ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಸೀಗೆಹಳ್ಳಿ ಮಜರೆ ಚಟ್ಟನಹಳ್ಳಿ ಗ್ರಾಮದ ಶ್ರೀ ಹನುಮಂತರಾಯ ಮತ್ತು ಶ್ರೀ ನರಸಿಂಹಸ್ವಾಮಿ ದೇವಾಲಯವನ್ನು ಉಳಿಸಿ ಮತ್ತು ದೇವಸ್ಥಾನದ ಆಸ್ತಿಯನ್ನು ಸರ್ಕಾರವು ವಶಕ್ಕೆ ಪಡೆಯುವಂತೆ ಚಟ್ಟನಹಳ್ಳಿ ಗ್ರಾಮಸ್ಥರು ತಾಲೂಕಿನ ದಂಡಾಧಿಕಾರಿಯಾದ ಕುಂ.ಞ. ಅಹಮ್ಮದ್ ರವರಿಗೆ ಮನವಿ ಮಾಡಿದರು. ಚಟ್ಟನಹಳ್ಳಿ ಗ್ರಾಮಕ್ಕೆ ಗ್ರಾಮಸ್ಥರ ಮನವಿ ಮೇರೆಗೆ ಆಗಮಿಸಿದ ತಹಶೀಲ್ದಾರ್ ರವರಿಗೆ ಗ್ರಾಮಸ್ಥರು ತಮ್ಮ ಮನವಿ ಸಲ್ಲಿಸುವ ಮೂಲಕ ಗ್ರಾಮದಲ್ಲಿ ಪುರಾತನ ಕಾಲದ ಇತಿಹಾಸವುಳ್ಳ ಶ್ರೀ ಹನುಮಂತರಾಯ ಸ್ವಾಮಿ ಮತ್ತು ಶ್ರೀ ನರಸಿಂಹ ಸ್ವಾಮಿ ದೇವಾಲಯವು, ಧಾರ್ಮಿಕ ದತ್ತಿ ಮುಜರಾಯಿ ಇಲಾಖೆಗೆ ಸೇರಿದೆ. ವೆಂಕಟೇಶ ಎಂಬುವನು ಶ್ರೀ ಹನುಮಂತರಾಯ ದೇವರಿಗೆ ಅರ್ಚಕನಾಗಿ, ಗಣೇಶ ಎಂಬುವನು ಶ್ರೀ ನರಸಿಂಹಸ್ವಾಮಿ ದೇವಾಲಯದ ಅರ್ಚಕನಾಗಿ ಸರ್ಕಾರ ನೇಮಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಮಾಯಸಂದ್ರ ಆರ್.ಐ. ರಂಗಸ್ವಾಮಿ. ಕಸಬಾ ಶಿವಕುಮಾರ್. ಗ್ರಾಮ ಲೆಕ್ಕಾಧಿಕಾರಿ ಸತೀಶ್ ಮತ್ತು ಗುಡಿಗೌಡರಾದ ನಾರಾಯಣ. ಪಟೇಲರಾದ ನಾರಾಯಣ. ಯುವ ಮುಖಂಡ ಗಂಗಣ್ಣ. ವಿಶ್ವನಾಥ್. ವೆಂಕಟೇಶ್. ಮಗ್ಗದಪಾಳ್ಯ ಗಂಗಣ್ಣ ಮಾಜಿ ಗ್ರಾಫಂ ಅಧ್ಯಕ್ಷರು.…
Author: News Desk Benkiyabale
ಬೆಂಗಳೂರು: ಕಲ್ಪತರು ನಾಡು ತುಮಕೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಸಂಘಟನೆ ಮಾಡುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಜ.18 ಮತ್ತು 19 ರಂದು ಎರಡು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಜ.18ರಂದು ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದರು. ಡಿವಿಜಿ ಸಂಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಶತಮಾನೋತ್ಸದತ್ತ ಮುನ್ನಡೆಯುತ್ತಿದ್ದು, ರಾಜ್ಯದ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯನಿರತ ಪತ್ರಕರ್ತರ ಸದಸ್ಯತ್ವ ಉಳ್ಳ ದೇಶದ ಏಕೈಕ ಬೃಹತ್ ಸಂಘಟನೆಯಾಗಿದೆ ಎಂದರು. ಪತ್ರಕರ್ತರು ಎದುರಿಸುತ್ತಿರುವ ವೃತ್ತಿ ಪರ ಸಮಸ್ಯೆಗಳು , ಆರೋಗ್ಯ, ಪ್ರೋತ್ಸಾಹಕ ಯೋಜನೆಗಳ ಸಂಬAಧಿಸಿದAತೆ ಸರ್ಕಾರದ ಗಮನ ಸೆಳೆಯಲು ಸಮ್ಮೇಳನಗಳು ಸಮರ್ಥ ವೇದಿಕೆಯಾಗುತ್ತವೆ. ಈ ಎಲ್ಲಾ ಸಂಘಟನಾತ್ಮಕ ಚಟುವಟಿಕೆಗಳನ್ನು ವಾರ್ಷಿಕ ಸಮ್ಮೇಳನಗಳಲ್ಲಿ ಮಂಥನ ಮಾಡುವ ಅವಕಾಶವನ್ನು ಸೃಷ್ಟಿಕೊಳ್ಳಲಾಗಿದೆ. ಪತ್ರಿಕೋದ್ಯಮ, ಪತ್ರಕರ್ತರು ಸೇರಿದಂತೆ ನ್ಯೂಸ್ ರೂಂ ನ ಎಲ್ಲಾ ಆಯಾಮಗಳ…
ತುಮಕೂರು: ನವಭಾರತ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು. ಭಾರತವನ್ನು ಸುಭದ್ರವನ್ನಾಗಿ ಮಾಡುವ ಜವಾಬ್ದಾರಿ ಎಲ್ಲರದು ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ಮಹಾರಾಜ್ ಹೇಳಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ವತಿಯಿಂದ ಗುರುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 162ನೇ ಜನ್ಮ ಮಹೋತ್ಸವದ ಹಾಗೂ ರಾಷ್ಟಿçÃಯ ಯುವದಿನಾಚರಣೆ ನೆರವೇರಿಸಿ ಮಾತನಾಡಿದ ಅವರು, ದೇಶಕ್ಕೋಸ್ಕರ ಜೀವನದುದ್ದಕ್ಕೂ ಪ್ರಾರ್ಥನೆ ಮಾಡಿ, ದೇಶವು ಪಾಶ್ಚಿಮಾತ್ಯರ ಹಿಡಿತದಿಂದ ಮುಕ್ತಿ ಪಡೆಯಬೇಕು ಎಂದು ಹೋರಾಡಿದ ಮಹಾನ್ ವ್ಯಕ್ತಿ ವಿವೇಕಾನಂದರು ಎಂದರು. ಶಾಲೆಯ ಶಿಕ್ಷಣದಲ್ಲಿ ಅಗತ್ಯ ವಿಚಾರಗಳಿಗಿಂತ ಅನಗತ್ಯ ವಿಚಾರಗಳನ್ನು ತುಂಬುತ್ತಿದ್ದಾರೆ. ಸ್ವಾಮಿ ವಿವೇಕಾನಂದರವರ ವಿಚಾರಧಾರೆ ಕಣಕಣದಲ್ಲಿ ಬರಬೇಕು. ಯುವಜನತೆ ಶಕ್ತಿಯ ಜ್ವಾಲೆಗಳಾಗಬೇಕು ಎಂದರು. ಶಿಕ್ಷಣ ತಜ್ಞರಾದ ಕೆ. ಆರ್. ಪದ್ಮಿನಿ ಮಾತನಾಡಿ ಸ್ವಾಮಿ ವಿವೇಕಾನಂದರು ಪರೀಕ್ಷಿಸದೆ ಯಾವುದನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ. ಏಕಾಗ್ರತೆ ಎಂಬುದು ಜೀವನದ ಮುಖ್ಯ ಘಟಕ ಎಂದರು. ಶಕ್ತಿಯು ನಮ್ಮೊಳಗೆ ಇದೆ ನಾವು ಏನು ಬೇಕಾದರೂ ಸಾಧಿಸಬಹುದು. ಶಕ್ತಿಯ ಗಣಿಗಳಾಗಿ ಒಳ್ಳೆಯ ವಿಚಾರಗಳಿಗೆ…
ತುಮಕೂರು: ಜನವರಿ 17 ರಿಂದ 19 ರವರೆಗೆ ಬಹುತ್ವ ಸಂಸ್ಕೃತಿ ಭಾರತೋತ್ಸವವನ್ನು ಕಲಬುರಗಿ ಮಹಾನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎಸ್.ವೈ. ಗುರುಶಾಂತ್ ತಿಳಿಸಿದರು. ಅವರು ತುಮಕೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಏಕ ಸಂಸ್ಕೃತಿಯನ್ನು ಹೇರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವುದು ಇತ್ತಿಚಿನ ದಿನಗಳಲ್ಲಿ ಎದ್ದು ಕಾಣುತ್ತಿದೆ. ಬಹುಸಂಸ್ಕೃತಿಯು ಭಾರತದ ಹೆಗ್ಗುರುತು. ವೈವಿಧ್ಯತೆಯಲ್ಲಿ ಏಕತೆ ಭಾರತದ ವಿಶಿಷ್ಟತೆ. ಇಂತಹ ಬಹುತ್ವ ಭಾರತದ ಮೇಲೆ ವೈದಿಕ ಧಾರ್ಮಿಕತೆಯ ಯಜಮಾನಿಕೆಯ ಏಕ ಸಂಸ್ಕೃತಿಯನ್ನು ಹೇರುವ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿಯಾಗಿದ್ದು ಇದನ್ನು ವಿರೋಧಿಸಿ ‘ಬಹುತ್ವ ಸಂಸ್ಕೃತಿ ಭಾರತೋತ್ಸವ’ ವನ್ನು ಇದೇ 2025 ಜನವರಿ 17 ರಿಂದ 19 ರವರೆಗೆ ಕಲ್ಬುರ್ಗಿ ಮಹಾನಗರದಲ್ಲಿ ಆಯೋಜಿಸಲಾಗುತ್ತಿದೆ. ಸುಮಾರು ಐವತ್ತಕ್ಕೂ ಅಧಿಕ ವಿವಿಧ ಜನ ಸಂಘಟನೆಗಳು ಒಡಗೂಡಿದ ‘ಸೌಹಾರ್ದ ಕರ್ನಾಟಕ’ ವು ವ್ಯವಸ್ಥೆಗೊಳಿಸುತ್ತಿದ್ದು ರಾಜ್ಯದ ವಿವಿದೆಡೆಗಳಿಂದ 5000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ನೆಲಮೂಲ ಸಂಸ್ಕ್ರತಿಗಳನ್ನು ತುಳಿದಿಕ್ಕಿ, ವೈದಿಕ ಧಾರ್ಮಿಕತೆಯನ್ನೇ ಭಾರತೀಯ ಸಂಸ್ಕೃತಿ ಎಂದು ಬಿಂಬಿಸುವ ಹುನ್ನಾರಗಳನ್ನು ವಿರೋಧಿಸಿ ‘ಬಹುತ್ವ…
ತುಮಕೂರು: ಯುವಕರು ತರಗತಿಗಳಲ್ಲಿ, ಹಾಗೂ ಬಿಡುವಿನ ವೇಳೆಯಲ್ಲೆಲ್ಲ ಮೊಬೈಲಗಳನ್ನು ಬಳಸುತ್ತಾರೆ. ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ಕುರುಡು ಮತ್ತು ಕಿವುಡುತನ ಚಿಕ್ಕ ವಯಸ್ಸಿನಲ್ಲಿಯೇ ಕಾಡುತ್ತದೆ ಎಂದು ಡಫ್ ಚಿಲ್ಡçನ್ ಫೌಂಡೇಶನ್‌ನ ಕಾರ್ಯಕ್ರಮ ವ್ಯವಸ್ಥಾಪಕ ವೀರೇಶ್ ವೈ. ಎಸ್. ಹೇಳಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಮತ್ತು ರೆಡ್ ರಿಬ್ಬನ್ ಕ್ಲಬ್ ಆಯೋಜಿಸಿದ್ದ ಉಚಿತ ಕಣ್ಣು ಮತ್ತು ಕಿವಿ ತಪಾಸಣಾ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಹಿಂದೆ ಎಪ್ಪತ್ತು, ಎಂಬತ್ತು ವಯಸ್ಸಿನವರಿಗೆ ಕಾಡುತ್ತಿದ್ದ ಕಿವುಡುತನ ಮತ್ತು ಅಂಧತ್ವ ಇಂದು 10-15ನೇ ವಯಸ್ಸಿನ ಮಕ್ಕಳಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಹೆಚ್ಚಿನ ಶಬ್ದಮಾಲಿನ್ಯ ಮತ್ತು ಧ್ವನಿ ಉಪಕರಣಗಳ ಅತಿಯಾದ ಬಳಕೆ. ನವಜಾತ ಶಿಶುಗಳಲ್ಲೂ ಈ ಸಮಸ್ಯೆ ಹೆಚ್ಚುತ್ತಿದೆ ಎಂದರು. ಮಕ್ಕಳಿಗೆ ಐದು ವರ್ಷದ ಒಳಗೆ ಕಿವಿ ಕೇಳದಿದ್ದರೆ ಅವರು ಮಾತನಾಡುವುದನ್ನು ಕಲಿಯುವುದಿಲ್ಲ. ಹಾಗಾಗಿ ಮಕ್ಕಳ ಶ್ರವಣ ನ್ಯೂನತೆಯನ್ನು ಸೂಕ್ತ ಸಂದರ್ಭದಲ್ಲಿ ವೈದ್ಯರಿಗೆ ತೋರಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ…
ಹುಳಿಯಾರು: ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯ್ತಿಯ ನೂತನ ಉಪಾಧ್ಯಕ್ಷರಾಗಿ ಭಟ್ಟರಹಳ್ಳಿ ಶೇಖರ್ ಚುನಾಯಿತರಾಗಿದ್ದಾರೆ. 15 ಮಂದಿ ಸದಸ್ಯ ಬಲವುಳ್ಳ ಕೋರಗೆರೆ ಗ್ರಾಪಂ ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಡೆದಿದ್ದು ಶಿವಮ್ಮ ಮತ್ತು ಶೇಖರ್ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಶೇಖರ್ 11 ಮತಗಳನ್ನು, ಶಿವಮ್ಮ 4 ಮತಗಳನ್ನು ಪಡೆದಿದ್ದರು. ಚುನಾವಣಾಧಿಕಾರಿಯಾಗಿ ಕೆ.ಪುರಂದಯ್ಯ ಕರ್ತವ್ಯ ನಿರ್ವಹಿಸಿದ್ದರು. ಪಿಡಿಒ ನವೀನ್, ಅಧ್ಯಕ್ಷರಾದ ದಿನೇಶ್, ಸೇರಿದಂತೆ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ತುಮಕೂರು: ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗು ಮಾಜಿ ಶಾಸಕ ಆರ್.ನಾರಾಯಣ್ ಅವರುಗಳಿಗೆ ಶ್ರದ್ಧಾಂಜಲಿ ಹಾಗು ಜನವರಿ 21 ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು,ಜೈ ಅಂಬೇಡ್ಕರ್ ಮತ್ತು ಜೈ ಸಂವಿಧಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಕಾರ್ಯಕ್ರಮದಲ್ಲಿ ಅಗಲಿದ ಗಣ್ಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಮುಖಂಡರಾದ ಇಕ್ಬಾಲ್ ಅಹಮದ್,ಇಡೀ ಪ್ರಪಂಚವೇ ಹಣದುಬ್ಬರದಿಂದ ತಲ್ಲಣಿಸಿದ್ದ ಸಂದರ್ಭದಲ್ಲಿ ಭಾರತ ಮಾತ್ರ ಇದರ ಹೊಡೆತಕ್ಕೆ ಸಿಕ್ಕದೆ ಸುರಕ್ಷಿತವಾಗಿರಲು ಹಣಕಾಸು ತಜ್ಞರಾದ ಮನಮೋಹನ್ ಸಿಂಗ್ ಅವರ ದೂರದೃಷ್ಟಿಯೇ ಕಾರಣ.ಐಎಂಎಫ್ ಅಧ್ಯಕ್ಷರಾಗಿ,ರಾಷ್ಟಿçÃಯ ನೀತಿ ಆಯೋಗದ ಅಧ್ಯಕ್ಷರಾಗಿ, ಆರ್.ಬಿ.ಐ ಗೌರ್ನರ್ ಆಗಿ,ಹಣಕಾಸು ಸಚಿವರಾಗಿ ಅವರು ಮಾಡಿದ ಸುಧಾರಣೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ.ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ತೆಗೆದುಕೊಂಡು ನಿರ್ಧಾರದ ಫಲವಾಗಿ ಇಂದು ಕರ್ನಾಟಕ ಐಟಿ,ಬಿಟಿ ಹಬ್ ಆಗಿ…
ತುಮಕೂರು: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆಯನ್ನು ಖಂಡಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗ ಶಾಸಕ ಸುರೇಶ್‌ಗೌಡ ಸೇರಿದಂತೆ ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಇಂದು ಗೃಹ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಕಾರ್ಯಕರ್ತರಿಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಗರದ ಹೊರವಲಯದ ಸಿದ್ದಾರ್ಥ ನಗರದಲ್ಲಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿವಾಸದ ಮುಂದೆ ಬೆಳಿಗ್ಗೆಯಿಂದಲೇ ಬಿಜೆಪಿ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಓರ್ವ ಅಡಿಷನಲ್ ಎಸ್ಪಿ, ಇಬ್ಬರು ಡಿವೈಎಸ್ಪಿ ನೇತೃತ್ವದಲ್ಲಿ ಸುಮಾರು 150ಕ್ಕೂ ಅಧಿಕ ಪೊಲೀಸರನ್ನು ಬಿಗಿ ಪೊಲೀಸ್ ಬಂದೋಬಸ್ತ್ಗೆ ನಿಯೋಜಿಸಲಾಗಿದ್ದು, ಪೊಲೀಸರು ಈ ಭಾಗದ ರಸ್ತೆಯಲ್ಲಿ…
ತುಮಕೂರು: ದೇಶದ ಜನರಲ್ಲಿ ಭಕ್ತಿ ಭಾವನೆ ಉಳಿದಿರುವುದರಿಂದ ಆಧುನಿಕತೆಯ ಎಷ್ಟೇ ಬದಲಾವಣೆಗಳಾದರೂ ಆಚರಣೆಗಳಿಂದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಉಳಿದು ಮುಂದುವರೆದಿವೆ. ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿದರೆ ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದು ಅಲ್ಲಿಗೆ ಹೋಗಿಬಂದ ಅನೇಕರು ಹೇಳಿದ್ದಾರೆ. ಈ ನಂಬಿಕೆಯಿAದಲೇ ಶಬರಿಮಲೆ ಕ್ಷೇತ್ರ ವಿಶ್ವವಿಖ್ಯಾತವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದ ಗೋಕುಲ ಬಡಾವಣೆಯ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಬಳಗದಿಂದ ಭಾನುವಾರ ಸಂಜೆ ನಡೆದ 30ನೇ ವರ್ಷದ ಅಯ್ಯಪ್ಪ ಸ್ವಾಮಿ ಭಜನಾ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರಿಗೆ ಈ ವೇಳೆ ಅಯ್ಯಪ್ಪ ಸ್ವಾಮಿ ಭಕ್ತಿ ಬಳಗ ಪ್ರದಾನ ಮಾಡಿದ ತುಮಕೂರು ದಸರಾ ಹಮ್ಮೀರಾ ಪ್ರಶಸ್ತಿ ಹಾಗೂ ಬೆಳ್ಳಿ ಖಡ್ಗ ಸ್ವೀಕರಿಸಿ ಮಾತನಾಡಿದರು. ಶಬರಿಮಲೆ ಮಾದರಿಯಲ್ಲಿ ಮಂಟಪ ನಿರ್ಮಾಣ ಮಾಡಿ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾಪನೆ ಮಾಡಿ, ಶಬರಿಮಲೆಗೆ ಹೋಗಲು ಸಾಧ್ಯವಾಗದವರಿಗೆ ಇಲ್ಲಿಯೇ ಅಯ್ಯಪ್ಪನ ದರ್ಶನದ ವ್ಯವಸ್ಥೆ ಮಾಡಿದ್ದಾರೆ. ಅಯ್ಯಪ್ಪಸ್ವಾಮಿಗೆ ಹೊರದೇಶಗಳಲ್ಲೂ ಭಕ್ತರಿದ್ದಾರೆ. ಅವರೂ ಶಬರಿಮಲೆಗೆ ಬಂದು ದೇವರ…
ತುಮಕೂರು: ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆಯಿಂದ ಸೋಮವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಎದುರು ವೈಭವದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಇದರ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಕನ್ನಡಪರ ಸಂಘಟನೆಗಳು ಸಕ್ರಿಯ ಹೋರಾಟ ನಡೆಸಿದ ಪರಿಣಾಮ ಇಂದು ನಾಡಿನಲ್ಲಿ ಕನ್ನಡಿಗರಿಗೆ ದೊಡ್ಡ ಶಕ್ತಿ ಬಂದಿದೆ. ಪರಭಾಷಿಕರ ಹಾವಳಿಯಲ್ಲಿ ಕನ್ನಡದ ಅಸ್ತಿತ್ವ ಕಾಪಾಡಿಕೊಳ್ಳುವಂತಾಗಿದೆ ಎಂದರು. ಕನ್ನಡ ಸಂಘಟನೆಗಳು ಕನ್ನಡ ರಾಜ್ಯೋತ್ಸವ ಆಚರಣೆ ಜೊತೆಗೆ ನಾಡಿನ ಎಲ್ಲರಲ್ಲೂ ಭಾಷಾಭಿಮಾನ ಬೆಳೆಸಬೇಕು. ಪೋಷಕರು ಮಕ್ಕಳಲ್ಲಿ ಕನ್ನಡ ಅಭಿಮಾನ ಮೂಡಿಸಬೇಕು, ಕನ್ನಡ ನಾಡಿಗೆ ಕೊಡುಗೆ ನೀಡಿದ ಮಹನೀಯರ ಸಾಧನೆಯನ್ನು ಪರಿಚಯಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡದ ವೈಭವ ಮೆರೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಹೊಸಕೋಟೆ ನಟರಾಜ್, ಜಿಲ್ಲಾಧ್ಯಕ್ಷ ಧೃವಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಸುಧಾ, ಲಲಿತಾ ಹನುಮಂತಪ್ಪ, ವಿವಿಧ…