Author: News Desk Benkiyabale

ತುಮಕೂರು: ಲೋಕಕಲ್ಯಾಣಕ್ಕಾಗಿ ದಣಿವರಿಯದೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಸಿದ್ದಗಂಗೆಯನ್ನು ಅಕ್ಷರಶಃ ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವ ವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರು ಎಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ದರಾಗಿದ್ದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ಪುಣ್ಯ ಸ್ಮರಣೆಯನ್ನು ಸಿದ್ದಗಂಗೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು. ಶ್ರೀಕ್ಷೇತ್ರದಲ್ಲಿ ನಡೆದ ಶ್ರೀಗಳ 6ನೇ ಪುಣ್ಯ ಸಂಸ್ಮರಣೋತ್ಸವಕ್ಕೆ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮೇಘಾಲಯ ರಾಜ್ಯಪಾಲರಾದ ಸಿ.ಹೆಚ್. ವಿಜಯಶಂಕರ್, ಕೇಂದ್ರ ಸಚಿವ ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ ಸೇರಿದಂತೆ ವಿವಿಧ ಮಠಾಧೀಶರುಗಳು, ಹರಗುರುಚರಮೂರ್ತಿಗಳು ಹಾಗೂ ಸಹಸ್ರಾರು ಭಕ್ತ ಸಮೂಹ ಶ್ರೀಗಳ ಗದ್ದುಗೆ ದರ್ಶನ ಪಡೆದು ಸಾಕ್ಷಿಯಾದರು. ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ನಸುಕಿನಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ವೇದ ಘೋಷಗಳು ಮೊಳಗಿದವು. ಶ್ರೀಗಳ 6ನೇ ಪುಣ್ಯಾರಾಧನೆ ಪ್ರಯುಕ್ತ ಶ್ರೀಗಳು ಐಕ್ಯ ರಾಗಿರುವ…

Read More

ತುಮಕೂರು : ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲೆಯ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಗೋಮಾಳ ಮತ್ತು ಅರಣ್ಯ ಭೂಮಿಯನ್ನು ಗ್ರಾಮ ಪಂಚಾಯಿತಿಗಳ ಪಿಡಿಒಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಹಾಗೂ ತಾಲ್ಲೂಕಿನ ಆಡಳಿತ ಸರ್ವನಾಶಕ್ಕೆ ಮುಂದಾಗಿದ್ದು, ವಿದ್ಯುತ್ ಸರಬರಾಜು ಕಂಪನಿಯ ವಿವಿಧ ಯೋಜನೆಗೆ ಜಿಲ್ಲೆಯ ಗೋಮಾಳಗಳಲ್ಲಿರುವ ಸಾವಿರಾರು ಮರಗಳನ್ನು ಮಾರಣ ಹೋಮ ನಡೆಸಲು ಮುಂದಾಗಿದ್ದು, ಇದನ್ನು ಕೂಡಲೇ ಕೈ ಬಿಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನಸಿಂಧುಸ್ವಾಮಿ ಒತ್ತಾಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿದ್ಯುತ್ ಸರಬರಾಜು ಕಂಪನಿಯು ಜಿಲ್ಲೆಯ ವಿವಿಧ ತಾಲಕು ವ್ಯಾಪ್ತಿಯಲ್ಲಿ ಸೌರ ಶಕ್ತಿ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಅದಕ್ಕಾಗಿ ಅಗತ್ಯವಾಗಿ ಬೇಕಿರುವ ಸಾವಿರಾರು ಎಕರೆ ಭೂಮಿಯನ್ನು ಸ್ಥಳೀಯ ಆಡಳಿತಗಳಿಂದ ಪಡೆಯಲು ಮುಂದಾಗಿದೆ. ಅಲ್ಲದೇ ಗೋಮಾಳಗಳನ್ನೇ ಗುರಿ ಮಾಡಿಕೊಂಡಿರುವ ವಿದ್ಯುತ್ ಕಂಪನಿ ಗೋಮಾಳ ಜಾಗದಲ್ಲಿರುವ ನೂರಾರು ವರ್ಷಗಳ ಸಾವಿರಾರು ಮರಳನ್ನು ತೆರವು ಮಾಡಿ ಆ ಜಾಗದಲ್ಲಿ ಸೌರಪ್ಲೇಟ್ ಗಳನ್ನು ಅಳವಡಿಸಲು ಈಗಾಗಲೇ…

Read More

ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ನೀರಗುಂದ ಗ್ರಾಮದ ಸಂಪರ್ಕ ರಸ್ತೆಗೆ ಸೇತುವೆ ಮತ್ತು ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ನೀರಗುಂದ, ಅಜ್ಜೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಅಲ್ಲಪ್ಪ ಮಾತನಾಡಿ ಗ್ರಾಮದಲ್ಲಿರುವ ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಹತ್ತಾರು ವರ್ಷಗಳಿಂದ ಈ ರಸ್ತೆಯನ್ನು ದುರಸ್ಥಿ ಪಡಿಸಿ, ಸೇತುವೆ ನಿರ್ಮಾಣ ಮಾಡಿ ಎಂದು ಸಾಕಷ್ಟು ಬಾರಿ ಶಾಸಕರಿಗೂ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜವಿಲ್ಲದಾಗಿದೆ. ಜನರು ಓಡಾಡಲೂ ಕಷ್ಟವಾಗುತ್ತಿದೆ. ರಸ್ತೆ ತುಂಬಾ ನೀರು ನಿಂತಿರುತ್ತದೆ. ಗುಂಡಿಗಳು ತುಂಬಿವೆ. ಮಳೆಗಾಲದಲ್ಲಂತೂ ಇಲ್ಲಿ ಓಡಾಡುವುದು ಕಷ್ಟಕರ. ಮುನ್ನೂರು ಮೀಟರ್ ದೂರ ಕ್ರಮಿಸುವ ರಸ್ತೆ ಸರಿಯಿಲ್ಲದ ಕಾರಣ ಬಳಸಿಕೊಂಡು ಸುಮಾರು ಐದು ಕಿಮೀ ದೂರ ಹೋಗಬೇಕಿದೆ. ಎಂದು ತಿಳಿಸಿದರು. ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡದಿದ್ದಲ್ಲಿ ತುರುವೇಕೆರೆಯಿಂದ ಕೆಬಿ ಕ್ರಾಸ್ ಕಡೆ ತೆರಳುವ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಲೋಕಮ್ಮನಹಳ್ಳಿ…

Read More

ಮಧುಗಿರಿ: ಜಿಲ್ಲೆಯ ಪ್ರತಿಷ್ಠಿತ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ತುಮುಲ್) ಅಧ್ಯಕ್ಷಗಾದಿಗೆ ಜ.22ರಂದು ಚುನಾವಣೆ ನಡೆಯಲಿದ್ದು, ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್‌ಗೆ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಆದರೂ ಇದೇ ಕಾರಣಕ್ಕೆ ಪ್ರಭಾವಿ ಶಾಸಕರ ನಡುವೆಯೇ ಮುಸುಕಿನ ಗುಡ್ಡಾಟ ನಡೆಯುತ್ತಿದೆ. ಸಹಕಾರ ಸಂಘಗಳ ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕ ಸ್ಥಾನ ಅಯ್ಕೆಯಾದ 15 ದಿನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಬೇಕಿದ್ದು, ಜ.24ರೊಳಗೆ ತುಮುಲ್‌ಗೆ ಹೊಸ ಸಾರಥಿ ಆಯ್ಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿಸಲಾಗಿದೆ. ಉಪವಿಭಾಗಾಧಿಕಾರಿ ತುಮಕೂರು ಗೌರವ್ ಕುಮಾರ್ ಚುನಾವಣಾಧಿಕಾರಿಯಾಗಿದ್ದಾರೆ. 1324 ಹಾಲು ಉತ್ಪಾದಕರ ಸಂಘಗಳನ್ನು ಹೊಂದಿರುವ ‘ತುಮುಲ್’ನಲ್ಲಿ ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ 1. ತುಮುಲ್ ಹಿಡಿತ ಕಾಂಗ್ರೆಸ್ ಪಕ್ಷ ಕಸರತ್ತು; -ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಜಿಲ್ಲೆಯವರೇ ಆಗಿರುವುದ ರಿಂದ ‘ತುಮುಲ್’ ಚುನಾವಣೆ ಸಾಕಷ್ಟು ಕುತೂಹಲ ಪಡೆದುಕೊಂಡಿದೆ. ತುಮುಲ್ ಅನ್ನು ‘ಕೈ’ ತೆಕ್ಕೆಗೆ ತೆಗೆದುಕೊಳ್ಳಲು ರಾಜಣ್ಣ ಈಗಾಗಲೇ ದಾಳ ಉರುಳಿಸಿದ್ದಾರೆ…

Read More

ಹುಳಿಯಾರು: ಹುಳಿಯಾರಿನ ಕೇಶವ ವಿದ್ಯಾ ಮಂದಿರ ಶಾಲೆಯಲ್ಲಿ ವಿಶೇಷವಾಗಿ ಗೋಮಾತೆ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಟಿ.ಜಯಣ್ಣನವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಶ್ರಮಿಕ ಸಂಸ್ಕöÈತಿ ಕಡಿಮೆಯಾಗುತ್ತಾ ಬರುತ್ತಿದ್ದು ಬರೀ ಯಾಂತ್ರಿಕ ವಿಧಾನ ಉಂಟಾಗಿ ಸಂಸ್ಕöÈತಿ ನಾಶದತ್ತ ಸಾಗುತ್ತಿದೆ ಹಾಗೂ ಕರ್ನಾಟಕ ಸಂಸ್ಕöÈತಿಯು ಅವನತಿ ಹತ್ತಿರ ಹೋಗುತ್ತಿದೆ. ಈ ನಿಟ್ಟಿನಲ್ಲಿ ಕೇಶವ ವಿದ್ಯಾ ಮಂದಿರ ಶಾಲೆಯಲ್ಲಿ ಸಂಸ್ಕöÈತಿಯನ್ನು ಬಿಂಬಿಸುವAತಹ ಕಾರ್ಯಕ್ರಮವನ್ನು ಶಿಕ್ಷಕ ಮಿತ್ರರು ಪ್ರತಿವರ್ಷ ಆಚರಣೆ ಮಾಡುತ್ತಿರುವುದು ಶ್ಲಾಘಿನೀಯ ಎಂದರು. ನಿವೃತ್ತ ಉಪನ್ಯಾಸಕ ಶ್ರೀಕಂಠಮೂರ್ತಿರವರು ಮಾತನಾಡಿ ಪ್ರಕೃತಿಯಲ್ಲಿ ಬದಲಾವಣೆ ಅನಿವಾರ್ಯ. ಇನ್ನು ಮುಂದೆ ಕತ್ತಲು ಕಡಿಮೆ ಬೆಳಕು ಜಾಸ್ತಿ ಎಂದು ತಿಳಿಸಿದರಲ್ಲದೆ ಇತ್ತೀಚಿನ ದಿನಗಳಲ್ಲಿ ನಾಟಿ ಹಸು, ಕಣ ಎಲ್ಲವೂ ಮರೆಯಾಗಿ ಯಂತ್ರದ ಮೇಲೆ ರೈತರು ಅವಲಂಬಿಸಿದ್ದಾರೆ. ಕೃಷಿ ಬಗ್ಗೆ ತಾತ್ಸಾರ ಮೂಡಿದೆ. ಗೋಪೂಜೆ ಮಾಡುವ ಮೂಲಕ ಕೃಷಿಯಲ್ಲಿ ಗೋವಿನ ಮಹತ್ವ ತಿಳಿಸುವ ಪ್ರಯತ್ನ ಸ್ವಾಗತಾರ್ಹ ಎಂದರು. ಈಶ್ವರಯ್ಯನವರು ಮಾತನಾಡಿ ಗೋಪೂಜೆಯು ತುಂಬಾ ಶ್ರೇಷ್ಠವಾದ ಪೂಜೆ ಅಷ್ಟ ದೇವತೆಗಳನ್ನು ಕೂಡ…

Read More

ತುಮಕೂರು: ಮಾಧ್ಯಮ ಕ್ಷೇತ್ರ ಇಂದು ಬೃಹದಾಕಾರವಾಗಿ ಬೆಳೆದಿದ್ದು ಕ್ಷಣ ಕ್ಷಣದ ಸುದ್ದಿಗಳನ್ನು ಕಣ್ಮುಂದೆ ತರುವಂತಹ ತಾಂತ್ರಿಕ ವ್ಯವಸ್ಥೆಗಳು ಬಂದಿರುವ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುವ ಪತ್ರಕರ್ತರು ಪ್ರಜಾಪ್ರಭುತ್ವದ ಆಶಯಗಳು ಸವಿಂಧಾನದ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸುದ್ದಿಗಳನ್ನು ಬರೆಯಬೇಕು ಸುದ್ದಿ ನೀಡುವ ಬರದಲ್ಲಿ ಸತ್ಯವನ್ನು ಮರೆಮಾಚಿ ಊಹಾಪೋಹದ ಸುಳ್ಳು ಸುದ್ದಿಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 39ನೇ ರಾಜ್ಯಮಟ್ಟದ ಪತ್ರಿಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಂದು ಅಂಬೇಡ್ಕರ್ ಮತ್ತು ಗಾಂಧಿಯವರು ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ ಅವರುಗಳಿಂದ ಪ್ರೇರಣೆಯಾದ ನಾವುಗಳು ಮೌಲ್ಯಯುತ ಸುದ್ದಿಗಳನ್ನು ಜನರಿಗೆ ನೀಡಬೇಕು ಸತ್ಯವಾದ ಘಟನೆಯನ್ನು ಪರಿಶೀಲಿಸಿ ಪರಮರ್ಶೆ ಮಾಡಿ ಸುಳ್ಳು ಸುದ್ದಿಗಳಿಗೆ ಆಸ್ಪದ ನೀಡದೆ ಜನರಿಗೆ ನೈಜ್ಯವಾದ ವರದಿಯನ್ನು ನೀಡಬೇಕು ಪತ್ರಕರ್ತರು ಸರ್ಕಾರಗಳನ್ನು ಟೀಕೆ ಮಾಡುವ ಭರದಲ್ಲಿ…

Read More

ಹುಳಿಯಾರು: ಗಣಿಬಾದಿತ ಪ್ರದೇಶಾಭಿವೃದ್ಧಿಗಾಗಿ ಮೀಸಲಾಗಿರುವ ಗಣಿ ದುಡ್ಡಲ್ಲಿ ಗಣಿಬಾದಿತ ಪ್ರದೇಶದ ಹಳ್ಳಿಗಳಿಗೆ ಮನೆಗೆರಡು ಹಸುಗಳನ್ನು ಕೊಡಿಸುವ ಚಿಂತನೆಯಿದ್ದಿ ಇದಕ್ಕಾಗಿ ಪಶು ಇಲಾಖೆಯಿಂದ ಸಮೀಕ್ಷೆ ಮಾಡಿಸಿ ವರದಿ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ಚಿಕ್ಕನಾಯಕನಹಳ್ಳಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಗ್ರಾಮ ಪಂಚಾಯ್ತಿ ಸಂಯುಕ್ತ ಆಶ್ರಯದಲ್ಲಿ ಹುಳಿಯಾರು ಹೋಬಳಿಯ ಸೀಗೆಬಾಗಿ ಗೇಟ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಿಶ್ರ ತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆ ಮತ್ತು ಕರುಗಳ ಪ್ರದರ್ಶನ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ತಾಲೂಕಿನ ಅನೇಕ ಕುಟುಂಬಗಳು ಇಂದು ಹೈನುಗಾರಿಕೆಯಿಂದ ನಡೆಯುತ್ತಿವೆ. ಹಾಗಾಗಿ ಹೈನುಗಾರಿಕೆಗೆ ಉತ್ತೇಜನ ನೀಡುವ ಜೊತೆಗೆ ವೈಜ್ಞಾನಿಕವಾಗಿಯೂ ಖರ್ಚು ಕಡಿಮೆ ಮಾಡಿ ಹಾಲು ಉತ್ಪಾದಿಸುವ ಸಲುವಾಗಿ ಪಶು ಇಲಾಖೆಯ ಸಹಾಯಕ ನಿರ್ದೇಶಕ ರೆ.ಮ.ನಾಗಭೂಷಣ್ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ರೈತರನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯುವ, ಉಚಿತ ತಪಾಸಣಾ ಶಿಬಿರ, ಬರಡು ರಾಸು ಚಿಕಿತ್ಸಾ ಶಿಬಿರ, ತರಬೇತಿ, ಸ್ಪರ್ಧೆ ಹೀಗೆ ಅನೇಕ…

Read More

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಇಂದು ತುಮಕೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ10 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣ, ಬೆಂಗಳೂರು ಮೂಲಕ ತುಮಕೂರು ವಿಶ್ವವಿದ್ಯಾಲಯ ಹೆಲಿಪ್ಯಾಡ್‌ಗೆ ಬಂದು ಇಳಿಯಲಿದ್ದಾರೆ. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಪ್ರಗತಿ ಸಂಕ್ರಾAತಿ ಸುಗ್ಗಿ-2” ಸಮಾರಂಭ ಉದ್ಘಾಟಸಿ ನಂತರ 11.30ರ ಸಮಯಕ್ಕೆ ಕುಣಿಗಲ್ ರಸ್ತೆಯ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಹುಳಿಯಾರು: ಹುಳಿಯಾರು ಹೋಬಳಿಯ ಗೋಪಾಲಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚೆಗೆ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು. ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ಹುರುಳಿಕಾಳು, ಅವರೆಕಾಯಿ ಮಾರಾಟ ಗಮನ ಸೆಳೆಯುವ ಜೊತೆಗೆ ಹೆಚ್ಚು ಮಾರಾಟವಾಯಿತು. ಶಾಲೆಯ ಮುಖ್ಯಶಿಕ್ಷಕಿ ನಾಗರತ್ನಮ್ಮ ಮಾತನಾಡಿ ನಾಲ್ಕು ಗೋಡೆಗಳ ಮದ್ಯೆ ಕಲಿಯುವ ಪಾಠ ಜ್ಞಾನಾರ್ಜನೆ ನೀಡಿದರೆ ಅನುಭವ ಕಲಿಸುವ ಪಾಠ ಜೀವನಕ್ಕೆ ಉಪಯುಕ್ತವಾಗುತ್ತದೆ. ಶೈಕ್ಷಣಿಕ ಹಂತದಲ್ಲಿ ವ್ಯವಹಾರ ಜ್ಞಾನ ಕಲಿತರೆ ಮುಂದೆ ಜೀವನ ನಿರ್ವಹಣೆಗೆ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ ಮಕ್ಕಳ ಸಂತೆ ಏರ್ಪಡಿಸಿರುವುದಾಗಿ ತಿಳಿಸಿದರು. ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ತೆಂಗಿನ ಕಾಯಿ, ಎಳನೀರು, ತರಕಾರಿ, ಸೊಪ್ಪು, ಚರುಮುರಿ, ಚಾಕ್ಲೇಟ್, ಬಿಸ್ಕೇಟ್ ಸೇರಿದಂತೆ ವಿವಿಧ ಅಂಗಡಿಗಳನ್ನು ಹಾಕಿದ್ದರು. ಕೆಲವು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆಯುವ ಅವರೆಕಾಯಿ, ಹುರುಳಿಕಾಯಿ, ಅಲಸಂದೆ, ರಾಗಿ ಮುಂತಾದವುಗಳನ್ನು ಸಂತೆಯಲ್ಲಿ ಇಟ್ಟು ಸಾರ್ವಜನಿಕರ ಗಮನ ಸೆಳೆದು, ಉತ್ತಮ ವ್ಯಾಪಾರ ಮಾಡಿದರು. ಶಾಲೆಯ ಶಿಕ್ಷಕಿ ಯರು ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು.

Read More

ತುಮಕೂರು: ಕಲ್ಪತರು ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಅಂತಿಮ ಅಂತದ ಸಿದ್ಧತೆಗಳು ಪೂರ್ಣಗೊಂಡಿದ್ದು ಶುಭಕೋರಿನ 39ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಸುದ್ದಿ ಮನೆಯ ಎಲ್ಲಾ ಸ್ನೇಹಿತರಿಗೂ ಸ್ವಾಗತ ಕೋರಲಿದ್ದು ನಾಳೆ ನಡೆಯುವ ಸಮ್ಮೇಳನವನ್ನ ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಈಗಾಗಲೇ ಅಂತಿಮ ಹಂತ ಸಿದ್ಧತೆಗಳನ್ನ ಪೂರ್ಣಗೊಳಿಸಿ ನಿರ್ಮಾಣ ಗೊಂಡಿರುವ ವೇದಿಕೆಯ ಸಿದ್ದತೆ ಕಾರ್ಯಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಸಂಘದ ಜಿಲ್ಲಾ ಘಟಕ ತುಮಕೂರು ಇವರು ಅದ್ದೂರಿಯಾಗಿ 39ನೇ ಸಮ್ಮೇಳನಕ್ಕೆ ಸಿದ್ಧ ಮಾಡಿದ್ದು, ಸಮ್ಮೇಳನದ ಮುಖ್ಯ ರೂವಾರಿಗಳಾದ ಡಾಕ್ಟರ್ ಜಿ ಪರಮೇಶ್ವರ್ ಅವರು ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ನಾಡಿನ ವಿವಿಧ ಗಣ್ಯರು ಮಠಾಧೀಶರು ಸೇರಿ ಸಮ್ಮೇಳನವನ್ನು ಯಶಸ್ವಿಗೊಳಿಸಲಿದ್ದಾರೆ ಎಂದು ತಿಳಿಸಿದರು. ನಗರದ ಟೌನ್ ಹಾಲ್ ವೃತ್ತದಿಂದ ನಡೆಯಲಿರುವ ರಾಜ್ಯ…

Read More