸರವಾದಿ ಸಿ.ಯತಿರಾಜು,ಮ್ಯಾನ್ಸೆಂಟೋ,ಭೆಯರ್,ಕಾರ್ಗಿಲ್ ಸೇರಿದಂತೆ ಅನೇಕ ಬಹುರಿಂಷ್ಟ್ರೀಯ ಕಂಪನಿಗಳು ಕುಲಾಂತರಿ ತಳಿಗಳನ್ನು ಜಾರಿಗೆ ತರುವ ಮೂಲಕ,ದೇಶಿಯ ತಳಿಗಳನ್ನು ನಾಶಮಾಡಿ, ಜೀವ ವೈವಿದ್ಯತೆಯನ್ನು ಹಾಳುಮಾಡಿ ಕೃಷಿಕ್ಷೇತ್ರವನ್ನು ಮತ್ತು ಆಹಾರ ಸಾರ್ವಭೌಮಕ್ಕವನ್ನು ತನ್ನ ಕೈಯಲ್ಲಿ ಹೊಂದುವ ಹುನ್ನಾರವನ್ನು ಕಳೆದ 25 ವರ್ಷಗಳಿಂದಲೂ ಬಹುರಾಷ್ಟ್ರೀಯ ಕಂಪನಿಗಳು ಮಾಡುತ್ತಲೇ ಬಂದಿವೆ.ಕುಲಾAತರಿ ತಳಿಗಳ ಬೆಳೆಗಳಿಂದ,…

Read More