Author: News Desk Benkiyabale

ಬೆಂಗಳೂರು:        ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ್​ ಕುಮಾರ್(59)​ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.       ತೀವ್ರ ಅನಾರೋಗ್ಯ ಕಾರಣದಿಂದಾಗಿ ಕಳೆದ 20 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲೆ ಕೊನೆಯುಸಿರೆಳೆದಿದ್ದಾರೆ. ಅನಂತ್​ ಕುಮಾರ್​ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.       ಖಾಸಗಿ ಆಸ್ಪತ್ರೆಯಿಂದ ಲಾಲ್ ಬಾಗ್ ರಸ್ತೆಯಲ್ಲಿರುವ ಸುಮೇರ ನಿವಾಸಕ್ಕೆ ಅನಂತ್​ ಕುಮಾರ್​ ಅವರ ಪಾರ್ಥಿವ ಶರೀರ ರವಾನೆಯಾಗಿದೆ. ಸದ್ಯ ಕುಟುಂಬದವರಿಗೆ ಮಾತ್ರ ಮನೆಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಬೆಳಗ್ಗೆ 9 ಗಂಟೆ ಸಮಯದ ನಂತರ ಪಾರ್ಥೀವ ಶರೀರದ ದರ್ಶನಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ದಕ್ಷಿಣ ವಿಭಾಗ ಪೊಲೀಸರಿಂದ ‌ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಭಾರತೀಯ ಜನತಾ…

Read More

ತುಮಕೂರು :       ಟಿಪ್ಪರ್ , ಟಾಟಾ ಏಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು. ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ತುಮಕೂರು ಶಿವಮೊಗ್ಗ ಹೆದ್ದಾರಿಯ ಮಲ್ಲಸಂದ್ರ ಬಳಿ ನಡೆದಿದೆ.     ಬೋಲೆರೋನಲ್ಲಿದ್ದ ವ್ಯಕ್ತಿ ಹಾಗೂ ಎಕ್ಸ್‌ಯುವಿನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.      ಕಾರಿನಲ್ಲಿ ಆರು ಜನ ಗುಬ್ಬಿ ಕಡೆಗೆ ಮದುವೆಗೆ ತೆರಳುತ್ತಿದ್ದರು. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು. ಅವರನ್ಗನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು:      ‘ಇ.ಡಿ ಡೀಲ್’ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಭಾನುವಾರ ಸಂಜೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ (ಯುಟಿಪಿ) 10,902 ನೀಡಲಾಗಿದೆ.      ರೆಡ್ಡಿ ಹಾಗೂ ಅವರ ಆಪ್ತಸಹಾಯಕ ಆಲಿಖಾನ್ ಹಿಂದೆ ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಆಗ ಅವರನ್ನು ‘ವಿಶೇಷ ಭದ್ರತೆ’ಯ ಕೊಠಡಿಯಲ್ಲಿ ಬಂಧಿಸಿಡಲಾಗಿತ್ತು. ರೆಡ್ಡಿ ಈಗ ಮತ್ತೆ ಅದೇ ಕೊಠಡಿ ಸೇರಿದ್ದಾರೆ.         ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಬಲವಾದ ಸಾಕ್ಷ್ಯಗಳನ್ನು ಒಪ್ಪಿಸಿದ್ದಾರೆ. ಈ ಹಿನ್ನೆೆಲೆಯಲ್ಲಿ ನ್ಯಾಯಾಧೀಶರು, ರೆಡ್ಡಿ ಪರ ವಕೀಲ ಚಂದ್ರಶೇರ್ ಅವರ ವಾದವನ್ನು ತಿರಸ್ಕರಿಸಿ, ನ್ಯಾಯಾಂಗ ಬಂಧನಕ್ಕೆೆ ಆದೇಶಿಸಿದ್ದಾರೆ.

Read More

ಕೊರಟಗೆರೆ:       ಈ ನಾಡಿನಲ್ಲಿ ಹಜರತ್ ಟಿಪ್ಪು ಸುಲ್ತಾನ್ ಎಂಬ ದೇಶಪ್ರೇಮಿಯ ಜಯಂತಿ ವಿರೋಧ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ರಾಜ್ಯ ಮತ್ತು ರಾಷ್ಟ್ರಕ್ಕೆ ತಾನು ನೀಡಿರುವ ಕೊಡುಗೆ ಏನು ಎಂಬುದನ್ನು ಮೊದಲು ಯೋಚನೆ ಮಾಡಬೇಕು ಎಂದು ಸಾಹಿತಿ ಹೊಸಕೆರೆ ರೀಜ್ವಾನ್ ಪಾಷ ತಿಳಿಸಿದರು.       ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.       ಜಯಂತಿಯ ಹೆಸರು ಬಳಸಿಕೊಂಡು ರಾಜಕಾರಣಿಗಳು ರಾಜಕೀಯ ಮಾಡುವುದು ಸೂಕ್ತವಲ್ಲ. ಸರಕಾರ ಸಮುದಾಯಗಳ ಜಯಂತಿಗೆ ಖರ್ಚು ಮಾಡುವ ಹಣವನ್ನು ರೈತರ ಕಲ್ಯಾಣಕ್ಕಾಗಿ ಬಳಸಬೇಕು. ರಾಜ್ಯದ ಪ್ರತಿಯೊಂದು ಕ್ಷೇತ್ರದ ಕೆರೆ ಮತ್ತು ಕಟ್ಟೆಯನ್ನು ಅಭಿವೃದ್ದಿ ಪಡಿಸಿ ಅಂತರ್ಜಲ ಮಟ್ಟವನ್ನು ವೃದ್ದಿಸುವ ಕೆಲಸ ಮಾಡಿ ರೈತರ ಆರ್ಥಿಕ ಅಭಿವೃದ್ದಿ ಸಹಕಾರ ನೀಡಿದಾಗ ಮಾತ್ರ ರಾಜ್ಯ ಮತ್ತು ದೇಶದ ಅಭಿವೃದ್ದಿ ಆಗಲು ಸಾಧ್ಯ ಎಂದು ಸೂಚನೆ ನೀಡಿದರು.    …

Read More

ತುಮಕೂರು :       ನೋಟು ಅಮಾನ್ಯಿಕರಣದ ಹಿನ್ನೆಲೆ ಪ್ರಧಾನಿ ಮೋದಿಯನ್ನು ಸುಟ್ಟು ಹಾಕುವ ಕಾಲ ಬಂದಿದೆ ಎಂದು ಹೇಳಿಕೆ ನೀಡಿರುವ ಟಿ.ಬಿ. ಜಯಚಂದ್ರರ ಹೇಳಿಕೆಯನ್ನು ದೇಶದ್ರೋಹವೆಂದು ಪರಿಗಣಿಸಿ ಅವರನ್ನು ಗಲ್ಲಿಗೆ ಏರಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.       ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ವಿರುದ್ಧ ಕೀಳುಮಟ್ಟದಲ್ಲಿ ಜಯಚಂದ್ರ ಮಾತನಾಡಿದ್ದಾರೆ. ಈ ವರ್ತನೆ   ಜಯಚಂದ್ರರ ಹುಟ್ಟಿನ ಗುಣವನ್ನು ತೋರಿಸುತ್ತದೆ. ಅವರು ನರಿಯೂ ಅಲ್ಲ, ಗುಳ್ಳೆನರಿಯೂ ಅಲ್ಲ, ಬದಲಾಗಿ ಕೆಟ್ಟ ಸೊಳ್ಳೆ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು. ಪ್ರಧಾನಿ ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದ್ರೆ ನಾವೆಲ್ಲ ಏನು ಬಳೆ ತೊಟ್ಟು ಕೂತಿದ್ದೇವೆಯೇ ಎಂದು ಪ್ರಶ್ನಿಸಿದರು.       ನಮ್ಮದು ಫೆಡರಲ್ ಸಿಸ್ಟಂ ಹೀಗಾಗಿ ಕ್ರಿಮಿನಲ್​ಗಳನ್ನು ಎಲ್ಲಿ ಬೇಕಾದ್ರು ಬಂಧಿಸಬಹುದು. ಟಿ.ಬಿ ಜಯಚಂದ್ರ ಅಂಡ್ ಕಂಪನಿ ಲಜ್ಜೆಗೆಟ್ಟಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಯಾರೊಬ್ಬರೂ ಕೂಡ ಕಾಂಗ್ರೆಸ್​ನಲ್ಲಿ…

Read More

ಮಧುಗಿರಿ :       ಬ್ರಿಟೀಷರ ವಿರುದ್ದ ಹೋರಾಡಿ ಅವರ ನಿದ್ದೆಗೆಡಿಸಿದ ಮೈಸೂರು ಹುಲಿ ಟಿಪ್ಪು ಬಗ್ಗೆ ರಾಜಕಾರಣದಿಂದಾಗಿ ಅಪಸ್ವರಗಳು ಎದ್ದಿರುವುದು ವಿಷಾದನೀಯ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.       ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಹಜರತ್ ಟಿಪ್ಪುಸುಲ್ತಾನ್ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಿಟೀಷರು ಜಾನ್ಸಿರಾಣಿ ಲಕ್ಷ್ಮೀಬಾಯಿ ಮತ್ತು ಟಿಪ್ಪುಸುಲ್ತಾನ್ ಈ ಇಬ್ಬರಿಗೆ ಹೆದರುತ್ತಿದ್ದರು ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ಎಲ್ಲಾ ಧರ್ಮದ ಜನರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದ ಮಹಾನ್ ವ್ಯಕ್ತಿ ಟಿಪ್ಪು ಎಂದು ಬಣ್ಣಿಸಿದ ಅವರು ಕರ್ನಾಟಕ ಮತ್ತು ಮಧುಗಿರಿ ಪಟ್ಟಣದಲ್ಲಿ ಹಿಂದೂ ಮುಸ್ಲೀಂಮರು ಅಣ್ಣ-ತಮ್ಮಂದಿರಂತೆ ಬಹಳಷ್ಟು ಅನ್ಯೋನ್ಯವಾಗಿದ್ದಾರೆ ಎಂದರು.ಸರ್ಕಾರ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.       ಸಮುದಾಯದ ಮುಖಂಡ ಎಂ.ಆರ್. ಖಲೀಲ್ ಮಾತನಾಡಿ ಕರ್ನಾಟಕ ಭಾರತಕ್ಕೇ ಮಾದರಿಯಾಗಿದ್ದು, ದೇಶಕ್ಕೇ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ಜಯಂತಿಗಳನ್ನು ಆಚರಿಸುವುದು ನಮ್ಮ ಕರ್ತವ್ಯ. ಟಿಪ್ಪು…

Read More

ತುಮಕೂರು:       ಉಪಗ್ರಹ ಆಧಾರಿತ ತರಬೇತಿಯಿಂದ ಜನಪ್ರತಿನಿಧಿಗಳ ಸಾಮಾರ್ಥ್ಯಾಭಿವೃದ್ಧಿ ಸಾಧ್ಯವಿಲ್ಲ ಮುಖಾಮುಖಿ ತರಬೇತಿಯ ವಾತಾವರಣ ಸೃಷ್ಠಿಯಾಗಬೇಕು ಎಂದು ಶಾಸಕರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.       ಅವರು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡುತ್ತಾ, ನಾನು ವಿಕೇಂದ್ರಿಕರಣದ ಪ್ರತಿಪಾದಕ, ನಾಣು ಕೆ.ಎಂ.ಎಫ್.ಅಧ್ಯಕ್ಷನಾಗಿದ್ದ ಕಾಲದಲ್ಲಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಅಧಿಕಾರ ವಿಕೇಂದ್ರಿಕರಣಕ್ಕೆ ಬಾರೀ ವಿರೋಧದ ನಡುವೆಯೆ ಜಾರಿ ಮಾಡಿದ್ದೆ. ಹಾಗೆಯೇ ಪಂಚಾಯತ್ ರಾಜ್ ವ್ಯವಸ್ಥೇ ಅಧಿಕಾರ ವಿಕೇಂದ್ರಿಕರಣದಿಂದ ಅಭಿವೃದ್ಧಿ ಸಾಧ್ಯ ಆದರೆ ತರಬೇತಿ ಸಂಸ್ಥೆ ಗುಣಾತ್ಮಕ ತರಬೇತಿ ಕಡೆ ಗಮನ ಹರಿಸಬೇಕಾಗಿದೆ ಎಂದರು.       ಆದರೆ ತರಬೇತಿ ಸಂಸ್ಥೆಗೆ ಅದಿಕಾರ ವಿಕೇಂದ್ರಿಕರಣದ ಪರವಾಗಿ ಇರುವ ಕ್ರಿಯಾ ಶೀಲ ಅಧಿಕಾರ ಬರಬೇಕಿದೆ ಹಾಗೂ ಸಂಸ್ಥೆಯಲ್ಲಿ ಕಾರ್ಯ ನಿರ್ವಸುತ್ತಿರುವ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಜನ ಪ್ರತಿನಿಧಿಗಳನ್ನು ಮುಖ್ಯವಾಹಿನಿಗೆ ತರಬೇಕಿದೆ, ಅವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರಿತು ಕೆಲಸ ಮಾಡುವಂತಾಗಬೇಕೆಂದರು.  …

Read More

ಕೊರಟಗೆರೆ:       ಯುವ ಕ್ರೀಡಾಪಟುಗಳು ಗೆಲುವು ಮತ್ತು ಸೋಲನ್ನು ಸಮವಾಗಿ ಸ್ವೀಕರಿಸಿ ತಮ್ಮ ಗುರಿಯನ್ನು ಮುಟ್ಟುವಂತಹ ಪ್ರಯತ್ನ ಮಾಡಬೇಕು ಎಂದು ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.       ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಪೃಥ್ವಿ ಇಲೆವನ್ ಮತ್ತು ಡಾ.ಜಿ.ಪರಮೇಶ್ವರ ಯೂತ್ ಐಕಾನ್ಸ್ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಕೊರಟಗೆರೆ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.       ಯುವ ಕ್ರೀಡಾ ಪಟುಗಳನ್ನು ಗುರುತಿಸಲು ರಾಜ್ಯದ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಕ್ರೀಡಾ ಇಲಾಖೆಯಿಂದ ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಸುಮಾರು 3ಕೋಟಿ ವೆಚ್ಚದ ಕ್ರೀಂಡಾಗಣ ನಿರ್ಮಿಸಲು ಈಗಾಗಲೇ ಅನುಧಾನ ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ. ಯುವಕರು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಬೇಕು ಎಂದು ಸಲಹೆ ನೀಡಿದರು.        ಗ್ರಾಮೀಣ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳು ದೇಶ…

Read More

ಹುಳಿಯಾರು:       ಭಾರತ ದೇಶ ಧಾರ್ಮಿಕ ಭಾವನೆಗಳುಳ್ಳ ದೇಶ. ವಿವಿಧ ಜಾತಿ, ಮತಗಳನ್ನು ಹೊಂದಿರುವ ಹಾಗೆಯೇ ವಿವಿಧ ಸಂಪ್ರದಾಯಗಳ ಸಂಗಮವಾಗಿದ್ದು ವಿಶ್ವಕ್ಕೆ ಭಾವೈಕ್ಯತೆಯ ಸಂದೇಶ ನೀಡುವುದಕ್ಕದರೂ ಬಿಜೆಪಿಯವರು ಟಿಪ್ಪು ಜಯಂತಿ ಆಚರಿಸಲು ಸಹಕರಿಸಬೇಕು ಎಂದು ಜಿಲ್ಲಾ ಖಾದಿ ಬೋರ್ಡ್ ಮಾಜಿ ಅಧ್ಯಕ್ಷ ಸೈಯದ್ ಜಬೀಉಲ್ಲಾ ತಿಳಿಸಿದರು.       ಹುಳಿಯಾರಿನ ಶನಿವಾರ ಸರಳವಾಗಿ ಏರ್ಪಡಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದ ಜಾತ್ಯತೀತ ಮೌಲ್ಯಗಳು ಹಾಗೂ ಬಹುಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಸಹಬಾಳ್ವೆ ಹಾಗೂ ಸೌಹಾರ್ದತೆ ಪ್ರತಿಯೊಬ್ಬರ ಉಸಿರಾಗಬೇಕು. ಆದರೆ ಬಿಜೆಪಿಯವರು ಟಿಪ್ಪು ಜಯಂತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಜಾತಿ, ಧರ್ಮದ ನಡುವೆ ಸಾಮರಸ್ಯ ಕದಡುತ್ತಿದ್ದಾರೆ ಎಂದು ಆಪಾದಿಸಿದರಲ್ಲದೆ ಬಸವಣ್ಣ, ಕನಕ, ವಾಲ್ಮೀಕಿ ಸಮುದಾಯದವರು ಕೇಳಿದಂತೆ ಮುಸ್ಲಿಂ ಸಮುದಾಯ ಟಿಪ್ಪು ಜಯಂತಿ ಕೇಳಿದ್ದಾರೆ. ಸರ್ವರಿಗೂ ಸಮಬಾಳು, ಸಮಪಾಲು ಎನ್ನುವುದು ಸಂವಿಧಾನ ಆಶಯವಾಗಿದ್ದು ಅದರಂತೆ ಟಿಪ್ಪು ಜಯಂತಿ ಆಚರಿಸುವುದರಲ್ಲಿ ತಪ್ಪೇನಿದೆ…

Read More

ಮದ್ದೂರು:       ವಿರೋಧದ ನಡುವೆಯೂ ತಾಲ್ಲೂಕು ಆಡಳಿತದ ವತಿಯಿಂದ ಜಾಮೀಯಾ ಶಾದಿ ಮಹಲ್ ನಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಸಲಾಯಿತು.       ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾರಿಗೆ ಸಚಿವ ಡಿ‌.ಸಿ.ತಮ್ಮಣ್ಣ ರವರು ಮಾತನಾಡಿ ಕೆ ಆರ್ ಎಸ್ ಜಲಾಶಯಕ್ಕೆ ಮೊದಲು ಯೋಜನೆ ರೂಪಿಸಿದ್ದು ಟಿಪ್ಪು ಸುಲ್ತಾನ್ ಆದರೆ ಅದು ಕಾರ್ಯ ರೂಪಕ್ಕೆ ಬರಲಿಲ್ಲ ನಂತರ ಕೃಷ್ಣ ರಾಜ ಒಡೆಯರ್ ಅವರು ತಮ್ಮ ಒಡವೆಗಳನ್ನು ಬಾಂಬೆಯಲ್ಲಿ ಅಡವಿಟ್ಟು ಜಲಾಶಯ ನಿರ್ಮಿಸಿದರು ಟಿಪ್ಪು ಹಿಂದೂಗಳ ವಿರೋಧಿಯಾಗಿದ್ದರೆ ಮೇಲುಕೋಟೆ ನಂಜನಗೂಡು ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯಕ್ಕೆ ಸಾಕಷ್ಟು ಪ್ರಮಾಣದಲ್ಲಿ  ಹಣ ಆಭರಣಗಳನ್ನು ಯಾಕೆ ನೀಡಬೇಕಿತ್ತು ಎಂದರು       ನಂತರ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು  ಈ ರಕ್ತವನ್ನು ಬೆಂಗಳೂರಿನ ಆದಿ ಚುಂಚನಗಿರಿ ಮಠದ ಆಸ್ಪತ್ರೆಗೆ ನೀಡಲಾಗುವುದು ಎಂದು  ಪುರಸಭಾ ಸದಸ್ಯ ಆದಿಲ್ ಆಲಿ ಖಾನ್ ತಿಳಿಸಿದರು. ಇದೇ ಸಂದರ್ಭದಲ್ಲಿ ಐದು ಮಂದಿ…

Read More