Author: News Desk Benkiyabale

ತುಮಕೂರು:       ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಬಾರ್​ಗಳ ಮೇಲೆ ಮಹಾನಗರ ಪಾಲಿಕೆ ಕಮೀಷನರ್ ಭೂ ಬಾಲನ್.ಟಿರವರು ದಾಳಿ ನಡೆಸಿದ್ದಾರೆ.       ಈ ವೇಳೆ ಬಾರ್ ಮಾಲೀಕರು ಮತ್ತು ಪಾಲಿಕೆ ಕಮಿಷನರ್​ ನಡುವೆ ಮಾತಿನ ಚಕಮಕಿ ನಡೆದಿದೆ. ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆಂಬುದರ ಕುರಿತು ಖಚಿತ ಮಾಹಿತಿ ಪಡೆದ ಪಾಲಿಕೆ ಅಧಿಕಾರಿಗಳು ರಾತ್ರೋ ರಾತ್ರಿ ಕಾರ್ಯಾಚರಣೆಗಿಳಿದಿದ್ದು, ಕಮೀಷನರ್​ ನೇತೃತ್ವದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಸಿಬ್ಬಂದಿ ದಾಳಿ ನಡೆಸಿದ್ದರು. ದಾಳಿ ವೇಳೆ ಎಸ್.ಆರ್ ಬಾರ್ ಮಾಲೀಕ ಹಾಗೂ ಕಮೀಷನರ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಾರ್ ಬಾಗಿಲು ಹಾಕುವಂತೆ ಕಮೀಷನರ್ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಮಾಲೀಕ ಪ್ರತಿರೋಧ ವ್ಯಕ್ತಪಡಿಸಿದ್ದಾನೆ.        ಬಾರ್ ಮಾಲೀಕನಿಂದ 10 ಸಾವಿರ ದಂಡ ವಸೂಲಿ ಮಾಡಲಾಗಿದ್ದು, ನಗರದ ಇತರೆ ಬಾರ್​ಗಳಿಂದ 30 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. 

Read More

 ತುಮಕೂರು :       ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ರಥ ಸಪ್ತಮಿ ಅಂಗವಾಗಿ ಬೃಹತ್ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಲಾಯಿತು.       ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 5.15 ರಿಂದ 7.15ರ ವರೆಗೆ ಸೂರ್ಯ ಹುಟ್ಟಿದ ರಥಸಪ್ತಮಿ ದಿನವಾದ ಇಂದು ಸಾಮೂಹಿಕವಾಗಿ ನಡೆದ 108 ಸೂರ್ಯ ನಮಸ್ಕಾರದ ದೃಶ್ಯ ಮನಮೋಹಕವಾಗಿತ್ತು.       ನಂತರ ಮಾತನಾಡಿದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಚನ್ನಬಸಪ್ಪ, ಸೂರ್ಯ ಹುಟ್ಟಿದ ರಥಸಪ್ತಮಿ ದಿನವಾದ ಇಂದು ಉತ್ತಮ ಆರೋಗ್ಯ ಹಾಗೂ ಉತ್ತಮ ಪರಿಸರಕ್ಕಾಗಿ ಯಾವುದೇ ಲಿಂಗ ಭೇದ, ವರ್ಗ ಭೇದ ಇಲ್ಲದೆ ಯೋಗದ ಮೂಲಕ ಸೂರ್ಯ ನಮಸ್ಕಾರ ನಡೆಸಲಾಗಿದೆ ಎಂದರು.       ಸೂರ್ಯ ನಮಸ್ಕಾರ ಮಾಡುವ ಮೂಲಕ ಸಮಾಜದ ಎಲ್ಲರಿಗೂ ಉತ್ತಮ ಆರೋಗ್ಯ ಪ್ರಾಪ್ತಿಯಾಗಲಿ ಎಂಬುದೇ ನಮ್ಮ ಉದ್ದೇಶವಾಗಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ರಥಸಪ್ತಮಿ…

Read More

 ತುಮಕೂರು:       ಇಂದಿನ ಯುವಜನಾಂಗ ಮೊಬೈಲ್ ಮೋಹ ಬಿಟ್ಟು, ಕ್ರೀಡೆಯಡೆಗೆ ಮುಖಮಾಡಬೇಕು ಎಂದು ತುಮಕೂರು ವಿವಿ ಕುಲಸಚಿವ ಡಾ.ಗಂಗಾನಾಯಕ್ ತಿಳಿಸಿದರು      ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ವಿವಿ ಅಂತರ ಕಾಲೇಜು ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪುರುಷ ಹಾಗೂ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ 2018-19 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.      ಪ್ರಸ್ತುವ ಯುವಕರು ಮೊಬೈಲ್ ಮೊರೆಹೋಗಿ ಕ್ರೀಡಾಚಟುವಟಿಕೆಯ ಕ್ಷೇತ್ರದೆಡೆಗೆ ನಿರಾಸಕ್ತಿಯ ಮನೋಭಾವನೆ ತಳೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಪಠ್ಯದಂತೆ ಪಠ್ಯೇತರ ಚಟುವಟಿಕೆಗಳಡೆಗೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.       ಮನುಷ್ಯನಿಗೆ ಮಾನಸಿಕ ಆರೋಗ್ಯ ಹೇಗೆ ಮುಖ್ಯವೋ ಹಾಗೆಯೇ, ದೈಹಿಕ ಅರೋಗ್ಯವೂ ಮುಖ್ಯ. ಹಾಗಾಗಿ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕು. ಪೋಷಕರು, ಅಧ್ಯಾಪಕರು ಸಹ ಮಕ್ಕಳನ್ನು ಕ್ರೀಡಾ ಕ್ಷೇತ್ರದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.       ವಿದ್ಯಾರ್ಥಿಗಳು…

Read More

ತುಮಕೂರು:       ತುಮಕೂರು ತಾಲ್ಲೂಕು ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಜಾತ್ರಾ ಮಹೋತ್ಸವವು ಮಾರ್ಚ್ 13 ರಿಂದ 25ರವರೆಗೆ ಜರುಗಲಿದ್ದು, ಜಾತ್ರಾ ಸಮಯದಲ್ಲಿ ಭಕ್ತಾದಿಗಳಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಆರತಿ ಬಂಡೆಯಿಂದ ದೇವರಾಯನದುರ್ಗ ಗ್ರಾಮದ ರಸ್ತೆವರೆಗೂ ಇರುವ ಹಳ್ಳಗಳನ್ನು ಮುಚ್ಚಿಸಿ, ಡಾಂಬರೀಕರಣಗೊಳಿಸಿ, ರಸ್ತೆ ಬದಿಯಲ್ಲಿರುವ ಜಂಗಲ್ ಅನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.       ತಮ್ಮ ಕಚೇರಿಯಲ್ಲಿ ಸೋಮವಾರ ಜಾತ್ರಾ ಕಾರ್ಯಕ್ರಮಗಳ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದ ಅವರು ಮಾರ್ಚ್ 20ರಂದು ನಡೆಯಲಿರುವ ಶ್ರೀ ಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಾಲಯ, ತಾತ್ಕಾಲಿಕ ವಾಹನ ನಿಲ್ದಾಣ, ಬ್ಯಾರಿಕೇಡಿಂಗ್, ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಜಾತ್ರೆ ಕಾರ್ಯಕ್ರಮಗಳು ನಿರ್ವಿಘ್ನವಾಗಿ ಜರುಗಬೇಕು. ಮುಂಜಾಗ್ರತಾ ಕ್ರಮವಾಗಿ ತುರ್ತು ಚಿಕಿತ್ಸಾ ವಾಹನ, ಅಗ್ನಿಶಾಮಕ ವಾಹನದೊಂದಿಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಅಧಿಕಾರಿಗಳಿಗೆ…

Read More

ಮಧುಗಿರಿ :        ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ ಎಂದು ಡಿಡಿಪಿಐ ರವಿಶಂಕರ ರೆಡ್ಡಿ ತಿಳಿಸಿದರು.        ತಾಲೂಕಿನ ಮಿಡಿಗೇಶಿ ಸರ್ಕಾರಿ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಹೊರಹೊಮ್ಮಿಸುವ ಹೊಣೆ ಶಿಕ್ಷಕರ ಮೇಲಿದೆ. ಸರ್ಕಾರಿ ಶಾಲೆಯಲ್ಲಿ ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಇಂತಹ ಗುಣಮಟ್ಟದ ವಸ್ತು ಪ್ರದರ್ಶನವನ್ನು ಏರ್ಪಡಿಸಿರುವುದು ಶ್ಲಾಘನೀಯ ಪ್ರತಿಯೊಂದು ವಿಷಯವೂ ಕಲಿಕೆಗೆ ಪೂರಕವಾಗಿದೆ ಎಂದರು.      ವಿನೂತನ ಮಾದರಿಯ ವಸ್ತು ಪ್ರದರ್ಶನ :       ಈ ವಸ್ತು ಪ್ರದರ್ಶನದಲ್ಲಿ ವಿಜ್ಞಾನ ಶಿಕ್ಷಕಿ ಎಂ.ಎನ್. ರಜನಿ ಮಾರ್ಗದರ್ಶನದಲ್ಲಿ ಮಕ್ಕಳು ತಯಾರಿಸಿದ ನಕ್ಷತ್ರಪುಂಜ, ತಳವಿಲ್ಲದ ಬಾವಿ, ಮ್ಯಾಗ್ನೆಟಿಕ್ ಕಾರ್, ಪೆರಿಸ್ಕೋಪ್, ಟೆಲಿಸ್ಕೋಪ್, ಕೆಲಿಡೋಸ್ಕೋಪ್, ಫ್ರತಿಫಲನ ನಿಯಮ, ರಾಕೆಟ್, ಮೊಬೈಲ್ ಗೋಪುರ, ವೋಲ್ವೋಬಸ್, ಜಲಚಕ್ರ, ಹನಿ ನೀರಾವರಿ, ಸೂಕ್ಷ್ಮದರ್ಶಕ,…

Read More

 ತುಮಕೂರು:       ಸಮಾಜದಲ್ಲಿ ಹಿಂದುಳಿದ ಸವಿತಾ ಸಮಾಜದ ಜನಾಂಗಕ್ಕೆಂದು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದ್ದು ವಿಶೇಷ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ತಿಳಿಸಿದರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ನಗರ ಸವಿತಾ ಸಮಾಜ ಸಂಘಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವರ ವೃತ್ತಿಯೇ ಮುಖ್ಯವಾಗಿರುತ್ತದೆ. ಸರ್ಕಾರವು ಇಂತಹ ಜನಾಂಗಗಳಿಗೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.       ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ, ಪುರಾತನ ಕಾಲದಿಂದಲೂ ತಮ್ಮದೇ ಕಸುಬನ್ನಾಧರಿಸಿ ಜೀವನವನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ. ಮನುಷ್ಯ ಸುಂದರವಾಗಿ ಕಾಣಬೇಕೆಂದರೆ ಈ ಜನಾಂಗದಿಂದ ಮಾತ್ರ ಸಾಧ್ಯ. ಮನುಷ್ಯನಿಗೆ ನಿತ್ಯ…

Read More

ತುರುವೇಕೆರೆ:       ತಾಲೂಕಿನಾದ್ಯಾಂತ ದೇವಸ್ಥಾನಗಳಲ್ಲಿ ಕಳ್ಳತನಗಳು ಪದೇ ಪದೇ ಮರುಕಳಿಸುತ್ತಿದ್ದರೂ ಪೋಲೀಸ್ ಇಲಾಖೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಕೈಚಲ್ಲಿ ಕೂತಿದೆ ಎಂದು ಶಾಸಕ ಮಸಾಲೆಜಯರಾಮ್ ಅಸಮಾಧಾನ ವ್ಯಕ್ತಪಡಿಸಿದರು.       ತಾಲೂಕಿನ ದೇವಾಲಯಗಳಲ್ಲಿ ಸರಣಿಗಳ್ಳತನಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ ಪತ್ರಿಕಾ ಹೇಳಿಕೆ ನೀಡಿದ ಅವರು,  ತಾಲೂಕಿನಲ್ಲಿ ದಿನೇ ದಿನೇ ದೇವಾಲಯಗಳಲ್ಲಿ ಕಳ್ಳತನಗಳು ಹೆಚ್ಚಾಗುತ್ತಿದ್ದು ದೇವಾಲಯಗಳನ್ನು ಗುರಿಯಾಗಿಸಿಕೊಂಡಿರುವ ಕಳ್ಳರು ದೇವರ ಹುಂಡಿ ಹೊಡೆದು ಹಣ ದೋಚುವುದು ಹಾಗೂ ಬಂಗಾರದ ಒಡವೆಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಒಂದಿಲ್ಲೊಂದು ರೀತಿಯಲ್ಲಿ ತಾಲೂಕಿನ ಸಾರ್ವಜನಿಕರಲ್ಲಿ ಭಯ ಭೀತಿಯನ್ನು ಉಂಟುಮಾಡುವ ಹಂತಕ್ಕೆ ದೇವಾಲಯಗಳಲ್ಲಿ ಕಳ್ಳತನಗಳು ಎಗ್ಗಿಲ್ಲದೆ ಸಾಗಿದೆ ಒಂಟಿ ದೇವಾಲಯಗಳಿನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ, ಕಳ್ಳರೀಗ ಊರೊಳಗಿನ ದೇವಾಲಯಗಳಿಗೂ ಕನ್ನ ಹಾಕುವ ಹಂತಕ್ಕೆ ತಲುಪಿದ್ದಾರೆ ಯಾವುದೊ ಒಂದು ಗ್ಯಾಂಗ್ ಸರಣಿಗಳ್ಳತನಕ್ಕೆ ಇಳಿದಿರುವ ರೀತಿಯಲ್ಲಿ ದೇವಾಲಯಗಳಲ್ಲಿ ಕಳ್ಳತನ ನಡೆಯುತ್ತಿದೆ.  ಕಳೆದವಾರವಷ್ಟೇ ದಂಡಿನಶಿವರ ಪೋಲೀಸ್ ಠಾಣೆಗೆ ಕೂಗಳತೆ ದೂರದಲ್ಲಿರುವ ಹೊನ್ನಾದೇವಿ ದೇವಾಲಯದ ಬೀಗ…

Read More

ತುಮಕೂರು:       ಹ್ಯಾಟ್ರಿಕ್ ಹೀರೋ ನಟ ಶಿವರಾಜ್‍ಕುಮಾರ್ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವೈಕ್ಯರಾದ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದಿದ್ದಾರೆ.       ಶಿವರಾಜ್‍ಕುಮಾರ್ ಅವರು ಗದ್ದುಗೆ ದ್ವಾರದ ಮುಂದೆ ಕೆಲಕಾಲ ಕೂತು ನಮಸ್ಕರಿಸಿದರು. ಬಳಿಕ ಹೊಸ ಮಠಕ್ಕೆ ಬಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.         ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಶಿವಣ್ಣ, “ಶಿವಕುಮಾರ ಶ್ರೀಗಳು ದೂರವಾದಾಗ ನಾನು ವಿದೇಶದಲ್ಲಿ ಇದ್ದೆ. ಹಾಗಾಗಿ ಬರಲು ಆಗಲಿಲ್ಲ. ಶ್ರೀಗಳ ಮೇಲೆ ಪ್ರೀತಿ ಹಾಗೂ ನಂಟು ಇತ್ತು. ಹಾಗಾಗಿ ಇಂದು ಬಂದು ಗದ್ದುಗೆ ದರ್ಶನ ಪಡೆದಿದ್ದೇನೆ” ಎಂದರು. ಅಲ್ಲದೇ ನಾನು ಇನ್ನು ಮುಂದೆ ಬರುತ್ತಿರುತ್ತೇನೆ. ಶಿವಕುಮಾರ ಶ್ರೀಗಳು ಇನ್ನೂ ನಮ್ಮ ಜೊತೆಯೇ ಇದ್ದಾರೆ ಎನ್ನುವ ಫೀಲ್ ಆಗುತ್ತಿದೆ ಎಂದು ಪ್ರತಿಕ್ರಿಯಿಸಿದರು. ಈ ನಡುವೆ ಎಂದಿನಂತೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.

Read More

ಮಧುಗಿರಿ :       ಆಡಂಬರದ ಮದುವೆಗಳಿಗೆ ಇತಿಶ್ರೀ ಹಾಡಲು ಸಾಮೂಹಿಕ ವಿವಾಹಗಳು ಪ್ರೇರಣೆಯಾಗಬೇಕೆಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀಹನುಮಂತನಾಥಸ್ವಾಮೀಜಿ ತಿಳಿಸಿದರು.       ತಾಲೂಕಿನ ಗಿರೇಗೌಡನಹಳ್ಳಿಯ ಶ್ರೀ ರಂಗನಾಥಸ್ವಾಮಿದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 6 ಜೋಡಿಗಳಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, ಹಣವಂತರು, ವಿದ್ಯಾವಂತರು ಆಡಂಬರದ ಮದುವೆಗಳಿಗೆ ಮಾರು ಹೋಗದೆ ಸಾಂಪ್ರದಾಯಕ ರೀತಿಯಲ್ಲಿ ಸಾಮೂಹಿಕ ವಿವಾಹಗಳಿಗೆ ಒತ್ತು ನೀಡುವುದರಿಂದ ದುಂದು ವೆಚ್ಚ ಕಡಿಮೆಯಾಗಿ ನವ ದಂಪತಿಗಳು ಆರ್ಥಿಕವಾಗಿ ಉನ್ನತಿ ಹೊಂದಲು ಸಹಕಾರಿಯಾಗಲಿದೆ ಎಂದರು.       ನವದಂಪತಿಗಳು ಕುಟುಂಬಕ್ಕೊಂದು ಮಗು ಯೋಜನೆ ಅಳವಡಿಸಿಕೊಳ್ಳುವುದರಿಂದ ಮಕ್ಕಳನ್ನು ವಿದ್ಯಾವಂತನ್ನಾಗಿ, ಸುಸಂಸ್ಕøತರನ್ನಾಗಿ ಮಾಡಲು ಸಾಧ್ಯ. ಸರ್ಕಾರ ಕೂಡ ಸಾಮೂಹಿಕ ವಿವಾಹಕ್ಕೆ ಒತ್ತು ನೀಡುತ್ತಿದ್ದು. ಸಂಘ ಸಂಸ್ಥೆಗಳು ಸಾಮೂಹಿಕ ವಿವಾಹಗಳನ್ನು ನಡೆಸಲು ಮುಂದಾಗಬೇಕು. ಬಡವರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂತಹ ವಿವಾಹಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಬೇಕಾಗಿದೆ. ಈ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಕುಂಚಿಟಿಗ ಮಠ…

Read More

 ಬೆಂಗಳೂರು:        ಬಿಎಂಟಿಸಿ ಬಸ್​ ಮತ್ತು ಬೈಕ್​ ನಡುವೆ ಡಿಕ್ಕಿ ಸಂಭವಿಸಿ ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.       ಬಸವ, ಅವಿನಾಶ್ ಹಾಗೂ ಪ್ರದೀಪ್ ಮೃತರು. ಇಂದು ಮಧ್ಯಾಹ್ನ ಬೆಂಗಳೂರಿನ ಹೊರವಲಯದ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿಗೆರೆ ಬಳಿ‌ ಈ ಭೀಕರ ಅಪಘಾತ ಸಂಭವಿಸಿದೆ.        ಡಿಕ್ಕಿಯ ರಭಸಕ್ಕೆ ಬಸ್​ ಮತ್ತು ಬೈಕ್​ಗೆ ಬೆಂಕಿ ಹೊತ್ತಿಕೊಂಡು ಉರಿದಿವೆ. ಬಸ್​ನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್​ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಅಪಘಾತದ ಬಳಿಕ ಬಸ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.        ಮೃತದೇಹಗಳನ್ನು  ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಿಎಂಟಿಸಿ ಆಧಿಕಾರಿಗಳು, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ಧಾರೆ. ಕಗ್ಗಲೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More