Author: News Desk Benkiyabale

 ತುಮಕೂರು:       ತುಮಕೂರು ವಿಶ್ವವಿದ್ಯಾನಿಲಯದಲ್ಲಿಂದು ನಡೆದ ವಾರ್ಷಿಕ 12ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಪೋಷಕರು ಸಂಭ್ರಮಿಸಿದರು.       ಈ ಘಟಿಕೋತ್ಸವದಲ್ಲಿ 67 ಮಂದಿಗೆ ಪಿಎಚ್‍ಡಿ, 68 ವಿದ್ಯಾರ್ಥಿಗಳಿಗೆ 89 ಚಿನ್ನದ ಪದಕ ಹಾಗೂ 9442 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಹೆಚ್ಚು ಚಿನ್ನದ ಪದಕ ಪಡೆದವರು:-       ಎಂ.ಎಸ್ಸಿ ಗಣಿತಶಾಸ್ತ್ರ ವಿಭಾಗದಲ್ಲಿ ಕೆ.ಆರ್ ಕಿಶೋರ್‍ಕುಮಾರ್ 5 ಚಿನ್ನದ ಪದಕ ಹಾಗೂ ಎಂ.ಎ ಕನ್ನಡ ವಿಭಾಗದಲ್ಲಿ ಕೆ.ಎಂ. ಗೋವಿಂದರಾಜು ಅವರಿಗೆ 4 ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ಬಿ.ಎ ಕನ್ನಡ (ಐಚ್ಛಿಕ)ವಿಭಾಗದಲ್ಲಿ ಕೆ.ಎನ್. ಪವನ, ಬಿ.ಕಾಂ ವಿಭಾಗದಲ್ಲಿ ಕೆ.ವಿ ಶ್ರೀವಲ್ಲಿ, ಬಿ.ಎಸ್ಸಿ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದ ಚಿರಾಗ್ ಎಸ್., ಎಂ.ಕಾಂ ವಿಭಾಗದ ಕೆ.ಎನ್. ವಸುಧ ಅವರು ತಲಾ 3 ಚಿನ್ನದ ಪದಕ ಗಳಿಸಿದ್ದಾರೆ. ಬಿ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂತೋಷ್ ಜೆ.ಆರ್, ಎಂ.ಎ ಅರ್ಥಶಾಸ್ತ್ರ ವಿಭಾಗದಲ್ಲಿ ಸುರೇಖ, ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಅನುರಾಧ,…

Read More

  ತುರವೇಕೆರೆ:       ಸಾಂಸ್ಕೃತಿಕ ಹಾಗೂ ಸೌಂದರ್ಯ ಪ್ರಜ್ಞೆ ಇದ್ದವರು ನಮ್ಮ ದೇಶದ ಕಲೆ, ಸಂಸೃತಿ ಪ್ರೀತಿಸುತ್ತಾ ಸಮಾಜದಲ್ಲಿ ಸಾಮರಸ್ಯ ಬದುಕು ರೂಪಿಸುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ತಿಳಿಸಿದರು.      ಪಟ್ಟಣದ ಕೆ. ಹಿರಣ್ಣಯ್ಯ ಬಯಲು ರಂಗ ಮಂದಿರ ಆವರಣದಲ್ಲಿ ಸೋಮವಾರ ಸಂಜೆ ಸಂಗಮ ಸಾಂಸ್ಕೃತಿಕ ಟ್ರಸ್ಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ, ರೊಟರಿ ಕ್ಲಬ್ ತುರುವೇಕೆರೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂಡಬಿದರೆ ಆಳ್ವಾಸ್ ಸಂಸ್ಥೆಯು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.       ರಾಜ ಮಹಾರಾಜರ ಕಾಲದಲ್ಲಿ ತಮ್ಮ ನಾಡಿನ ಕಲೆ, ಸಂಸೃತಿಯನ್ನು ಹೆಚ್ಚು ಪ್ರೋತ್ಸಾಹಿಸಿ ಬೆಳಸುತ್ತಿದ್ದರು. ಈಗ ಸರ್ಕಾರಗಳು ಸಹ ನಮ್ಮ ಕಲೆ ಸಂಸೃತಿಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ನಮ್ಮ ಆಳ್ವಾಸ್ ನುಡಿ ಸಿರಿ ಕಾರ್ಯಕ್ರಮಗಳು ಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ, ಮನಸ್ಸನ್ನು ಕಟ್ಟಲು ಸಹಕಾರಿಯಾಗಿವೆ. ನಾವಿಂದು…

Read More

ತುಮಕೂರು:       ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ರವರಿಗೆ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಆದೇಶಿಸಿರುತ್ತಾರೆ.       ತುಮಕೂರು ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಯ ಹೊಣೆ ಹೊತ್ತಿದ್ದ ಶಾಸಕ ಗೌರಿಶಂಕರ್ ರವರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನದ ಹೆಚ್ಚಿನ ಹೊಣೆಗಾರಿಕೆಯನ್ನ ಹೊರಿಸುವುದರ ಮುಖೇನ ಕರ್ನಾಟಕ ರಾಜ್ಯವ್ಯಾಪಿ ಇರುವ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‍ಐಎಲ್) ಅಭಿವೃದ್ಧಿಯ ಹೆಚ್ಚಿನ ಜವಾಬ್ಧಾರಿಯನ್ನ ನೀಡಿರುವುದರಿಂದ ಸಮರ್ಥವಾಗಿ ನಿಭಾಯಿಸುವ ಸಾಮಥ್ರ್ಯ ನಮ್ಮ ಶಾಸಕರಿಗಿದೆ ಎಂದು ಅವರ ಅಭಿಮಾನಿ ವರ್ಗ ಸಂಭ್ರಮಾಚರಣೆ ಮಾಡಿದರು.

Read More

 ಜೈಪುರ:        ಈ ದೇಶಕ್ಕಿಂತಲೂ ಮುಖ್ಯವಾದದ್ದು ನನಗೆ ಬೇರೇನೂ ಇಲ್ಲ. ಈ ಮಣ್ಣಿನ ಆಣೆ ನಾನು ದೇಶವನ್ನು ತಲೆಬಾಗಲು ಬಿಡುವುದಿಲ್ಲ ದೇಶದ ಸುರಕ್ಷತೆ ದೃಷ್ಟಿಯಿಂದ ಉಗ್ರ ನಿಗ್ರಹಕ್ಕೆ ಬದ್ಧ ಎಂದು  ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.      ರಾಜಸ್ಥಾನದ ಚುರುವಿನಲ್ಲಿ ಸಮಾವೇಶದಲ್ಲಿ ಮಾತನಾಡಿದ ಅವರು, ವೈಮಾನಿಕ ದಾಳಿಯ ನಂತರ ಮೊದಲ ಬಾರಿಗೆ ಆ ಬಗ್ಗೆ ಪ್ರತಿಕ್ರಿಯಿಸಿದರು.  ಭಾರತ ಅತ್ಯಂತ ಸುರಕ್ಷಿತ ಕೈಗಳಲ್ಲಿದೆ ಎಂದು ದೇಶಕ್ಕೆ ಮತ್ತೊಮ್ಮೆ ಭರವಸೆ ನೀಡಲು ಬಯಸುತ್ತೇನೆ. ಪಾಕಿಸ್ತಾನದ ಬಾಳಾಕೋಟ್​ ಮೇಲಿನ ವೈಮಾನಿಕ ದಾಳಿ ನಡೆಸಿ, ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಧೀರ ಯೋಧರೆಲ್ಲರನ್ನೂ ಅಭಿನಂದಿಸಲು ಬಯಸುತ್ತೇನೆ ಎಂದು ಹೇಳಿದರು.       ಯಾವುದೇ ಕಾರಣಕ್ಕೂ ದೇಶದ ಗೌರವಕ್ಕೆ ಧಕ್ಕೆ ಒದಗದಂತೆ ನೋಡಿಕೊಳ್ಳುತ್ತೇನೆ. 2014ರಲ್ಲಿ ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವಾಗ ಈ ಕುರಿತು ಹೇಳಿದ ಮಾತಿಗೆ ನಾನು ಈಗಲೂ ಬದ್ಧ ಎಂದರು.        ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೊಬ್ಬನ ದಾಳಿಯಲ್ಲಿ ಸಿಆರ್​ಪಿಎಫ್​ನ 40…

Read More

ಕೊಡಿಗೇನಹಳ್ಳಿ :       ಸರಕಾರಿ ಯೋಜನೆಗಳ ಬಗ್ಗೆ ಪಂಚಾಯತಿ ಅಧಿಕಾರಿಗಳು ಸಭೆ ಕರೆಯುತ್ತಾರೆ ಮಾಹಿತಿ ನೀಡುತ್ತಾರೆ ಎಂದು ಕಾದು ಕುಳಿತಿದ್ದ ಸಾರ್ವಜನಿಕರಿಗೆ ಗ್ರಾಪಂ ಅಧಿಕಾರಿಗಳು ಗುಪ್ತವಾಗಿ ಸಭೆ ಕರೆದು ಬಸವ ವಸತಿ ಯೋಜನೆ ಮನೆಗಳು ವಂಚಿಸಲು ಯತ್ನಿಸಿದ ಘಟನೆ ವರದಿಯಾಗಿದೆ.       ಕೊಡಿಗೇನಹಳ್ಳಿ ಗ್ರಾಪಂ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ 2018-19 ನೇ ಸಾಲಿನ ಬಸವ ವಸತಿ ಯೋಜನೆಯ ಫಲಾನುಭವಿಗಳ ಗ್ರಾಮ ಸಭೆಯನ್ನು ಮಂಗಳವಾರ ಆಯೋಜಸಿಲಾಗಿತ್ತು. ಸಭೆಯ ಬಗ್ಗೆ ಟಾಂಟಾಂ ಹಾಕಿಸದರೆ ಸಾರ್ವಜನಿಕರಿಗೆ ಯಾವುದೆ ಮಾಹಿತಿ ನೀಡದೆ ಗುಪ್ತವಾಗಿ ಸಭೆಯನ್ನು ಆಯೋಜಸಿಲಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಗ್ರಾಪಂ ಅಧಿಕಾರಿಗಳು ಹಾರೈಕೆ ಉತ್ತರ ನೀಡಿ ಮೌನಕ್ಕೆ ಶರಣಾದರು.       ವಸತಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದೆ ಗುಪ್ತವಾಗಿ ಸಭೆಯನ್ನು ಆಯೋಜನೆ ಮಾಡಿದ್ದು ಇದು ಅರ್ಹ ಫಲಾನವಿಗಳನ್ನು ವಂಚಿಸುತ್ತಿದ್ದಾರೆ ಎಂದು ಸಾರ್ವಜನಿರಕು ಆಕ್ರೋಶ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಕೆಲ ಕಾಂಗ್ರೇಸ್ ಹಾಗೂ ಜೆಡಿಎಸ್ ಕಾರ್ಯಕರ್ತರ…

Read More

ತುಮಕೂರು:       ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ವಿವಿಧ ಕಡೆ ಕೈಗೆತ್ತಿಕೊಂಡಿರುವ 134 ಕೋಟಿ ರೂ. ವೆಚ್ಚದ 3 ಸ್ಮಾರ್ಟ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು.       ನಗರದ ಸುಮಾರು 14 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳನ್ನು 191.10 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ರಸ್ತೆಗಳನ್ನಾಗಿ ಪರಿವರ್ತಿಸುವ ಕಾಮಗಾರಿಯಡಿ ಈ 3 ರಸ್ತೆಗಳ ನಿರ್ಮಾಣ ಕೈಗೊಳ್ಳಲಾಗಿದ್ದು, 47.74ಕೋಟಿ ರೂ. ವೆಚ್ಚದ ಸ್ಮಾರ್ಟ್ ರಸ್ತೆಯನ್ನು ಡಾ: ಶಿವಕುಮಾರ ಸ್ವಾಮೀಜಿ ವೃತ್ತ, 49.87 ಕೋಟಿ ರೂ. ವೆಚ್ಚದ ರಸ್ತೆಯನ್ನು ಡಾ: ರಾಧಾಕೃಷ್ಣ ರಸ್ತೆ ಹಾಗೂ 36.88 ಕೋಟಿ ರೂ. ವೆಚ್ಚದ ಸ್ಮಾರ್ಟ್ ರಸ್ತೆಯನ್ನು ಭಗವಾನ್ ಮಹಾವೀರರಸ್ತೆಯಲ್ಲಿ ಅವರು ಇಂದು ಭೂಮಿಪೂಜೆ ನೆರವೇರಿಸಿದರು. ಸ್ಮಾರ್ಟ್ ರಸ್ತೆ ವಿಶೇಷ ಪ್ಯಾಕೇಜ್‍ನಡಿ ಹಂತ ಹಂತವಾಗಿ ಉತ್ತಮವಾದ ಪಾದಚಾರಿ ಮಾರ್ಗ, ಪ್ರತ್ಯೇಕ ಬೈಸಿಕಲ್ ಟ್ರ್ಯಾಕ್, ಅಂಡರ್‍ಗ್ರೌಂಡ್ ಡಕ್ಟಿಂಗ್, ಬಹುಕ್ರಿಯಾತ್ಮಕ ವಲಯ, ಹಸಿರು ವಲಯ…

Read More

ತುಮಕೂರು:        ರಕ್ತ ಕುದಿಯೋದು ಆರಬೇಕು ಅಂದ್ರೆ ಸಂಪೂರ್ಣ ಕಾಶ್ಮೀರ ನಮ್ಮದಾಗಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.        ದೇಶದ ಯುವಕರು ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಭಾರತದ ವೀರ ಯೋಧರು ದಾಳಿ ಮಾಡಿ ಮುಗಿಸಿದ್ದರು. ಪ್ರಧಾನ ಮಂತ್ರಿ ಯೋಧರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ನನಗೂ ರಕ್ತ ಕುದಿಯುತ್ತಿದೆ.  ರಕ್ತ ಕುದಿಯೋದು ಆರಬೇಕು ಅಂದ್ರೆ ಸಂಪೂರ್ಣ ಕಾಶ್ಮೀರ ನಮ್ಮದಾಗಬೇಕು ಎಂದಿದ್ದಾರೆ.        ಪ್ರಧಾನಿ ಮೋದಿಯವರು  ಉಗ್ರಗಾಮಿಗಳ ಬೇರು ಸಹಿತ ಕಿತ್ತುಹಾಕಬೇಕು. ಪಾಕಿಸ್ತಾನದಲ್ಲಿರುವ ಭಾರತೀಯ ಬಂಧುಗಳು ಸಿವಿಲ್ ವಾರ್ ಮಾಡಬೇಕು. ಚೈನಾದವರ ಬಗ್ಗೆ ಮಾತನಾಡಿದ್ರೆ ಸುಟ್ಟುಹಾಕ್ತಾರೆ ಅದೇ ತರ ಹುರಿಹತ್ ನಲ್ಲಿ ಇರುವವರನ್ನು ಸುಟ್ಟಾಕಬೇಕು ಎಂದು ಹೇಳಿಕೆ ನೀಡಿದ್ದಾರೆ.

Read More

ನವದೆಹಲಿ:       ಭಾರತದ ಕಾಶ್ಮೀರದಲ್ಲಿ ಹಿಂಸಾಕೃತ್ಯ ಎಸಗುವ ಕನಸು ಕಾಣುತ್ತ ಪಾಕಿಸ್ತಾನಿ ಉಗ್ರರು ಸುಖನಿದ್ರೆಯಲ್ಲಿ ತೊಡಗಿದ್ದಾಗ, ಮಂಗಳವಾರ ಬೆಳಗಿನ ಜಾವ 3.45ರ ಸುಮಾರಿಗೆ ದಾಳಿ ನಡೆಸಿದ ಭಾರತೀಯ ವಾಯು ಸೇನೆ, ಬಾಲಕೋಟ್ ನಲ್ಲಿ          ಅತ್ಯಂತ ವ್ಯವಸ್ಥಿತವಾಗಿ ನಡೆದಿರುವ ಈ ದಾಳಿಯ ಬಗ್ಗೆ ಅರಿಯುವ ಮುನ್ನವೇ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದ ಕಂಟ್ರೋಲ್ ರೂಮ್ ಸೇರಿದಂತೆ ಹಲವಾರು ಉಗ್ರರ ತರಬೇತಿ ನೆಲೆಗಳು ಧ್ವಂಸವಾಗಿವೆ. ಈ ದಾಳಿಯಲ್ಲಿ ಕನಿಷ್ಠಪಕ್ಷ 300ಕ್ಕೂ ಹೆಚ್ಚು ಪಾಕ್ ಬೆಂಬಲಿತ ಉಗ್ರರು ಹತರಾಗಿದ್ದಾರೆ.        ಈ ದಾಳಿ ನಡೆದಿದ್ದು ಕೇವಲ 21 ನಿಮಿಷಗಳು ಮಾತ್ರ. ಬೆಳಗಿನ ಜಾವ 3.45ಕ್ಕೆ ಆರಂಭವಾದ ದಾಳಿ 4 ಗಂಟೆ 6 ನಿಮಿಷದ ಹೊತ್ತಿಗೆ ಮುಕ್ತಾಯವಾಗಿತ್ತು. ಮೊದಲಿಗೆ ಬಾಲಕೋಟ್ ನಲ್ಲಿ ದಾಳಿ ನಡೆದರೆ, ನಂತರ ಮುಜಫರಾಬಾದ್ ಮತ್ತು ಚಾಕೋಟಿಯಲ್ಲಿ, ಭಾರತೀಯ ವಾಯು ಸೇನೆಯ ಮಿರಾಜ್ 2000 ಯುದ್ಧ ವಿಮಾನ ಬಳಸಿ ದಾಳಿ ಮಾಡಲಾಗಿದೆ.     …

Read More

ಚಿಕ್ಕನಾಯಕನಹಳ್ಳಿ :       ರಾಷ್ಟ್ರೀಯ ಹೆದ್ದಾರಿ 150 ಎ ಕೆ.ಬಿ.ಕ್ರಾಸ್‍ನಿಂದ ಹುಳಿಯಾರು ರಸ್ತೆಯ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸರ್ಕಾರದ ಶಿಷ್ಟಾಚಾರವನ್ನು ಉಲ್ಲಂಘನೆಯಾಗಿದೆ ಎಂದು ತಾಲ್ಲೂಕು ಬಿ.ಜೆ.ಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಜಾಗೃತಗೊಂಡ ಪೋಲಿಸರು ಪ್ರತಿಭಟನೆಗೆ ಮುನ್ನವೇ 37 ಮಂದಿ ಬಂಧಿಸುವಲ್ಲಿ ಯಶಸ್ವಿಯಾಗಿ ಕಾಮಗಾರಿಯ ಪೂಜೆಗೆ ಅನುಮಾಡಿಕೊಟ್ಟರು.       ಪಟ್ಟಣದ ನೆಹರು ವೃತ್ತದಲ್ಲಿ ಕೇಂದ್ರ ಸರ್ಕಾರ ರಸ್ತೆ ಅಭಿವೃದ್ದಿ ಕಾಮಗಾರಿಗೆ 255ಕೋಟಿ ಕಾಮಗಾರಿಯನ್ನು ಎಸ್.ಪಿ.ಮುದ್ದಹನುಮೇಗೌಡರು ಶಂಕುಸ್ಥಾಪನೆಗೆ ಆಗಮಿಸಿದ ಸಂದರ್ಭದಲ್ಲಿ ಬಿ.,ಜೆ.ಪಿ ಕಾರ್ಯಕರ್ತರು ಸಂಸದರಿಗೆ ಮತ್ತು ಮೈತ್ರಿ ಸರ್ಕಾರಕ್ಕೆ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಲು ಮುಂದಾದರು.       ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಹೆಚ್.ಆರ್.ಶಶಿಧರ್ ಮಾತನಾಡಿ ಕೇಂಧ್ರ ಬಿ.ಜೆ.ಪಿ ಸರ್ಕಾರ ರಸ್ತೆ ಅಭಿವೃದ್ದಿಗೆ ಹಣ ನೀಡಿದ್ದು, ತಾಲ್ಲೂಕಿನ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ ಶಾಸಕರಿದ್ದು, ಸರ್ಕಾರಿ ಕಾರ್ಯಕ್ರಮವಾದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪೂಜೆಗೆ ಶಾಸಕರನ್ನು ಆಹ್ವಾನ ನೀಡದೇ ಇರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದೇವೆ ಎಂದು…

Read More

ಚಿಕ್ಕನಾಯಕನಹಳ್ಳಿ:       ಹುಳಿಯಾರು, ಕಂದಿಕೆರೆ, ಶೆಟ್ಟಿಕೆರೆಗಳಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಿಸಲು ತಲಾ 25 ಲಕ್ಷ ರೂ. ಮಂಜೂರಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.        ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಮಟ್ಟದ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಜನಾಂಗಕ್ಕೆ ಮನೆಗಳನ್ನು ನಿರ್ಮಿಸಲು ನಿವೇಶನದ ಕೊರತೆ ಇರುವುದರಿಂದ, ಹುಳಿಯಾರು ಹಾಗೂ ಕೆಂಕೆರೆ ಗ್ರಾಮಗಳಲ್ಲಿ ಒಬ್ಬರಿಗೆ ಒಂದು ಮನೆ ಕಟ್ಟಿಕೊಡುವ ಬದಲು ಕೆಳಮನೆ ಹಾಗೂ ಮೇಲಂತಸ್ತಿನ ಮನೆ ನಿರ್ಮಿಸಲು ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಮಾತುಕತೆ ನಡೆಸಿದ್ದೇನೆ ಎಂದರು.       ಡಿಎಸ್‍ಎಸ್ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ಸರ್ಕಾರ ಎಸ್.ಸಿ, ಎಸ್.ಟಿ ಜನಾಂಗಕ್ಕೆ ಶೇ.22.75% ರ ಅನುನಾನದಲ್ಲಿ ಶಿಕ್ಷಣಕ್ಕೆ ವೈಯಕ್ತಿಕವಾಗಿ ಹಾಗೂ ಸಾಮಾಜಿಕ ಕಾರ್ಯಗಳಿಗೆ ಮೀಸಲಿಟ್ಟಿರುವ ಹಣವನ್ನು ಸರಿಯಾಗಿ ಬಳಸಿ ಎಂದು ಸಲಹೆ ನೀಡಿದರು.      …

Read More