ಬೆಂಗಳೂರು : ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪಕ್ಷದ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದ್ದಾರೆ. ಮುಖ್ಯ ಪ್ರತಿಭಟನೆ ಬೆಂಗಳೂರಿನಲ್ಲಿ ಬೆಳಗ್ಗೆ 11 ಗಂಟೆಗೆ ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪಕ್ಷದ ಮುಖಂಡ ಆರ್. ಅಶೊಕ್, ಸಂಸದ ಪಿ.ಸಿ. ಮೋಹನ್ ಮತ್ತಿತರ ನೇತೃತ್ವದಲ್ಲಿ ನಡೆಯಲಿದೆ. ರಾಜ್ಯ ಸರ್ಕಾರ ನವೆಂಬರ್ 10 ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿಗೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿಂದೆ ದುರ್ಘಟನೆಗಳಿಗೆ ಸಾಕ್ಷಿಯಾಗಿದ್ದ ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆ. ಹುಬ್ಬಳ್ಳಿ – ಧಾರವಾಡ ಮಹಾನಗರ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು, ಶ್ರೀರಂಗಪಟ್ಟಣ ವ್ಯಾಫ್ತಿಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿರುವುದಾಗಿ ಆಯಾ…
Author: News Desk Benkiyabale
ತುಮಕೂರು: ತುಮಕೂರು ನಗರದಲ್ಲಿ ಕೆಲ ಶ್ರೀಮಂತರು ನಿರ್ಮಿಸಿರುವ ಲೇಔಟ್‍ಗಳಿಗೆ ಅಕ್ರಮವಾಗಿ ಗ್ರಾಮಾಂತರ ಪ್ರದೇಶದ ಕೆರೆ ಕಟ್ಟೆಗಳಿಂದ ಅಕ್ರಮವಾಗಿ ಮಣ್ಣು ಅಗೆದು ತುಂಬಿಸುವ ಕೆಲಸ ಮಾಡುತ್ತಿದ್ದು,ತಾಲೂಕು ಆಡಳಿತ ಕೂಡಲೇ ಈ ಅಕ್ರಮವನ್ನು ತಡೆಗಟ್ಟುವಂತೆ ಅಲ್ ಇಂಡಿಯಾ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಒತ್ತಾಯಿಸಿದೆ. ತುಮಕೂರು ತಾಲೂಕು ವಡ್ಡರಹಳ್ಳಿ ಕೆರೆಯಲ್ಲಿ ಕೆಲವರು ಆರ್.ಟಿ.ಓ ನಂಬರ್ ಇಲ್ಲದೆ ಜೆಸಿಬಿ ಮತ್ತು ಟಿಪ್ಪರ್ ಲಾರಿಯಲ್ಲಿ ಕೆರೆಯ ಮಣ್ಣನ್ನು ಸಾಗಿಸುತ್ತಿರುವುದನ್ನು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಸದಸ್ಯರು ಪ್ರಶ್ನಿಸಿದ್ದು, ಸರಕಾರದ ನಿಯಮದ ಪ್ರಕಾರ ಒಂದು ಗ್ರಾಮದ ಕೆರೆಯ ಹೂಳನ್ನು ಬಳಕೆ ಮಾಡಿಕೊಳ್ಳುವ ಅಧಿಕಾರ ಆ ಕೆರೆಯ ಅಚ್ಚುಕಟ್ಟುದಾರರಿಗೆ ಮಾತ್ರ ಇದೆ.ಇದಕ್ಕೆ ಸದರಿ ಗ್ರಾ.ಪಂನ ಅನುಮತಿ ಕಡ್ಡಾಯ.ಆದರೆ ಕೆರೆಯಲ್ಲಿ ಸುಮಾರು 10 ಅಡಿಗೂ ಹೆಚ್ಚು ಅಳದಲ್ಲಿ ಮಣ್ಣು ತೆಗೆದು ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂದೆ ಕೆಲವರು ನಿರ್ಮಿಸಿರುವ ಲೇಔಟ್‍ಗೆ ತುಂಬಿಸುತಿದ್ದು,ಕೂಡಲೇ ಕೆರೆಯಲ್ಲಿ ಮಣ್ಣು ತೆಗೆಯುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದು,ಈ ವೇಳೆ ಟಿಪ್ಪರ್…
ತುಮಕೂರು: ಉಪಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದರಿಂದ ನಮ್ಮ ಅಭ್ಯರ್ಥಿಗಳ ಸೋಲಿಗೆ ಕಾರಣ ಎಂದು ಮಾಜಿ ಸಚಿವ ಎಸ್. ಶಿವಣ್ಣ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕಿತ್ತು. ಪಕ್ಷವನ್ನು ವಲಸಿಗರ ಕೈಗೆ ಗುತ್ತಿಗೆ ಕೊಡದೆ ಮೂಲ ಕಾರ್ಯಕರ್ತರಿಗೆ ಕೊಟ್ಟಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ. ಉಪ ಚುನಾವಣೆಯನ್ನು ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ ಸೇರಿದಂತೆ ಹಲವರ ಸಲಹೆ ಜೊತೆಗೆ ಎಲ್ಲರನ್ನೂ ಒಗ್ಗೂಡಿಸಿ ಚುನಾವಣೆ ಎದುರಿಸಬೇಕಿತ್ತು. ವಲಸಿಗರಿಗೆ ಮಣೆ ಹಾಕದೆ ಮೂಲ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಟಿಕೆಟ್ ನೀಡಬೇಕಿತ್ತು ಎಂದು ಹೇಳಿದರು. ಉಪಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಸರಿಯಾಗಿ ಬಳಿಕೊಂಡಿಲ್ಲ ಎಂಬ ನೋವು ನನಗಿದೆ. ಬಿಜೆಪಿ ಮಾಜಿ ಉಪಾಧ್ಯಕ್ಷರಾದ ಭಾನುಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಮುಂದುವರೆದರೆ ಮುಂದಿನ ಲೋಕಸಭಾ ಚುನಾವಣೆಗೆ ಹಿನ್ನಡೆಯಾಗಬಹುದು ಎಂದು ಎಚ್ಚರಿಸಿದರು. ನಮ್ಮ ಪಕ್ಷ ಕುಟುಂಬ ಪಕ್ಷವಲ್ಲ, ಕಾರ್ಯಕರ್ತರ ಪಕ್ಷ, ಕಾರ್ಯಕರ್ತರೇ ನಮ್ಮ…
ತುಮಕೂರು: ಹತ್ತಾರು ವರ್ಷಗಳಿಂದ ಪಕ್ಷವನ್ನು ಕಟ್ಟಿಬೆಳೆಸುತ್ತಿರುವ ಯುವ ಕಾಂಗ್ರೆಸ್ ಮುಖಂಡರು, ಕಾರ್ಯ ಕರ್ತರನ್ನು ಅಮಾನತ್ ಮಾಡಿರುವುದನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ, ನಗರದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ನೇತೃತ್ವದಲ್ಲಿ ನೂರಾರು ಯುವ ಕಾಂಗ್ರೆಸ್ ಕಾರ್ಯ ಕರ್ತರು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರಗೆ ಉಪಾಧ್ಯಕ್ಷ ಸ್ಥಾನದಿಂದ ಅಮಾನತ್ತು ಮಾಡಿರುವುದನ್ನು ಖಂಡಿಸಿ, ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿ, ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಮೂಲಕ ವರಿಷ್ಠರಿಗೆ ಮನವಿ ಪತ್ರಸಲ್ಲಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶರತ್‍ಕುಮಾರ್ ನಾತನಾಡಿ, ಆರ್.ರಾಜೇಂದ್ರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹಲ ವಾರು ಜನಪರ ಹೋರಾಟಗಳನ್ನು ನಡೆಸಿ, ಪಕ್ಷವನ್ನು ಜಿಲ್ಲೆಯಲ್ಲಿ ಸದೃಢವಾಗಿ ಕಟ್ಟಲು ಶ್ರಮಿಸಿದ್ದಾರೆ. ಎಐಸಿಸಿ ಅಧ್ಯಕ್ಷರ ನಿರ್ದೇಶನದಂತೆ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಿ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ…
ಶಿರಾ ವಿಧಾನಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ನೂತನವಾಗಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾದ ಆರ್.ಎಸ್.ಗೌಡರು ಮತ್ತು ತುಮಕೂರು ನಿರ್ದೇಶಕ ರೇಣುಕಾ ಪ್ರಸಾದ್‍ರವರು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡರನ್ನು ಖಾಸಗಿ ಹೋಟೆಲ್‍ನಲ್ಲಿ ಸನ್ಮಾನಿಸಿದರು. ಆರ್.ಎಸ್.ಗೌಡರ ಆಯ್ಕೆಗೆ ಸುರೇಶ್ ಗೌಡರ ಬೆಂಬಲ ಬಹುಮುಖ್ಯವಾಗಿದ್ದು, ಅವರ ಬೆಂಬಲದಿಂದಲೇ ನಾನು ನಿರ್ದೇಶಕನಾಗಿ ಆಯ್ಕೆಯಾಗಿರುವುದು ಹಾಗಾಗಿ ನನ್ನ ಅಭಿಮಾನಿಗಳೊಟ್ಟಿಗೆ ಆಗಮಿಸಿ ಸುರೇಶ್ ಗೌಡರನ್ನು ಸನ್ಮಾನಿಸಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಸನ್ಮಾನಿಸಿದರು.
ತುಮಕೂರು: ಬೆಂಕಿಯಬಲೆ ದಿನಪತ್ರಿಕೆಯ ವೆಬ್ ನ್ಯೂಸ್‍ನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಸಿದ್ದರಾಜುರವರು ಉದ್ಘಾಟಿಸಿದರು. ಇಂದಿನ ತಾಂತ್ರಿಕ ಯುಗದಲ್ಲಿ ಡಿಜಿಟಲ್ ಆವೃತ್ತಿಯ ಅಗತ್ಯತೆಯಿದ್ದು, ಇದನ್ನು ತುಮಕೂರು ಜಿಲ್ಲೆಯ ಸ್ಥಳೀಯ ದಿನಪತ್ರಿಕೆ ಹೊರತರುತ್ತಿರುವುದು ಹರ್ಷದಾಯಕವಾಗಿದೆ. ಕಳೆದ ಒಂದು ವರ್ಷಗಳಿಗೂ ಹೆಚ್ಚು ಕಾಲ ದಿನಪತ್ರಿಕೆಯಾಗಿ ಉತ್ತಮ ಜನಮನ್ನೆಣೆ ಗಳಿಸಿರುವ ಬೆಂಕಿಯಬಲೆ ದಿನಪತ್ರಿಕೆ ತಾಂತ್ರಿಕ ಜಗತ್ತಿಗನುಗುಣವಾಗಿ ಪತ್ರಿಕೆಯ ವೆಬ್‍ಸೈಟ್‍ನ್ನು ತೆರೆದಿದೆ. ಇದು ಇನ್ನು ಮುಂದೆ ಇನ್ನೂ ಹೆಚ್ಚಿನ ಓದುಗರ ಸಂಖ್ಯೆಯನ್ನು ಆಕರ್ಷಿಸಲಿ. ಸಮಾಜಕ್ಕೆ ಅಗತ್ಯವೆನಿಸಿದ ಹಾಗೂ ಈ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಂತಹ ಮಾಧ್ಯವiವಾಗಿ ಬದಲಾಗಲಿ. ಸ್ಪರ್ಧಾತ್ಮಕ ಯುಗದಲ್ಲಿ ಬಿಬಿನ್ಯೂಸ್ 24*7 ಎನ್ನುವಂತಹ ವೆಬ್ ಚಾನೆಲ್‍ನ್ನು ಸಹಾ ಇಂದು ಬಿಡುಗಡೆ ಮಾಡಿದ್ದು, ಇದು ದೃಷ್ಯ ಮಾದ್ಯಮದಲ್ಲಿ ಹೊಸ ಅವಿಷ್ಕಾರವನ್ನು ಮಾಧ್ಯಮ ಜಗತ್ತಿನಲ್ಲಿ ತರಲಿ ಎಂದು ಹಾರೈಸಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರು ಮತ್ತು ವರದಿಗಾರರ ಸಂಘಗಳ ಗೌರವಾಧ್ಯಕ್ಷ ಎಂ.ಎಸ್.ಮಣಿಯವರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ…
ಕೊರಟಗೆರೆ: ಜನರಿಂದಲೇ ಜನಪ್ರತಿನಿಧಿ ಮತ್ತು ಸರಕಾರ ರಚನೆ ಆಗೋದು.. ಸರಕಾರದಿಂದ ರೈತರ ಆಯ್ಕೆ ಎಂದಿಗೂ ಆಗೋದಿಲ್ಲ.. ರೈತರ ಜೊತೆ ಚರ್ಚಿಸಿ ಅವರ ಅನುಮತಿ ಪಡೆಯದೇ ಭೂಮಿ ವಶಕ್ಕೆ ಪಡೆಯುವುದು ಸೂಕ್ತವಲ್ಲ.. ರೈತರು ಹೆದರಬೇಡಿ ನಿಮ್ಮ ಜೊತೆ ಶ್ರೀಮಠ ಮತ್ತು ನಾನು ಎಂದಿಗೂ ಇರುತ್ತೇನೆ ಎಂದು ಸೂಕ್ತವಲ್ಲ ಎಂದು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮೀಜಿ ತಿಳಿಸಿದರು. ತಾಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಸುಂಕದಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಾಣದಿಂದ ಮನೆ ಮತ್ತು ಜಮೀನು ಕಳೆದುಕೊಳ್ಳುವ ರೈತರ ಮನವಿ ಆಲಿಸಿದ ನಂತರ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ದೇವರಾಯನದುರ್ಗ ಬೇಟ್ಟದಲ್ಲಿ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಿಸಲು ಸರಕಾರ ಸೂಕ್ತ ನಿರ್ಧಾರ ಕೈಗೊಂಡು ಕೇಂದ್ರ ಸರಕಾರದ ಮನವೊಲಿಸುವ ಪ್ರಯತ್ನ ಮಾಡಬೇಕು. ದೇವರಾಯನದುರ್ಗದಿಂದ ಕೋಳಾಲ ವ್ಯಾಪ್ತಿಯ ಬೈರಗೊಂಡ್ಲು ಗ್ರಾಮಕ್ಕೆ ಬಫರ್ ಡ್ಯಾಂ ವರ್ಗಾವಣೆಯ ಹಿಂದಿನ…
ಮಧುಗಿರಿ : ರಾಜ್ಯದಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ರಾಷ್ಟ್ರಕ್ಕೆ ಜಾತ್ಯಾತೀತ ಶಕ್ತಿಯ ಅಗತ್ಯತೆಯನ್ನು ತೋರಿಸುತ್ತಿದ್ದು, ಬಿಜೆಪಿಯ ಕೋಮುವಾದ ಸಿದ್ದಾಂತಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಳ್ಳಾರಿ ನೂತನ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು. ಅವರು ಕಾರ್ಯ ನಿಮಿತ್ತ ಸ್ವಕ್ಷೇತ್ರ ಪಾವಗಡದಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಶ್ರೀ ವೆಂಕಟರಮಣಸ್ವಾಮಿ ದೇಗುಲಕ್ಕೆ ದಿಢೀರ್ ಭೇಟಿ ನೀಡಿ ಮಾತನಾಡಿದರು. ಉಪ ಚುನಾವಣೆಯಲ್ಲಿ ಬಿಜೆಪಿಯ ಜನ ವಿರೋಧಿ ನೀತಿಗೆ ಜನ ಬೆಂಬಲ ವ್ಯಕ್ತಪಡಿಸದೆ ಜಾತ್ಯಾತೀತ ಸಿದ್ದಾಂತ ಹೊಂದಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿಗಳನ್ನು 5 ಕ್ಷೇತ್ರದಲ್ಲಿ 4 ಸ್ಥಾನಗಳನ್ನು ನೀಡಿ ಗೆಲ್ಲಿಸಿಕೊಟ್ಟಿದ್ದಾರೆ. ದೇಶದ ಪ್ರಧಾನ ಮಂತ್ರಿಗಳು ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಆರೋಪಿಸಿದ ಉಗ್ರಪ್ಪನವರು ಪ್ರಧಾನಿ ತೈಲ ಹಾಗೂ ಅನಿಲ ಬೆಲೆಗಳ ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದಾರೆ. ವಿದೇಶಗಳಲ್ಲಿನ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುವುದಾಗಿ ಹೇಳಿದ್ದು, ಬಡವರ ಪ್ರತಿ ಜನಧನ್ ಖಾತೆಗೆ…
ಹುಳಿಯಾರು: ಹೆದ್ದಾರಿ ನಿರ್ಮಾಣದ ನೆಪದಲ್ಲಿ ಹಾಲಿ ರಸ್ತೆಯನ್ನು ನಿರ್ಲಕ್ಷ್ಯ ಮಾಡಿರುವುದರಿಂದ ರಾಷ್ಟ್ರೀಯ ಹೆದ್ದಾರಿ 150 ಎ ನ ಹುಳಿಯಾರು ಪಟ್ಟಣದಲ್ಲಿ ಸಂಪೂರ್ಣ ಹದಗೆಟ್ಟಿದ್ದು ಇಲ್ಲಿನ ಗುಂಡಿಗಳು ಮೃತ್ಯುವಿಗೆ ಆಹ್ವಾನ ನೀಡುವಂತಿದೆ. ಇಲ್ಲಿನ ಎಪಿಎಂಸಿಯಿಂದ ಆರಂಭವಾಗಿ ರಾಮಗೋಪಾಲ್ ಸರ್ಕಲ್ ಬಾಲಾಜಿ ಥಿಯೇಟರ್ ವರೆವಿಗೂ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿನ ಗುಂಡಿಗಳಿಂದಾಗಿ ವಾಹನ ಚಾಲಕರು ಈ ಹೆದ್ದಾರಿಯ ರಸ್ತೆಯಲ್ಲಿ ಪ್ರಯಾಣಿಸಲು ಹರಸಾಹಸ ಪಡುವಂತಾಗಿರುವುದು ನಿತ್ಯದ ಚಿತ್ರಣವಾಗಿದೆ. ಅತಿ ಹೆಚ್ಚು ವಾಹನ ದಟ್ಟಣೆಯಿರುವ ಈ ಹೆದ್ದಾರಿಯಲ್ಲಿ ನಿತ್ಯವೂ ನೂರಾರು ಬಸ್, ಲಾರಿಗಳು ಸಂಚರಿಸುವ ಪ್ರಮುಖ ರಸ್ತೆ ಇದಾಗಿದ್ದು ಇಲ್ಲಿ ಗುಂಡಿಗಳದ್ದೇ ಕಾರುಬಾರಾಗಿದೆ. ರಸ್ತೆಯು ಗುಂಡಿಗಳಿಂದ ತುಂಬಿದ್ದು ಚರಂಡಿ ನೀರು ಕೂಡ ರಸ್ತೆಯ ಮೇಲೆ ಹರಿಯುವುದರಿಂದ ಗುಂಡಿಗಳು ನೀರಿನಿಂದ ತುಂಬಿ ವಾಹನ ಸವಾರರಿಗೆ ಕಾಣದಂತಾಗಿ ನಿತ್ಯ ಸವಾರರು ಬಿದ್ದೇಳುವ ಪ್ರಸಂಗ ಜರುಗುತ್ತಲೇ ಇದೇ. ವಾಹನ ಸವಾರರನ್ನು ಮೃತ್ಯುಕೂಪಕ್ಕೆ ಆಹ್ವಾನಿಸುವ ಈ…
ಕೊರಟಗೆರೆ: ಹಜರತ್ ಟಿಪ್ಪುಸುಲ್ತಾನ್ ಜಯಂತಿಯನ್ನು ತಾಲೂಕು ಆಡಳಿತವತಿಯಿಂದ ನ.10 ರಂದು ಆಚರಿಸಲು ಪ್ರತಿಯೊಬ್ಬರ ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ನಾಗರಾಜು ತಿಳಿಸಿದ್ದಾರೆ. ಪಟ್ಟಣದ ತಹಶೀಲ್ದಾರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಟಿಪ್ಪುಸುಲ್ತಾನ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿಪ್ಪು ಜಯಂತಿ ಒಂದು ಸಮುದಾಯಕ್ಕೆ ಮೀಸಲಾಗುವುದು ಬೇಡ, ಎಲ್ಲಾ ಸಮುದಾಯದವರು ಕೂಡಿ ಸೌಹಾರ್ದತೆಯಿಂದ ಜಯಂತಿಯನ್ನು ಆಚರಿಸೋಣ, ನ.10 ರಂದು ಬೆಳಿಗ್ಗೆ 10 ಗಂಟೆಗೆ ಹಳೆ ಪೊಲೀಸ್ ಠಾಣೆಯ ಎದುರಿನಲ್ಲಿರುವ ತಾ.ಪಂ. ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಮಾತ್ರನಡೆಯುತ್ತದೆ, ಟಿಪ್ಪು ಸುಲ್ತಾನ್ ಬಗ್ಗೆ ವಿಶೇಷ ಉಪನ್ಯಾಸವನ್ನು ಸಂಪನ್ನೂಲ ವ್ಯಕ್ತಿಯಿಂದ ನೀಡಲಾಗುವುದು ಕಾರ್ಯಕ್ರಮದಲ್ಲಿ ವಿವಿಧ ಚುನಾಯಿತ ಪ್ರತಿನಿಧಿಗಳು, ಗಣ್ಯರು, ಇಲಾಖಾ ಆಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು. ಪಿಎಸೈ ಮಂಜುನಾಥ್ ಮಾತನಾಡಿ ಸರಕಾರದ ಆದೇಶದಂತೆ ಸರಕಾರಿ ಕಟ್ಟಡದಲ್ಲೆ ಸಮಾರಂಭ ನಡೆಯಲಿದ್ದು ಯಾವುದೇ ಡಿಜೆಯಂತ ದ್ವನಿವರ್ಧಕ, ಮೆರವಣಿಗೆ ಮತ್ತು ಟಿಪ್ಪುವಿನ ಬಗ್ಗೆ…