ತುಮಕೂರು : ದೇಶದುದ್ದಕ್ಕೂ ಎಲ್ಲಾ ಜನ ಸಮುದಾಯದಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಸಿ ಸಮ ಸಮಾಜದ ನಿರ್ಮಾಣಕ್ಕೆ ಸಮತೆಯನ್ನು ಬೋಧಿಸಿದ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು ಎಂದು ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಎಸ್. ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟಿದ್ದಾರೆ. ನಗರದ ಡಾ: ಗುಬ್ಬಿವೀರಣ್ಣ ಕಲಾ ಕ್ಷೇತ್ರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. ಕರ್ನಾಟಕ ಜನಸಂಸ್ಕೃತಿಯಲ್ಲಿ ಸಮಾನ ಭಾವ ಮೂಡಿಸಿ ವಾಸ್ತವತೆಯನ್ನು ಸಾರಿದ ಶರಣ ಸಾಹಿತ್ಯದ ರೂವಾರಿ ಬಸವಣ್ಣನವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಅಂತೆಯೇ ದೇಶದಾದ್ಯಂತ ತಳಸಮುದಾಯಗಳನ್ನು ಸಮತೆಯೆಡೆಗೆ ಸಾಗಲು ಬೆಳಕು ತೋರಿದ ಡಾ: ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಅವಶ್ಯಕತೆಯಿದೆ ಎಂದರು. ಇತಿಹಾಸದಲ್ಲಿ ತಳ ಸಮುದಾಯದ ಓಬವ್ವ ಒಬ್ಬ ಕಾವಲುಗಾರನ ಪತ್ನಿಯಾಗಿ ಸ್ವಾಮಿನಿಷ್ಠೆಗಾಗಿ ಹಾಗೂ ತಮ್ಮ ರಾಜ್ಯದ ಉಳಿವಿಗಾಗಿ ಒನಕೆಯಿಂದ…
Author: News Desk Benkiyabale
ತುಮಕೂರು: ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆ ಇವರನ್ನು e್ಞÁಪಕದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಹಿರಿಯರ ಹಬ್ಬದ ರೀತಿ ಸ್ವಾತಂತ್ರ ಹೋರಾಟಗಾರರ ಸ್ಮರಣೆ ಕಾರ್ಯಕ್ರಮ ನಡೆಯಬೇಕು ಎಂದು ತುಮಕೂರು ಜಿಲ್ಲಾ ಸ್ವಾತಂತ್ರ ಹೋರಾಟಗಾರರ ಸಂಘ ಹಾಗೂ ಉತ್ತರಾಧಿಕಾರಿಗಳ ಸಂಘದ ಕಾರ್ಯಾಧ್ಯಕ್ಷರಾದ ಆಶಾ ಪ್ರಸನ್ನಕುಮಾರ್ ತಿಳಿಸಿದ್ದಾರೆ. ನಗರದ ಬಾಪೂಜಿ ಸಭಾಂಗಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆವತಿಯಿAದ ಆಯೋಜಿಸಿದ್ದ ಜಿಲ್ಲೆಯ ಸ್ವಾತಂತ್ರ ಹೋರಾಟಗಾರರ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಸಂಘದ ವತಿಯಿಂದ ಪ್ರತಿವರ್ಷ ವಿಜಯದಶಮಿಯ ದಿನದಂದು ಸ್ವಾತಂತ್ರ ಹೋರಾಟಗಾರರ ಸಂಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದರು. ನಮ್ಮ ತಾತ ಬಿ.ಸಿ.ನಂಜುAಡಯ್ಯ ಹಾಗೂ ಅಜ್ಜಿಯವರು ಸ್ವಾತಂತ್ರ ಹೋರಾಟಗಾರರಿದ್ದರು. ಅನೇಕ ಗುಪ್ತ ಸಭೆಗಳು ನಮ್ಮ ಮನೆಯಲ್ಲಿ ನಡೆದಿದ್ದವು ಎಂಬುದನ್ನು ಆಗಾಗ್ಗೆ ತಿಳಿಸುತಿದ್ದರು. ಇಂತಹ ಹೋರಾಟಗಾರರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಸರಕಾರ, ಸಂಘ ಸಂಸ್ಥೆಗಳು ಸೇರಿ, ನಗರದಲ್ಲಿರುವ ವೃತ್ತಗಳಿಗೆ, ರಸ್ತೆಗಳಿಗೆ ಅವುಗಳ ಹೆಸರು ಇಡುವ ಮೂಲಕ, ಅವರುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಹಾಗೆಯೇ ತುಮಕೂರು…
ತುಮಕೂರು: ನಗರಕ್ಕೆ ಹೊಂದಿಕೊAಡAತಿರುವ ಬೆಳಗುಂಬ ಗ್ರಾಮದಲ್ಲಿ ಶ್ರೀಗುರು ಸಿದ್ದರಾಮೇಶ್ವರ ಸ್ವಾಮಿ ದೇವಾಲಯದ ಉದ್ಘಾಟನೆ ಹಾಗೂ ವಿಮಾನ ಗೋಪುರ ಕಳಸ ಸ್ಥಾಪನೆ ಕಾರ್ಯಕ್ರಮ ನಡೆಯಿತು, ಆದರೆ ಈ ಕಾರ್ಯಕ್ರಮದಲ್ಲಿ ನಡೆದದ್ದೆಲ್ಲವೂ ಅಧ್ವಾನ ಎಂಬ ಆರೋಪ ಕೇಳಿ ಬಂದಿದೆ. ಮುಜರಾಯಿ ಇಲಾಖೆಗೆ ಸೇರುವ ಈ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಅನ್ನೋದು ಅದ್ಯಾವ ಮೂಲೆ ಸೇರಿತ್ತೋ ಗೊತ್ತಿಲ್ಲ. ದೇವಾಲಯ ಅಭಿವೃದ್ಧಿ ಗೆ ಶ್ರಮಿಸಿದ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡರನ್ನು ಕಡೆಗಣಿಸಿದ ಜಿಲ್ಲಾಡಳಿತ ಅವರಿಗೂ ಅವಮಾನಿಸುವ ಕೆಲಸ ಮಾಡಿದೆ. ನವೆಂಬರ್ 8 ರಿಂದ 11 ರ ವರೆಗೆ ದೇವಾಲಯ ಉದ್ಘಾಟನೆ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು, ಆದರೆ ಕಾರ್ಯಕ್ರಮದ ಮೂರು ರೀತಿಯ ಕರಪತ್ರ ಮುದ್ರಿಸಿ ಭಕ್ತರನ್ನು ಮತ್ತು ಗ್ರಾಮಸ್ಥರನ್ನು ಗೊಂದಲಕ್ಕೆ ದೂಡುವ ಕೆಲಸವೂ ಆಗಿದೆ, ಈ ರೀತಿ ಮೂರು ರೀತಿ ಕರಪತ್ರ ಮುದ್ರಿಸಿದ್ದರ ಹಿಂದಿನ ಉದ್ದೇವೇನಿತ್ತು ಎಂದು ಭಕ್ತರು ಪ್ರಶ್ನಿಸಿದ್ದಾರೆ. ಇನ್ನು ಶಾಸಕ ಸುರೇಶ್ ಗೌಡ ಅವರು ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದ್ದರು,…
ತುಮಕೂರು: ವಿಶ್ವವಿದ್ಯಾನಿಲಯದ ವತಿಯಿಂದ ಪುರುಷ-ಮಹಿಳಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಅಂತರಕಾಲೇಜು 10ಕಿ.ಮೀ. ಗುಡ್ಡಗಾಡು ಓಟದ ಸ್ಫರ್ಧೆಯಲ್ಲಿ ಗರಿಷ್ಠ ಸ್ಥಾನ ಪಡೆದು ಸಮಗ್ರ ಚಾಂಪಿಯನ್‌ಶಿಪ್‌ಗೆ ಭಾಜನರಾದ ವಿವಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸೋಮವಾರ ರಾಷ್ಟಿçÃಯ ಶಿಕ್ಷಣ ದಿನಾಚರಣೆಯ ಸಂದರ್ಭದಲ್ಲಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಪ್ರಶಸ್ತಿ ಪ್ರದಾನ ಮಾಡಿದರು. ಕುಲಸಚಿವೆ ನಾಹಿದಾ ಜûಮ್ ಜûಮ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಎ. ಎಂ. ಮಂಜುನಾಥ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಎಂ. ಶೇಟ್, ಪ್ರೊ. ಹರಿಪ್ರಸಾದ್ ಟಿ. ಎನ್., ಸಹ ಪ್ರಾಧ್ಯಾಪಕ ಡಾ. ರಾಮಕೃಷ್ಣ ಜಿ. ಇದ್ದಾರೆ. ಗುಡ್ಡಗಾಡು ಓಟದ ಸ್ಫರ್ಧೆಯಲ್ಲಿ ವಿವಿ ವಿಜ್ಞಾನ ಕಾಲೇಜಿನ ಅವದೇಶ್ ನಿಶಾದ ಮೊದಲ ಸ್ಥಾನ, ನಿಖಿಲ್ ಎಸ್. ಮೂರನೆಯ ಸ್ಥಾನ ಹಾಗೂ ದೇವರಾಜ ನಾಲ್ಕನೆಯ ಸ್ಥಾನ ಪಡೆದಿದ್ದಾರೆ.
ತುಮಕೂರು: ತಾಲ್ಲೂಕಿನ ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರದಲ್ಲಿ ಅಟವಿ ಮಹಾಸ್ವಾಮಿಗಳ 124ನೇ ಪುಣ್ಯಸ್ಮರಣೋತ್ಸವ, ಮಠಾಧ್ಯಕ್ಷರಾದ ಅಟವೀ ಶಿವಲಿಂಗ ಸ್ವಾಮೀಜಿಗಳ ಪೀಠಾರೋಹಣ ರಜತ ಮಹೋತ್ಸವ ಹಾಗೂ ಅಟವಿ ಮಲ್ಲಿಕಾರ್ಜುನ ದೇವರ ನಿರಂಜನ ನಿರಾಭಾರಿ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಭಾನುವಾರ ಧರ್ಮಸಭಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಶ್ರೀ ಮಠದ ಅಟವಿ ಶಿವಲಿಂಗ ಸ್ವಾಮೀಜಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳು ಹಾಗೂ ಸಾಸನೂರು ಮಠದ ಮಹಾಂತಲಿAಗ ಶಿವಾಚಾರ್ಯ ಸ್ವಾಮೀಜಿಗಳು ನೇತೃತ್ವ ವಹಿಸಿದ್ದರು. ನಂತರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾ ಪೂಜೆ ಹಮ್ಮಿಕೊಳ್ಳಲಾಗಿತ್ತು. ನಂತರ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ನಡೆದ ಧರ್ಮಸಭಾ ಕಾರ್ಯಕ್ರಮವನ್ನು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಹಿರೇಮಠ ಶ್ರೀಗಳು, ಅಟವಿ ಶಿವಲಿಂಗ ಸ್ವಾಮೀಜಿಗಳು ಕಳೆದ 25 ವರ್ಷಗಳಿಂದ ಮಠದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ಈ ಭಾಗದಲ್ಲಿ ಮರೆಯಾಗಿರುವ ಪುರಾಣ, ಪ್ರವಚನ ಪರಂಪರೆಯನ್ನು ಸೃಷ್ಟಿಸಿದ ಕೀರ್ತಿ ಸ್ವಾಮೀಜಿಗಳಿಗೆ ಸಲ್ಲಬೇಕು. 79ನೇ ವಯಸ್ಸು…
ಹುಳಿಯಾರು: ವಾರಕ್ಕೊಮ್ಮೆ ಹುರುಳಿಕಾಳು, ನುಗ್ಗೆಸೊಪ್ಪಿನ ಸಾರು ತಿನ್ನುವುದರಿಂದ ಆರೋಗ್ಯವಾಗಿರಬಹುದು ಎಂದು ಹಂದನಕೆರೆ ಶ್ರೀಮಠದ ಗುರುಗಳಾದ ವೇದಮೂರ್ತಿ ರುದ್ರಾರಾಧ್ಯರು ತಿಳಿಸಿದರು. ಹುಳಿಯಾರಿನ ಸನ್ಮಾರ್ಗ ಥಿಯಾಸಾಫಿಕಲ್ ಸೊಸೈಟಿಯ ಥಿಯಾಸಾಫಿಕಲ್ ಸೇವಾ ವಿಭಾಗ ಮತ್ತು ಶ್ರೀ ಗುರು ಗೋಸೇವಾ ಪರಿವಾರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಣ್ಣೆಯಲ್ಲಿ ಖರೀದ ಪದಾರ್ಥಗಳು, ಸಿಹಿ ತಿಂಡಿಗಳು ಹಾಗೂ ಜಂಕ್ ಫುಡ್‌ಗಳಿಂದ ದೂರ ಇರಬೇಕು. ಬೆಳಗ್ಗೆ ಬೆಡ್ ಕಾಫಿ ಬಿಟ್ಟು ಕಷಾಯ ಕುಡಿಯಿರಿ, ಬೆಳಗ್ಗೆ 9 ರೊಳಗೆ ಮದ್ಯಾಹ್ನ 1 ರೊಳಗೆ ಸಂಜೆ 7 ರೊಳಗೆ ಊಟತಿಂಡಿ ತಿನ್ನಿ. ತಿಂದ ಬಳಿಕ ಯತ್ತೇಚ್ಚವಾಗಿ ನೀರು ಕುಡಿಯದೆ ಸ್ವಲ್ಪ ಸಮಯದ ನಂತರ ಕುಡಿಯಬೇಕು. ತಿಂದ ನಂತರ ನೂರೆಜ್ಜೆಯಷ್ಟಾದರೂ ನಡೆಯಬೇಕು. ಬಹುಮುಖ್ಯವಾದಿ ತಿಂಗಳಿಗೆರಡು ಬಾರಿಯಾದರೂ ಉಪವಾಸ ಮಾಡಬೇಕು. ನಿಯಮಿತವಾದ ವ್ಯಾಯಾಮ, ಕಾಲಕಾಲದ ಹಣ್ಣುಗಳನ್ನು ತಿನ್ನುವ ಅಭ್ಯಾಸ ಇದ್ದರೆ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದರು. ಪಂಚಗವ್ಯ ಚಿಕಿತ್ಸಾ ತಜ್ಞರಾದ ಡಾ.ಡಿ.ಪಿ.ರಮೇಶ್ ಮಾತನಾಡಿ ಶೌಚಾಲಯಕ್ಕೆ ಕೂರಲಾಗದಂತೆ…
ತಿಪಟೂರು: ನೆಮ್ಮದಿಯ ಜೀವನ ನಡೆಸಲು ಎಲ್ಲರಿಗೂ ಕಾನೂನು ಅಗತ್ಯ ಎಂದು ತಿಪಟೂರಿನ ಕೆಎಲ್ಎ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಎಚ್.ಎನ್. ಪ್ರಸನ್ನ ಅವರು ಹೇಳಿದರು. ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರ, ರೆಡ್ ರಿಬ್ಬನ್, ಎನ್ಎಸ್ಎಸ್, ಕೌಶಲ್ಯ ಪಥ ಘಟಕ ಮತ್ತು ತಿಪಟೂರಿನ ಕೆಎಲ್ಎ ಕಾನೂನು ಕಾಲೇಜಿನ ವತಿಯಿಂದ ಉಚಿತ ಕಾನೂನು ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅವರು ಮಾತನಾಡಿದರು. ಸಂವಿಧಾನದಲ್ಲಿರುವ ಎಲ್ಲಾ ಕಾನೂನುಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ. ಅದರೆ ಪ್ರತಿನಿತ್ಯ ಚಟುವಟಿಕೆಗೆ ಮತ್ತು ವ್ಯವಹಾರಕ್ಕಾಗಿ ಕಾನೂನು ಅರಿವು ಎಲ್ಲರಿಗೂ ಅಗತ್ಯವಾಗಿದೆ ಎಂದು ಅವರು ತಿಳಿಸಿದರು. ಹಣದ ತೊಂದರೆ ಇರುವವರು ಉಚಿತ ಕಾನೂನಿನ ನೆರವನ್ನು ಪಡೆಯಬಹುದು. ಉಚಿತ ಕಾನೂನಿನ ಬಗ್ಗೆ ವಿವರವಾಗಿ ಪ್ರಸನ್ನ ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲರಾದ ರಮೇಶ್ ಎಚ್.ಜಿ. ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅಗತ್ಯ ಎಂದರು. ಉದ್ಘಾಟಿಸಿದ ಘಟಕದ ಸಂಚಲಕರು ಹಾಗೂ…
ತುಮಕೂರು: ಅನುಕರಣೆಯೇ ಯುಗಧರ್ಮವಾಗಿರುವ ಕಾಲದಲ್ಲಿ ಜ್ಞಾನ ನಿರ್ಮಾಣಕ್ಕೆ ನೀಡುವ ಪ್ರಾಮುಖ್ಯತೆಯನ್ನು ಮೌಲಿಕವಾದ ವ್ಯಕ್ತಿತ್ವ ನಿರ್ಮಾಣಕ್ಕೂ ಕೊಡಬೇಕು ಎಂದು ವಿವಿ ಕಲಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಹರಿಪ್ರಸಾದ್ ಟಿ. ಎನ್. ಹೇಳಿದರು. ತುಮಕೂರು ವಿವಿಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟಿçÃಯ ಶಿಕ್ಷಣ ದಿನಾಚರಣೆಯಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ‘ಗುಣಾತ್ಮಕ ಶಿಕ್ಷಣಕ್ಕೆ ಉತ್ತೇಜನ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಾನವೀಯತೆಯ ಬೀಜವನ್ನು ಬಿತ್ತುವ, ಬೆಳಗಿಸುವ ನೈತಿಕ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ವರ್ತಮಾನದಲ್ಲಿ ಮಾಯವಾಗಿದೆ. ಈವರೆಗೂ ಬಂದಿರುವ ಶಿಕ್ಷಣ ನೀತಿಗಳಿಗೂ ಮೀರಿದ್ದಾಗಿತ್ತು ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿ. ಸುಗುಣರನ್ನಾಗಿಸುವ ಶಿಕ್ಷಣ ಕ್ರಮವನ್ನು ಶಿಕ್ಷಣ ನೀತಿಗಳು ಗೊಂದಲ ಸೃಷ್ಟಿಸಿ ಶಕ್ತಿಹೀನವಾಗಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು. ಮೆಕಾಲೆ ಪರಿಚಯಿಸಿದ ಶಿಕ್ಷಣ ಪದ್ಧತಿಗಿಂತಲೂ ವ್ಯಕ್ತಿತ್ವಕ್ಕೆ ಬೆಳಕು ಚೆಲ್ಲುವ ಭಾರತದ ಶಿಕ್ಷಣಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಗಾಂಧೀಜಿ, ಅಂಬೇಡ್ಕರ್ ಅವರಂತಹ ಉತ್ಕೃಷ್ಟ ವ್ಯಕ್ತಿತ್ವಗಳು, ರಾಜಕೀಯದಲ್ಲಿ ಶುದ್ಧವಾಗಿದ್ದ ಲಾಲ್ ಬಹದ್ದೂರ್ ಶಾಸ್ತಿç ಮತ್ತು ಎಪಿಜೆ…
ಕೊರಟಗೆರೆ: ಪಟ್ಟಣದ ಶಿವಗಂಗಾ ಚಿತ್ರಮಂದಿರದ ಮುಂಭಾಗದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಲಂಡನ್ ಕಿಟ್ಸ್ ಶಾಲೆಯ ಉದ್ಘಾಟನೆಯನ್ನು ತಹಶೀಲ್ದಾರ್ ಮಂಜುನಾಥ್ ಮಾಡಿ ಮಾತನಾಡಿ ಅವರು ಲಂಡನ್ ಕಿಡ್ಸ್ ಶಾಲೆಯ ಪ್ರತಿ ಕೊಠಡಿಗಳನ್ನು ವೀಕ್ಷಿಸಿ ಪಟ್ಟಣದಲ್ಲಿ ಪ್ರಥಮವಾಗಿ ನಿಮ್ಮ ಶಾಲೆ ತುಂಬಾ ಚೆನ್ನಾಗಿ ಪ್ರಾರಂಭಿಸಿದ್ದೀರ ಚಿಕ್ಕ ಮಕ್ಕಳ ಕಡೆ ಅತಿ ಹೆಚ್ಚು ಗಮನ ಕೊಡುತ್ತಾ ಶಾಲೆಯನ್ನು ಚೆನ್ನಾಗಿ ಮುಂದುವರಿಸಿಕೊಂಡು ಹೋಗಿ ಎಂದು ಶುಭ ಹಾರೈಸಿದರು. ಈ ಲಂಡನ್ ಕಿಡ್ಸ್ ಶಾಲೆಯಲ್ಲಿ ಒಂದುವರೆ ರ‍್ಷದಿಂದ ಆರು ರ‍್ಷದೊಳಗಿನ ಮಕ್ಕಳಿಗೆ ದಾಖಲಾತಿಗಳು ಈಗಾಗಲೇ ಪ್ರಾರಂಭವಾಗಿದ್ದು ಪ್ರಥಮ ರ‍್ಷದ ಅಡ್ಮಿಶನ್ ಗಳಿಗೆ ಶೇಕಡ 10% ರಿಯಾಯಿತಿ ನೀಡಲಾಗುತ್ತಿದ್ದು ಶಾಲೆಗೆ ದಾಖಲಾಗುವ ಪ್ರತಿ ಮಗುವಿನ ಭದ್ರತೆಗಾಗಿ ಪ್ರತಿ ಕೊಠಡಿಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಕೆ ವಿಶಾಲ ಆಟದ ಮೈದಾನ ಹಾಗೂ ನುರಿತ ತರಬೇತಿ ಹೊಂದಿರುವ ಶಿಕ್ಷಕರರಿಂದ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತೇವೆ ಲಂಡನ್ ಕಿಟ್ ಶಾಲೆಯ ವ್ಯವಸ್ಥಾಪಕ ವೆಂಕಟೇಶ್ ತಿಳಿಸಿದರು. ನಂತರ ಶಾಲೆಯ ಸಂಸ್ಥಾಪಕರ ಶ್ರೀಮತಿ ಶ್ರುತಿ ವೆಂಕಟೇಶ್ ಮಾತನಾಡಿ ವಿದ್ಯಾವಂತರು ಯಾವತ್ತೂ…
ತುಮಕೂರು: ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಡಾ. ಶಿವಕುಮಾರ ಸ್ವಾಮೀಜಿ ಆಟೋ ನಿಲ್ದಾಣ ಹಾಗೂ ಕಲ್ಪತರು ಆಟೋ ನಿಲ್ದಾಣದ ಚಾಲಕರ ವತಿಯಿಂದ ಕನ್ನಡ ಚಲನಚಿತ್ರ ರಂಗದ ಮೇರು ನಟ ದಿ. ಶಂಕರ್‌ನಾಗ್ ರವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಆಟೋ ಚಾಲಕರು ಹಮ್ಮಿಕೊಂಡಿದ್ದ ನಟ ದಿ. ಶಂಕರ್‌ನಾಗ್ ಅವರ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಶಂಕರ್‌ನಾಗ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿ ಮಾತನಾಡಿ, ಆಟೋ ಚಾಲಕರು ಶ್ರಮ ಜೀವಿಗಳು, ಸ್ವಾಭಿಮಾನಿಗಳು. ಸಾಲ ಮಾಡಿ ಆಟೋ ಖರೀದಿಸಿ ದೇಶ ಕಟ್ಟುವ ಕೆಲಸ ಮಾಡುತ್ತಾ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ ಎಂದರು. ಆಟೋ ಚಾಲಕರು ಸ್ವತಃ ದುಡ್ಡು ಹಾಕಿಕೊಂಡು ಮೇರು ನಟ ದಿ. ಶಂಕರ್‌ನಾಗ್ ರವರ ಜನ್ಮ ಜಯಂತಿ ಆಚರಣೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಶಂಕರ್‌ನಾಗ್ ಅವರು ಇಡೀ ಕರ್ನಾಟಕದ ಜನರ ಪ್ರೀತಿಯ ನಟ ಎಂದರು. ಆಟೋ ಚಾಲಕರ ಸಮಸ್ಯೆಗೆ ಸ್ಪಂದಿಸಲು ನಾನು ಸದಾ ಸಿದ್ದನಿರುತ್ತೇನೆ ಎಂದು…