ಚಿಕ್ಕನಾಯಕನಹಳ್ಳಿ: ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 11.11.2018 ರ ರಾತ್ರಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಸೋಮನಹಳ್ಳಿ ಗ್ರಾಮದ ಗಂಗಾಧರಯ್ಯನನ್ನು ಯಾರೋ ಹತ್ಯೆ ಮಾಡಿ, ಶವವನ್ನು ಕಿಬ್ಬನಹಳ್ಳಿ ಹೋಬಳಿಯ ಅಯ್ಯನಪಾಳ್ಯದ ರಸ್ತೆಯ ಬದಿಯಲ್ಲಿ ತಂದುಹಾಕಿರುವ ಕುರಿತು ಮೃತ ಗಂಗಾಧರಯ್ಯನ ಅಣ್ಣನ ಮಗ ಸಂದೀಪ್ ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರ ಸಂಬಂಧ ಪ್ರಕರಣದ ತನಿಖೆಯನ್ನು ನಡೆಸಿದಾಗ, ಕೊಲೆಗೈದ ದುಷ್ಕರ್ಮಿಗಳನ್ನು ಪತ್ತೆ ಮಾಡಲಾಗಿದ್ದು, ಕೊಲೆಗೈದ ಆರೋಪಿಗಳು ಮೃತ ಗಂಗಾಧರಯ್ಯನವರ ಪತ್ನಿ ಶಾಂತಮ್ಮ, ಗುಬ್ಬಿ ತಾಲ್ಲೂಕು ಅಡಗೂರು ಎ.ಎನ್.ಮಂಜುನಾಥ್, ಅಡಗೂರಿನ ಎ.ಹೆಚ್.ಕೃಷ್ಣಪ್ಪ, ತುರುವೇಕೆರೆ ತಾಲ್ಲೂಕಿನ ರಾಮಡಿಹಳ್ಳಿಯ ವಿ.ಜ್ಞಾನೇಶ್ ಎಂಬುವವರು ಹತ್ಯೆಗೈದು ಕಿಬ್ಬನಹಳ್ಳಿ ಪೊಲೀಸ್ ಠಾಣಾ ಸರಹದ್ದಿಗೆ ತಂದು ಹಾಕಿದ್ದಾರೆಂದು ತನಿಖೆಯಲ್ಲಿ ಬಹಿರಂಗಗೊಂಡಿದೆ. https://www.benkiyabale.com/2018/11/12/%E0%B2%86%E0%B2%B8%E0%B3%8D%E0%B2%A4%E0%B2%BF-%E0%B2%B5%E0%B2%BF%E0%B2%9A%E0%B2%BE%E0%B2%B0-%E0%B2%AE%E0%B3%82%E0%B2%B5%E0%B2%B0%E0%B3%81-%E0%B2%B9%E0%B3%86%E0%B2%82%E0%B2%A1%E0%B2%A4%E0%B2%BF/ ಹತ್ಯೆಯಾದ ಗಂಗಾಧರಯ್ಯನಿಗೆ ಮೊದಲ ಪತ್ನಿ ಶಾಂತಮ್ಮಳಿದ್ದರೂ ಸಹಾ ವಿಧವೆಯೊಬ್ಬಳೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದು, ಆಕೆಯನ್ನು ತನ್ನ ಮನೆಯಲ್ಲೇ ತಂದಿಟ್ಟುಕೊಂಡಿದ್ದರ ಹಿನ್ನೆಲೆಯಲ್ಲಿ ಮೊದಲ ಪತ್ನಿ ಶಾಂತಮ್ಮ ತನ್ನ ಗಂಡ ಅನ್ಯಳೊಂದಿಗೆ ಅನೈತಿಕ…
Author: News Desk Benkiyabale
ತುಮಕೂರು: ರೈತರು ಸ್ವಾವಲಂಬಿಯಾಗುವ ಮೂಲಕ ಸುಸ್ಥಿರ ಬದುಕು ಕಟ್ಟಿಕೊಂಡು ಆದಾಯದಲ್ಲಿ ದ್ವಿಗುಣ ಪಡೆಯುವಲ್ಲಿ ಮುಂದಾಗಬೇಕು ಎಂದು ಐಡಿಎಫ್ ಸಂಸ್ಥೆಯ ಯೋಜನಾ ನಿರ್ದೇಶಕ ಮು.ಲ ಕೆಂಪೇಗೌಡ ತಿಳಿಸಿದರು. ತಾಲ್ಲೂಕಿನ ಹೆಬ್ಬೂರು ಹೋಬಳಿ ಹೊನಸಿಗೆರೆ ಗೊಲ್ಲರಹಟ್ಟಿಯಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಸುಪ್ರಜಾ ಫೌಂಡೇಷನ್ ಮತ್ತು ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಸಂಯುಕ್ತಾಶ್ರಯದಲ್ಲಿ ಪ್ರಗತಿ ರೈತ ವೆಂಕಟೇಶ್ ಜಮೀನಿನಲ್ಲಿ ಏರ್ಪಡಿಸಿದ್ದ ಬಾಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಸ್ಥಳಿಯ ಸಂಪನ್ಮೂಲ ಬಳಸಿಕೊಂಡು ಮಣ್ಣು ಮತ್ತು ನೀರನ್ನು ಸಂರಕ್ಷಿಸಬೇಕು. ಪ್ರತಿಯೊಬ್ಬ ರೈತರು ಬಾಳೆ ಬೆಳೆಯನ್ನು ಬೆಳೆಯುವಾಗ ಕಿರು ಬೆಳೆಗಳನ್ನು ಬೆಳೆದಾಗ ಬಾಳೆಯಿಂದ ಬರುವ ಸಮಯಕ್ಕೆ ಕಿರು ಬೆಳೆಯಿಂದ ಆದಾಯ ಬರುತ್ತದೆ ಎಂದರು. ಜೀವನ ಉತ್ತೇಜನಾಧಿಕಾರಿ ಹರ್ಷಿತ ಮಾತನಾಡಿ ರೈತರು ಪ್ರಥಮ ಹಂತದಲ್ಲಿ ತಿಪ್ಪೆಯನ್ನ ರಕ್ಷಣೆ ಮಾಡಿಕೊಂಡು ಕೃಷಿ ಮಾಡುಲು ಮಂದಾಗಬೇಕು ಎಂದರು. ಹೊನಸಿಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುದ್ರೇಶ್ ಮಾತನಾಡಿ, ಐಡಿಎಫ್ ಸಂಸ್ಥೆಯು ಹಣಕಾಸಿನ ಸೌಲಭ್ಯ…
ಹುಳಿಯಾರು: ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ಡಾ. ಎಂ ಎಸ್ ಸ್ವಾಮಿನಾಥನ್ ವರದಿ ಅನ್ವಯ ಬೆಂಬಲ ಬೆಲೆ ಕಾನೂನು ಹಾಗೂ ಎಲ್ಲಾ ರೈತರು ಮತ್ತು ಕೃಷಿ ಕೂಲಿಕಾರರಿಗೆ ಸಾಲ ಮನ್ನಾ ಮಾಡುವ ಋಣಮುಕ್ತ ಕಾಯಿದೆ ಜಾರಿಗೆ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ನಡೆಸುವಂತೆ ಒತ್ತಾಯಿಸಿ ರೈತ ಮುಕ್ತಿ ಮಹಾ ಪಾದಯಾತ್ರೆ ಮತ್ತು ಸಮಾವೇಶವನ್ನು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇದೇ ತಿಂಗಳ 30ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದರು. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕೆಂಕೆರೆ ಸತೀಶ್ ರೈತರ ಎಲ್ಲ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಸಮನ್ವಯ ಸಮಿತಿವತಿಯಿಂದ 29ರಂದು ಉತ್ತರ ಪ್ರದೇಶದಲ್ಲಿ ಪಾದಯಾತ್ರೆ ಪ್ರಾರಂಭಗೊಂಡು 30ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಅಂದು ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಜಿಲ್ಲೆಯಿಂದ 400…
ತುಮಕೂರು: ದಿಬ್ಬೂರಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ಜಿ+2 ಮನೆಗಳು ಹಂಚಿಕೆಯಾಗಿರುವ ಫಲಾನುಭವಿಗಳು ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಲ್ಲಿ 3 ದಿನಗಳೊಳಗಾಗಿ ತೆರವುಗೊಳಿಸಬೇಕೆಂದು ಪಾಲಿಕೆ ಆಯುಕ್ತ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ. ಪಾಲಿಕೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಾದ ಮಂಡಿಪೇಟೆಯ ದೊಡ್ಡ ಚರಂಡಿ, ಶಾಂತಿ ಹೋಟೆಲ್ ಹಿಂಭಾಗ, ಮೀನು ಮಾರುಕಟ್ಟೆ ಪ್ರದೇಶ, ಬೆಳಗುಂಬ ರಸ್ತೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಹಿಂಭಾಗ, ಮಾರಿಯಮ್ಮ ನಗರ ರಸ್ತೆ ಪಕ್ಕದ ಗುಡಿಸಲು ವಾಸಿಗಳು, ಮರಳೂರು ಜನತಾ ಕಾಲೋನಿ ಹೈಟೆನ್ಷನ್ ಕೆಳಗಡೆ ವಾಸಿಸುತ್ತಿರುವವರಿಗೆ ದಿಬ್ಬೂರಿನ ದೇವರಾಜು ಅರಸು ವಸತಿ ಬಡಾವಣೆಯಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಹಾಲಿ ಸರ್ಕಾರಿ ಜಾಗದಲ್ಲಿ ಅನಧಿಕೃತ ಹಾಗೂ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಫಲಾನುಭವಿಗಳು ಗುಡಿಸಲುಗಳನ್ನು ತೆರವು ಮಾಡಿ ದಿಬ್ಬೂರಿಗೆ ಸ್ಥಳಾಂತರಗೊಳ್ಳಲು ತಿಳಿಸಲಾಗಿತ್ತು. ಕೆಲವರು ಈವರೆಗೂ ಗುಡಿಸಲುಗಳನ್ನು ಖಾಲಿ ಮಾಡಿರುವುದಿಲ್ಲ. ಇನ್ನೂ ಕೆಲವರು ಗುಡಿಸಲು ಖಾಲಿ ಮಾಡಿ ದಿಬ್ಬೂರಿಗೆ ಸ್ಥಳಾಂತರಗೊಂಡು ಅವರ ಮಕ್ಕಳು…
ಬೆಂಗಳೂರು: ಸೋಮವಾರ ವಿಧಿವಶರಾದ ಬಿಜೆಪಿಯ ದಿಗ್ಗಜ ನಾಯಕ,ಕೇಂದ್ರ ಸಚಿವ ಎಚ್.ಎನ್.ಅನಂತ್ ಕುಮಾರ್ ಅವರ ಅಂತಿಮ ಸಂಸ್ಕಾರ ಮಂಗಳವಾರ ಮಧ್ಯಾಹ್ನ ಗಣ್ಯಾತೀಗಣ್ಯರ ಸಮಕ್ಷಮ, ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಿತು.ಈ ವೇಳೆ ಪತ್ನಿ ತೇಜಸ್ವಿನಿ ಮತ್ತು ಪುತ್ರಿಯರಿಬ್ಬರು ತೀವ್ರ ಕಂಬನಿ ಮಿಡಿದರು. ಅನಂತಕುಮಾರ್ ಸೋದರ ನಂದಕುಮಾರ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಸೇನಾ ಸಿಬ್ಬಂದಿ ಸರ್ಕಾರಿ ಗೌರವ ಸಲ್ಲಿಸಿದರು. ಪಕ್ಷಾತೀತವಾಗಿ ಪ್ರಮುಖ ರಾಜಕೀಯ ನಾಯಕರು, ಸಚಿವರು, ಶಾಸಕರು ಮತ್ತು ಅಭಿಮಾನಿಗಳು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಮುಂಜಾನೆ 7.30ಕ್ಕೆ ಬಸವನಗುಡಿಯಲ್ಲಿರುವ ಅನಂತಕುಮಾರ್ ಅವರ ಸ್ವಗೃಹ ‘ಸುಮೇರು’ವಿನಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿ ‘ಜಗನ್ನಾಥ ಭವನ’ಕ್ಕೆ ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಪಕ್ಷದ ಕಚೇರಿಯಲ್ಲಿ ಗೌರವ ಸಲ್ಲಿಸಿದರು. ಅಲ್ಲಿಂದ ನ್ಯಾಷನಲ್ ಕಾಲೇಜು ಮೈದಾನಕ್ಕೆ…
ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದಾಗಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ವಿಧಿವಶರಾಗಿದ್ದು, ಈ ಹಿನ್ನಲೆಯಲ್ಲಿ ಶರೀರದ ಅಂತಿಮ ದರ್ಶನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿ 8.30ರ ನಂತರ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಅನಂತ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ 8 ರಿಂದಲೇ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಿದ್ದು, ಇದಕ್ಕಾಗಿ ಸಕಲ ಭದ್ರತಾ ಕ್ರಮಗಳನ್ನು ಕಾೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಳೆ ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆಯ ಟಿ.ಆರ್. ಮಿಲ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹುಳಿಯಾರು: ಪಟ್ಟಣದ ಹೊರವಲಯದ ಕೆಂಚಮ್ಮ ತೋಪಿನ ಬಳಿ ಎರಡು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ತಿಪಟೂರು ಪಟ್ಟಣದ ಮಾವಿನತೋಪಿನ ಮಧು (22) ಹಾಗೂ ಆನಂದ್ (45) ಮೃತರು. ಗಾಯಗೊಂಡವರು ಬರಕನಹಾಳ್ ಬಳಿಯ ರಾಮಪ್ಪನಹಟ್ಟಿಯ ಮಧು ಹಾಗೂ ಆನಂದ್. ಇವರು ಬೈಕ್ನಲ್ಲಿ ಕೆಂಕೆರೆ ಬಳಿಯ ಪುರದಮಠದ ದೇಗುಲದಲ್ಲಿ ನಡೆಯಲಿದ್ದ ಮದುವೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಎರಡು ಬೈಕ್ಗಳು ಬಲವಾಗಿ ಡಿಕ್ಕಿಯಾಗಿ ಮೃತರ ಪೈಕಿ ಒಬ್ಬರು ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆ, ಮತ್ತೊಬ್ಬರು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಸೋಮನಹಳ್ಳಿ ಕಟಕಳೆವು ಗಡಿಹಳ್ಳದಲ್ಲಿ ಆಸ್ತಿವಿಚಾರವಾಗಿ ವ್ಯಕ್ತಿಯೋರ್ವನನ್ನು ಕೊಲೈಗೈದು ಹಳ್ಳದಲ್ಲಿ ಬಿಸಾಡಿ ಹೋಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಗೋಡಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಹಳ್ಳಿ ನಿವಾಸಿ ಗಂಗಾಧರಯ್ಯ ಕೊಲೆಯಾಗಿರುವ ದುರ್ದೈವಿ. ಮೃತ ವ್ಯಕ್ತಿಗೆ ಇಬ್ಬರು ಹೆಂಡತಿಯರ ವೈಯಕ್ತಿಕ ದ್ವೇಷದಿಂದಾಗಿ ತನ್ನ ಗಂಡನನ್ನೇ ಕೊಲೆ ಮಾಡಿರುವ ಶಂಕೆ ಪೋಲಿಸರಿಂದ ವ್ಯಕ್ತವಾದ ಹಿನ್ನಲೆಯಲ್ಲಿ ಮೊದಲ ಹೆಂಡತಿ ಶಾಂತಮ್ಮನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮೃತನ ತಂದೆ ತಿಮ್ಮಯ್ಯನಿಗೆ ಗಂಗಾಧರಯ್ಯ ಒಬ್ಬನೇ ಮಗನಾಗಿದ್ದು ಈತ ಶಾಂತಮ್ಮನನ್ನು ಮೊದಲನೆ ವಿವಾಹವಾಗಿದ್ದ. ಜಯಮ್ಮ ಎಂಬುವವರನ್ನು ಎರಡನೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಶಾಂತಮ್ಮನಿಗೆ ಮಗಳು, ಜಯಮ್ಮನಿಗೆ ಒಬ್ಬ ಮಗನಿದ್ದರು, ಇವರು ಕುಟುಂಬದಲ್ಲಿ ಆಸ್ತಿವಂತರಾಗಿದ್ದ ಪರಿಣಾಮ ಎರಡೂ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದ ಎಂದು ಪೋಲಿಸರಿಂದ ತಿಳಿದು ಬಂದಿದೆ. ಇತ್ತೀಚೆಗೆ ಶಾಂತಮ್ಮನ ಮಗಳನ್ನು ವಿವಾಹ ಮಾಡಿಕೊಡಲಾಗಿತ್ತು, ಆ ನಂತರ…
ತುರುವೇಕೆರೆ: ಕೇಂದ್ರ ಸಚಿವ ಅನಂತ್ಕುಮಾರ್ ಅವರ ನಿಧನದ ಹಿನ್ನಲೆ ತಾಲ್ಲೂಕು ಬಿಜೆಪಿ ಘಟಕದವತಿಯಿಂದ ಪಟ್ಟಣದ ತಾಲೂಕು ಕಛೇರಿ ಮುಂಭಾಗ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಶಾಸಕ ಮಸಾಲ ಜಯರಾಮ್ ದಿ|| ಅನಂತ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ರಾಜಕೀಯ ಚತುರರಾಗಿ ಸ್ನೇಹಮಯವಾದ ವ್ಯಕ್ತಿತ್ವ ಹೊಂದಿದ್ದರು. ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ, ಸಂಸದರಾಗಿ ಎನ್ಡಿಎ ಸರ್ಕಾರದಲ್ಲಿ ಪ್ರವಾಸೋದ್ಯಮ, ಕ್ರೀಡೆ ಯವಜನ ಪ್ರಸ್ತುತ ರಸಗೊಬ್ಬರ ಸಚಿವರಾಗಿ ರೈತ ಪರವಾದ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದುಂಡರೇಣಕಪ್ಪ, ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಮುಖಂಡರಾದ ಅರಳಿಕೆರೆಶಿವಯ್ಯ, ಡಿ.ಆರ್.ಬಸವರಾಜು, ಡಾ.ಚೌದ್ರಿನಾಗೇಶ್, ಕೊಂಡಜ್ಜಿವಿಶ್ವನಾಥ್, ವೆಂಕಟರಾಮಯ್ಯ, ರಾಮೇಗೌಡ, ಕೆಂಪೇಗೌಡ, ಹೇಮಚಂದ್ರು, ದಿನೇಶ್, ನವೀನ್ ಬಾಬು, ಚಿದಾನಂದ್, ಅಮಾನಿಕೆರೆ ಮಂಜುನಾಥ್, ಸೋಮಶೇಖರ್, ಅನಿತಾನಂಜುಡಯ್ಯ, ಜಯಶೀಲಾ ಸೇರಿದಂತೆ…
ಬೆಂಗಳೂರು: ಹಣ ದ್ವಿಗುಣಗೊಳಿಸುವುದಾಗಿ ಹೇಳಿ 10 ಲಕ್ಷ ಪಡೆದುಕೊಂಡು ವಂಚಿಸಿದ ಆರೋಪದಡಿ ಡಿವೈಎಸ್ಪಿ ಸೇರಿದಂತೆ ನಾಲ್ವರನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ನಾಗೇಂದ್ರ ಕುಮಾರ್, ಹೆಡ್ ಕಾನ್ಸ್ಟೆಬಲ್ ವೆಂಕಟರಮಣ, ಕಾನ್ಸ್ಟೆಬಲ್ ಸಂತೋಷ್ ಹಾಗೂ ಖಾಸಗಿ ಕಾರು ಚಾಲಕ ಶಮಸೂದ್ದಿನ್ ಬಂಧಿತರು. ‘ಖಾಸಗಿ ಕಂಪನಿ ಉದ್ಯೋಗಿ ಶಿವಕುಮಾರ್ ಎಂಬುವರನ್ನು ಸಂಪರ್ಕಿಸಿದ್ದ ಆರೋಪಿ ಶಮಸೂದ್ದಿನ್, ‘₹2,000 ಮುಖಬೆಲೆಯ ನೋಟುಗಳ ಸಮೇತ ₹10 ಲಕ್ಷ ಕೊಟ್ಟರೆ, ಅದಕ್ಕೆ ಪ್ರತಿಯಾಗಿ ₹500 ಮುಖಬೆಲೆಯ ನೋಟುಗಳ ಸಮೇತ ₹20 ಲಕ್ಷ ವಾಪಸ್ ಕೊಡುತ್ತೇನೆ’ ಎಂದು ಹೇಳಿದ್ದ. ಅದನ್ನು ನಂಬಿದ್ದ ಶಿವಕುಮಾರ್, ಹಣ ಕೊಡಲು ಒಪ್ಪಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು. ‘ಶಿವಕುಮಾರ್ ಅವರನ್ನು ₹10 ಲಕ್ಷ ಸಮೇತ ನ. 8ರಂದು ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದ ಶಮಸೂದ್ದಿನ್, ಮಾತುಕತೆ ನಡೆಸುತ್ತಿದ್ದ. ಅದೇ ವೇಳೆಯೇ…