ಕೊರಟಗೆರ: ಭಾರತ ದೇಶದ ಸಮಗ್ರ ಅಭಿವೃದ್ದಿ ಮತ್ತು ಬಡವರ ರಕ್ಷಣೆಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಕುರುಬ ಸಮುದಾಯ ಮತ್ತೋಮ್ಮೆ ಬೆಂಬಲಸಿ ತುಮಕೂರು ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜುಗೆ ಮತ ನೀಡಬೇಕು ಎಂದು ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮನವಿ ಮಾಡಿದರು. ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಬಿಜೆಪಿ ಯುವ ಮೋರ್ಚದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕೊರಟಗೆರೆ ಕುರುಬ ಸಮುದಾಯದ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹಂಚುವ ವಿಚಾರದಲ್ಲಿ ಮಾಜಿ ಪ್ರದಾನಿ ದೇವೇಗೌಡರು ತಾರತಮ್ಮ ಮಾಡಿದ್ದಾರೆ. ದೇವೇಗೌಡರು ಕುರುಬ ಸಮುದಾಯದ ವಿರೋದಿ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನ ಹೆಜ್ಜೆ ಹೆಜ್ಜೆಗೂ ತುಳಿದುಕೊಂಡು ಬಂದಿದ್ದಾರೆ. ಜಾತಿಯ ಮೂಲಕ ರಾಜಕಾರಣ ಮಾಡುವ ಮಾಜಿ ಪ್ರಧಾನಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಸೂಚನೆ ನೀಡಿದರು. …
Author: News Desk Benkiyabale
ಮಧುಗಿರಿ: ಎಚ್.ಡಿ.ದೇವೇಗೌಡರ ಪರ ಮಾಜಿ ಸಿಎಂ ಸಿದ್ದರಾಮಯ್ಯ ಮೂರು ತಾಲೂಕುಗಳಲ್ಲಿ ಬುಧವಾರ ಪ್ರಚಾರ ನಡೆಸುವ ಮೂಲಕ ಜೆಡಿಎಸ್ ವಲಯದಲ್ಲಿ ಸ್ವಲ್ಪ ಸಮಾಧಾನ ಮೂಡಿಸಿದರು. ದೇವೇಗೌಡರ ರಾಜಕೀಯ ವಿರೋಧಿಗಳಾಗಿರುವ ಸಿದ್ದರಾಮಯ್ಯ ಪ್ರಚಾರ ನಡೆಸುವ ಬಗ್ಗೆ ಜಿಲ್ಲೆಯ ಜನರಲ್ಲಿ ಕುತೂಹಲವಿತ್ತು. ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ಗೆಲ್ಲಿಸಿ ಎಂದು ಮನವಿ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದರು. ಯುವಕರೇ ನಿಮ್ಮಲ್ಲಿ ಕೈ ಜೋಡಿಸಿ ಪ್ರಾರ್ಥಿಸುತ್ತೇನೆ. ಮೋದಿ, ಮೋದಿ ಎಂದು ಹೇಳ್ಬೇಡಿ. ಅವರು ನಿಮಗೇ ಟೋಪಿ ಹಾಕಿದ್ದಾರೆ. ಬಿಜೆಪಿ ಸೋಲಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸಿ ಎಂದು ಮನವಿ ಮಾಡಿದರು. ಕೊಡುಗೆ ಹೇಳಲು ಏನೂ ಇಲ್ಲದೆ ಚಿತ್ರದುರ್ಗ, ಮೈಸೂರಲ್ಲಿ ಮಾಡಿದ ಭಾಷಣ ಸುಬ್ಬರಾಯನ ಕೆರೆ ಥರ ಇತ್ತು. ಅಭಿವೃದ್ಧಿ ಕೆಲಸಗಳ ಬಗ್ಗೆ ಒಂದೂ ಮಾತನಾಡಲಿಲ್ಲ ಎಂದು ವ್ಯಂಗ್ಯವಾಡಿದರು. ಮೋದಿಯವರು ಏನು ಮಾಡಿದ್ದಾರೆ? ಉದ್ಯೋಗ ಕೇಳಿದ ಯುವಕರ ಬಳಿ…
ಕೊಡಿಗೇನಹಳ್ಳಿ: ಬಿಜೆಪಿ ಅಭ್ಯಾರ್ಥಿ ಬಸವರಾಜು ಅವರನ್ನು ನಾವೇ ಕಾಂಗ್ರೇಸ್‍ನಿಂದ ಸಂಸದರನ್ನಾಗಿ ಮಾಡಿದ್ದೇವು ಈಗ ಕೋಮುವಾದಿ ಪಕ್ಷದಿಂದ ಮತ ಕೇಳಲು ಬರುತಿದ್ದಾರೆ ತುಮಕೂರು ಜಿಲ್ಲೆಗೆ ಅವರ ಕೂಡುಗೆ ಏನು ಎಂಬುದನ್ನು ತಿಳಿಸಲಿ ಎಂದು ಉಪ ಮುಖ್ಯಮಂತ್ರಿ ಡಾ||ಜಿ.ಪರಮೇಶ್ವರ್ ಪ್ರಶ್ನಿಸಿದರು. ತಾಲ್ಲೂಕಿನ ಪುರವರ ಗ್ರಾಮದಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿಯ ಕೋಮುವಾದಿ ಸರಕಾರ ಆಡಳಿತ ನಡೆಸುತಿದ್ದು ಬಡವರ ಪರ ಎಂದು ಪ್ರಧಾನಿ ಮೋದಿ ಸುಳ್ಳು ಹೇಳಿಕೊಂಡು ಮತ್ತೆ ಚುನಾವಣೆಗೆ ಬಂದಿದ್ದಾರೆ. ಆದರೆ ಬಿಜೆಪಿಯುವರ ಕೂಡುಗೆ ಜಿಲ್ಲೆಗೆ ಏನಿದು ಎಂದು ಮೂದಲು ತಿಳಿಸಲಿ, ದೇಶದ ಅಭಿವೃಧ್ಧಿಗೆ ಕಾಂಗ್ರೇಸ್ ಮತ್ತು ಮಹಾ ಘಟಬಂಧನ್‍ದಿಂದ ಮಾತ್ರ ಸಾಧ್ಯ, ಮಾಜಿ ಪ್ರಧಾನಿಗಳು ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ನಮ್ಮೆಲ್ಲರ ಪುಣ್ಯವಾಗಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳ ನೀಡುವ ಮೂಲಕ ಗೌಡರನ್ನು ಗೆಲ್ಲಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ ಜಿ…
ಕೊಡಿಗೇನಹಳ್ಳಿ: ಹಬ್ಬದ ಆಸುಪಾಸಿನಲ್ಲಿ ವಿವಿಧೆಡೆ ಜೂಜಾಡುತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸೈ ಮೋಹನ್ ಕುಮಾರ್ ನೇತೃತ್ವದ ತಂಡ ದಾಳಿ ಪಣಕ್ಕಿಟ್ಟಿದ್ದ 11,230 ರೂಗಳನ್ನು ವಶಪಡಿಸಿಕೊಂಡಿದ್ದಾರೆ. ಹೋಬಳಿಯ ಮೈದನಹಳ್ಳಿ ಗ್ರಾಮದಲ್ಲಿ ಜೂಜಾಡುತಿದ್ದ ಮಲ್ಲೇಗೌಡ, ಚಿಕ್ಕಣ್ಣ, ಲಕ್ಷ್ಮಿಪತಿ ಇವರಿಂದ 1390 ರೂ ಹಾಗೂ ಪುರವರ ಹೊಬಳಿಯ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಲಕ್ಷ್ಮಿನಾರಯಣ, ನಾಗರಾಜು, ಹನುಮಂತರಾಯ ಎಂಬುವವರಿಂದ 1860 ರೂ ವಶಕ್ಕೆ ಪಡೆದಿದ್ದಾರೆ. ಕೋಡ್ಗದಾಲ ಗ್ರಾಮದಲ್ಲಿ ರಾಮಂಜಿನೇಯ, ಚಿನ್ನಪ್ಪ, ನಾಗೇಂದ್ರ ಇವರಿಂದ 3640 ರೂ ಸೇರಿದಂತೆ ಗಿರೇಗೌಡನಹಳ್ಳಿಯಲ್ಲಿ 5 ಮಂದಿ ಜೂಜು ಕೋರರಿಂದ 1120 ಹಾಗೂ ವೀರನಾಗೇನಹಳ್ಳಿ 3220 ರೂಗಳನ್ನು ವಶಕ್ಕೆ ಪಡೆದಿದ್ದು ಸುಮಾಶರು 20 ಜನ ವಿರುದ್ಧ ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ತುಮಕೂರು: ಲೋಕಸಭಾ ಚುನಾವಣೆ-2019ರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಇಲ್ಲಿಯವರೆಗೂ ತುಮಕೂರು ಜಿಲ್ಲೆಯಲ್ಲಿ 95,13,736 ರೂ. ಮೌಲ್ಯದ 25,015.68 ಲೀ. ಮದ್ಯ, 16,67,760 ರೂ. ನಗದು ಹಾಗೂ 47 ದ್ವಿಚಕ್ರ ವಾಹನಗಳು ಸೇರಿದಂತೆ 44.47 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾದ್ಯಂತ ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ಚೆಕ್‍ಪೋಸ್ಟ್ ಸಿಬ್ಬಂದಿ ಹಾಗೂ ಇವರ ಜೊತೆಗೆ ಎಸ್‍ಎಸ್‍ಟಿ ತಂಡಗಳ ಕಟ್ಟುನಿಟ್ಟಿನ ತಪಾಸಣೆಯಿಂದಾಗಿ ಜಿಲ್ಲೆಯಲ್ಲಿ 16,67,760 ರೂ.ಗಳ ನಗದನ್ನು ವಶಪಡಿಸಿಕೊಂಡಿದ್ದು, ತೀವ್ರ ಪರಿಶೀಲನೆಯ ನಂತರ 1,47,760 ರೂ.ಗಳನ್ನು ಸಂಬಂಧಿಸಿದ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಉಳಿದಂತೆ 15,20,000 ರೂ.ಗಳನ್ನು ಆದಾಯ ತೆರಿಗೆ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಜಿಲ್ಲೆಯಲ್ಲಿ ಅಕ್ರಮ ಮದ್ಯವನ್ನು ತಡೆಗಟ್ಟಲು 14 ಅಬಕಾರಿ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ದಿನದ 24 ಗಂಟೆಗಳು ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದಾಗಿ ತುಮಕೂರು ಜಿಲ್ಲೆಯಲ್ಲಿ 24,063.02 ಲೀಟರ್ ದೇಶೀಯ ನಿರ್ಮಿತ ಮದ್ಯ, 826.66 ಲೀ.…
ತುಮಕೂರು: ತುಮಕೂರು ಟೌನ್‍ಹಾಲ್ ಸರ್ಕಲ್ ಬಳಿಯ ಮಹಾನಗರ ಪಾಲಿಕೆಯ ಉದ್ಯಾನವನದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಚಿತ್ರಕಲಾ ಪರಿಷತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಚಿತ್ರಕಲಾ ಶಿಕ್ಷಕರಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಶ್ರೀ ಬೂಬಾಲನ್, ಆಯುಕ್ತರು, ಮಹಾನಗರ ಪಾಲಿಕೆ ಇವರು ಸ್ವತಃ ಚಿತ್ರವನ್ನು ಬಿಡಿಸುವುದರ ಮುಖಾಂತರ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಚಿತ್ರಕಲೆಯು ಸಾರ್ವಜನಿಕರ ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಸಂದೇಶಗಳನ್ನು ತಲುಪಿಸುವ ಉತ್ತಮ ಸಾಧನವಾಗಿದ್ದು, ಅದಕ್ಕೆ ಬೆಲೆಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಸ್ತುತ ನಡೆಯುತ್ತಿರುವ 2019ರ ಲೋಕಸಭಾ ಚುನಾವಣೆಯಲ್ಲಿ ಚಿತ್ರಕಲಾ ಕಲಾವಿದರು ತಮ್ಮ ಕುಂಚಗಳಲ್ಲಿ ಅರಳಿಸುವ ಚುನಾವಣಾ ಮಹತ್ವವನ್ನು ಸಾರುವ ಚಿತ್ರಕಲೆಯು ಹಲವಾರು ಜನರನ್ನು ತಲುಪಿ, ಆ ಮೂಲಕ ಅವರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಮಹತ್ತರ ಕಾರ್ಯವನ್ನು ಮಾಡಲಿದ್ದು, ಕಲಾವಿದರು ತಮ್ಮ ಯೋಚನಾ ಶಕ್ತಿಯನ್ನು ಉಪಯೋಗಿಸಿಕೊಂಡು ಸಂದೇಶ ಸಾರುವ ಸುಂದರ ಚಿತ್ರಗಳನ್ನು…
ಮಧುಗಿರಿ : ಡಿಸಿಎಂ ಡಾ.ಜಿ. ಪರಮೇಶ್ವರ್‍ರವರು ಸಂಸದ ಮುದ್ದಹನುಮೇಗೌಡರನ್ನು ಪ್ರಚಾರದಿಂದ ದೂರವಿಟ್ಟು ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಆರೋಪಿಸಿದರು. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಂಸದ ಮುದ್ದಹನುಮೇಗೌಡರ ಕ್ಷೇತ್ರವನ್ನು ಜೆಡಿಎಸ್‍ನವರು ಪಡೆದುಕೊಂಡಿರುವುದು ಮೈತ್ರಿ ಧರ್ಮಕ್ಕೆ ವಿರುದ್ದ. ಇದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಅತೃಪ್ತಿ ತಂದಿದೆ. ಇಂದಿನ ಕಾಂಗ್ರೆಸ್-ಜೆಡಿಎಸ್ ಸಭೆಗೆ ಅವರನ್ನು ಸೇರಿಸದೇ ಮೂಲೆ ಗುಂಪು ಮಾಡುತ್ತಿರುವುದಕ್ಕೆ ಕಾರ್ಯಕರ್ತರಿಗೆ ಅಸಮಾಧಾನವಾಗಿದೆ. ಇಂದಿನ ಸಭೆಗೆ ಕರೆದುಕೊಂಡು ಬಂದರೆ ಮಾತ್ರ ನಾನು ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದೆ. ಆದರ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಬರುತ್ತಿಲ್ಲ. ಮೈಸೂರಿನಲ್ಲಿ ಸಚಿವ ಜಿ.ಟಿ. ದೇವೇಗೌಡ ಸಭೆ ಕರೆದು ನಾವು ಕಾಂಗ್ರೆಸ್‍ಗೆ ಮತ ಚಲಾಯಿಸುವುದಿಲ್ಲ ಬಿಜೆಪಿಗೆ ಮತ ಚಲಾಯಿಸುತ್ತೇವೆ ಎಂಬುದಾಗಿ ಹೇಳಿಕೆ ನೀಡಿದ್ದು, ತುಮಕೂರು ಜಿಲ್ಲೆಯಲ್ಲಿ ನಾವು ಜೆಡಿಎಸ್‍ಗೆ ಏಕೆ ಮತ ನೀಡಬೇಕು ಎಂದು ಪ್ರಶ್ನಿಸಿದ ಅವರು ಮೈಸೂರಿನಲ್ಲಿ ಕಾಂಗ್ರೆಸ್ ನಿಂದ ಹಿಂದುಳಿದ ವರ್ಗದವರು ಸ್ಪರ್ಧಿಸಿದ್ದು,…
ತುಮಕೂರು: ದೇಶದಲ್ಲಿ ಸುಳ್ಳುಹೇಳುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ. ಕೇವಲ ಸುಳ್ಳು ಭರವಸೆಗಳನ್ನು ನೀಡಿ ಬಡಜನರನ್ನು, ಕಾರ್ಮಿಕ ವರ್ಗದವರನ್ನು ಮೋಸ ಮಾಡಿದ್ದಾರೆ ಎಂದು ಸಿಪಿಐನ ಜಿಲ್ಲಾ ಉಸ್ತುವಾರಿ ಶೇಷಾದ್ರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಪಿಐ ಪಕ್ಷದ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಬಡಜನರಿಗೆ ವಿವಿಧ ಆಶ್ವಾಸನೆಗಳನ್ನು ನೀಡಿತ್ತು.ಅದರಲ್ಲಿ ಇಲ್ಲಿಯವರೆಗೆ ಯಾವೊಂದು ಭರವಸೆಯೂ ಈಡೇರಿಲ್ಲ. ಬದಲಿಗೆ ನೋಟು ಅಮಾನಿಕರಣ, ಜಿಎಸ್‍ಟಿ ಜಾರಿಯಂತಹ ಯೋಜನೆಗಳಿಂದ ಬಡವರಿಗೆ ಸಮಸ್ಯೆಯನ್ನುಂಟು ಮಾಡಿದೆ ಎಂದರು. ಇಂದು ಕೇಂದ್ರದಲ್ಲಿ ಬಿಜೆಪಿ ಪಕ್ಷ ಇಲ್ಲ.ಮೋದಿ ಪಕ್ಷ ಮಾತ್ರ ಇದೆ. ಮೋದಿಯವರು ಸರ್ವಾಧಿಕಾರ ಧೋರಣೆಯನ್ನು ತೋರುತ್ತಿದ್ದಾರೆ. ಅದಕ್ಕಾಗಿಯೇ ವಿವಿಧ ಪಕ್ಷಗಳು ಬಿಜೆಪಿಯೊಂದಿಗಿನ ಮೈತ್ರಿ ತ್ಯಜಿಸಿ ಬೇರೆಯಾಗಿದ್ದಾರೆ. ಕೇಂದ್ರ ಸರ್ಕಾರವು ರೈತರ ಹಾಗೂ ಕಾರ್ಮಿಕರ ವಿರೋಧಿಯಾಗಿದೆ.ಚುನಾವಣೆ ಮುಂಚೆ ಸದಾಶಿವ ಆಯೋಗದ ವರದಿ ಜಾರಿ ಮಾಡಲಾಗು ತ್ತದೆ ಎಂದು ಹೇಳಿತ್ತು.ಇಂದು ಸದಾಶಿವ ಆಯೋಗ…
ತುಮಕೂರು : ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೊಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಕರೆ ನೀಡಿದರು. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೊರಟಗೆರೆ ತಾಲ್ಲೂಕು ಕಾಶಾಪುರ ಗ್ರಾಮದ ಹಕ್ಕಿ-ಪಿಕ್ಕಿ ಜನಾಂಗದವರ ಕಾಲೋನಿಯಲ್ಲಿಂದು ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತಪಟ್ಟಿಯಲ್ಲಿ ತಮ್ಮ ಹೆಸರಿದ್ದು, ಎಪಿಕ್ ಕಾರ್ಡ್ ಹೊಂದಿಲ್ಲದಿದ್ದರೂ 11 ಪರ್ಯಾಯ ದಾಖಲಾತಿಗಳಲ್ಲಿ ಯಾವುದಾದರು ಒಂದನ್ನು ಮತಗಟ್ಟೆಯಲ್ಲಿ ಹಾಜರುಪಡಿಸಿದರೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಚುನಾವಣೆ ದಿನದಂದು ವಯೋವೃದ್ಧರು ಹಾಗೂ ವಿಕಲಚೇತನರು ಮತದಾನ ಮಾಡಲು ಅನುವಾಗುವಂತೆ ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆಯಲ್ಲದೆ, ಪ್ರತಿ ಮತಗಟ್ಟೆಯಲ್ಲಿಯೂ ಸ್ವಯಂ-ಸೇವಕರನ್ನು ನೇಮಕ ಮಾಡಲಾಗಿದೆ. ವಯೋವೃದ್ಧರು,…
ಕೊರಟಗೆರೆ: ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವಂತ ಶಕ್ತಿಯಿಂದ ಕೊರಟಗೆರೆಯಲ್ಲಿ ಶಾಸಕನಾಗಿಲ್ಲ.. ಜೆಡಿಎಸ್ ಪಕ್ಷದ ಮಾಜಿ ಸಚಿವ ಸಿ.ಚೆನ್ನಿಗಪ್ಪನ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಒಳ ಒಪ್ಪಂದದಿಂದ ಗೆಲುವು ಸಾದಿಸಿದ್ದಾರೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ವಾಗ್ದಾಳಿ ನಡೆಸಿದರು. ಪಟ್ಟಣದ ಎಸ್‍ಎಸ್‍ಆರ್ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಲೋಕಸಭಾ ಚುನಾವಣೆಯ ಬೃಹತ್ ಪ್ರಚಾರ ರ್ಯಾಲಿಯಲ್ಲಿ ಬಿಜೆಪಿ ಪಕ್ಷದ ಯುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಚೆನ್ನಿಗಪ್ಪನ ಮಗ ಗೌರಿಶಂಕರ್ ಗೆಲುವು ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಸ್ ಪಕ್ಷದ ಅಭ್ಯರ್ಥಿ ಸುಧಾಕರಲಾಲ್ ಸೋಲಿಸಲು ಚೇನ್ನಿಗಪ್ಪ ಮತ್ತು ಡಾ.ಜಿ.ಪರಮೇಶ್ವರ್ ನಡುವೆ ಮ್ಯಾಚ್ ಪಿಕ್ಸಿಂಗ್ ನಡೆದಿದೆ. ಕೊರಟಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಸೋಲಿಸಲು ಚೇನ್ನಿಗಪ್ಪ 5ಕೋಟಿ ಹಣ ಪಡೆದಿದ್ದಾರೆ ಎಂದು ಕಿಡಿಕಾರಿದರು. ತುಮಕೂರು ಬಿಜೆಪಿ ಅಭ್ಯರ್ಥಿ ಬಸವರಾಜು ಮಾತನಾಡಿ ಮಾಜಿ ಪ್ರಧಾನಿ ದೇವೆಗೌಡರಿಗೆ…