ಹುಳಿಯಾರು: ಅಧಿಕಾರಿಗಳಿಗೆ ಕರ್ತವ್ಯದ ಪ್ರಜ್ಞೆ ಮತ್ತು ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇಲ್ಲದಿದ್ದರೆ ಸಾರ್ವಜನಿಕರ ಹಣ ಹೇಗೆ ವ್ಯರ್ಥವಾಗುತ್ತದೆ ಎನ್ನುವುದಕ್ಕೆ ಹುಳಿಯಾರು ಪಟ್ಟಣ ಪಂಚಾಯ್ತಿಯ ಪದವಿ ಕಾಲೇಜಿನ ಪಕ್ಕದಲ್ಲಿರುವ ನೀರಿನ ಓವರ್ ಹೆಡ್ ಟ್ಯಾಂಕ್ ನಿದರ್ಶನವಾಗಿದೆ. ಈ ಟ್ಯಾಂಕ್ ಕಟ್ಟಿ ಬರೋಬ್ಬರಿ ಹದಿನೈದು ವರ್ಷಗಳು ಕಳೆದಿದ್ದರೂ ಇಲ್ಲಿಯವರೆಗೂ ಒಂದೇ ಒಂದು ಹನಿ ನೀರನ್ನು ಟ್ಯಾಂಕ್ ಕಂಡಿಲ್ಲ. ಹೌದು, ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯ, ವೈ.ಎಸ್.ಪಾಳ್ಯ ಗ್ರಾಮಗಳ ನೀರಿನ ಬವಣೆ ನೀಗಿಸುವ ಸಲುವಾಗಿ 2007 ರಲ್ಲಿ ಸ್ವಜಲದಾರೆ ಯೋಜನೆಯಡಿ ಲಕ್ಷಾಂತರ ಹಣ ವ್ಯಯಿಸಿ ಪದವಿ ಕಾಲೇಜು ಪಕ್ಕದಲ್ಲಿ ಓವರ್ ಹೆಡ್ ಟ್ಯಾಂಕ್ ಕಟ್ಟಲಾಗಿತ್ತು. ಈ ಟ್ಯಾಂಕ್‌ಗೆ ಹುಳಿಯಾರು ಕೆರೆಯಲ್ಲಿನ ಕೊಳವೆಬಾವಿಯಿಂದ ನೀರು ಪೂರೈಸಿ ಈ ಮೂರು ಹಳ್ಳಿಗಳಿಗೆ ಸಮರ್ಪಕವಾಗಿ ನೀರು ಪೂರೈಸುವುದು ಉದ್ದೇಶವಾಗಿತ್ತು. ಆದರೆ ಇಲ್ಲಿಯವರೆವಿಗೆ ಈ ಟ್ಯಾಂಕ್‌ಗೆ ಒಂದೇ ಒಂದು ದಿನ ನೀರು ತುಂಬಿಸಿದ ನಿದರ್ಶನವಿಲ್ಲ.ಲಿಂಗಪ್ಪನಪಾಳ್ಯದ ನೂರಾರು ಮನೆಗಳಿಗೆ ಇರುವ ಏಕೈಕ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಈ ಕೊಳವೆಬಾವಿ ಕೆಟ್ಟು ರಿಪೇರಿ…
Author: News Desk Benkiyabale
ಮಧುಗಿರಿ : ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ ಎಂಬ ಗಾದೆ ಮಾತಿನಂತೆ ಸಮಾಜದಲ್ಲಿ ಪ್ರಜ್ಞಾವಂತರೆನಿಕೊAಡ ಸರ್ಕಾರಿ ನೌಕರರ ಪದಾಧಿಕಾರಿಗಳು ಮದ್ಯದ ಅಮಲಿನಲ್ಲಿ ಬಾಟಲಿಗಳಿಂದ ಹೊಡೆದಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೌಕರರ ಸಂಘದ ಚುನಾವಣೆ ಸಂಪೂರ್ಣಗೊAಡಿದ್ದರೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಪರಸ್ಪರ ನಿಂದನೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಚಪ್ಪಲಿಗಳಲ್ಲಿ ಹೊಡೆದಾಡಿಕೊಂಡು ಕುಡಿದ ಅಮಲಿನಲ್ಲಿ ಮಧ್ಯದ ಬಾಟಲ್ ಗಳಿಂದ ಕೊಲೆ ಯತ್ನಕ್ಕೆ ಪ್ರಯತ್ನಿಸಿರುವ ಘಟನೆ ನೆಲಮಂಗಲ ಸಮೀಪದ ಡಾಬಾದಲ್ಲಿ ನಡೆದಿರುವ ಬಗ್ಗೆ ಮದುಗಿರಿಯಲ್ಲಿ ಬೆಳ್ಳಂ ಬೆಳಗ್ಗೆ “”ಟಾಕ್ ಆಫ್ ದಿ ಟೌನ್’’ ಆಗಿದೆ. ಶನಿವಾರ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ಚುನಾವಣೆ ನಡೆದು ಷಡಾಕ್ಷರಿ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮಧುಗಿರಿಯ ಸರ್ಕಾರಿ ನೌಕರರ ಸಂಘದವರು ಮಧುಗಿರಿಗೆ ವಾಪಾಸ್ಸಾಗುತ್ತಿದ್ದಾಗ, ಘಟನೆ ನಡೆದಿದ್ದು, ಷಡಾಕ್ಷರಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕೆಲವರಿಗೆ ಇಷ್ಟವಾಗಿಲ್ಲ. ಈ ವಿಷಯವೇ ಈ ಎಲ್ಲಾ ಘಟನಾವಳಿಗಳಿಗೆ ಕಾರಣವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೃಷ್ಣೆಗೌಡರಿಗೆ ಬೆಂಬಲ ನೀಡಿದ್ದ ಲಿಂಗಾಯಿತ ಸಮುದಾಯಕ್ಕೆ…
ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಾಡಾಗಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ವಾಲಿ ಬಾಲ್ ಸ್ಪರ್ದೆಯಲ್ಲಿ, ಪುರುಷರ ವಿಭಾಗದಲ್ಲಿ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಜಿಎಸ್ ಕಾಲೇಜಿಗೆ ಚಾಂಪಿಯನ್ ಪಟ್ಟ ದೊರೆತಿದೆ. ಮಂಗಳೂರಿನ ನಿಟ್ಟೆ ಕಾಲೇಜು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ತುಮಕೂರಿನ ಎಸ್.ಎಸ್.ಐ.ಟಿ ಮತ್ತು ಎಸ್.ಐ.ಟಿ ಕಾಲೇಜುಗಳು ಪಡೆದುಕೊಂಡಿವೆ. ಮಹಿಳೆಯರ ವಿಭಾಗದಲ್ಲಿ ತುಮಕೂರಿನ ಎಸ್.ಎಸ್.ಐ.ಟಿ ಕಾಲೇಜಿನ ಮಹಿಳೆಯರ ತಂಡ ಮೊದಲ ಸ್ಥಾನ ಪಡೆದುಕೊಂಡರೆ, ಹಾಸನದ ಎನ್.ಎ.ವಿ.ಕೆೆ.ಐ.ಎಸ್ಎಂ ಜಿನಿಯರಿAಗ್ ಕಾಲೇಜು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಸ್ಟರ್ಧೆಯಲ್ಲಿ 16 ಪುರುಷರ ತಂಡಗಳು, ಮತ್ತು 6 ಮಹಿಳೆಯರ ತಂಡಗಳು ರಾಜ್ಯದ ಹಾಸನ, ಮಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಕಾಲೇಜುಗಳಿಂದ ಆಗಮಿಸಿದ್ದವು. ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಎಸ್.ಎಸ್.ಐ.ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ ಅವರು ರಾಜ್ಯದ ವಿವಿಧ ಜಿಲ್ಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ…
ತುಮಕೂರು : ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ, ರಸ್ತೆ ಬದಿ ಚರಂಡಿ ನಿರ್ಮಾಣ, ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣ, ಪಾದಚಾರಿ ಮಾರ್ಗ, ನಗರದ ಒಳ ಮತ್ತು ಹೊರ ವರ್ತುಲ ರಸ್ತೆ, ಪ್ರಮುಖ ವೃತ್ತಗಳು, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ 200 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಅನುದಾನವನ್ನು ಸದ್ಬಳಕೆ ಮಾಡಿಕೊಂಡು ತುಮಕೂರು ನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸಬೇಕೆಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಸರ್ಕಾರದಿಂದ ತುಮಕೂರು ಸೇರಿ ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮಗ್ರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ತಲಾ 200 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಬಿಡುಗಡೆಯಾಗುವ ಹಣವನ್ನು ಕಾಮಗಾರಿಗಳಿಗೆ ಸದ್ವಿನಿಯೋಗಿಸಿ 2026-27ನೇ ಸಾಲಿನೊಳಗಾಗಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.…
ತುರುವೇಕೆರೆ: ರಾಜ್ಯ ಸರ್ಕಾರ ನಿವೃತ್ತ ಸರ್ಕಾರಿ ನೌಕರರ ಮೂಲಭೂತ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುವ ಮೂಲಕ ನಮ್ಮಗಳ ಕುಟುಂಬಕ್ಕೆ ನೈತಿಕ ಚೇತನ ನೀಡಬೇಕೆಂದು ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಹ್ಲಾದ್ ಹೇಳಿದರು. ಪಟ್ಟಣದ ಹೊರಪೇಟೆಯಲ್ಲಿರುವ ವಿರಕ್ತ ಮಠದಲ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆ ಹಾಗು ಹಿರಿಯ ನಾಗರಿಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ರಾಜ್ಯ ಜಂಟಿ ಕಾರ್ಯದರ್ಶಿ ರಾಜಯ್ಯ, ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅರಳೀಕೆರೆ ಶಿವಯ್ಯ, ನಿವೃತ್ತ ಬಿಇಓ ಸೋಮಶೇಖರ್, ನಿವೃತ್ತ ಡಿಡಿಪಿಐ ರಂಗಯ್ಯ, ಜಿಲ್ಲಾ ಉಪಾಧ್ಯಕ್ಷ ಅನಂತರಾಮು, ಖಜಾಂಚಿ ನರಸಿಂಹರೆಡ್ಡಿ, ಪತ್ತಿನ ಸಹಕಾರ ಸಂಘದ ಸಿಇಓ ಸುಜಾತ, ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ: ಪಟ್ಟಣದ ಬಹುತೇಕ ರಸ್ತೆಗಳಲ್ಲಿ ನೀರಿನಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದರು ಸಂಬAಧಿಸಿದ ಪುರಸಭೆ ಗಮನ ಹರಿಸದೆ ನಿರ್ಲ್ಯಕ್ಷಿಸಿರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊAಡಿದ್ದೇ ತಡ ಪಟ್ಟಣದ ತುಂಬೆಲ್ಲಾ ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಗಳನ್ನು ಅಗೆದು ಜನ ಹಾಗೂ ವಾಹನಗಳು ಓಡಾಡದಂತೆ ಮಾಡಿ ಎರಡುವರ್ಷ ಕಳೆದರೂ ನಾಗರೀಕರು ಈ ದುರ್ವ್ಯೆವಸ್ಥೆಗೆ ಹಿಡಿಶಾಪ ಹಾಕುತ್ತಾ ಓಡಾಡುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಅಧ್ವಾನವೆಂಬAತೆ ಬುಹುತೇಕ ರಸ್ತೆಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಪ್ರವಾಹೋಪಾದಿಯಲ್ಲಿ ಅಮೂಲ್ಯ ನೀರು ವ್ಯರ್ಥವಾಗುತ್ತಿರುವುದು. ಟ್ಯಾಂಕ್ ನಿಂದ ನಾಗರೀಕರಿಗೆ ಕೊಳಾಯಿ ಮೂಲಕ ನೀರು ಬಿಟ್ಟಾಗ ಪಟ್ಟಣದ ಹೆದ್ದಾರಿಯ ನೆಹರೂ ವೃತ್ತ, ಸರ್ಕಾರಿ ಬಸ್ ನಿಲ್ದಾಣ, ಪೊಲೀಸ್‌ಠಾಣೆ ಮುಂಬಾಗ ಇನ್ನು ಹಲವೆಡೆ ಟಾರ್ ರಸ್ತೆಯ ಕೆಳಗಿನಿಂದ ಒಡೆದ ಪೈಪ್ ಮೂಲಕ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇನ್ನೂ ಪಟ್ಟಣದ ಬ್ರಾಹ್ಮಣರ ಬೀದಿ, ಅಡ್ಡರಸ್ತೆ, ಹಳ್ಳಿಕಾರರ ಬೀದಿ, ಮಾರುಕಟ್ಟೆ ರಸ್ತೆ ಮುಂತಾದೆಡೆ ಒಡೆದ ಪೈಪ್ ಮೂಲಕ ಹಳ್ಳದೋಪಾದಿಯಲ್ಲಿ ನೀರು ರಸ್ತೆಯ…
ಹುಳಿಯಾರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನಲೆಯಲ್ಲಿ ಗೌರವಾರ್ಥ ಶುಕ್ರವಾರ ಎಲ್ಲಾ ಸರ್ಕಾರಿ ಕಛೇರಿಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಆದರೆ ಹುಳಿಯಾರು ಪಟ್ಟಣ ಪಂಚಾಯತಿ ಸಿಬ್ಬಂದಿ ಮಾತ್ರ ರಜೆ ಮಾಡದೆ ಕೆಲಸದಲ್ಲಿ ನಿರತರಾಗಿದ್ದರು. ಕೆಲಸದ ಸಮಯದಲ್ಲೇ ಕಛೇರಿಯಲ್ಲಿ ಇಲ್ಲದ ಸಿಬ್ಬಂದಿ ರಜೆಯಲ್ಲಿ ಕೆಲಸ ಮಾಡುತ್ತಿರುವುದ ಅಚ್ಚರಿ ಎನ್ನಿಸಿತ್ತು. ಸಾರ್ವಜನಿಕರು, ಪತ್ರಿಕೆಯವರು ಈ ಬಗ್ಗೆ ಪ್ರಶ್ನಿಸಲು ಮುಂದಾದಾಗ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿ ಕಛೇರಿಯಿಂದ ಹೊರಬಂದರು. ಕೆಲಸದ ದಿನಗಳಲ್ಲೇ ಸರ್ಕಾರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ಮಾತುಗಳು ಕೇಳಿಬರುವುದು ಸಹಜ. ಆದರಲ್ಲೂ ಹುಳಿಯಾರು ಪಂಚಾಯ್ತಿಯಲ್ಲಿ ಸಾರ್ವಜನಿಕರ ಯಾವ ಕೆಲಸವೂ ಆಗುತ್ತಿಲ್ಲ ಎಂಬ ಆರೋಪ ಇದೆ. ಅಂತಹದರಲ್ಲಿ ಮಾಜಿ ಪ್ರಧಾನಿಯ ಗೌರವಾರ್ಥ ರಜೆಯಲ್ಲಿ ಪಂಚಾಯತಿ ಮುಖ್ಯಾಧಿಕಾರಿ ಸೇರಿದಂತೆ ಕೆಲ ಸಿಬ್ಬಂದಿ ಮಾತ್ರ ಕಛೇರಿಯಲ್ಲಿ ಬಿಡುವಿಲ್ಲದ ರೀತಿ ಕೆಲಸ ಮಾಡಿದ್ದಾರೆ. ಈ ಮೂಲಕ ಮನಮೋಹನ್ ಸಿಂಗ್ ಅವರಿಗೆ ಅಗೌರವ ತೋರಿದ್ದಾರೆ. ರಜಾ ದಿನದಲ್ಲೂ ಕೆಲಸ ಮಾಡುತ್ತಿರುವ ವಿಚಾರ ತಿಳಿದು ಎಂಜಿನಿಯರ್ ಲಿಂಗರಾಜು ಅವರು ಕಛೇರಿಗೆ…
ಪಾವಗಡ: ಅನ್ನದಾನಕ್ಕಿಂತ ಮಿಗಿಲಾದ ದಾನವಿಲ್ಲಾ, ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಕಲಸಿದರೆ ವಿದ್ಯಾದಾನವಾಗುತ್ತದೆ, ಶಿಕ್ಷಣಜೊತೆಗೆ ಅನ್ನದಾನ ಮಾಡುವುದರ ಜೊತೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ವದಗಿಸಬೇಕು ಎಂದು ಮಾಜಿ ಸಚಿವರಾದ ವೆಂಕಟರವಣಪ್ಪ ತಿಳಿಸಿದರು. ಗುರುವಾರ ಶಾಂತಿ ಎಸ್.ಎಸ್.ಕೆ. ಕಾಲೇಜಿನ ಅವರಣದಲ್ಲಿ ಎಸ್.ಎಸ್.ಕೆ. ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಭಕ್ತಾಧಿಗಳಿಗೆ ಹೆಚ್ಚುವರಿ ಪ್ರಸಾದ ವಿತರಣೆ ಹಾಗೂ ಶ್ರಿ ಶನಿಮಹಾತ್ಮ ವಿದ್ಯಾ ಮತ್ತು ಔದಾರ್ಯ ದತ್ತಿಯ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಲಘು ಉಪಹಾರ ವಿತರಣಾ ಮತ್ತು ಶುದ್ದಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, 90 ರ ದಶಕದಲ್ಲಿ ಪಾವಗಡದ ಶನಿಮಹಾತ್ಮ ದೇವಸ್ಥಾನವನ್ನು ಸರ್ಕಾರದ ಸುಪರ್ಧಿಗೆ ನೀಡಲು ಅಂದಿನ ಸರ್ಕಾರ ತಿರ್ಮಾನಿಸಿತ್ತು ಅದರೆ ನಾನು ಅದನ್ನು ತಡೆದು ಅಡಳಿತ ಮಂಡಳಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದ್ದೆ, ಇಂದು ದೇವಸ್ಥಾನ ಸಾಕಷ್ಟು ಅಭಿವೃದ್ದಿ ಹೊಂದುತ್ತಿದ್ದು, ದೇವಸ್ಥಾನಕ್ಕೆ ಸಾಕಷ್ಟು ವರಮಾನ ಬರುತ್ತಿದ್ದು ಅಡಳಿತ ಮಂಡಳಿ ಯಾವುದೆ ಪ್ರತಿಪಲಾಪೇಕ್ಷೆ ಇಲ್ಲದೆ ಸೇವೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಅಲ್ಲದೆ ವಿದ್ಯಾರ್ಥಿಗಳು ಉತ್ತಮವಾಗಿ ಅಬ್ಯಾಸ…
ತುಮಕೂರು: ರಾಸಾಯನಿಕಗಳು ಮತ್ತು ಕೀಟನಾಶಕಗಳ ಬಳಕೆಯಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ. ಸಾವಯವ ಕೃಷಿಯಿಂದ ಮಾತ್ರ ಭೂಮಿ ಮತ್ತೊಮ್ಮೆ ಉಸಿರಾಡಲು ಸಾಧ್ಯ ಎಂದು ಉತ್ತರಪ್ರದೇಶ ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿಯ ಅಧ್ಯಕ್ಷ ಪ್ರೊ. ಹರಿಕೇಶ್ ಬಹದ್ದೂರ್ ಸಿಂಗ್ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ ಜೀವತಂತ್ರಜ್ಞಾನ ಮತ್ತು ಸೂಕ್ಷö್ಮ ಜೀವವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗವು ಗುರುವಾರ ಆಯೋಜಿಸಿದ್ದ ನೂತನ ಸ್ನಾತಕೋತ್ತರ ಮತ್ತು ಸಂಶೋಧನಾ ಪ್ರಯೋಗಾಲಯಗಳ ಉದ್ಘಾಟನೆ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಸೂಕ್ಷö್ಮ ಜೀವವಿಜ್ಞಾನ ಕೌಶಲ್ಯ ವಿಜ್ಞಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪ್ರಾಚೀನ ಇತಿಹಾಸದಲ್ಲಿ ವೈಜ್ಞಾನಿಕ ಬೀಜಗಳ ಅಭಿವೃದ್ಧಿಯನ್ನು ವೃಕ್ಷಾಯುರ್ವೇದದಿಂದ ಕಲಿಯಬಹುದು. ತಾಯಿಯ ಎದೆ ಹಾಲಿಗಿಂತ ಶ್ರೇಷ್ಠ ಹಸುವಿನ ಹಾಲೆಂದು ವೈಜ್ಞಾನಿಕವಾಗಿ ಪರಿಗಣಿಸಲಾಗಿತ್ತು. ರಾಸಾಯನಿಕ ಮಿಶ್ರಿತ ಕಳಪೆ ಗುಣಮಟ್ಟದ ಆಹಾರವನ್ನು ಸೇವಿಸುತ್ತಿರುವಾಗ ಹಾಲು ವಿಷವಾಗಿದೆ. ಇದರಿಂದ ಆನುವಂಶಿಕ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಲಿದೆ ಎಂದರು. ‘ಸುಸ್ಥಿರ ಕೃಷಿಯಲ್ಲಿ ಜೈವಿಕ ಕೀಟನಾಶಕಗಳ ಪಾತ್ರ: ಪ್ರಸ್ತುತ ಸನ್ನಿವೇಶ, ನಿಯಂತ್ರಕ ಅವಶ್ಯಕತೆಗಳು ಮತ್ತು ವಾಣಿಜ್ಯೀಕರಣ’ ಕುರಿತು…
ತುಮಕೂರು: ವಿದ್ಯಾರ್ಥಿಗಳ ಜೀವನದಲ್ಲಿ ಪಾಠದ ಜೊತೆಗೆ ಆಟನೂ ಸಹ ಉತ್ತಮವಾದ ಪಾತ್ರವನ್ನು ವಹಿಸುತ್ತದೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ ಲಿಂಗೇಗೌಡ ತಿಳಿಸಿದರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸಾಹೇ ವಿಶ್ವವಿದ್ಯಾಲಯ ಹಾಗೂ ಎಸ್‌ಎಸ್‌ಐಟಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾವಳಿಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುವಂತಹ ಕ್ರೀಡಾಕೂಟದಂತಹ ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಾಹೇ ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಫ್ಲೋರಿಡಾ ಯೂನಿವರ್ಸಿಟಿಯ ಪ್ರೊ. ಎಸ್. ಎಸ್. ಅಯ್ಯಂಗಾರ್ ಮಾತನಾಡಿ ಕ್ರೀಡೆ ಎನ್ನುವುದು ಜೀವನದಲ್ಲಿ ಪ್ರಮುಖವಾದ ಒಂದು ಅಂಶ. ಕ್ರೀಡೆ ಮನುಷ್ಯನಿಗೆ ಉತ್ತಮ ಯೋಚನೆ, ಕ್ರಿಯಾ ಶೀಲತೆ, ಧನಾತ್ಮಕ ಚಿಂತನೆಯನ್ನು ನೀಡುತ್ತದೆ ಅಲ್ಲದೆ ಮನುಷ್ಯ ದೈಹಿಕವಾಗಿ, ಆರೋಗ್ಯವಾಗಿ ಉತ್ತಮ ಜೀವನ ನಡೆಸಲು ಸಹಕಾರಿ ಎಂದು ಹೇಳಿದರು. ಸಾಹೇ ವಿವಿಯ ಕುಲಸಚಿವರಾದ ಡಾ. ಎಂ.…