Author: News Desk Benkiyabale

ತುಮಕೂರು: ಮಕ್ಕಳ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ್ದು, ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ,ಹದಿ ಹರೆಯದ ವಯಸ್ಸಿನ ಗಂಡಾಗಲಿ, ಹೆಣ್ಣಾಗಲಿ ಸೋಷಿಯಲ್ ಮಿಡಿಯಾ ಬಳಸುವ ವೇಳೆ ಎಚ್ಚರಿಕೆಯಿಂದ ಇರುವಂತೆ ನ್ಯಾ.ನೂರುನ್ನಿಸಾ ಸಲಹೆ ನೀಡಿದ್ದಾರೆ. ನಗರದ ಬಾಲಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೊಬಿಲಿಟಿ ಇಂಡಿಯಾv, ತುಮಕೂರು ಘಟಕದವತಿಯಿಂದ ಆಯೋಜಿಸಿದ್ದ ತುಮಕೂರು ಶೈಕ್ಷಣಿಕ ಜಿಲ್ಲೆಯ ಪ್ರೌಢ ಶಾಲಾ ಹಂತದ ಮಕ್ಕಳ ರಕ್ಷಣಾ ಸಮಿತಿಯನ್ನು ಪ್ರತಿನಿಧಿಸುವ ಮಕ್ಕಳಿಗೆ “ಶಾಲಾ ಮಟ್ಟದಲ್ಲಿ ಮಕ್ಕಳ ರಕ್ಷಣೆ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ಕೆಲವೊಂದು ಸಂದರ್ಭದಲ್ಲಿ ನಮ್ಮಗೆ ಗೊತ್ತಿಲ್ಲದ ವ್ಯಕ್ತಿಯಿಂದ ಬರುವ ಯಾವುದೇ ಕೊಡುಗೆಗಳನ್ನು ಸ್ವೀಕರಿಸಬಾರದು ಎಂದು ಕಿವಿ ಮಾತು ಹೇಳಿದರು. ವಿಶ್ವಸಂಸ್ಥೆಯೊAದಿಗಿನ ಒಪ್ಪಂದದAತೆ ಮಕ್ಕಳಿಗೆ ಹಲವಾರು ಹಕ್ಕುಗಳನ್ನು ನೀಡಿದೆ.…

Read More

ತುಮಕೂರು: ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಅವರು ಹಲವು ವೈರುದ್ಯಗಳ ನಡುವೆಯೂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಶಾಲೆ ತರೆದು ಮಹಿಳಾ ಲೋಕಕ್ಕೆ ಹೊಸ ಚೈತನ್ಯವನ್ನು ತುಂಬಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಅಭಿಪ್ರಾಯಪಟ್ಟಿದ್ದಾರೆ. ನಗರದ ಕನ್ನಡ ಭವನದಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆ ರಾಷ್ಟಿçÃಯ ಶಿಕ್ಷಕಿಯರ ಫೆಡರೇಷನ್, ನವದೆಹಲಿ, ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ), ರಾಜ್ಯ ಮತ್ತು ಜಿಲ್ಲಾ ಘಟಕವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಪುಲೆ ಅವರ 194ನೇ ಜನ್ಮಜಯಂತಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮೊದಲ ಶಿಕ್ಷಕಿ ಫಾತಿಮಾ ಶೇಖ್ ಜಯಂತಿ ಕಾರ್ಯಕ್ರಮಕ್ಕೆ ಇರ್ವರೂ ಶಿಕ್ಷಕಿಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಶಾಲೆ ತೆರೆದ ಪರಿಣಾಮ ಹೆಣ್ಣು ಮಕ್ಕಳ ಬಾಳಿನಲ್ಲಿ ಹೊಸ ಮನ್ವಂತರ ಪ್ರಾರಂಭವಾಯಿತು ಎಂದರು. ತಮ್ಮ 08ನೇ ವಯಸ್ಸಿಗೆ ಮದುವೆಯಾಗಿ, ಗಂಡನ ಸಹಾಯದಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ತೆರೆದ ಸಾವಿತ್ರಿ ಬಾಯಿ ಫುಲೆ,ಶಿಕ್ಷಣದಿಂದ…

Read More

ತುಮಕೂರು: ಜಾನ್ ಪೀಟರ್ ಶೌಟನ್ ಅವರ ‘ಅನುಭಾವಿಗಳ ಕ್ರಾಂತಿ’ ಕೃತಿಯು ವಚನ ಸಾಹಿತ್ಯಕ್ಕೆ ನೀಡಿರುವ ವಿಶಿಷ್ಟ ಕೊಡುಗೆಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಟಿ. ಆರ್. ಚಂದ್ರಶೇಖರ್ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಬಸವೇಶ್ವರ ಅಧ್ಯಯನ ಪೀಠ ಹಾಗೂ ಡಾ. ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ವಿಭಾಗಗಳು ಗುರುವಾರ ಜಂಟಿಯಾಗಿ ಆಯೋಜಿಸಿದ್ದ “ಜಾನ್ ಪೀಟರ್ ಶೌಟನ್ ಅವರ ಅನುಭಾವಿಗಳ ಕ್ರಾಂತಿ” ಕೃತಿಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನುಭಾವಿಗಳ ಕ್ರಾಂತಿ ಕೃತಿಯಲ್ಲಿ ಬಸವಣ್ಣನವರ ಕಾಲಘಟ್ಟ, 12ನೆಯ ಶತಮಾನ, ವಸಾಹತು ಕಾಲಘಟ್ಟ ಹಾಗೂ ಸ್ವಾತಂತ್ರö್ಯ ನಂತರದ ಕಾಲಘಟ್ಟ ಎಂಬ ನಾಲ್ಕು ಭಾಗಗಳಿವೆ. ವಚನ ಸಾಹಿತ್ಯದಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ಕೂಡ ಈ ಗ್ರಂಥ ಬೆಳಕು ಚೆಲ್ಲಿದೆ ಎಂದರು. ವಚನ ಸಾಹಿತ್ಯವನ್ನು ಸಂಸ್ಕೃತಿಯ ಚೌಕಟ್ಟಿನ ಒಂದು ಭಾಗವೆಂದು ಗುರುತಿಸಬಹುದು. ಏಕೀಕೃತ ಅಧ್ಯಯನಕ್ಕೆ ಅನುಕೂಲವಾಗುವಂತೆ ವಿಭಿನ್ನ ರೀತಿಯಲ್ಲಿ ಶೌಟನ್ ಕೃತಿಯನ್ನು ಕಟ್ಟಿಕೊಟ್ಟಿದ್ದಾನೆ ಎಂದರು. ಸಂಶೋಧನೆಯಲ್ಲಿ ವಿಧಾನ, ವಿಶ್ಲೇಷಣೆ ಹಾಗೂ ನೆಲೆಗಟ್ಟು…

Read More

ಕೊರಟಗೆರೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿ ಮನೆಯಲ್ಲಿದ್ದ ದವಸದಾನ್ಯದ ಜೊತೆ ಬಂಗಾರ ಮತ್ತು ನಗದು ಹಣವು ಸುಟ್ಟುಭಸ್ಮವಾಗಿ ರೈತ ತಿಮ್ಮಪ್ಪನಿಗೆ 8ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ದಿನ್ನೇಪಾಳ್ಯದ ತಿಮ್ಮಪ್ಪನ ತೋಟದ ಮನೆಯ ರೇಷ್ಮೆಶೇಡ್‌ನಲ್ಲಿ ಆಕಸ್ಮಿಕವಾಗಿ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗಿ ಮನೆಗೆ ಬೆಂಕಿ ಆವರಿಸಿಕೊಂಡು ಸುಮಾರು 8ಲಕ್ಷ ಮೌಲ್ಯದ ದವಸದಾನ್ಯ ಮತ್ತು ನಗದು ಸುಟ್ಟುಹೋಗಿದೆ. Wಮ್ಮಪ್ಪನ ಮನೆಯಲ್ಲಿದ್ದ 2ಲಕ್ಷ ನಗದು ಹಣ, 5ಲಕ್ಷ ಬೆಲೆ ಬಾಳು ಬಂಗಾರ ಮತ್ತು ಬೆಳ್ಳಿ, ಶೇಂಗಾ, ತೊಗರಿಬೆಳೆ, ಜೋಳ, ರಾಗಿಯ ಜೊತೆಯಲ್ಲಿ ಜಮೀನು, ಮನೆಯ ದಾಖಲೆ ಸುಟ್ಟುಹೋಗಿವೆ. ಕುಟುಂಬದ ರೇಷನ್‌ಕಾರ್ಡು, ಆಧಾರ್‌ಕಾರ್ಡ್, ಪಾನ್‌ಕಾರ್ಡ್, ಮಕ್ಕಳ ಅಂಕಪಟ್ಟಿ ಸೇರಿದಂತೆ ವ್ಯಾಸಂಗ ಮಾಡುವ ಪುಸ್ತಕಗಳು ತಡರಾತ್ರಿಯ ಬೆಂಕಿಗೆ ಆಹುತಿ ಆಗಿವೆ. ದಿನ್ನೇಪಾಳ್ಯದ ತಿಮ್ಮಪ್ಪ ಮಾತನಾಡಿ ತೋಟದ ಮನೆಯಲ್ಲಿ ತಡರಾತ್ರಿ ವಿದ್ಯುತ್ ಅವಗಢ ಸಂಭವಿಸಿದೆ. ನಮ್ಮ ಕುಟುಂಬದ 6ಜನ ಹೊರಗಡೆ…

Read More

ತುಮಕೂರು: ನಗರದ ಕುಣಿಗಲ್ ರಸ್ತೆಯಲ್ಲಿರುವ ರಾಮಕೃಷ್ಣ ನಗರದ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ 13ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊAದಿಗೆ ನಡೆಯಿತು. 13ನೇ ವಾರ್ಷಿಕೋತ್ಸವದ ಅಂಗವಾಗಿ ಅಮರಜ್ಯೋತಿನಗರ, ಗಾಂಧಿನಗರ ಹಾಗೂ ಬನಶಂಕರಿ ನಗರದಲ್ಲಿ ಭಿಕ್ಷಾಟನೆ ನಡೆಸಲಾಯಿತು. ಭಿಕ್ಷಾಟನೆಗೆ ಸಾಯಿನಾಥ ದೇವಾಲಯದ ಸಂಸ್ಥಾಪಕರಾದ ಮಾಜಿ ಸಂಸದ ಜಿ.ಎಸ್. ಬಸವರಾಜು ಚಾಲನೆ ನೀಡಿದರು. ಸಂಜೆ 6.30 ರಿಂದ ಸಾಯಿ ಭಜನೆ ನಡೆಯಿತು. ಬೆಳಿಗ್ಗೆ 6 ಗಂಟೆಗೆ ಸಾಯಿಬಾಬ ಮೂರ್ತಿಗೆ ಕಾಕಡ ಆರತಿ, ಕ್ಷೀರಾಭಿಷೇಕ, ವಿಶೇಷ ಲೋಕಶಾಂತಿ ಹೋಮ, ಪೂರ್ಣಾಹುತಿ ಹಾಗೂ ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿತು. ರಾತ್ರಿ ಪಲ್ಲಕ್ಕಿ ಉತ್ಸವ, ಶೇಜಾರತಿ ನೆರವೇರಿತು. ವಾರ್ಷಿಕೋತ್ಸವದ ಪ್ರಯುಕ್ತ ಭಕ್ತರಿಗೆ ನಿರಂತರ ದಾಸೋಹವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಾಯಿ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಭಕ್ತರಾದ ಲಕ್ಷಿ÷್ಮÃಬಾಯಿ ಶಿಂಧೆ ಅವರಿಗೆ ಸಾಯಿಬಾಬಾರವರು ಪ್ರಸಾದ ರೂಪದಲ್ಲಿ ನೀಡಲಾಗಿದ್ದ 9 ನಾಣ್ಯಗಳ ದಿವ್ಯ ದರ್ಶನವನ್ನು ಸಾರ್ವಜನಿಕರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಶಿರಡಿಯಿಂದ ತಂದಿದ್ದ ಈ 9 ನಾಣ್ಯಗಳ…

Read More

ತುಮಕೂರು: ವಿದ್ಯಾರ್ಥಿಗಳು ಮೊಬೈಲ್ ಮೋಹಕ್ಕೆ ಬೀಳದೆ, ಉನ್ನತ ಗುರಿ ಇಟ್ಟುಕೊಂಡು, ಛಲದಿಂದ ಗುರಿ ಸಾಧಿಸುವತ್ತ ಗಮನ ಹರಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎದುರಾಗುವ ಎಲ್ಲಾ ಸ್ಪರ್ಧೆಗಳನ್ನೂ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಶಾಸಕ ಬಿ.ಸುರೇಶ್‌ಗೌಡರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಬೆಳ್ಳಾವಿಯಲ್ಲಿ ಗುರುವಾರ 5 ಕೋಟಿ ರೂ. ವೆಚ್ಚದ ಸರ್ಕಾರಿ ಪದವಿ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಶಾಸಕರು, 2019ರಲ್ಲಿ ಬೆಳ್ಳಾವಿಯಲ್ಲಿ ಸರ್ಕಾರಿ ಪದವಿ ಕಾಲೇಜು ಪ್ರಾರಂಭವಾಯಿತು. ಆದರೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾಲೇಜು ಈಗ ನಡೆಯುತ್ತಿದೆ. ಕಾಲೇಜಿನಲ್ಲಿ ಶೇಷ್ಠ ಉಪನ್ಯಾಸಕರಿದ್ದಾರೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತಹ ಸುಸಜ್ಜಿತ ಕಾಲೇಜು ಕಟ್ಟಡ ನಿರ್ಮಾಣ ಮಾಡಿ, ಅಗತ್ಯ ಸೌಲಭ್ಯ ಒದಗಿಬೇಕೆಂಬ ತಮ್ಮ ಪ್ರಯತ್ನದ ಫಲವಾಗಿ ಈಗ ಕಟ್ಟಡಕ್ಕೆ ಶಂಕುಸ್ಥಾನೆ ಮಾಡಲಾಗಿದೆ. ಹತ್ತು ತಿಂಗಳಲ್ಲಿ ಕಾಲೇಜು ಕಟ್ಟಡ ನಿರ್ಮಾಣವಾಗಿ ಹೊಸ ಕಟ್ಟಡದಲ್ಲಿ ಕಾಲೇಜು ಚಟುವಟಿಕೆಗಳು ಆರಂಭವಾಗಲಿವೆ…

Read More

ತುಮಕೂರು : ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಅತಿ ಹೆಚ್ಚು ಮಾನವ ದಿನಗಳ ಸೃಜನೆ, ಹೆಚ್ಚು ಜನರಿಗೆ ಉದ್ಯೋಗ ನೀಡಿಕೆ, ಶಾಲಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಜಿಲ್ಲೆಯ ವಿನೂತನ ಕಾರ್ಯಕ್ರಮಗಳನ್ನು ಪರಿಗಣಿಸಿ ತುಮಕೂರು ಜಿಲ್ಲಾ ಪಂಚಾಯಿತಿಗೆ 2025ರ ನರೇಗಾ ಪ್ರಶಸ್ತಿ, ಉತ್ತಮ ಗ್ರಾಮ ಪಂಚಾಯತಿ ಪ್ರಶಸ್ತಿ ಹಾಗೂ ಕಾಯಕ ಬಂಧು ಗಂಗಮ್ಮ ಅವರಿಗೆ ಮೇಟ್ ಪ್ರಶಸ್ತಿ ಸೇರಿ 3 ಪ್ರಶಸ್ತಿಗಳು ಲಭಿಸಿವೆ. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ನರೇಗಾ ಹಬ್ಬ-2025ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಈ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಉಮಾಮಹದೇವನ್, ಅಪರ ಮುಖ್ಯ ಕಾರ್ಯದರ್ಶಿ(ಗ್ರಾಮೀಣಾಭಿವೃದ್ಧಿ) ಅಂಜುಮ್ ಪರ್ವೇಜ್, ಗ್ರಾಮೀಣಾಭಿವೃದ್ಧಿ ಆಯುಕ್ತ ಪವನ್ ಕುಮಾರ್ ಮಲಪಾಟಿ ಉಪಸ್ಥಿತರಿದ್ದರು.…

Read More

ತುಮಕೂರು: ಪ್ರಸ್ತುತ ಸಮಾಜದಲ್ಲಿ ಯುವಕ ಯುವತಿಯರಿಗೆ ತಂತ್ರಜ್ಞಾನ ಎಂಬುದು ವ್ಯಸನವಾಗಿದೆ. ಅದರಿಂದ ಅವರು ಹೊರಬರಲಾಗುತ್ತಿಲ್ಲ. ಆದ್ದರಿಂದ ತಂತ್ರಜ್ಞಾನದಲ್ಲಿ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಆಗುತ್ತಿವೆ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗವು ಬುಧವಾರ ಹಮ್ಮಿಕೊಂಡಿದ್ದ ‘ಸೈಬರ್ ಭದ್ರತೆ ಮತ್ತು ಎಥಿಕಲ್ ಹ್ಯಾಕಿಂಗ್’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನಗಳನ್ನು ಬಳಸಲು ಇಂದು ಉತ್ತಮ ವೇದಿಕೆಗಳಿವೆ. ಆದರೆ ಅವುಗಳನ್ನು ಕೆಲವು ಸೈಬರ್ ವಂಚಕ ಗುಂಪುಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಎಷ್ಟೋ ವಿದ್ಯಾವಂತರು ಕೂಡ ಇವರಿಂದ ಶೋಷಣೆಗೊಳಗಾಗಿದ್ದಾರೆ. ವಿದ್ಯಾವಂತರು ಇಂತಹ ಸಮಸ್ಯೆಗಳ ಬಗ್ಗೆ ಸಾಧ್ಯವಾದಷ್ಟು ತಿಳುವಳಿಕೆ ನೀಡಬೇಕು ಎಂದರು. ಸAಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆರ್. ವಿ. ಇಂಜಿನಿಯರಿAಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಮೋಹನ ಮಾತನಾಡಿ, ಸೈಬರ್ ಕ್ರೆöÊಂ ಈಗ ಒಂದು ಆಯುಧವಾಗಿದೆ. ಕೂತಲ್ಲಿಯೇ ಎಲ್ಲವನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ ಎಂದರು. ಕೋವಿಡ್ ಸಮಯದಲ್ಲಿ ಹೆಚ್ಚು ಪ್ರಾಮುಖ್ಯತೆ ವಹಿಸಿದ ಸಾಮಾಜಿಕ ಮಾಧ್ಯಮವನ್ನು ನಂತರದ ದಿನಗಳಲ್ಲಿ ಹೆಚ್ಚಾಗಿ…

Read More

ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿ ಕಛೇರಿಗೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸುರೇಶ್ ಅವರು ಬುಧವಾರ ಮತ್ತೊಮ್ಮೆ ಭೇಟಿ ನೀಡಿದರು. ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಖಾತೆ ಸಂಬAಧ ಕೆಲ ದಾಖಲಾತಿಗಳನ್ನು ಪರಿಶೀಲಿಸಿದರು. ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಅಕ್ರಮ ಖಾತೆ ಮಾಡಿಕೊಡಲಾಗುತ್ತಿದೆ. ಪೌರಕಾಮಿಕನೋರ್ವನನ್ನು ಖಾತೆ ಮಾಡಿಕೊಡಲು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆAಬ ದೂರಿನ ಅನ್ವಯ ಕಳೆದ ಶುಕ್ರವಾರ ದಿಡೀರ್ ಭೇಟಿ ನೀಡಿದ್ದರು. ಆಗ ಮುಖ್ಯಾಧಿಕಾರಿಗಳ ಬಳಿ ಇರಬೇಕಿದ್ದ ಡಾಂಗಲ್ ಪೌರಕಾರ್ಮಿಕ ಬಳಿ ಇತ್ತು. ಇದೊಂದೇ ಸಾಕ್ಷಿö್ಯ ಪಂಚಾಯ್ತಿಯಲ್ಲಿ ಅಕ್ರಮ ನಡೆಯುತ್ತಿರುವುದನ್ನು ಸಾಬೀತು ಪಡಿಸುವಂತಿತ್ತು. ಇಬ್ಬರನ್ನೂ ಈ ಸಂಬAಧ ಕಾನೂನಾತ್ಮಕ ಪ್ರಶ್ನೆಗಳನ್ನು ಕೇಳಿ ದಾಖಲೆ ಮಾಡಿಕೊಂಡಿದ್ದ ಇನ್‌ಸ್ಪೆಕ್ಟರ್ ಬುಧವಾರ ಮತ್ತೊಮ್ಮೆ ಹೆಚ್ಚಿನ ಪರಿಶೀಲನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಎಸ್.ನಾಗಭೂಷಣ್ ತುಮಕೂರಿಗೆ ಮೀಟಿಂಗ್ ಹೋಗಿದ್ದರು. ಆದರೂ ಆರ್‌ಒ ಶೃತಿ ಹಾಗೂ ಮಲ್ಲಿಕಾರ್ಜುನಯ್ಯ ಅವರಿಂದ ಈ ಸಂಬAಧ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು. ಇದುವರೆವಿಗೂ ಮಾಡಿಕೊಟ್ಟಿರುವ ಖಾತೆಗಳ ವಿವರ ಪಡೆದಿರುವ ದಾಖಲಾತಿಗಳು ಹಾಗೂ ಸೀನಿಯಾರಿಟಿ ನಿಯಮ ಫಾಲೋ ಮಾಡುತ್ತಿದ್ದರೋ, ಇಲ್ಲವೋ ಎಂಬ ಬಗ್ಗೆ…

Read More

ಕೊರಟಗೆರೆ: ಸಿಎಂ ಸಿದ್ದರಾಮಯ್ಯ ಕರ್ನಾಟಕ ಸರಕಾರದ 17ನೇ ಬಜೆಟ್ ಮಂಡನೆ ಮಾಡ್ತಾರೇ. ಬಜೇಟ್‌ನಲ್ಲಿ ಗ್ರಾಮೀಣ ಭಾಗದ ಅಭಿವೃದ್ದಿಗೆ ಹೆಚ್ಚಿನ ಅನುಧಾನ ನೀಡುವಂತೆ ಸಿಎಂಗೆ ನಾನು ಮನವಿ ಮಾಡಿದ್ದೇನೆ. ಗ್ಯಾರಂಟಿ ಯೋಜನೆಯ ಜೊತೆ ಗ್ರಾಮೀಣ ಭಾಗದ ಅಭಿವೃದ್ದಿಯು ಆಗಲಿದೆ. ಟೀಕೆ ಮಾಡೋರಿಗೆ ನಾನು ಅಭಿವೃದ್ದಿಯ ಉತ್ತರವನ್ನೇ ನೀಡೋಣ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಜಂಪೇನಹಳ್ಳಿ ಕ್ರಾಸಿನ ಬಳಿ ಪಿಡ್ಲೂö್ಯಡಿ ಇಲಾಖೆಯಿಂದ ಬುಧವಾರ ಏರ್ಪಡಿಸಲಾಗಿದ್ದ 26ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೇರವೆರಿಸಿ ಮಾತನಾಡಿದರು. ಬಜೇಟ್‌ನಲ್ಲಿ ತುಮಕೂರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರದ ನೀರಾವರಿ ಯೋಜನೆಗೆ ಹೆಚ್ಚಿನ ಅನುಧಾನ ಸೀಗಲಿದೆ. ಕೊರಟಗೆರೆ ಪಪಂಯನ್ನು ಪುರಸಭೆಯನ್ನಾಗಿ ಮಾಡಲು ಈಗಾಗಲೇ ಸರಕಾರ ಚಿಂತನೆ ನಡೆಸುತ್ತಿದೆ. ಜಂಪೇನಹಳ್ಳಿ ಕ್ರಾಸ್‌ನಲ್ಲಿ ಕುಡಿಯುವ ನೀರು, ಹೈಮಾಸ್ಕ್ ಲೈಟ್ ವ್ಯವಸ್ಥೆ ಮಾಡಿಸುತ್ತೇನೆ. ಸರಕಾರದಲ್ಲಿ ದುಡ್ಡಿಲ್ಲ ಅಭಿವೃದ್ದಿ ಕೆಲಸಗಳು ಆಗ್ತಿಲ್ಲ ಎಂಬ ತಪ್ಪು ಸಂದೇಶ ನೀಡ್ತಿದ್ದಾರೇ. 5ಗ್ಯಾರಂಟಿಯ ಬಗ್ಗೆ ಟೀಕೆ ಮಾಡಿದೋರು…

Read More