Author: News Desk Benkiyabale

ಕುಣಿಗಲ್ :       ರೈತರಿಗೆ ರಾಗಿ ಖರೀದಿಯಲ್ಲಿ ಮೋಸ ಮಾಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದಾಗ ಪ್ರತಿಭಟನೆಯನ್ನ ಕೈಬಿಡಿ ರೈತರ ಹಣ ಸಂದಾಯ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ ತಿಂಗಳಾದರೂ ಇನ್ನೂ ರೈತರ ರಾಗಿ ದುಡ್ಡು ನೀಡಿಲ್ಲ ಎಂದು ಆರೋಪಿಸಿ ರೈತ ಸಂಘ ತಾಲ್ಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ನಡೆಯಿತು.       ಮಹಿಳೆಯರು ಸೇರಿದಂತೆ ಹಲವು ರೈತರು ತಮ್ಮ ಜಮೀನಿನಲ್ಲಿ ರಾಗಿ ಬೆಳೆದು ಖರೀದಿ ಕೇಂದ್ರಕ್ಕೆ ಸುಮಾರು 1087 ರೈತರಿಂದ ಪಡೆದಿದ್ದು ಇದರಲ್ಲಿ 391 ರೈತರಿಗೆ ಮಾತ್ರ ನೀಡಿದ್ದರೂ ಇನ್ನೂ ಹಣ ನೀಡಿಲ್ಲ ಎಂಬ ಅವರ ದೂರಿನ ಮೇರೆಗೆ ಜಿಲ್ಲಾ ಹಸಿರು ಸೇನೆಯ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗುವ ಮೂಲಕ ತಾಲ್ಲೂಕು ಕಚೇರಿ ಮುಂದಿನ ಗೇಟಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಡಿಸಿದರು.       ರೈತರಿಂದ ರಾಗಿ ಖರೀದಿಸಿದ ಅಧಿಕಾರಿಗಳು ರಶೀದಿಯನ್ನು ನೀಡದೆ ಖಾಲಿ ಚೀಟಿಯಲ್ಲಿ…

Read More

ತುಮಕೂರು:       ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರವನ್ನು ಬಿಜೆಪಿ ರೂಪಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕವು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.       ಪ್ರತಿಭಟನೆಯಲ್ಲಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿ ಕುದುರೆ ವ್ಯಾಪಾರ ಮಾಡಿದಂತೆ ಶಾಸಕರನ್ನು ನೂರಾರು ಕೋಟಿಗಳ ಲೆಕ್ಕದಲ್ಲಿ ಖರೀದಿಸುತ್ತಿದೆ. ಕೋಟಿಗಳ ಲೆಕ್ಕದಲ್ಲಿ ಆಮಿಷ ಒಡ್ಡುತ್ತಿದೆ. ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು, ಆಯ್ಕೆಯಾದ ಜನಪ್ರತಿನಿಧಿಗಳು ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಅವರನ್ನು ರಾಜ್ಯದ ಜನರು ಎಂದಿಗೂ ಕ್ಷಮಿಸಲಾರರು ಎಂದು ಹರಿಹಾಯ್ದರು.       ರಾಜೀನಾಮೆ ಕೊಟ್ಟಿರುವ ಶಾಸಕರು ಮುಂದಿನ ಪೀಳಿಗೆಗೆ ಕೆಟ್ಟ ರಾಜಕೀಯದ ಪರಿಪಾಟ ಹೇಳಿಕೊಡುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಅವರು ಮನಸ್ಸು ಬದಲಿಸಿಕೊಂಡು ಪಕ್ಷಕ್ಕೆ ಬಂದರೆ, ಸರ್ಕಾರ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದರು. ಕಾಂಗ್ರೆಸ್‍ನ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ನಮ್ಮ ಪಕ್ಷದಿಂದ ಗೆದ್ದು ಅಧಿಕಾರ ಅನುಭವಿಸಿ, ಈಗ ಶಾಸಕರು ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ತೆವಲಿಗೆ ಪಕ್ಷ ಬಿಡುವುದು ಸರಿಯಲ್ಲ. ಶಾಸಕರು…

Read More

ತುಮಕೂರು:       ಕಚೇರಿ ಕರ್ತವ್ಯದ ಅವಧಿಯಲ್ಲಿ ಕಚೇರಿಯಲ್ಲಿರದೇ, ಯಾರಿಗೂ ತಿಳಿಸದೇ ಬೆಂಗಳೂರಿಗೆ ಹೋಗುವ ಆರ್‍ಟಿಒ ಅವರನ್ನು ವರ್ಗಾವಣೆ ಮಾಡುವ ಮೂಲಕ ಸಾರ್ವಜನಿಕರ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕಿದೆ ಎಂದು ತುಮಕೂರು ನಗರ ಆಟೋ ಡೀಲರ್ಸ್ ಏಜೆಂಟ್ಸ್ ಮತ್ತು ಫೈನಾನ್ಸಿಯರ್ಸ್ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಟಿ.ಆರ್.ಸುರೇಶ್ ಒತ್ತಾಯಿಸಿದರು.       ಆರ್‍ಟಿಒ ಕಚೇರಿಗೆ ಸಂಘದ ಮುಖಂಡರೊಂದಿಗೆ ತೆರಳಿದ ಟಿ.ಆರ್.ಸುರೇಶ್ ಅವರು ವಾಯು ಮಾಲಿನ್ಯ ತಪಾಸಣೆಯಿಂದ ಕೆಲ ತಾಲ್ಲೂಕುಗಳಿಗೆ ವಿನಾಯಿತಿ ನೀಡುವಂತೆ ಕಳೆದ ತಿಂಗಳು ಮನವಿ ಸಲ್ಲಿಸಿದರು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಹಣವಿಲ್ಲದೇ ಆರ್‍ಟಿಒ ಯಾವುದೇ ಕೆಲಸವನ್ನು ಮಾಡುತ್ತಿಲ್ಲ, ಜಿಲ್ಲಾ ಮಟ್ಟದ ಅಧಿಕಾರಿ ಜಿಲ್ಲಾಕೇಂದ್ರದಲ್ಲಿರದೇ, ಯಾವಾಗಲೂ ಬೆಂಗಳೂರಿನಲ್ಲಿರುತ್ತಾರೆ, ಸಾರ್ವಜನಿಕರು ದೂರವಾಣಿ ಮೂಲಕ ಸಂಪರ್ಕಿಸಿದರೆ ಉದ್ಧಟತನದಿಂದ ವರ್ತಿಸುತ್ತಾರೆ ಎಂದು ದೂರಿದರು.       ಆಟೋ ರಿಕ್ಷಗಳಿಗೆ ವಾಯು ಮಾಲಿನ್ಯ ತಪಾಸಣಾ ಪತ್ರವನ್ನು ಹೊಂದಿರುವುದು ಕಡ್ಡಾಯಗೊಳಿಸಲಾಗಿದ್ದು, ಗುಬ್ಬಿ, ನಿಟ್ಟೂರು,ಕುಣಿಗಲ್ ಹಾಗೂ ಶಿರಾದಲ್ಲಿ ತಪಾಸಣಾ ಕೇಂದ್ರಗಳು ಇಲ್ಲದೇ ಇರುವುದರಿಂದ ಅಲ್ಲಿನ ವಾಹನಗಳು ತುಮಕೂರು…

Read More

ತುಮಕೂರು :       ವಸತಿ ಯೋಜನೆಯಡಿ ಮಂಜೂರಾಗಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುವ ಮನೆಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ವಿವಿಧ ಇಲಾಖೆಗಳು ಅನುಷ್ಟಾನಗೊಳಿಸುವ ಮನೆಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಮಾತನಾಡಿದ ಅವರು ಜಿಲ್ಲೆಗೆ ಈಗಾಗಲೇ ರಾಜೀವ್‍ಗಾಂಧಿ ವಸತಿ ನಿಗಮದ ವತಿಯಿಂದ 26,526 ನಿವೇಶನ ರಹಿತರನ್ನು ಗುರುತಿಸಲಾಗಿದೆ. ಈ ಪೈಕಿ 1,191 ನಿವೇಶನ ರಹಿತರಿಗೆ ಹಕ್ಕುಪತ್ರ ಹಂಚಿಕೆ ಮಾಡಲು 36.50 ಎಕರೆ ಸರ್ಕಾರಿ ಜಮೀನು ಮತ್ತು 23.05 ಎಕರೆ ಖರೀದಿ ಜಮೀನು ಸೇರಿದಂತೆ ಒಟ್ಟು 59.55 ಎಕರೆ ಜಮೀನು ಲಭ್ಯವಿದೆ. ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ತಹಶೀಲ್ದಾರ್‍ಗಳೊಂದಿಗೆ ಚರ್ಚಿಸಿ ನಿವೇಶನ ರಹಿತರಿಗೆ ಹಕ್ಕುಪತ್ರ ಹಂಚಿಕೆ ಮಾಡಲು ಆದ್ಯತೆ ಮೇರೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.     ಲಿಡ್ಕರ್ ನಿಗಮದ ವತಿಯಿಂದ 2018-19 ನೇ ಸಾಲಿನಲ್ಲಿ ಜಿಲ್ಲೆಗೆ 40…

Read More

ತುಮಕೂರು :       ನಾನು ಪವರ್‍ಫುಲ್ ಅಥವಾ ಪವರ್ ಲೆಸ್ ಸಚಿವನಲ್ಲ. ನಾನೊಬ್ಬ ಸರ್ಕಾರ ವಹಿಸಿರುವ ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ನಿರ್ವಹಿಸುವ ಸಚಿವ. ಸಚಿವನಾಗಿ ಸರ್ಕಾರದ ಮಟ್ಟದಲ್ಲಿ ಏನು ಕೆಲಸ ಮಾಡಬೇಕೋ ಅದನ್ನು ಕಾನೂನು ವ್ಯಾಪ್ತಿಯಲ್ಲಿ ಮಾಡುತ್ತಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಇಂದಿಲ್ಲಿ ಸ್ಪಷ್ಟಪಡಿಸಿದರು.       ನಗರದಲ್ಲಿ ಸ್ಮಾರ್ಟ್‍ಸಿಟಿ, ಮಹಾನಗರ ಪಾಲಿಕೆ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.       ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈವರೆವಿಗೂ ಆಯುಕ್ತರನ್ನು ನೇಮಕ ಮಾಡಿಲ್ಲ. ಸರ್ಕಾರದಲ್ಲಿ ನೀವು ಪವರ್ ಲೆಸ್ ಅಥವಾ ಪವರ್ ಫುಲ್ ಸಚಿವರ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದರು.       ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಶೀಘ್ರದಲ್ಲೆ ಆಯುಕ್ತರನ್ನು ನೇಮಕ ಮಾಡಲಾಗುವುದು ಎಂದು ಅವರು ಹೇಳಿದರು. ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸುವ…

Read More

ಮಧುಗಿರಿ :       ರಾಜ್ಯದಲ್ಲಿ ಬರಗಾಲವಿದ್ದು, ಸಮಸ್ಯೆ ನಿಭಾಯಿಸಲು ಹಣದ ಕೊರತೆಯಿಲ್ಲ. 700 ಕೋಟಿ ರಾಜ್ಯದ ಬರಗಾಲಕ್ಕೆ ನೀಡಿದ್ದು, ನಿಮ್ಮ ಜನ-ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಪಂಚಾಯತ್ ರಾಜ್ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.       ಮಧುಗಿರಿ ತಾಲೂಕಿನ ಕಸಬಾ ಚಿನಕವಜ್ರ ಗ್ರಾಮದ ಬರಗಾಲ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು. ದಕ್ಷಿಣ ಕರ್ನಾಟಕದಲ್ಲಿ ಈ ಬಾರಿಯೂ ಮಳೆ ಕೈಕೊಟ್ಟಿದೆ. ಲೋಕಸಭೆ ಚುನಾವಣೆಯ ಪ್ರಯುಕ್ತ ಸ್ಪಂದಿಸಲು ಆಗಲಿಲ್ಲ. ಆದರೆ ಪ್ರಸ್ತುತ ಯಾವುದೇ ಸಮಸ್ಯೆಯಿಲ್ಲದೆ ಬರವನ್ನು ನಿರ್ವಹಣೆ ಮಾಡಲಾಗುವುದು. ಎಲ್ಲಿವರೆಗೂ ಮೇವು ಬ್ಯಾಂಕಿನ ಅಗತ್ಯವಿರುತ್ತದೋ ಅಲ್ಲಿಯವರೆಗೂ ಮೇವು ಹಾಗೂ ನೀರಿಗೆ ಸಾಕಷ್ಟು ಅನುದಾನವನ್ನು ನೀಡಲಾಗುವುದು. ಕೇಂದ್ರ ಸರ್ಕಾರ 3 ತಿಂಗಳ ನಂತರ ನೀರು ನೀಡಲು ಹಣಕಾಸು ಕೊಡುವುದಿಲ್ಲ. ಆದರೆ ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣ ಮಾಡಿ ತಹಶೀಲ್ದಾರ್‍ರವರಿಗೆ ಅಧಿಕಾರಿ ನೀಡಿದ್ದು, ಸಾಧ್ಯವಾದಷ್ಟು ನೀರು ಮೇವು ನೀಡಲು ಆದೇಶಿಸಿದ್ದೇವೆ. ಕನಿಷ್ಟ 40…

Read More

ತುಮಕೂರು :       ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಆರ್ ಶ್ರೀನಿವಾಸ್ ಅವರು ಸಂಸದ ಜಿ ಎಸ್ ಬಸವರಾಜು ಅವರನ್ನು ಅವಹೇಳನಾಕಾರಿಯಾಗಿ ನಿಂದಿಸಿದ್ದಾರೆಂದು ಆಪಾದಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸಂಸ್ಕೃತಿ ಇಲ್ಲದ ಶ್ರೀನಿವಾಸ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.       ಸಂಸದ ಜಿ ಎಸ್ ಬಸವರಾಜು ಅವರನ್ನು ಬಫೂನ್ ಎಂದು ಏಕ ವಚನದಲ್ಲಿ ನಿಂದಿಸಿದ್ದನ್ನು ಖಂಡಿಸಿದ ಕಾರ್ಯಕರ್ತರು, ಸಾಮಾಜಿಕ ಪ್ರಜ್ಞೆಯ ಅರಿವಿಲ್ಲದ, ಸಚಿವ ಸ್ಥಾನಕ್ಕೆ ಅನರ್ಹರಂತೆ ನಡೆದುಕೊಳ್ಳುವ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಸದರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.       ಕೆಲ ಕಾಲ ಬಿಜಿಎಸ್ ವೃತ್ತದಲ್ಲಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಸಚಿವರ ವರ್ತನೆ ಖಂಡಿಸಿದರು. ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ. ಎಂ ಆರ್ ಹುಲಿನಾಯ್ಕರ್, ಸಚಿವ ಶ್ರೀನಿವಾಸ್…

Read More

 ಮಧುಗಿರಿ:       ತಾಲೂಕಿನಲ್ಲಿ ಹಲವೆಡೆ ಸುರಿದ ಮಳೆ ಹಾಗೂ ಗಾಳಿಗೆ ಕೆಲವೆಡೆ ಮರಗಳು ಧರೆಗೆ ಊರಳಿದ್ದು ವಿಧ್ಯುತ್ ಕಂಬಗಳು ಸಹ ಮುರಿದು ಬಿದ್ದ ಘಟನೆ ವರದಿಯಾಗಿದೆ.       ಕೊಡಿಗೇನಹಳ್ಳಿ ಹೊಬಳಿಯಲ್ಲಿ ಮಂಗಳವಾರ ಸುರಿದ ಸಾಧಾರಣ ಮಳೆ ಹಾಗೂ ಬಿರುಗಾಳಿಗೆ ಮುತ್ಯಾಲಮ್ಮನಹಳ್ಳಿ ಗ್ರಾಮದಲ್ಲಿ ತೆಂಗಿನ ಮರವೊಂದು ವಿಧ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಎರಡು ಕಂಬಗಳು ಮುರಿದು ಬಿದ್ದಿವೆ.        ವಿಧ್ಯುತ್ ಕಂಬದ ಕೆಳೆಗಿದ್ದ ಹಸವೊಂದು ಸ್ಥಳದಲ್ಲೇ ಮೃತಪಟ್ಟಿದ್ದು, ರಾಮಪ್ಪ ಎಂಬುವವರಿಗೆ ಸೇರಿದ ಹಸು ಎನ್ನಲಾಗಿದ್ದು ಸುಮಾರು 45 ಸಾವಿರ ಮೂಕ ಜೀವಿ ಬಲಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಅಂದಾಜಿಸಿದ್ದಾರೆ.        ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಇಂಜಿನಿಯರ್, ಪಶು ವೈಧ್ಯಾಧಿಕಾರಿ ಡಾ ಜಗದೀಶ್ ಹಾಗೂ ಡಾ ಸೀಮಾ ಭೇಟಿ ನೀಡಿದ್ದು ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Read More

ಮಧುಗಿರಿ :       ಸತತ ಬರಗಾಲದಿಂದಾಗಿ ಈ ಬಾರಿ ರೈತರಿಗೆ ಬಹಳಷ್ಟು ತೊಂದರೆಯುಂಟಾಗಿದ್ದು, ಶೇ. 75 ರಷ್ಟು ಸಬ್ಸಿಡಿ ದರದಲ್ಲಿ 4 ಸಾವಿರ ಕೆಜಿ ಮೇವಿನ ಬೀಜ ವಿತರಿಸಲಾಗಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.       ಪಟ್ಟಣದ ಹಿಂದೂಪುರ ರಸ್ತೆಯಲ್ಲಿರುವ ತುಮುಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿಯ ಬೇಸಿಗೆ ತೀವ್ರತೆಯಿಂದಾಗಿ ಮೇವಿನ ಅಭಾವ ಕಂಡು ಬಂದು ಹಾಲಿನ ಗುಣಮಟ್ಟದಲ್ಲಿ ಕುಂಟಿತಗೊಂಡಿದ್ದು, ಈಗ ಮತ್ತೆ ಮಳೆಗಾಲ ಆರಂಭವಾಗಿದ್ದು, ರೈತರು ಹೆಚ್ಚಿನ ಗುಣಮಟ್ಟದ ಹಾಲು ಪೂರೈಕೆಗೆ ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ರೈತರಿಗೆ ಮೇವಿನ ಬೀಜವನ್ನು ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.       ನನ್ನ ಅವಧಿಯಲ್ಲಿ ಒಕ್ಕೂಟವನ್ನು ಯಾರೂ ಮಾಡದಷ್ಟು ಅಭಿವೃದ್ದಿ ಮಾಡಲಾಗಿದ್ದು, ಹಿಂದೆ ನಷ್ಟದಲ್ಲಿದ್ದ ತುಮುಲ್ ಸಂಸ್ಥೆ ಇಂದು ಆರ್ಥಿಕ ಸಂಮೃದ್ದಿಯಾಗಿದೆ. ಒಕ್ಕೂಟ ಲಾಭದಲ್ಲಿದ್ದಾಗ ರೈತರ…

Read More

ತುಮಕೂರು :       ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ಪಡೆದ ಗುತ್ತಿಗೆದಾರನಿಗೆ ಸಂಬಂಧಪಟ್ಟ ಇಂಜಿನಿಯರ್ಗಳು ನಿಯಮದ ಪ್ರಕಾರ ತಕ್ಷಣವೇ ಕಾಮಗಾರಿ ಕೈಗೊಳ್ಳಬೇಕಾದ ಸ್ಥಳವನ್ನು ಅಧಿಕೃತವಾಗಿ ವಹಿಸುವುದಿಲ್ಲ. ಅದಕ್ಕೆ ಬದಲಾಗಿ ಮೊದಲು ಹೋಗಿ ಆ ವಾರ್ಡಿನ ಕಾಪೆರ್Çೀರೇಟರ್ರನ್ನು ಭೇಟಿಯಾಗಿ ಬನ್ನಿ ಎಂದು ಸಲಹೆ ಕೊಡುತ್ತಾರೆ.       ಗುತ್ತಿಗೆದಾರನು ಅವರನ್ನು ಭೇಟಿ ಆಗದಿದ್ದರೆ ಆ ಕಾಮಗಾರಿಯ ಚಾಲನೆಯೇ ಆಗುವುದಿಲ್ಲ. ವಿನಾಕಾರಣ ಗುತ್ತಿಗೆದಾರ ತೊಂದರೆಗೆ ಸಿಲುಕುತ್ತಾನೆ’’ ಎಂದು ತುಮಕೂರು ಮಹಾನಗರ ಪಾಲಿಕೆಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೈ.ಆರ್.ವೇಣುಗೋಪಾಲ್ ಅವರು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರ ಎದುರು ಗುತ್ತಿಗೆದಾರರ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.       ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ “ಪಾಲಿಕೆಯ ಗುತ್ತಿಗೆದಾರರ ಸಂಘ’’ದವರೊಡನೆ ಪಾಲಿಕೆ ಆಯುಕ್ತರು ನಡೆಸಿದ ಚರ್ಚಾ ಸಭೆಯಲ್ಲಿ ಅವರು ಗುತ್ತಿಗೆದಾರರು ಎದುರಿಸುತ್ತಿರುವ ಬಹುಮುಖ ಸಮಸ್ಯೆಗಳನ್ನು ವಿವರಿಸುತ್ತ ಈ ಸಂಗತಿಯ ಮೇಲೂ ಬೆಳಕು ಚೆಲ್ಲಿದ್ದಾರೆ.       ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಭೂಬಾಲನ್ ಅವರು ಕಾರ್ಯಾದೇಶ…

Read More