Author: News Desk Benkiyabale

ಕೊರಟಗೆರೆ:       ಹಜರತ್ ಟಿಪ್ಪುಸುಲ್ತಾನ್ ಜಯಂತಿಯನ್ನು ತಾಲೂಕು ಆಡಳಿತವತಿಯಿಂದ ನ.10 ರಂದು ಆಚರಿಸಲು ಪ್ರತಿಯೊಬ್ಬರ ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ನಾಗರಾಜು ತಿಳಿಸಿದ್ದಾರೆ.       ಪಟ್ಟಣದ ತಹಶೀಲ್ದಾರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಟಿಪ್ಪುಸುಲ್ತಾನ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.       ಟಿಪ್ಪು ಜಯಂತಿ ಒಂದು ಸಮುದಾಯಕ್ಕೆ ಮೀಸಲಾಗುವುದು ಬೇಡ, ಎಲ್ಲಾ ಸಮುದಾಯದವರು ಕೂಡಿ ಸೌಹಾರ್ದತೆಯಿಂದ ಜಯಂತಿಯನ್ನು ಆಚರಿಸೋಣ, ನ.10 ರಂದು ಬೆಳಿಗ್ಗೆ 10 ಗಂಟೆಗೆ ಹಳೆ ಪೊಲೀಸ್ ಠಾಣೆಯ ಎದುರಿನಲ್ಲಿರುವ ತಾ.ಪಂ. ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಮಾತ್ರನಡೆಯುತ್ತದೆ, ಟಿಪ್ಪು ಸುಲ್ತಾನ್ ಬಗ್ಗೆ ವಿಶೇಷ ಉಪನ್ಯಾಸವನ್ನು ಸಂಪನ್ನೂಲ ವ್ಯಕ್ತಿಯಿಂದ ನೀಡಲಾಗುವುದು ಕಾರ್ಯಕ್ರಮದಲ್ಲಿ ವಿವಿಧ ಚುನಾಯಿತ ಪ್ರತಿನಿಧಿಗಳು, ಗಣ್ಯರು, ಇಲಾಖಾ ಆಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು.        ಪಿಎಸೈ ಮಂಜುನಾಥ್ ಮಾತನಾಡಿ ಸರಕಾರದ ಆದೇಶದಂತೆ ಸರಕಾರಿ ಕಟ್ಟಡದಲ್ಲೆ ಸಮಾರಂಭ ನಡೆಯಲಿದ್ದು ಯಾವುದೇ ಡಿಜೆಯಂತ ದ್ವನಿವರ್ಧಕ, ಮೆರವಣಿಗೆ ಮತ್ತು ಟಿಪ್ಪುವಿನ ಬಗ್ಗೆ…

Read More

ತಿಪಟೂರು:       ಕನ್ನಡ ಮಾಸದಲ್ಲಿ ಟಿಪ್ಪು ಜಯಂತಿ ಬರುವುದು ಅವರು ಕನ್ನಡ ಭಾಷೆಯಲ್ಲಿ ಮೂಡಿಸಿದ ಛಾಪಿಗೆ ಸಾಕ್ಷಿಯಾಗಿದ್ದು, ಟಿಪ್ಪು ಕನ್ನಡದಲ್ಲಿ  ವಿಚಾರ ಮಂಡಿಸಿದ ಖ್ಯಾತಿ ಪಡೆದಿದ್ದರು. ಅಂತಹವರ ಜಯಂತಿಯನ್ನು ವೈಭವದಿಂದ ನೆರವೇರಿಸಬೇಕೆಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರೂ ಆಗಿರುವ ತಹಶೀಲ್ದಾರ್ ಡಾ. ವಿ. ಮಂಜುನಾಥ್ ಹೇಳಿದರು.       ನಗರದ ತಾಲ್ಲೂಕು ಕಛೇರಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾವೈಕ್ಯತೆಯ ಸಮಾನತೆಗೆ ಸಾಕ್ಷಿ ಆಗಿದ್ದ ಮೈಸೂರಿನ ಹುಲಿ ಎಂದೇ ಖ್ಯಾತಿ ಹೊಂದಿದ್ದ ಹಜರತ್ ಟಿಪ್ಪುಸುಲ್ತಾನ್ ರ ಜಯಂತಿಯನ್ನು ಗೌರವಯುತವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ. ಜಯಂತಿಯಂದು ವಿಶೇಷ ವೇಷ, ಭೂಷಣದೊಂದಿಗೆ ಟಿಪ್ಪು ರವರ ವಿಚಾರಧಾರೆ, ಮತ್ತು ಕೊಡುಗೆಗಳ ಬಗ್ಗೆ ವಿಶ್ಲೇಷಣೆ ಮಾಡುವ ವೇದಿಕೆ ನಿರ್ಮಾಣವಾಗಬೇಕು. ಸರ್ಕಾರದ ಆದೇಶದಂತೆ ಟಿಪ್ಪು ಜಯಂತಿಯನ್ನು ಆಚರಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ನ.10ರಂದು ನಿಗಧಿ ಆಗಿರುವ ಟಿಪ್ಪು ಜಯಂತಿಯನ್ನು ವೈಭವ ಮತ್ತು…

Read More

ರಾಯಚೂರು:       ಈವರೆಗೆ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ 10 ಸಾವಿರ ಮೆಗಾ ವ್ಯಾಟ್ ಗಡಿ ದಾಟಿತ್ತು. ಆದರೆ ನ.6ರಂದು ವಿದ್ಯುತ್ ಬೇಡಿಕೆ 11,052 ಮೆಗಾ ವ್ಯಾಟ್ ತಲುಪಿರುವುದು ಈವರೆಗಿನ ದಾಖಲೆಯಾಗಿದೆ.       ಈಗಾಗಲೇ ಕಲ್ಲಿದ್ದಲು ಕೊರತೆಯಿಂದ ಬಳಲುತ್ತಿರುವ ಮುಚ್ಚುವ ಹಂತದಲ್ಲಿರುವ ಶಾಖೋತ್ಪನ್ನ ಘಟಕಗಳಿಗೆ ಇದು ದೊಡ್ಡ ಹೊಡೆತವೆಂದೇ ಹೇಳಬಹುದು. ಅದರಲ್ಲೂ ಅಕ್ಟೋಬರ್ ಅಂತ್ಯ ನವೆಂಬರ್ ಆರಂಭದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.       ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ 10,888 ಮೆಗಾ ವ್ಯಾಟ್ ಬೇಡಿಕಯೇ ಅತ್ಯಂತ ಗರಿಷ್ಠ ಮಟ್ಟದ್ದಾಗಿತ್ತು. ಈ ಸಾಲಿನಲ್ಲಿ ಚಳಿಗಾಲದಲ್ಲಿ ಹಗಲಿನಲ್ಲೇ ಬೇಡಿಕೆ 10 ಸಾವಿರ ಮೆಗಾ ವ್ಯಾಟ್ ಗಡಿ ದಾಟುತ್ತಿರುವುದು ಕೆಪಿಸಿಗೆ ತಲೆ ನೋವಾಗಿ ಪರಿಣಮಿಸಿದೆ.       ದೀಪಾವಳಿ ಹಿನ್ನೆಲೆಯಲ್ಲಿ ವಿದ್ಯುತ್ ಅಲಂಕಾರ ಮಾಡಿರುವ ಕಾರಣಕ್ಕೆ ವಾಣಿಜ್ಯ ಬಳಕೆ ಮತ್ತು ಗೃಹ ಬಳಕೆ ಬೇಡಿಕೆಯಲ್ಲಿ ಹೆಚ್ಚಳವಾಗಿ ನವೆಂಬರ್ 6ರ ಬೆಳಗ್ಗೆ 10.45ಕ್ಕೆ ಗರಿಷ್ಠ 11.052 ಮಗೆ ವ್ಯಾಟ್ ಬೇಡಿಕೆ…

Read More

ಬೆಂಗಳೂರು:        ಮುಂದಿನ ಲೋಕಸಭೆಗೆ ದಿಕ್ಸೂಚಿ ಎಂದೇ ಹೇಳಲಾಗಿದ್ದ, ದೋಸ್ತಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎಂದೇ ಬಿಂಬಿಸಲ್ಪಟ್ಟಿದ್ದ ಐದು ಕ್ಷೇತ್ರಗಳ ಉಪ ಸಮರದಲ್ಲಿ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಕ್ಕಿದೆ. ರಾಮನಗರ (ವಿಧಾನಸಭೆ) ಅನಿತಾ ಕುಮಾರಸ್ವಾಮಿ (ಜೆಡಿಎಸ್​) – 1,25,043 ಬಿಜೆಪಿ – 15,906 ಅಂತರ – 10,9137 ಜಮಖಂಡಿ (ವಿಧಾನಸಭೆ) ಆನಂದ್​ ನ್ಯಾಮಗೌಡ (ಕಾಂಗ್ರೆಸ್​) – 97,017 ಶ್ರೀಕಾಂತ ಕುಲಕರ್ಣ (ಬಿಜೆಪಿ) – 57,537 ಅಂತರ – 39,480 ಮಂಡ್ಯ (ಲೋಕಸಭೆ)  ಶಿವರಾಮೇಗೌಡ (ಜೆಡಿಎಸ್)- 5,69,347 ಸಿದ್ದರಾಮಯ್ಯ (ಬಿಜೆಪಿ )- 2,44,404 ನೋಟಾ-15,478 ಅಂತರ – 324943 ಶಿವಮೊಗ್ಗ (ಲೋಕಸಭೆ) ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ 52,148 ಮತಗಳಿಂದ ಗೆಲುವು ಸಾಧಿಸಿದ ಬಿ.ವೈ.ರಾಘವೇಂದ್ರ. ರಾಘವೇಂದ್ರ (ಬಿಜೆಪಿ) – 5,43,306 ಮಧು ಬಂಗಾರಪ್ಪ (ಜೆಡಿಎಸ್) 4,91,158 ಮಹಿಮಾಪಟೇಲ್ (ಜೆಡಿಯು) 8,713 ನೋಟಾ – 10,687 ಅಂತರ- 52,148 ಬಳ್ಳಾರಿ (ಲೋಕಸಭೆ) ವಿ.ಎಸ್​ ಉಗ್ರಪ್ಪ (ಕಾಂಗ್ರೆಸ್​) – 6,28,365 ಜೆ.…

Read More

       ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ದೇವರುಗಳ ಉಸ್ತವ ಮತ್ತು ಜಾತ್ರೆಗಳ ಸಮಯದಲ್ಲಿ ಸೋಮಗಳ ಮುಖವಾಡಗಳನ್ನು ಧರಿಸಿಕೊಂಡು ಕುಣಿಯುವ ಜಾನಪದ ಕಲೆಯು ಆಚರಣೆಯಲ್ಲಿದೆ. ಇದನ್ನು ‘ಸೋಮನ ಕುಣಿತ’ ಎಂದು ಕರೆಯಲಾಗುತ್ತದೆ.       ಕೇವಲ ದೇವರುಗಳ ಮೆರವಣಿಗೆಗಳಿಗೆ ಮಾತ್ರ ಸೀಮಿತಗೊಂಡಿದ್ದ ಸೋಮನ ಕುಣಿತವನ್ನು ಆಧುನಿಕ ರಂಗದ ಮೇಲೆ ತರುವಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ದಂಡಿನಶಿವರದ ಡಿ. ಎಸ್. ಗಂಗಾಧರಗೌಡರ ತಂಡ ಯಶಸ್ವಿಯಾಗಿದೆ.       ಈ ಜಾನಪದ ಕಲೆಗೆ ಮರುಜೀವ ನೀಡಿ,ರಾಜ್ಯದಿಂದ ರಾಸ್ಟ್ರ ಮಟ್ಟಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈ ತಂಡಕ್ಕೆ ಸಲ್ಲುತ್ತದೆ. ಕಳೆದ ಮೂವತ್ತು ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದ ಈ ತಂಡ ಸಾವಿರಾರು ಪ್ರದರ್ಶನ ನೀಡುತ್ತಾ ಬಂದಿದ್ದು, ತನ್ನ ಬೆಳ್ಳಿ ಹಬ್ಬ ಆಚರಿಸಿಕೊಂಡು ಇದೀಗ ಸುವರ್ಣ ಹಬ್ಬದ ಸಡಗರದ ಹೊಸ್ತಿಲಲ್ಲಿದೆ.       ಹದಿನೈದು ಜನರಿಂದ ಕೊಡಿರುವ ಈ ಸೋಮನ ತಂಡದ ಕಲಾವಿದರು ಸೋಮಗಳ ಮುಖವಾಡಗಳನ್ನು ಧರಿಸಿಕೊಂಡು ಹಿನ್ನೆಲೆ ವಾದ್ಯದ ತಾಳಕ್ಕೆ…

Read More

ಹಾವೇರಿ:       ಗೋವಾ ಪ್ರವಾಸ ಮುಗಿಸಿ  ಹಿಂದಿರುಗುತ್ತಿದ್ದ ವೇಳೆ   ಕಾರು ಪಲ್ಟಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ಹೊರವಲಯದ ಆರ್​ಟಿಒ ಕಚೇರಿ ಹಿಂಭಾಗದ ಬೈಪಾಸ್​ನಲ್ಲಿ ನಡೆದಿದೆ.       ಮೃತರನ್ನು ನಿತಿನ್​ (22), ಅರ್ಜುನ್​ (22) ಎಂದು ಗುರುತಿಸಲಾಗಿದೆ. ನಿತಿನ್​ ಹರಿಹರ ಮೂಲದವರು ಹಾಗೂ ಅರ್ಜುನ್​ ಬೆಂಗಳೂರಿನವರು. ಇವರಿಬ್ಬರು ಸೇರಿ ಒಟ್ಟು 7 ಇಂಜಿನಿಯರ್​ ವಿದ್ಯಾರ್ಥಿಗಳು ಮಹೀಂದ್ರಾ ಕ್ವಾಂಟೋ ಕಾರಿನಲ್ಲಿ ಗೋವಾ ಪ್ರವಾಸಕ್ಕೆ ಹೋಗಿ ಬೆಂಗಳೂರಿಗೆ ವಾಪಸ್​ ಆಗುತ್ತಿದ್ದರು. ಹಾವೇರಿ ಬಳಿ ಬರುತ್ತಿದ್ದಂತೆ ಕಾರು ಸಿನಿಮೀಯ ರೀತಿಯಲ್ಲಿ ಪಲ್ಟಿಯಾಗಿ 50 ಮೀಟರ್​ಗಳಷ್ಟು ದೂರ ಹೋಗಿ ಬಿದ್ದಿದೆ. ಗಾಯಗೊಂಡ ಐವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Read More

ಶ್ರೀನಗರ:        ತಡ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಹಿಝ್‌ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರು ಶನಿವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಗೆ ಬಲಿಯಾಗಿದ್ದಾರೆ.        ಖುಡ್ಪೋರಾದಲ್ಲಿ ಭಯೋತ್ಪಾದಕರು ಅಡಗಿದ್ದಾರೆಂದು ದೊರೆತ ವರ್ತಮಾನದ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿತ್ತು.       ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಆಗ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಇಬ್ಬರು ಭಯೋತ್ಪಾದಕರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಇಬ್ಬರು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳನ್ನು ಗುರಿಯಗಿಸಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರು ತನ್ನ ಸಾವನ್ನು ತಾವೇ ತಂದುಕೊಂಡಿದ್ದಾರೆ.       ಮೃತಪಟ್ಟವರನ್ನು ಮುಹಮ್ಮದ್ ಇರ್ಫಾನ್ ಬಟ್ ಮತ್ತು ಶಾಹೀದ್ ಮಿರ್ ಎಂದು ತಿಳಿದು ಬಂದಿದೆ. ಇವರು ಕಳೆದ ವರ್ಷ ಉಗ್ರ ಸಂಘನೆಗೆ ಸೇರಿದ್ದರು…

Read More

ಬೆಂಗಳೂರು :       5 ಕ್ಷೇತ್ರಗಳ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. 3 ಲೋಕಸಭಾ ಕ್ಷೇತ್ರ ಮತ್ತು 2 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 65.57ರಷ್ಟು ಮತದಾನ ನಡೆದಿದೆ.       ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನವೆಂಬರ್ 3ರ ಶನಿವಾರ ನಡೆಯಿತು. ಶಾಂತಿಯುತವಾಗಿ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.       ಜಮಖಂಡಿಯಲ್ಲಿ ಅತಿ ಹೆಚ್ಚು ಅಂದರೆ 81.58 ಮತ್ತು ಮಂಡ್ಯದಲ್ಲಿ ಅತಿ ಕಡಿಮೆ ಎಂದರೆ 53.93 ರಷ್ಟು ಮತದಾನವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಈಗ ಯಾರು ಗೆಲ್ಲುತ್ತಾರೆ?, ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ? ಎಂದು ಲೆಕ್ಕಾಚಾರ ಆರಂಭವಾಗಿದೆ. ಮತದಾನದ ವಿವರ : ಜಮಖಂಡಿ ವಿಧಾನಸಭಾ ಕ್ಷೇತ್ರ – 81.58  ರಾಮನಗರ ವಿಧಾನಸಭಾ ಕ್ಷೇತ್ರ – 73.71 ಬಳ್ಳಾರಿ ಲೋಕಸಭಾ ಕ್ಷೇತ್ರ 63.85 ಶಿವಮೊಗ್ಗ ಲೋಕಸಭಾ ಕ್ಷೇತ್ರ 61.05 ಮಂಡ್ಯ ಲೋಕಸಭಾ…

Read More

ಲಕ್ನೋ:       ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಶ್ರೀರಾಮಚಂದ್ರನ ಪ್ರತಿಮೆ ಸ್ಥಾಪಿಸಲು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ.       ಸುಮಾರು 151 ಮೀಟರ್​ ಎತ್ತರದ ಪ್ರತಿಮೆ ನಿರ್ಮಾಣ ಮಾಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಹೇಳಿದ್ದಾರೆ. ಸಂತ ತುಳಸೀದಾಸ್ ಘಾಟ್ ಬಳಿ ಸುಮಾರು 330 ಕೋಟಿ ರು ವೆಚ್ಚದಲ್ಲಿ 151 ಮೀಟರ್ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ, ದೀಪಾವಳಿ ಸಂದರ್ಭದಲ್ಲಿ ಈ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಅಯೋಧ್ಯ ನಗರದ ಮೇಯರ್ ಋಷಿಕೇಶ್ ಉಪಾಧ್ಯಾಯ್ ಅವರು ಹೇಳಿದ್ದಾರೆ.       ‘ಈ ಬಾರಿ ದೀಪವಾಳಿಗೆ ರಾಮನಿಗಾಗಿ ದೀಪ ಬೆಳಗುತ್ತೇವೆ. ಕೆಲಸ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ದೀಪಾವಳಿ ನಂತರ ಈ ಕಾರ್ಯ ಆರಂಭವಾಗಲಿದೆ,” ಎಂದು ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.    

Read More

ತಿಪಟೂರು :       ತಾಲ್ಲೂಕು ಆಡಳಿತ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಲ್ಲಿನ ಶಾಸಕರು ಬಿಜೆಪಿ ಕಾರ್ಯಕರ್ತರಿಗೆ ಹಾಗೂ ತಮ್ಮ ಹಿಂಬಾಲಕರಿಗೆ ನೀಡಿದ್ದು, ಪ್ರಶಸ್ತಿ ಆಯ್ಕೆಯಲ್ಲಿ ಸರಿಯಾದ ಮಾನದಂಡ ಬಳಕೆಯಾಗಿಲ್ಲ ಎಂದು ಜಯ ಕರ್ನಾಟಕ ಸಂಘಟನೆ ತಾ. ಅಧ್ಯಕ್ಷ ಬಿ.ಟಿ. ಕುಮಾರ್ ಗಂಭೀರ ಆರೋಪ ಮಾಡಿದರು.       ಈ ಸಂಬಂಧ ನಗರದಲ್ಲಿ ಗುರುವಾರ ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿ ಎಲ್ಲಾ ಕ್ಷೇತ್ರಗಳನ್ನು ಗುರುತಿಸಿ ತಾಲ್ಲೂಕು ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಆದರೆ ಈ ಬಾರಿ ಕ್ರೀಡೆ, ಪತ್ರಿಕೋದ್ಯಮ, ವೈದ್ಯಕೀಯ, ಕನ್ನಡಪರ ಹೋರಾಟಗಾರ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಬಿಟ್ಟು ಕೇವಲ ಜಾತಿ ರಾಜಕಾರಣದ ಆಧಾರದ ಮೇಲೆ ತಾ. ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಆಯ್ಕೆ ಸಂದರ್ಭದಲ್ಲಿ ಶಾಸಕರು ತಮಗೆ ಬೇಕಾದವರ ಹೆಸರನ್ನು ಸೇರಿಸಿ ಪ್ರಶಸ್ತಿ ನೀಡಲು ಸಹಕರಿಸಿದ್ದಾರೆ. ಪ್ರಶಸ್ತಿ ಪಡೆದವರು ಬಹುತೇಕ ಶಾಸಕರ ಹಿಂಬಾಲಕರಾಗಿದ್ದಾರೆ. ಶಾಸಕರೇ ಸಾಧನೆ ಮಾಡದ ಹಾಗೂ…

Read More