Author: News Desk Benkiyabale

ಪಾವಗಡ: ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ ಹತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸೆಂಟ್ರಿAಗ್ ಕೆಲಸಕ್ಕೆ ತೆರಳಿ, ಮರಳಿ ತಮ್ಮ ಊರಿಗೆ ಬರುತ್ತಿದ್ದಂತಹ ಸಂದರ್ಭದಲ್ಲಿ ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ ಬಗುಡೂರು ಗ್ರಾಮದ ತಿರುವಿನ ಬಳಿ, 407 ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಬೀಕರ ಅಪಘಾತ ಸಂಭವಿಸಿದ್ದು ಹತ್ತಕ್ಕೂ ಅಧಿಕ ಜನ ಗಂಭೀರ ಗಾಯಗಳಿಗೆ ಒಳಗಾಗಿದ್ದಾರೆ. ಎಚ್ ಹೊಸಳ್ಳಿ ತಾಂಡ ಗ್ರಾಮದ ಲಂಬಾಣಿ ಸಮುದಾಯದ ಪುರುಷ ಹಾಗೂ ಮಹಿಳಾ ಕಾರ್ಮಿಕರು ಸೆಂಟ್ರಿAಗ್ ಕೆಲಸಕ್ಕೆಂದು ತಿರುಮಣಿ ಭಾಗಕ್ಕೆ ಶುಕ್ರವಾರ ತೆರಳಿದ್ದರು,ಕೆಲಸವನ್ನು ಮುಗಿಸಿ ಮರಳಿ ತಮ್ಮ ಗ್ರಾಮಕ್ಕೆ ಬರುವಂತಹ ಸಂದರ್ಭದಲ್ಲಿ ಬುಗುಡೂರು ಸಮೀಪ ವಾಹನ ನಿಯಂತ್ರಣ ತಪ್ಪಿ ಪಟ್ಟಿಯಾಗಿದೆ ಘಟನೆಯಲ್ಲಿ 55 ವರ್ಷದ ತಿಪ್ಪ ನಾಯಕ್ ಎನ್ನುವವರ ಒಂದು ಕೈ ಸಂಪೂರ್ಣ ನಜ್ಜುಗುಜ್ಜಾಗಿದ್ದು ಲಕ್ಷಮ್ಮ, ಅರುಣಾ, ಕಾವೇರಿ, ಶಾಂತಮ್ಮ, ಶಾಂತಾಬಾಯಿ,ಪ್ರಕಾಶ್, ದೇವಿ ಬಾಯಿ, ಸಕ್ಕಬಾಯಿ ಎನ್ನುವವರಿಗೆ ತಲೆ ಹಾಗೂ ಸೊಂಟ ಇತರೆ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು…

Read More

ತುಮಕೂರು : ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿದ್ದ 13,500 ಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗಿದೆಯಲ್ಲದೆ ಹೊಸದಾಗಿ 15000 ಶಾಲಾ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎನ್. ಮಧು ಬಂಗಾರಪ್ಪ ತಿಳಿಸಿದರು. ಜಿಲ್ಲಾ ಪಂಚಯತಿ ಸಭಾಂಗಣದಲ್ಲಿ ಶನಿವಾರ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಕೊರತೆ ನೀಗಿಸಲು ಹೊಸದಾಗಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಹಂತ-ಹAತವಾಗಿ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಕ್ಷೀಣಿಸುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿಸಲು ಹಲವಾರು ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಶಾಲೆಗಳಲ್ಲಿದ್ದ ನ್ಯೂನ್ಯತೆಗಳನ್ನು ಸರಿಪಡಿಸಲಾಗಿದೆ. ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನ ಲ್ಯಾಬ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ…

Read More

ತುಮಕೂರು: ಸೌಹಾರ್ಧ ತುಮಕೂರು ವತಿಯಿಂದ ಮಹಾತ್ಮ-ಹುತಾತ್ಮ ಸೌಹಾರ್ಧ ಸಪ್ತಾಹದ ಅಂಗವಾಗಿ ನಗರದ ಟೌನ್‌ಹಾಲ್ ಮುಂಭಾಗದ ಬಿ.ಜಿ.ಎಸ್.ವೃತ್ತದಲ್ಲಿ ಹಮ್ಮಿಕೊಂಡಿದ್ದ ರಾಜ್ಯವ್ಯಾಪಿ ಸೌಹಾರ್ಧ ಸಂಕಲ್ಪ ದಿನ, ಸಭೆ-ಪ್ರತಿಭೆ-ಸ್ವೀಕಾರ, ಸೌಹಾರ್ಧ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಕುರಿತು ಮಾತನಾಡಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ,ಧರ್ಮ, ಜಾತಿ, ಭಾಷೆ ಇವೆಲ್ಲವೂ ಜನರ ನಡುವೆ ಸೌಹಾರ್ಧ ಬೆಸೆಯುವ ಅಂಶಗಳು, ಆದರೆ ಇಂದು ಇವುಗಳೇ ಜನರ ನಡುವೆ ದ್ವೇಷ ಬಿತ್ತುವ ವಿಷಯಗಳಾಗಿರುವುದು ನಿಜಕ್ಕೂ ದುರಾದೃಷ್ಟಕರ. ಇಂತಹ ಅಂಶಗಳ ಬಗ್ಗೆ ಜನರು ಯಾವಾಗಲು ಎಚ್ಚರಿಕೆಯಿಂದ ಹೆಜ್ಜೆಗಳ ನಿಡಬೇಕಿದೆ. ಮೊದಲು ನಮ್ಮ ನಡುವೆಯೇ ಸೌಹಾರ್ಧವನ್ನು ಮೈಗೂಡಿಸಿಕೊಂಡು,ನಮ್ಮ ನೆರೆಹೊರೆಯವರನ್ನು ಸಹ ಸೌಹಾರ್ಧದೆಡೆಗೆ ತೆಗೆದುಕೊಂಡು ಹೋಗಬೇಕಾಗಿದೆ.ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು. ಕರ್ನಾಟಕ,ಹಾಗೆಯೇ ತುಮಕೂರು ಜಿಲ್ಲೆ ರಾಷ್ಟçಕವಿ ಕುವೆಂಪು ಅವರ ಮಾತಿನಂತೆ ಶಾಂತಿಯ ತೋಟವಾಗಿದೆ. ನಾವುಗಳು ಇದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ತಾಳ್ಮೆ, ಸಹನೆಯಿಂದ ವರ್ತಿಸಬೇಕಿದೆ.ಎಲ್ಲ ಧರ್ಮ,ಜಾತಿ, ವರ್ಗದ ಜನರೊಂದಿಗೆ ಸ್ನೇಹದಿಂದ ಬೇರತ ಬಾಳುವುದನ್ನು ಕಲಿಯಬೇಕಾಗಿದೆ.ನಮ್ಮಗಳ ನಡುವೆ ಇರುವ…

Read More

ಹುಳಿಯಾರು: ಹುಳಿಯಾರಿನ ದುರ್ಗಮ್ಮನ ಗುಡಿ ಬೀದಿಯಲ್ಲಿರುವ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಸಂಸ್ಥೆಯು 18 ರಿಂದ 45 ವರ್ಷ ವಯಸ್ಸಿನ ನಿರುದ್ಯೋಗಿ ಯುವಕ ಯುವತಿಯರಿಗೆ 2 ತಿಂಗಳ ಉಚಿತ ಟೈಲರಿಂಗ್ ತರಬೇತಿ (ಸಿದ್ದ ಉಡುಪು ತಯಾರಿಕೆ) ನೀಡಲಿದ್ದು, ಆಸಕ್ತರು ಮೇಲ್ಕಂಡ ವಿಳಾಸದಲ್ಲಿ 5/1/2025 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಪಡೆದಂತವರಿಗೆ ಜಿಲ್ಲೆಯ ಪ್ರಖ್ಯಾತ ಗಾರ್ಮೆಂಟ್ಸ್ ಗಳಲ್ಲಿ ಉದ್ಯೋಗ ಕಲ್ಪಿಸಲು ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಿ.ಎನ್.ಪ್ರಭು, ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಸಂಸ್ಥೆ. ಹುಳಿಯಾರು 9141689595 9448748259.

Read More

ಚಿಕ್ಕನಾಯಕನಹಳ್ಳಿ; ರಾಸಾಯನಿಕ ವಿಷ ಬೆರೆತ ಆಹಾರ ಜೊತೆಗೆ ನೀರು ಕೂಡ ಮಲಿನವಾಗಿದೆ ಇದರ ರಕ್ಷಣೆಗೆ ನಾಗರೀಕ ಸಮಾಜ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡುವ ಅನಿವಾರ್ಯತೆ ಇದೆ ಎಂದು ಶಾಸಕ ಹಾಗೂ ಜೆ ಡಿ ಎಲ್ ಪಿ ನಾಯಕ ಸಿಬಿ ಸುರೇಶ್ ಬಾಬು ಹೇಳಿದರು. ಇಂದು ಪಟ್ಟಣದ ಬಸವೇಶ್ವರನಗರ ಹಾಗೂ 16ನೇ ವಾರ್ಡಿನ ಬುಗುರಿ ಮರದ ಸುತ್ತಮುತ್ತ ಸಿಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ 3 ಕೋಟಿ ಹಣ ಬಿಡುಗಡೆಯಾಗಿದ್ದು ಹುಳಿಯಾರ್ ಭಾಗಕ್ಕೆ 1 ಕೋಟಿ 40 ಲಕ್ಷ ಚಿಕ್ಕನಾಯಕನಹಳ್ಳಿ ಭಾಗಕ್ಕೆ 1 ಕೋಟಿ 60 ಲಕ್ಷದ ಕಾಮಗಾರಿ ಯೋಜನೆ ಆರಂಭಗೊAಡಿದೆ ಈಗಾಗಲೇ ಮನೆಮನೆಗೆ ನಲ್ಲಿ ನೀಡುವ ಅಮೃತ ಜಲ ಯೋಜನೆಗೆ 73 ಕೋಟಿ ಹಣ ಬಂದಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದ್ದು ಒಳಚರಂಡಿ ಹಾಗೂ ಪೈಪ್ಲೈನ್ ಕಾಮಗಾರಿಯಿಂದ ರಸ್ತೆ ಆಗಿರುವುದರಿಂದ ಈ ಕಾಮಗಾರಿ ವಿಳಂಬವಾಗುತ್ತಿದೆ ಇನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಬೇಕಾಗುತ್ತದೆ ಇದರಿಂದ ಸಾರ್ವಜನಿಕರು ಸಹಕರಿಸಬೇಕು ಈ…

Read More

ತುಮಕೂರು : ಸೂಕ್ತ ಚಿಕಿತ್ಸೆಯಿಂದ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಮುಖಪಡಿಸಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ತಿಳಿಸಿದರು. ರಾಷ್ಟಿçÃಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು ವರ್ಷಗಳ ಹಿಂದೆ ಕುಷ್ಠರೋಗವು ಯಾವುದೇ ಔಷಧೋಪಚಾರವಿಲ್ಲದೆ ಗುಣಮುಖವಾಗದ ಖಾಯಿಲೆಯಾಗಿತ್ತು. ಕುಷ್ಠರೋಗಿಗಳನ್ನು ಅಸ್ಪಶ್ಯರಂತೆ ಕಾಣುವ ವ್ಯವಸ್ಥೆಯಿತ್ತು. ಪ್ರಸ್ತುತ ಕುಷ್ಠರೋಗಕ್ಕೆ ಉಚಿತ ಔಷಧಿ ಲಭ್ಯವಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆಯುವುದರಿಂದ ಕುಷ್ಠರೋಗದಿಂದ ಗುಣಮುಖ ಹೊಂದಬಹುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಶೇ.0.06ರಷ್ಟು ಮಾತ್ರ ಕುಷ್ಠರೋಗದ ಪ್ರಕರಣಗಳಿವೆ. ರಾಜ್ಯದಲ್ಲಿ 1785 ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೇವಲ 40 ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಶೇಖರ್ ಮಾತನಾಡಿ ಹಿಂದಿನ ಕಾಲದಲ್ಲಿ ಕುಷ್ಠರೋಗವನ್ನು ಶಾಪಗ್ರಸ್ಥ ರೋಗವೆಂದು ಪರಿಗಣಿಸಲಾಗುತ್ತಿತ್ತು. ಜಿಲ್ಲೆಯ ಇತರೆ…

Read More

ತುಮಕೂರು: ಇತ್ತೀಚೆಗೆ ವಿಜಯಪುರ ಜಿಲ್ಲೆಯ ಗಾಂಧಿನಗರದಲ್ಲಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಕಾರ್ಮಿಕರ ಮೇಲೆ ಆದಂತಹ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಇಂದು ತುಮಕೂರು ಜಿಲ್ಲೆಯ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ತಮ್ಮ ಮನವಿ ಪತ್ರದಲ್ಲಿ ಪರಿಶಿಷ್ಟ ಜಾತಿ ಕೂಲಿ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೇ ಜಾತಿನಿಂದನೆಯ ಮಾಡಿರುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ವಹಿಸುವುದಲ್ಲದೇ ಹಲ್ಲೆಗೊಳಗಾದ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ನೆರವನ್ನು ನೀಡುವುದರೊಂದಿಗೆ ಕೂಲಿ ಕಾರ್ಮಿಕರ ಕುಟುಂಬಕ್ಕೆ ಉದ್ಯೋಗ, ಪರಿಹಾರ, ಮೂಲಭೂತ ಸೌಕರ್ಯಗಳು ಹಾಗೂ ಸೂಕ್ತ ರಕ್ಷಣೆ ಕೊಡುವಂತೆ ನಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದೇವೆಂದು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ತಿಳಿಸಿದ್ದಾರೆ. ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ…

Read More

ತುಮಕೂರು: ಕಾಂಗ್ರೆಸ್ ಪಕ್ಷ ಗಾಂಧಿಜೀ ಅವರು ಸತ್ಯ, ಶಾಂತಿ ಮತ್ತು ಅಹಿಂಸೆಯ ತತ್ವದ ಮೇಲೆ ನಡೆಯುತ್ತಿದೆ. ಎಲ್ಲ ವರ್ಗದ ಜನರಿಗೂ ಅವಕಾಶಗಳನ್ನು ಕಲ್ಪಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ತಿಳಿಸಿದ್ದಾರೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸದ್ಬಾವನಾ ದಿನ(ಹುತಾತ್ಮರ ದಿನ)ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಮಹಾತ್ಮಗಾಂಧಿಜೀ ಅವರು ಕೇವಲ ಸ್ವಾತಂತ್ರ÷್ಯ ಕ್ಕಾಗಿ ಹೋರಾಟ ನಡೆಸಿದ್ದಷ್ಟೇ ಅಲ್ಲ.ಈ ದೇಶದಲ್ಲಿ ನಡೆಯುತಿದ್ದ ಅನಿಷ್ಠ ಪದ್ದತಿಗಳ ವಿರುದ್ದವೂ ಹೋರಾಟ ನಡೆಸಿದ್ದರು ಎಂದರು. ಈ ದೇಶದ ಸ್ವಾತಂತ್ರ÷್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷ,ಸ್ವಾತಂತ್ರ÷್ಯ ನಂತರವೂ ದೇಶದ ಸಮಗ್ರ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸಿದ ಪರಿಣಾಮ ಶಾಲಾ,ಕಾಲೇಜು,ಆಸ್ಪತ್ರೆ, ರಸ್ತೆ,ವಿಮಾನ ನಿಲ್ದಾಣಗಳು,ಅಣೆಕಟ್ಟು ಗಳು ನಿರ್ಮಾಣಗೊಂಡು ದೇಶದ ಜನರು ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಾಯಿತು. ಇದನ್ನು ತಿಳಿಯದ ಕೆಲವರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಎನು ಎಂದು ಪ್ರಶ್ನೇ ಮಾಡುತ್ತಾರೆ. ಇತಿಹಾಸವೇ ಗೊತ್ತಿಲ್ಲದವರಿಂದ ಇತಿಹಾಸ ನಿರ್ಮಿಸಲು ಸಾಧ್ಯವೇ ಎಂದು ಜಿ.ಚಂದ್ರಶೇಖರ ಗೌಡ ಪ್ರಶ್ನಿಸಿದರು. ನನ್ನ ಜೀವನವೇ ನನ್ನ ಸಂದೇಶ ಎಂದ…

Read More

ಚಿಕ್ಕನಾಯಕನಹಳ್ಳಿ; ಉಪ ವಿಭಾಗಾಧಿಕಾರಿ ಆಡಳಿತ ಅಧಿಕಾರಿಗಳ ಅವಧಿಯಲ್ಲಿ ಹಣ ದುರ್ಬಳಿಕೆ ಮಾಡಿಕೊಳ್ಳಲಾಗಿದೆ ಈ ಬಗ್ಗೆ ಹಲವು ಬಾರಿ ಕೇಳಿದರು ಹಾಗೂ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೇಳಿದರು ನಮಗೆ ಮಾಹಿತಿ ನೀಡಿಲ್ಲ ಈ ಅವಧಿಯಲ್ಲಿ ಮಾರ್ಚ್ 2023 ರಿಂದ ಡಿಸೆಂಬರ್ 2023 ವರೆಗಿನ ವರದಿ ನೀಡಬೇಕು ಹಾಗೂ ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಸದಸ್ಯೆ ಪೂರ್ಣಿಮಾ ರೇಣುಕ ಪ್ರಸಾದ್ ನಾಗರಾಜ್ ಬಾಬು ಹುಸೇನ್ ಗುಂಡ ಇವರುಗಳು ಆಗ್ರಹಿಸಿದರು. ಪುರಸಭಾಧ್ಯಕ್ಷ ಕೆಂಗಲ್ ದಯಾನಂದ್ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಆಡಳಿತ ಅಧಿಕಾರಿಯ ಅವಧಿಯಲ್ಲಿ 14 ಹಾಗೂ 15ನೇ ಹಣಕಾಸು ಯೋಜನೆ, ಕಾಮಗಾರಿಗಳನ್ನು ಮನಬಂದAತೆ ಮಾಡಿದ್ದು ಜಮಾ ಖರ್ಚುಗಳ ಬಗ್ಗೆ ವರದಿಯನ್ನು ಸಭೆಗೆ ಮಂಡಿಸಿಲ್ಲ ಗೌರವಾನ್ವಿತ ಸದಸ್ಯತ್ವ ಬೆಲೆ ಇಲ್ಲವಾ ಎಂದು ಸದಸ್ಯ ಮಲ್ಲೇಶ ಶಾಸಕರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು ಇದಕ್ಕೆ ಶಾಸಕ ಸಿಬಿ ಸುರೇಶ್ ಬಾಬು ಆಡಳಿತ ಅಧಿಕಾರಿಗಳ ಅವಧಿಯಲ್ಲಿನ ಮಾಹಿತಿಯನ್ನು ವಿಶೇಷ ಸಭೆಯಲ್ಲಿ ಚರ್ಚಿಸಿ ಮಾರ್ಚ್ ನಿಂದ ಮಾರ್ಚ್…

Read More

ತುಮಕೂರು: ಅವಶ್ಯಕತೆಗಳನ್ನು ಮೀರಿ ಸಾಲ ಮಾಡಿ ಸಮಸ್ಯೆಗಳಿಗೆ ಸಿಲುಕಬಾರದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಸಂಬAಧಿಸಿದAತೆ ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ಗಳಿಗೆ ಅಸಲು ಹಣಕ್ಕಿಂತ ಬಡ್ಡಿಯನ್ನೇ ಹೆಚ್ಚಾಗಿ ಕಟ್ಟಬೇಕಾಗುತ್ತದೆ. ಅತಿ ಹೆಚ್ಚು ಬಡ್ಡಿ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆಯುವ ಮುನ್ನ ಜನರು ಆಲೋಚಿಸಬೇಕು ಎಂದು ತಿಳಿಸಿದರು. ಸಾರ್ವಜನಿಕರು ತಮ್ಮ ಖರ್ಚು-ವೆಚ್ಚಗಳು ಇತಿ-ಮಿತಿಯೊಳಗಿರುವಂತೆ ಎಚ್ಚರವಹಿಸಬೇಕು. ಮೈಕ್ರೋ ಫೈನಾನ್ಸ್ನಿಂದ ತಾವು ಸಾಲ ಪಡೆಯುವುದಲ್ಲದೆ ಸ್ನೇಹಿತರು, ಬಂಧುಗಳ ಹೆಸರಲ್ಲಿಯೂ ತೆಗೆದುಕೊಳ್ಳುತ್ತಿರುವುದು ಪರಿಶೀಲನೆ ವೇಳೆಯಲ್ಲಿ ಗಮನಕ್ಕೆ ಬಂದಿದೆ. ಸ್ನೇಹಿತರ ಸಾಲಕ್ಕೆ ಜಾಮೀನು ಹಾಕುವ ಮುನ್ನ ಯೋಚಿಸಬೇಕು. ಇದರಿಂದ ಸಾಲ ಪಡೆದವರು ಹಾಗೂ ಜಾಮೀನು ಹಾಕಿದವರೂ ಸಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿ ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಅತಿ ಕಡಿಮೆ…

Read More