ರಾಯ್ಪುರ: ಅಮ್ಮ ಐ ಲವ್ ಯೂ, ಈ ದಾಳಿಯಲ್ಲಿ ನಾನು ಸಾಯಬಹುದು ಧೈರ್ಯವಾಗಿರು ಎಂದು ನಕ್ಸಲರು ದಾಳಿ ನಡೆಸುವ ವೇಳೆ ದೂರದರ್ಶನದ ಪತ್ರಕರ್ತ ಮೊರ್ ಮುಕ್ತ ಶರ್ಮಾ ತನ್ನ ಹೆತ್ತ ತಾಯಿಗೆ ರವಾನಿಸಿದ ಸಂದೇಶವಿದು. ಛತ್ತೀಸ್ಗಡದ ದಂತೇವಾಡದಲ್ಲಿ ನಕ್ಸಲರು ನಡೆಸಿದ ಭಯಾನದ ದಾಳಿಯನ್ನು ಕಣ್ಣಾರೆ ನೋಡಿದ ದೂರದರ್ಶನದ ಪತ್ರಕರ್ತ ಸಾವು ಕಣ್ಣ ಮುಂದೆ ಇದ್ದರೂ ವಿಡಿಯೋ ಮಾಡಿ, ತಮ್ಮ ಅನುಭವ ಹಾಗೂ ತಾಯಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನಕ್ಸಲರ ಬಳಿ ಗ್ರೆೆನೇಡ್, ಸ್ಫೋಟಕ ಸಾಮಾಗ್ರಿಗಳಿವೆ. ನಾವು ನಮ್ಮ ವಾಹಿನಿಯ ಲೋಗೋ ತೋರಿಸುವ ಪ್ರಯತ್ನ ಮಾಡಿದ್ದೆವು. ಆದರೆ, ಕ್ಷಣ ಕ್ಷಣಕ್ಕೂ ಗುಂಡಿನ ದಾಳಿ ಹೆಚ್ಚಾಗುತ್ತಲೇ ಹೋಯಿತು. ಅಷ್ಟೇ ಅಲ್ಲ. ನನಗೆ ಗುಂಡೇಟು ಬಿದ್ದಿದೆ. ನಾನು ಈ ದಾಳಿಯಲ್ಲಿ ಸಾಯಲೂ ಬಹುದು. ನನಗೆ ನನ್ನ ತಾಯಿ ಎಂದರೆ, ಬಹಳ ಇಷ್ಟ. ಅಮ್ಮ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ದಾಳಿಯಲ್ಲಿ ನಾನು ಬದುಕದೇ…
Author: News Desk Benkiyabale
ತುಮಕೂರು: ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 36 ಮಂದಿ ಸಾಧಕರನ್ನು ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ. ಪ್ರಶಸ್ತಿಯನ್ನು ನವೆಂಬರ್ 1ರಂದು ಸಂಜೆ 4 ಗಂಟೆಗೆ ಗಾಜಿನಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ರಂಗಭೂಮಿ:- ಕ್ಷೇತ್ರದ ಸಾಧನೆಗಾಗಿ ತುಮಕೂರಿನ ಕುಂಭಿ ನರಸಯ್ಯ, ಜಿ.ನಂಜಪ್ಪ ಹಾಗೂ ಜಿ. ಮುರಳಿಧರ (ಮೇಕಪ್), ಕೊರಟಗೆರೆಯ ಹೆಚ್. ನಾಗರಾಜಯ್ಯ ಹಾಗೂ ಎ.ಎನ್.ಚಂದ್ರಶೇಖರ್, ಗುಬ್ಬಿ ತಾಲ್ಲೂಕಿನ ರಂಗನಾಥಪ್ಪ, ತುರುವೇಕೆರೆಯ ರಂಗರಾಜು ಪತ್ರಿಕಾರಂಗ :- ಪ್ರಜಾಪ್ರಗತಿ ದಿನಪತ್ರಿಕೆಯ ಹಿರಿಯ ವರದಿಗಾರ ಆರ್.ಎಸ್.ಐಯ್ಯರ್, ವಿಶಾಲಪ್ರಭ ದಿನ ಪತ್ರಿಕೆ ಸಂಪಾದಕ ವಿ.ವೆಂಕಟೇಶ್ ಸೊಗಡು, ಮಧುಗಿರಿಯ ಬಂಡಿಚೌಡಯ್ಯ, ಚಿಕ್ಕನಾಯಕನಹಳ್ಳಿ ಕನ್ನಡಪ್ರಭ ವರದಿಗಾರ ಹೆಚ್. ಸಿದ್ಧರಾಮಯ್ಯ ಸಾಹಿತ್ಯ ಕ್ಷೇತ್ರ :- ತುಮಕೂರಿನ ನಾಗರತ್ನ ಚಂದ್ರಪ್ಪ, ಕೆ.ಡಬ್ಲ್ಯೂ. ಅಬ್ದುಲ್ ಹಫೀಝ್ (ಅಮರ್ ಹಫೀಝ್), ಡಾ. ಬೂದಾಳ್ ನಟರಾಜ್, ಡಾ. ಜಿ.ವಿ.ಆನಂದಮೂರ್ತಿ ಸಮಾಜ ಸೇವೆ…
ಕೊರಟಗೆರೆ: ಕೌಟುಂಬಿಕ ಕಲಹದಿಂದ ಮನನೊಂದ ವ್ಯಕ್ತಿಯೊಬ್ಬ ತನ್ನ ತೋಟದ ಮನೆಯ ಮುಂದಿನ ನೀಲಗಿರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸಿರಿಗೋನಹಳ್ಳಿ ತಾಂಡದ ವಾಸಿಯಾದ ಶ್ಯಾಮನಾಯ್ಕನ ಮಗನಾದ ಪರಮೇಶನಾಯ್ಕ(27) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೃತ ಪರಮೇಶ್ ತನ್ನ ಕುಟುಂಬದಲ್ಲಿ ಕಳೆದ ನಾಲ್ಕೈದು ವಾರಗಳಿಂದ ಕೌಟುಂಬಿಕ ಕಲಹ ಉಂಟಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಮನೆಯ ಮುಂಭಾಗದ ನಿಲಗಿರಿ ಮರಕ್ಕೆ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಹಾಕಿಕೊಂಡಿರುವ ಹಿನ್ನಲೆಯ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಮುನಿರಾಜು ಮತ್ತು ಪಿಎಸೈ ಮಂಜುನಾಥ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ತಾತನ ದೂರಿನ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವಿನ ಪ್ರಕರಣ ದಾಖಲಾ
ನವದೆಹಲಿ: ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಸ್ಮರಣೆಗಾಗಿ ನಿರ್ಮಿಸಲಾಗಿರುವ ‘ಏಕತಾ ಪ್ರತಿಮೆ’ ಇಂದು ಲೋಕರ್ಪಣೆಗೊಂಡಿದೆ. ಸರ್ದಾರ್ ಜೀ ಅವರ 143ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಬುಧವಾರ ಕೆವಾಡಿಯಾ ಪಟ್ಟಣಕ್ಕೆ ಆಗಮಿಸಿದ ಪ್ರಧಾನಿ ಅವರು ವೇದಿಕೆ ಹಿಂಭಾಗದಲ್ಲಿನ ಎಲ್ಇಡಿ ಪರದೆಯ ಮೇಲೆ ಸರ್ದಾರ್ ಜೀ ಅವರ ಏಕತಾ ಪ್ರತಿಮೆಯ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರತಿಮೆಯನ್ನು ಅನಾವರಣಗೊಳಿಸಿದರು. ಗುಜರಾತಿನ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರು ಎದ್ದು ನಿಂತಿರುವ ಈ ಭವ್ಯ ಮೂರ್ತಿ ಭಾರತದ ಏಕತೆಯ ಪ್ರತೀಕವಾಗಿದೆ. ಪ್ರತಿಮೆ ಲೋಕಾರ್ಪಣೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅಮರ್ ರಹೇ ಎಂಬ ಘೋಷಣೆ ಕೂಗಿದರು. ದೇಶದ ‘ಏಕತೆಗೆ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ಈ ಐತಿಹಾಸಿಕ ಕ್ಷಣಕ್ಕೆ ದೇಶದ ಜನತೆಗೆ ಮೋದಿ ಅಭಿನಂದನೆ ಸಲ್ಲಿಸಿದರು. …
ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಎಂಬಲ್ಲಿ 800 ಅಡಿ ಎತ್ತರದಿಂದ ಬಿದ್ದು ಭಾರತೀಯ ದಂಪತಿ ಸಾವನ್ನಪ್ಪಿದ ಘಟನೆ ಅ.25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕ್ಯಾಲಿಫೋರ್ನಿಯಾದ ಯೋಸೆಮೈಟ್ ನ್ಯಾಷನಲ್ ಪಾರ್ಕ್ನಲ್ಲಿ ಆಕ್ಟೋಬರ್ 25 ರಂದು ವಿಷ್ಣು ವಿಶ್ವನಾಥ್ (29) ಮತ್ತು ಪತ್ನಿ ಮೀನಾಕ್ಷಿ ಮೂರ್ತಿ (30) ಅವರು 800 ಅಡಿ ಆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ದಂಪತಿಗಳ ಶವ ಮೊದಲೇ ಸಿಕ್ಕಿದ್ದರೂ ಅವರನ್ನು ಗುರುತಿಸುವುದಕ್ಕೆ ಬಹಳ ಸಮಯ ಹಿಡಿದಿತ್ತು. ಅವರ ಶವಗಳನ್ನು ಸೋಮವಾರ ಮೇಲಕ್ಕೆತ್ತಿ ಗುರುತು ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ. ಸಿಸ್ಕೊ ಸಂಸ್ಥೆಯಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ಸಿಕ್ಕಮೇಲೆ ಮೃತ ದಂಪತಿ ನ್ಯೂಯಾರ್ಕ್ನಿಂದ ಅಮೆರಿಕಕ್ಕೆ ತೆರಳಿದ್ದರು ಎನ್ನಲಾಗಿದ್ದು, ಈ ದಂಪತಿಗೆ ವಿಶ್ವ ಸುತ್ತುವ ಕನಸಿತ್ತು ಎಂಬುದನ್ನು ಅವರೇ ‘Holidays and HappilyEverAfters’ ಎಂಬ ಬ್ಲಾಗ್ನಲ್ಲಿ ಬರೆದಿಕೊಂಡಿದ್ದಾರೆ. …
ಹುಳಿಯಾರು: ಹಂದನಕೆರೆ ಹೋಬಳಿ ಡಗ್ಗೇನಹಳ್ಳಿ ಗ್ರಾಮದ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 12.7 ಕೆಜಿ ಗಾಂಜಾವನ್ನು ಹಂದನಕೆರೆ ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಮಂಜುನಾಥ್ ಬಂಧಿತ ಆರೋಪಿ. ದಗ್ಗೇನಹಳ್ಳಿ ಗ್ರಾಮದ ಸರ್ವೆ ನಂ. 28ರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದಾರೆ ಎಂದು ಹಂದನಕೆರೆ ಪೊಲೀಸ್ ಮೋಹನ್ ಹಾಗೂ ಕಿರಣ್ ಗಸ್ತು ತಿರುಗುತ್ತಿದ್ದಾಗ ಖಚಿತ ಪಡಿಸಿಕೊಂಡು ಸಿಪಿಐ ಎ.ಸುರೇಶ್ ಅವರಿಗೆ ಮಾಹಿತಿ ನೀಡಿದ ಬಳಿಕ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಜಕಾರ್ತಾ : ಇಂಡೋನೇಷ್ಯಾದ ಲಯನ್ ಏರ್ ಸಂಸ್ಥೆಗೆ ಸೇರಿದ ವಿಮಾನ ಪತನಗೊಂಡು ಸಮುದ್ರಕ್ಕೆ ಬಿದ್ದ ಪರಿಣಾಮ ಭಾರತದ ಪೈಲಟ್ ಭವ್ಯೇ ಸುನೇಜಾ ಸಹಿತ 188 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ. ಲಯನ್ ಏರ್ ನ JT610 ವಿಮಾನದಲ್ಲಿದ್ದ ಯಾರೊಬ್ಬರು ಬದುಕುಳಿದಿರುವ ಸಾಧ್ಯತೆ ಇಲ್ಲ. ಅದು ಹೊಸ ಬೋಯಿಂಗ್ 737 MAX8 ವಿಮಾನವಾಗಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಪ್ರಕಾರ, ಅಪಘಾತ ಸಂಭವಿಸಿದ ಕಡಲ ಪ್ರದೇಶದಿಂದ ಹದಿನೈದು ಕಿ.ಮೀ. ದೂರಕ್ಕೆ ಮಾನವ ಅವಶೇಷಗಳು ದೊರೆತಿವೆ. ಸಮುದ್ರಕ್ಕೆ ವಿಮಾನ ಅಪ್ಪಳಿಸಿ ಸುಮಾರು 30-40 ಮೀಟರ್ ಆಳಕ್ಕೆ ಪ್ರವೇಶಿಸಿರಬಹುದು ಎಂದು ಅಂದಾಜಿಸಲಾಗಿದೆ. ವಿಮಾನದಲ್ಲಿ ಐವರು ಸಿಬಂದಿ, ಇಬ್ಬರು ಪೈಲಟ್ಗಳು, 178 ಮಂದಿ ಪ್ರಯಾಣಿಕರು, ಒಂದು ಮಗು, ಎರಡು ಶಿಶುಗಳು ಇದ್ದವು ಎಂದು ಇಂಡೋನೇಷ್ಯಾ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ನಿರ್ದೇಶಕ ಸಿಂಧು ರಹಾಯು ತಿಳಿಸಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿಗರಿಗೆ ಶೀಘ್ರ ಆಟೋ ಪ್ರಯಾಣ ದರ ಏರಿಕೆಯ ಬಿಸಿ ತಟ್ಟಲಿದೆ. ಆಟೋ ಪ್ರಯಾಣ ದರ ಏರಿಕೆ ಮಾಡುವ ಕುರಿತು ಪ್ರಸ್ತಾಪ ಕೇಳಿಬಂದಿದೆ. ಒಂದೆಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟಿದ್ದರೆ, ಮತ್ತೊಂದೆಡೆ ಆಟೋ ಪ್ರಯಾಣ ದರ ಏರಿಕೆಯ ಕಾವು ಸಹ ತಟ್ಟಲು ದಿನಗಣನೆ ಆರಂಭಗೊಂಡಿದೆ. ಕೆಜಿ ರಸ್ತೆಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ರಸ್ತೆ ಸುರಕ್ಷತಾ ಸಮಿತಿಗಳ ಸಭೆಯಲ್ಲಿ ಆಟೋ ಪ್ರಯಾಣದ ದರ ಏರಿಕೆ ಕುರಿತಾಗಿ ಡಿಸಿ ವಿಜಯಶಂಕರ್ ಜತೆ ಆಟೋ ಚಾಲಕರ ಸಂಘದವರು ಸಭೆ ನಡೆಸಿದರು. ದಿನಬಳಕೆ ವಸ್ತುಗಳು, ಎಲ್ ಪಿ ಜಿ ದರ, ಆಟೋ ರಿಕ್ಷಾ ಬೆಲೆ, ವಿಮೆ, ಬಿಡಿಭಾಗಗಳ ದರ ಹೆಚ್ಚಳಾದ ಕಾರಣ ಆಟೋ ಮೀಟರ್ ದರವನ್ನು ಹೆಚ್ಚಳ ಮಾಡಬೇಕೆಂದು ತಮ್ಮ ಬೇಡಿಕೆಗಳನ್ನು ಆಟೋ ಚಾಲಕರ ಸಂಘಟನೆಗಳ…
ಬೆಂಗಳೂರು: ನಗರದ ಹೆಬ್ಬಾಳ ಫ್ಲೈ ಓವರ್ನಲ್ಲಿ ಓವರ್ಟೇಕ್ ಮಾಡುತ್ತಿದ್ದ ವೇಳೆ ಇನೋವಾ ಕಾರೊಂದು ಪಲ್ಟಿಯಾಗಿ ಮೂವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಅವಘಡದಲ್ಲಿ ಗಾಯಗೊಂಡ ಓರ್ವನ ಸ್ಥಿತಿ ಗಂಭೀರವಾಗಿದೆ. ಕಾರಿನಲ್ಲಿ ದೇವನಹಳ್ಳಿ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಘಟನೆಯ ಬಳಿಕ ಹೆಬ್ಬಾಳ ಮೇಲ್ಸೇತುವೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಹೆಬ್ಬಾಳ ಸಂಚಾರಿ ಠಾಣೆಯ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ಶಿವಮೊಗ್ಗ: ಕುಮಾರಸ್ವಾಮಿ ತಮ್ಮಕುಟುಂಬದಲ್ಲಿ ರಾಜಕಾರಣ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕುಮಾರ್ ಬಂಗಾರಪ್ಪ, ಕುಮಾರಸ್ವಾಮಿಯವರು ಎಚ್ಚರದಿಂದ ಇರಬೇಕು ಮುಂದಿನ ದಿನಗಳಲ್ಲಿ ಅವರ ವಿರುದ್ಧವೂ ಮಿಟೂ ಬಾಂಬ್ ಸಿಡಿಯುವ ಸಾಧ್ಯತೆ ಇದೆ ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು, ಸಿಎಂ ಕುಮಾರಸ್ವಾಮಿ ಅವರು ಸೊರಬಕ್ಕೆ ಬಂದಾಗ ನನ್ನನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಸುಳ್ಳಿಗೆ ಯಾವಾಗಲೂ ಸಾಕ್ಷಿ, ಆಧಾರ ಇರುವುದಿಲ್ಲ. ನನ್ನ ಬಗ್ಗೆ ಮಾತನಾಡಿದರೆ ನಿಮ್ಮ ಬಗ್ಗೆ ಸಾಕ್ಷಿ ಸಮೇತ ನಾನು ಮಾತನಾಡುತ್ತೇನೆ. ಇನ್ನೂ ಹೆಚ್ಚು ಮಾತನಾಡಿದರೆ ಮೀ ಟೂದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು ಎಂದು ಎಚ್ಚರಿಕೆ ನೀಡಿದರು. ಸಿಎಂ ಕುಮಾರಸ್ವಾಮಿ ಕುರಿತಾದ ಬೇಕಾದಷ್ಟು ಸಾಕ್ಷಿಗಳು ಸಾಮಾಜಿಕ ಜಾಲತಾಣದಲ್ಲಿ ಲಿಂಕ್ ಆಗಿವೆ. ಹುಟ್ಟುಹಬ್ಬ ಆಚರಣೆ ಮಾಡಿರುವುದು, ಮತ್ತೊಂದು ಮಾಡಿರುವುದು, ತಲೆಮರೆಸಿಕೊಂಡಿರುವುದು ಸಾಕಷ್ಟು ಲಿಂಕ್ಗಳು ಸಿಗುತ್ತವೆ. ನಿಮ್ಮ ಕುಟುಂಬ ಭಾಗವಾದರೆ, ಅವರನ್ನು ಸ್ವೀಕರಿಸಿ ರಾಮನಗರ ಚುನಾವಣೆಯಲ್ಲಿ ಒಟ್ಟಿಗೆ ಚುನಾವಣೆ ಎದುರಿಸಿ, ಅವರನ್ನು ಮತ್ತೊಂದೆಡೆ…