ತುಮಕೂರು: ಸಮಾಜದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಬಂಜಾರ ಜನಾಂಗ ಹಿಂದುಳಿದಿದ್ದು, ಇವರ ಅಭಿವೃದ್ಧಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಉಪ ವಿಭಾಗಾಧಿಕಾರಿ ಶಿವಕುಮಾರ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಬಂಜಾರ(ಲಂಬಾಣಿ) ಸೇವಾಲಾಲ್ ಸೇವಾ ಸಂಘಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂತ ಸೇವಾಲಾಲ್ ಕಾಡಿನಲ್ಲಿರುವ ಬಂಜಾರ ಜನಾಂಗಕ್ಕೆ ನಾಗರಿಕತೆಯನ್ನು ಪರಿಚಯಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು. ಜಿಲ್ಲಾ ಬಂಜಾರ(ಲಂಬಾಣಿ) ಸೇವಾಲಾಲ್ ಸೇವಾ ಸಂಘದ ಕಾರ್ಯಧ್ಯಕ್ಷ ಮಾತನಾಡಿ ಸಂತ ಸೇವಾಲಾಲ್ ಅವರು ಪ್ರತಿಪಾದಿಸಿದ ಅಹಿಂಸಾ ಮಾರ್ಗ ನಾವೆಲ್ಲಾ ಅನುಸರಿಸಬೇಕು. ಪುರಾತನವಾಗಿರುವ ಬಂಜಾರ ಜನಾಂಗ ಸುಮಾರು 17ನೇ ಶತಮಾನದಿಂದ ಹಲವಾರು ದೇಶಗಳಲ್ಲಿ ನೆಲಸಿತ್ತು. ತನ್ನದೇ ಆದ ವಿಶಿಷ್ಟ…
Author: News Desk Benkiyabale
ತುಮಕೂರು: ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳ ಸಹಯೋಗದಲ್ಲಿ ಫೆಬ್ರುವರಿ 16ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತುಮಕೂರು-ಚಿತ್ರದುರ್ಗ ಜಿಲ್ಲೆಗಳ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ತಿಳಿಸಿದ್ದಾರೆ. ಕಾರ್ಯಕ್ರಮಲ್ಲಿ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗಸ್ವಾಮಿಗಳು ದಿವ್ಯಸಾನಿಧ್ಯವಹಿಸಲಿದ್ದಾರೆ. ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ.ಪರಮೇಶ್ವರ ನೆರವೇರಿಸುವರು. ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆವಹಿಸುವರು. ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಣ್ಣ ಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಮುಜರಾಯಿ ಇಲಾಖಾ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುನಿರತ್ನ ಘನ ಉಪಸ್ಥಿತಿಯಲ್ಲಿರುವರು. ಜಿಲ್ಲಾ…
ತುಮಕೂರು: ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಶಾಲೆಗಳಿಗೆ ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಭೆಗೆ ಅಗತ್ಯ ಮಾಹಿತಿ ನೀಡಬೇಕಾಗಿದ್ದ ಇಂಜಿನಿಯರ್ ಗೈರು ಹಾಜರಾಗಿದ್ದರಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಜಿಲ್ಲಾ ಪಂಚಾಯತ್ ಮತ್ತು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಾ|| ಜಿ.ಸಿ ನವ್ಯಬಾಬು ಸೂಚನೆ ನೀಡಿದರು. ಜಿಲ್ಲಾ ಪೊಂಚಾಯತಿಯಲ್ಲಿಂದು ಜರುಗಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ 3ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆರೋಗ್ಯ ಇಲಾಖೆಯಲ್ಲಿರುವ ವೈದ್ಯರ ಕೊರತೆ, ಪ್ರಾಥಮಿಕ ಆರೋಗ್ಯ ಕೇಂದ್ರ/ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ, ಸಿಸಿ ಕ್ಯಾಮೆರಾ ಅಳವಡಿಕೆಯ ಬಗ್ಗೆ ಕ್ರಮ ಕೈಗೊಳ್ಳಲು ಈಗಾಗಲೇ ಸಮಿತಿ ರಚಿಸಲಾಗಿದೆ. ಆರೋಗ್ಯ ಇಲಾಖಾ ಕಟ್ಟಗಳ ದುರಸ್ಥಿ ಕಾಮಗಾರಿ ಹಾಗೂ ಔಷಧಿಗಳ ದಾಸ್ತಾನು ಬಗ್ಗೆ ಮಾಹಿತಿ ಪಡೆದು ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಿಕ್ಷಣ ಇಲಾಖೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ…
ನಿನ್ನೆ ಜಮ್ಮು ಕಾಶ್ಮೀರದ ಪುಲುವಾಮಾ ಜಿಲ್ಲೆಯಲ್ಲಿ ನಡೆದಿರುವ ಘಟನೆಯನ್ನು ಬಹಳ ಬಲವಾಗಿ ಖಂಡಿಸುತ್ತೇನೆ, ಇಂತಹ ಹೀನ ನೀಚ ಕೃತ್ಯ ಮಾಡುವ ಯಾವೊಬ್ಬನೇ ಆಗಿರಲಿ ಅವರಿಗೆ ತಕ್ಕ ಪಾಠ ನಮ್ಮ ಸೇನೆ ಕಲಿಸಬೇಕು, ಸೇರಿಗೆ ಸವ್ವಾಸೇರು ಎಂಬಂತೆ ಒಂದು ತಲೆಗೆ ಹತ್ತು ತಲೆಗಳನ್ನು ತರಬೇಕು ಇದು ನನ್ನ ಅಪೇಕ್ಷೆ ಮಾನ್ಯ ಪ್ರಧಾನಿಗಳುನನಗೆ ಅನುಮತಿ ಕೊಟ್ಟು ಕೋವಿ ಕೊಡಿ ದೇಶದ ರಕ್ಷಣೆಗಾಗಿ ಭಯೋತ್ಪಾದಕರ ರುಂಡ ಚೆಂಡಾಡುವೆ, ದೇಶದ ರಕ್ಷಣೆಗಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದ ಎಂದು ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ದಿ ನಿಗಮದ ಮಾಜೀ ನಿರ್ದೇಶಕ ಹಾಗು ಬಿಜೆಪಿರಾಜ್ಯ ಕಾರ್ಯಕಾರಿಣಿ ಸದಸ್ಯಪ್ರಭಾಕರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಂಚಾಬಿನ ಕಾಂಗ್ರೇಸ್ ಸಚಿವ ನವಜೋತಸಿಂಗ್ ಸಿದ್ದು ಇವನೊಬ್ಬ ದೇಶದ್ರೋಹಿ ಪಾಕಿಸ್ಥಾನದ ಬಿಲಾಲನ ಮೊಮ್ಮಗ ಆಡಿದ ಹಾಗೆ ಆಡುತ್ತಾನೆ, ನಿನ್ನೆಯ ಘಟನೆಗೆ ಇಡೀ ಪಾಕಿಸ್ತಾನವನ್ನು ದೂರುವುದು ಸರಿಯಲ್ಲ ಎಂದಿರುವ ಇವನ ರಕ್ಷಣೆಗೆ ನೀಡಿರುವ ನಮ್ಮ ಭದ್ರತಾ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ…
ತುಮಕೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕೋನ ವಂಶಿ ಕೃಷ್ಣ ರವರು ತುಮಕೂರು ನಗರವ್ಯಾಪ್ತಿಯಲ್ಲಿ ಬರುವ ಎಲ್ಲಾ ಠಾಣೆಗಳಿಗೆ 13-2-2019 ರ ತಡ ರಾತ್ರಿ ದಿಢೀರ್ ಬೇಟಿ ನೀಡಿ, ಅಲ್ಲಿಯ ಪರಿಸ್ಥಿತಿ ಕಂಡು ದಂಗಾಗಿ ಹೋಗಿದ್ದಾರೆ. ಹೌದು ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಪೊಲೀಸ್ ಠಾಣೆಗೆ ಬೀಗ ಜಡಿದು ಅಲ್ಲಿಯ ಸಿಬ್ಬಂದಿ ಮಲಗಿಬಿಟ್ಟಿದ್ದರು ಇದನ್ನು ಗಮನಿಸಿದ ಮಾನ್ಯ ಎಸ್ಪಿ ಸಾಹೇಬರಿಗೆ ಮಾತುಗಳು ಬಾರದಾಗಿದ್ದವು. ಇನ್ನು ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ಬಾಗಿಲು ತೆರೆದು ಅಲ್ಲಿಯ ಸಿಬ್ಬಂದಿ ಗೊರಕೆ ಹೊಡೆಯುತ್ತಿದ್ದರು. ಠಾಣೆಯ ಒಳಗೆ ಆಗಮಿಸಿರುವುದು ಎಸ್ಪಿ ಸಾಹೇಬರೆಂಬ ಕನಿಷ್ಟ ಪ್ರಜ್ಞೆ ಅಲ್ಲಿ ಕರ್ತವ್ಯ ದಲ್ಲಿದ್ದ ಸಿಬ್ಬಂಧಿಗಳಿಗಿರಲಿಲ್ಲ. ಪೊಲೀಸ್ ಕಂಟ್ರೋಲ್ ರೂಮ್ ಗೆ ಕಾಲ್ ಕೊಟ್ಟರೆ ಅದನ್ನು ಸ್ವೀಕರಿಸುವ ಸೌಜನ್ಯ ಅಲ್ಲಿಯ ಸಿಬ್ಬಂದಿಗಿರಲಿಲ್ಲ ಅವರೂ ಸಹ ಮಲಗಿಬಿಟ್ಟಿದ್ದರು.ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯ ಸಿಬ್ಬಂದಿ ಮೈಮರೆತು ನಿದ್ದೆಯಲ್ಲಿದ್ದಾರೆಂದರೆ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಆ ದೇವರೇ ಕಾಪಾಡಬೇಕು. …
ಗುಬ್ಬಿ: ಅಕ್ರಮವಾಗಿ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಜಿಲ್ಲಾ ಅಪರಾಧ ವಿಭಾಗ ದಾಳಿ ನಡೆಸಿದೆ. ಗುಬ್ಬಿಯ ಸುಭಾಷ್ ನಗರದಲ್ಲಿ ಮದ್ಯಾನ ಸುಮಾರು 1:30 ಗಂಟೆಯಲ್ಲಿ ಆರೋಪಿ ಮನೆ ಪಕ್ಕದ ಶೆಡ್ ಮೇಲೆ ದಾಳಿ ನಡೆದಿದ್ದು, ಆರೋಪಿ ರವಿಕುಮಾರ ಬಿನ್ ರಂಗಸ್ವಾಮಯ್ಯ ಎಂಬುವರಿಂದ 17 ಸಿಲಿಂಡರ್ ಗಳು, ಮೂರು ವೇಯಿಂಗ್ ಮಿಷನ್ ಗಳು, ಎರಡು ರೆಗ್ಯುಲೇಟರ್ ಗಳು ಹಾಗು ರೀಫಿಲ್ಲಿಂಗ್ ಪೈಪುಗಳನ್ನು ವಶಪಡಿಸಿಕೊಳ್ಳಲಾಗಿದೆ . ನಗರದಲ್ಲಿ ಸಾರ್ವಜನಿಕವಾಗಿ ವಿರೋಧಗಳ ನಡುವೆಯೂ ರಾಜಾರೋಷವಾಗಿ ಹಾಡು-ಹಗಲಲ್ಲೆ ಯಾವುದೇ ಭಯವಿಲ್ಲದೆ ಗ್ಯಾಸ್ ರೀಪಿಲ್ಲಿಂಗ್ ಮಾಡಲಾಗುತ್ತಿತ್ತು. ಗ್ಯಾಸ್ ರೀಫಿಲ್ಲ್ ಮಾಡುವಾಗ ಅನಾಹುತ ಸಂಭವಿಸಿದರೆ, ಸುತ್ತ-ಮುತ್ತ ವಾಸಿಸುತ್ತಿದ್ದ ಜನರಿಗೆ ಅನಾಹುತ ಸಂಭವಿಸುವ ಸಾದ್ಯತೆಗಳಿದ್ದು, ಇದರ ಬಗ್ಗೆ ತಲೆಕೆಡಿಸಿಕೊಳ್ಳದ ರವಿಕುಮಾರ ಹಣದ ದುರಾಸೆಗಾಗಿ ಈbರೀತಿಯ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ. ಇದರ ಮಾಹಿತಿತಿಳಿದ ಜಿಲ್ಲಾ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಕೆ ಆರ್ ರಾಘವೇಂದ್ರ ರವರು ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ…
ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಡಿಸಿರುವ ಬಜೆಟ್‍ನಲ್ಲಿ ಬಿಸಿಯೂಟ ನೌಕರರನ್ನು ಕಡೆಗಣಿಸಿರುವುದನ್ನು ಹಾಗೂ ಬಿಸಿಯೂಟ ಯೋಜನೆಯನ್ನು ಗುತ್ತಿಗೆ ನೀಡುವುದನ್ನು ವಿರೋಧಿಸಿ ತುಮಕೂರು ನಗರದಲ್ಲಿ ಬಿಸಿಯೂಟ ತಯಾರಕರು ಟೌನ್‍ಹಾಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. 2002-03ರಲ್ಲಿ ಪ್ರಾರಂಭಗೊಂಡಿರುವ ಅಕ್ಷರ ದಾಸೋಹ ಯೋಜನೆಯಡಿ ರಾಜ್ಯಾದ್ಯಂತ 1,18,000 ಬಿಸಿಯೂಟ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿ ತಿಂಗಳು 2,700, 2,600 ರೂ ನೀಡುತ್ತಿದ್ದು, ಕನಿಷ್ಠ ವೇತನ, ಇಎಸ್‍ಐ, ಪಿಎಫ್, ಗ್ರಾಜುಯಿಟಿ, ಬೋನಸ್ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿಲ್ಲ, ರಾಷ್ಟ್ರದಾದ್ಯಂತ 25ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಿಸಿಯೂಟ ಕಾರ್ಯಕರ್ತೆಯರಾಗಿ ದುಡಿಯುತ್ತಿದ್ದು, ಸರ್ಕಾರಗಳು ಅವರನ್ನು ಕಡೆಗಣಿಸಿವೆ ಎಂದು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪಿಸಿದರು. ಕಳೆದ 16 ವರ್ಷಗಳಿಂದ ಬಿಸಿಯೂಟ ಕಾರ್ಯಕರ್ತೆಯರಿಗೆ ಯಾವುದೇ ಸೌಲಭ್ಯವನ್ನು ಸರ್ಕಾರಗಳು ನೀಡುತ್ತಿಲ್ಲ, ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿದರು ಬಿಸಿಯೂಟದ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಲಿಲ್ಲ, ಬಿಸಿಯೂಟ ನೌಕರರಿಗೆ ಕನಿಷ್ಠ 10,500…
ಕೊರಟಗೆರೆ: ಶ್ರೀಕೃಷ್ಣ ಜಯಂತಿಯನ್ನು ಸರಕಾರಿ ರಜೆಯನ್ನಾಗಿ ರಾಜ್ಯ ಸರಕಾರ ಘೋಷಣೆ ಮಾಡಬೇಕು ಮತ್ತು ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಿಬೇಕು ಎಂದು ಚಿತ್ರದುರ್ಗದ ಯಾದವ ಪೀಠದ ಪೀಠಾಧ್ಯಕ್ಷಯಾದವನಂದ ಸ್ವಾಮೀಜಿ ಸರಕಾರಕ್ಕೆಒತ್ತಾಯ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊರಟಗೆರೆ ಯಾದವ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಯಾದವ ಸಮುದಾಯದ ಸಮುದಾಯ ಭವನ, ವಿದ್ಯಾರ್ಥಿ ನಿಲಯ, ದೇವಾಲಯಗಳಿಗೆ ಅನುಧಾನ ನೀಡದ ಹಿನ್ನಲೆಯಲ್ಲಿ ಕಾಮಗಾರಿಗಳು ಹಲವಾರು ವರ್ಷಗಳಿಂದ ಸ್ಥಗೀತವಾಗಿವೆ. ರಾಜ್ಯ ಸರಕಾರಕೂಡಲೇಯಾದವ ಸಮುದಾಯದ ಅಭಿವೃದ್ದಿಗೆ ಸರಕಾರದಿಂದ ವಿಶೇಷ ಅನುಧಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಯಾದವ ಸಂಘದರಾಜ್ಯಧ್ಯಕ್ಷ ಶ್ರೀನಿವಾಸ್ ಮಾತನಾಡಿ ಯಾದವ ಸಮುದಾಯಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ.ಯಾದವ ಸಮಾಜದ ಅಭಿವೃದ್ದಿಗೆ ರಾಜಕೀಯ ಮತ್ತು ಆರ್ಥಿಕವಾಗಿ ರಾಜ್ಯ ಮತ್ತುಕೇಂದ್ರ ಸರಕಾರದ ಅನುಧಾನ ಮತ್ತು ಅಭಿವೃದ್ದಿ ಶೂನ್ಯವಾಗಿದೆ. ಸಮುದಾಯದ ಪ್ರಮುಖರಿಗೆ ಸರಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು…
ತುಮಕೂರು : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಫೆಬ್ರುವರಿ 16 ಮತ್ತು 17ರಂದು ನಡೆಯಲಿರುವ ತುಮಕೂರು-ಚಿತ್ರದುರ್ಗ ಜಿಲ್ಲೆಗಳ ಬೃಹತ್ ಉದ್ಯೋಗ ಮೇಳದಲ್ಲಿ ಪ್ಲೇಸ್‍ಮೆಂಟ್ ಯೋಜನೆಗಳಿಗೆ ಭಾಗವಹಿಸಲು ಅವಕಾಶವಿಲ್ಲ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಆಯುಕ್ತೆ ಜಿ.ಸತ್ಯವತಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಮೇಳದ ಸಿದ್ಧತೆ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು, ಈಗಾಗಲೇ ಆನ್‍ಲೈನ್ ಮೂಲಕ 17,500 ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು, ನೋಂದಣಿ ಸಂಖ್ಯೆ 20,000ಕ್ಕೆ ತಲುಪುವ ಸಾಧ್ಯತೆ ಇದೆ. ಮೇಳದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗದಂತೆ ಮಳಿಗೆಗಳ ನಡುವೆ ಅಂತರವಿರುವಂತೆ ನಿರ್ಮಿಸಬೇಕು. ಉದ್ಯೋಗಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕುಡಿಯುವ ನೀರು, ಶೌಚಾಲಯ, ಮಧ್ಯಾಹ್ನದ ಭೋಜನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಮಳಿಗೆಗಳ ಬಳಿ ಮಧ್ಯಾಹ್ನದ ಹೊತ್ತಿನಲ್ಲಿ ಬಿಸಿಲು ಬೀಳದಂತೆ ನೆರಳಿನ ವ್ಯವಸ್ಥೆ ಮಾಡಬೇಕು. ಮೇಳದಲ್ಲಿ ಎರಡೂ ಜಿಲ್ಲೆಗಳ ಉದ್ಯೋಗಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯುವಂತಾಗಬೇಕು. ಯಾವುದೇ ಅಹಿತಕರ…
ತುಮಕೂರು : ಕಲಿತ ಶಾಲೆ ಋಣವ ತೀರಿಸೋಣ ಎಂಬ ಮಾತಿನಂತೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರದ ಜೊತೆಗೆ ಕೈಜೋಡಿಸುವ ಹಳೆಯ ವಿದ್ಯಾರ್ಥಿಗಳ ಸಂಘಗಳನ್ನು ಪ್ರೋತ್ಸಾಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ “ನಾ ಕಲಿತ ಶಾಲೆಯ ತೀರಿಸುವೆ ಋಣವ-ಇದು ನನ್ನ ಜವಾಬ್ದಾರಿ” ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಹಳೆಯ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳ ಕಾರ್ಯಾಗಾರ ಹಾಗೂ ವಿಶೇಷ ಸೇವೆ ಸಲ್ಲಿಸಿದ ಸಂಘದ ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿಲ್ಲ. ಇರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಕರು ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಬೇಕು ಎಂದು ತಿಳಿಸಿದರು. ಸಮಾರಂಭದಲ್ಲಿ…